Saturday, March 26, 2011

ಕಥೆ:-ಸ್ನೇಹದ ಕಡಲಲ್ಲಿ ಮೂಡಿದ ಪ್ರೀತಿಯ ಅಲೆ-2

ಮಂಜುನ  ಮೇಲೆ  ಪವಿಗೆ  ಸ್ನೇಹಕ್ಕೂ  ಮೀರಿದ  ಭಾವನೆಯೊಂದು  ಚಿಗುರುತಿತ್ತು . ಆದರೆ  ಇವಳಿಗೆ  ಭಯ . ಅವನಲ್ಲಿ  ಈ  ಭಾವನೆಗಳಿಲ್ಲದಿದ್ದರೆ  ನನ್ನ  ಗತಿ  ಏನೆಂದು ? ಅವನೆಂದು  ಪ್ರೀತಿಯ  ವಿಷಯವಾಗಿ  ಮಾತಾಡಿದವನಲ್ಲ. ಅವನಲ್ಲಿ  ಪ್ರೀತಿಗೆ ಅಷ್ಟಾಗಿ  ಬೆಲೆ  ಇರಲಿಲ್ಲ. ಪ್ರೀತಿ  ಕೇವಲ  enjoymentಗಾಗಿ  ಇರುವುದು  ಎಂಬುದು  ಅವನ  ಹೇಳಿಕೆಯಾಗಿತ್ತು. ಅದು  ಅವನ  ಕಾರ್ಯಗಳಲ್ಲೂ  ಕಾಣಬಹುದಾಗಿತ್ತು. ಸುಂದರ  ಹುಡುಗಿಯರ  ಜೊತೆ  ಹಾಸ್ಯ  ಮಾಡಿಕೊಂಡು  ಮಾತಾಡೋದು, flirt  ಮಾಡೋದು  ಕೂಡ  ಅವನ  ಹವ್ಯಾಸಗಳಲ್ಲಿ  ಒಂದು  ಎಂದು  ಇವಳಿಗೆ  ತಿಳಿದಿತ್ತು . ಎಷ್ಟೇ  ಆದರೂ  ಅವನು  ನನ್ನ  ಜೊತೆ  ಯಾವದನ್ನು  ಮುಚ್ಚಿಟ್ಟಿಲ್ಲ. ಹುಡುಗಿಯರು  ಚೆನ್ನಾಗಿ  joke ಮಾಡ್ಕೊಂಡು , ತರ್ಲೆ  ಮಾಡ್ಕೊಂಡು  ಇರುವ  ಹುಡುಗರ  ಜೋತೆ  ಮಾತಾಡ್ತಾರೆ  ಹೊರತು  bore ಮಾಡಿಸೋರ  ಜೋತೆ  ಮಾತಾಡಲ್ಲ  ಅದಕ್ಕೆ  ನಾನು  ಹಾಗೆ  ಮಾಡೋದು  ಎಂದು  ತುಂಬಾ  frank ಆಗೇ  ಹೇಳ್ಕೋತ  ಇದ್ದ . ಆದರೆ   ಇವಳ   ಜೊತೆ  ಎಂದೂ  flirt ಮಾಡೋ  ಉದ್ದೇಶ  ಅವನಿಗೆ  ಇರಲಿಲ್ಲ . ಅವನು  ಬೇರೆ  ಅವರ  ಜೊತೆ  ಬೇರೆ  ಥರ  ಇದ್ದರೂ  ನನ್ನ  ಜೊತೆ ಅವನು  ಅವನಾಗೇ  ಇರುತ್ತಾನೆ; ಇದು  ಅವಳಿಗೆ  ಇಡಿಸಿತ್ತು. ಇಷ್ಟು  ಪ್ರೀತಿ ಇದ್ದರೂ ಪವಿ  ಅವನಲ್ಲಿ  ತನ್ನ  ಪ್ರೀತಿಯನ್ನು   ತಿಳಿಸಿರಲಿಲ್ಲ . ಆದರೆ  ಹೃದಯದಲ್ಲಿ  ಆ  ಒಲವಿನ  ಚಿಗುರಿಗೆ  ನೀರೆರೆಯುತ್ತ ಪೋಷಿಸುತಿದ್ದಳು.

ಆದರೆ  ವಿಧಿಯಾಟವೇ  ಬೇರೆ . ಯಾವುದೊ  ಒಂದು  ಸಣ್ಣ  ವಿಷಯಕ್ಕಾಗಿ  ಮುನಿಸಾಗಿತ್ತು.  ಮುನಿಸು  ಜಗಳವಾಗಿ  ಅವರ  ಮಧ್ಯೆ  contact ತಪ್ಪಿ  ಹೋಯಿತು. ಒಬ್ಬರನ್ನೊಬ್ಬರು  ನೋಡಿದರು  ಯಾರೋ  ಅಪರಿಚಿತರೆನ್ನುವ  ಹಾಗೆ  ಇರುತಿದ್ದರು . ಆದರೆ  ಪವಿಗೆ  ಮನಸ್ಸಲ್ಲೇ  ಬೇಗೆ . ತನ್ನ  ಪ್ರೀತಿಯನ್ನು  ಬಚ್ಚಿಡಲು  ಆಗದೆ , ಹೇಳಲು  ಆಗದೆ  ಕಡಲ  ದಡದ  ಮೇಲೆ  ಬಿದ್ದ  ಮೀನಿನ  ಹಾಗೆ  ಚಡಪಡಿಸುತಿದ್ದಳು . ಎಷ್ಟೋ  ಸರತಿ  ಅವನ  ಜೊತೆ  ಮಾತಾಡಲು , ಕ್ಷಮೆಯಾಚಲು  ಪ್ರಯತ್ನಿಸಿದಳಾದರು , ಮಂಜು  ಅವಳನ್ನು  ಕಾಣುತಿದ್ದಂತೆಯೇ  ಆ  ಜಾಗವನ್ನು  ಕಾಲಿ  ಮಾಡಿಬಿಡುತಿದ್ದ. ಇವಳಲಿ  ಇದ್ದ  ಸ್ವಾಭಿಮಾನ  ಎಚ್ಚರಕೊಂಡಿತು . ಅವಳು  ಮತ್ತೆ  ಅವನನ್ನು  ತಾನಾಗಿಯೇ  ಮಾತಾಡಿಸುವುದು  ಬೇಡ  ಎಂದು  ತಿರ್ಮಾನಿಸಿದಳು . ಹಾಗೆಯೆ  ಅವಳು  ಮುಂದೆಂದು  ಅವನನ್ನು  ಮಾತನಾಡಿಸುವ  ಪ್ರಯತ್ನ  ಮಾಡಲೇ  ಇಲ್ಲ .

ಆದರೆ  ಮಂಜುವಿನ  ನೆನಪು  ಮಾತ್ರ  ಅವಳಿಗೆ  ದಿನವಿಡೀ  ಕಾಡುತಿತ್ತು . ಬದುಕಿನಲ್ಲಿ  ಅಮ್ಮನನ್ನು  ಬಿಟ್ಟು  ಹೆಚ್ಚಾಗಿ  ಮಾತನಾಡಿರುವುದು , ಕಾಲ  ಕಳೆದಿರುವುದು  ಅವನ  ಜೊತೆಗೆಯೇ . ಅವನನ್ನು  ಮರೆಯಲು  ಅವಳಿಗೆ  ಸಾಧ್ಯವೇ  ಆಗುತಿರಲಿಲ್ಲ . ಅವನ  ನೆನಪೇ  ಅವಳಿಗೆ  ಬದುಕಾಗಿ  ಹೋಗಿತು . ತಾನು  ಎಲ್ಲಿಯು  ಆಸಕ್ತಿ  ತೋರಿಸುತಿರಲಿಲ್ಲ . ಓದು  ಕೂಡ  ಕೊಂಚ  ಕಡಿಮೆಯಾಯಿತು . ಮೊದಲನೇ  ವರ್ಷದಲಿ  ತೆಗೆದಷ್ಟು  ಉತ್ತಮ  ಪಲಿತಾಂಶವಿರಲಿಲ್ಲ . ಒಬ್ಬಳೇ  ಸುಮ್ನೆ  ಕೂತುಬಿಡುತಿದ್ದಳು . ಒಮ್ಮೊಮ್ಮೆ  depress ಆಗುತಿದ್ದಳು . ಒಬ್ಬಳೇ  ರೂಮ್ನಲ್ಲಿ  ಕೂತು  ಜೋರಾಗಿ  ಅಳುತಿದ್ದಳು .

ಬಸ್  suddenಆಗಿ  ಬ್ರೇಕ್  ಹಾಕಿತು . ಮುಂದೆ  ನೋಡಿದರೆ  ದೊಡ್ಡ  ಜಾಮ್!!! ಯಾವುದೊ  ಒಂದು  ದೊಡ್ಡ  ಮರ  ಬಿದ್ದು  ಹೋಗಿತ್ತು . ಅದನ್ನು  ಸರಿಸಲು  ಇನ್ನು  ಸಮಯ  ಹಿಡಿಯುತ್ತದೆ  ಎಂದು  ಹೇಳಿದರು . ಸುತ್ತ  ಹಸಿರು, ಸೋನೆ  ಮಳೆ, ಮೋಡದ  ಮರೆಯಿಂದ  ಇಣುಕಿ  ನೋಡುವ  ಸೂರ್ಯ, ಹಕ್ಕಿಗಳ  ಇಂಚರ..., ಇಷ್ಟು  ಸಾಕಲ್ಲವೇ  ಸಮಯ  ಕಳೆಯಲು? ಪವಿಗೂ  ತನ್ನ  ಮನಸ್ಸು  relax ಆಗಬೇಕು  ಎಂದು  ಅನಿಸಿತು . ಆದ  ಕರಣ  ಬಸ್ಸಿಂದ  ಕೆಳಗಿಳಿದಳು . ಸುತ್ತ  ಮುತ್ತ  ಕಣ್ಣಾಯಿಸಿ  ಪ್ರಕೃತಿಯ  ಸೌಂದರ್ಯವನ್ನು  ಸವಿಯುತಿದ್ದಳು . ತನ್ನ  ಪ್ರಿಯತಮನ  ಬೆರಳುಗಳ  ಜೊತೆ  ತನ್ನ  ಬೆರಳುಗಳ  ಬೆಸೆದು  ಹೆಗಲ  ಮೇಲೆ  ತಲೆ  ಇಟ್ಟು  ನಡೆಯುತಿದ್ದ  ಹುಡುಗಿಯರನ್ನು  ಕಂಡು  ಅವಳ  ಹೊಟ್ಟೆಯಲ್ಲಿ  ಹುಳಿ  ಹಿಂಡಿದ  ಹಾಗೆ  ಅನಿಸಿತು . ನಾನು  ಕೂಡ  ಹೀಗೆ  ಮಂಜು  ಜೊತೆ  ಹೋಗುತಿದ್ದಾರೆ  ಎಷ್ಟು  ಚೆನ್ನ  ಎಂದು  ಅನಿಸಿತು . ಹೌದು . ಆ  climate ಹಾಗಿತ್ತು . ಮಳೆ, ತಂಪಾದ  ಗಾಳಿ, ಹಕ್ಕಿ  ಹಾಡು, ಒಂಟಿತನ  can make any girl to sing “ನನಗು  ಒಬ್ಬ  ಗೆಳೆಯ  ಬೇಕು”


ಇಷ್ಟರ  ನಡುವೆ  ಆ  ಗುಡ್ಡ  ಪ್ರದೇಶದಲ್ಲಿ  network ಸಿಕ್ಕಿದ್ದು  ಅದೃಷ್ಟ  ಎಂದರೆ  ತಪ್ಪಾಗಲಾರದು . Network ಸಿಕ್ಕಿದ್ದು  ಹಾಗೆ  ಒಂಟಿ  ಅಂತ  ಅನಿಸುತಿದ್ದರಿಂದ  ಪವಿ  ತನ್ನ  ಬೆಸ್ಟ್  ಫ್ರೆಂಡ್  ದೀಪಾಗೆ  ಕಾಲ್  ಮಾಡಿದಳು.
“ಹೇಗಿದ್ದೀಯ??ಊಟ  ಆಯ್ತಾ?”
“ಯಾವಾಗಲೇ  ಹೋದೆ? ನಂಗೆ  ತಿಳಿಸಲೇ  ಇಲ್ಲ?ಮನೆ  ತಲುಪಿದ್ಯ?”
“ಇನ್ನ  ಇಲ್ವೆ  ಮರಬಿದ್ದು  ಹೋಗಿದೆ  ಇನ್ನ  ಟೈಮ್  ಆಗುತ್ತೆ”
ಹೀಗೆ  ಮಾತು  ಮುಂದುವರೆದಿತ್ತು . ದೀಪ  ಏನೋ  ಮರೆತದನು  ನೆನಪಿಸಿಕೊಂಡು....,

“ಲೇ  ಯಾರೇ  ಮಂಜು ? ನಿನ್ನ  ಕೇಳ್ತಾ  ಇದ್ದ . ಇವತ್ತು  ಬೆಳಗೆ  ಸುಮಾರ್  ೧೧ ಗಂಟೆಗೆ  ನಿನ್ನ  ನೋಡೋಣ  ಅಂತ  ನಿನ್  ರೂಂ  ಹತ್ರ  ಬಂದಿದ್ದೆ . ನಿಮ್  owner ಹೇಳಿದ್ರು  ನೀನು  ಊರಿಗೆ  ಹೋಗಿದ್ದೀಯ  ಅಂತ . ಈಚೆ  ಬಂದಾಗ  ಅವನು  ಅಲ್ಲೇ  ಇದ್ದ . ನಿಮ್  owner ಮಾತು  ಕೆಳಿಸ್ಕೊಂಡಿದ್ದ  ಅನಿಸುತ್ತೆ , ಪವಿ  ಊರಿಗೆ  ಹೋಗಿದಾಳ ? ಯಾವಾಗ  ಬರ್ತಾಳೆ ? ಹೇಗಿದ್ದಾಳೆ? sudden ಆಗಿ  ಯಾಕ್  ಹೋದಳು? Exams ಎಲ್ಲ  ಆಯ್ತಾ ? ಹಾಗೆ  ಹೀಗೆ  ಅಂತ  ಪ್ರಶ್ನೆ  ಮೇಲೆ  ಪ್ರಶ್ನೆ  ಕೇಳ್ತಿದ್ದ .  ನಾನು, ನಂಗು  ಗೊತ್ತಿಲ್ಲ  inform ಮಾಡಿರಲಿಲ್ಲ , ಈಗಲೇ ನನಗು  ಗೊತ್ತಾಗಿದ್ದು  ಅಂತ  ಹೇಳ್ದೆ .ಆಮೇಲೆ  ಅವನು  ನಿಂಗೆ  ಕಾಲ್  ಮಾಡ್ತಿದ್ದ  ಅನಿಸುತ್ತೆ, ಫೋನ್  ಮಾಡ್ತಿದೀನಿ  ಸಿಗ್ತಾ  ಇಲ್ಲ  ಅಂತ  ಹೇಳ್ತಿದ್ನೆ” ದೀಪ ಒಂದೇ  ಸಮನೆ  ಹೇಳಿದಳು.
ಪವಿಗೆ  ಆಶ್ಚರ್ಯ . ಅರಿವಿಲ್ಲದೆ  ತುಟಿಯ  ಮೇಲೆ  ಹುವಿನಂತಹ  ನಗೆ .
“ಯಾರೇ  ಅವನು?ಚೆನ್ನಾಗಿ  ಮಾತಾಡ್ತಾನೆ!”
ಹ್ಮ್   ಎಲ್ಲಾ  ಹುಡ್ಗಿರು  ಇದ್ನೆ  ಹೇಳೋದು  ಅವನಿಗೆ!!!
“ನನ್  ಫ್ರೆಂಡ್  ಕಣೆ . ಮಂಜು  ಅಂತ”
“ನನಗು  ಗೊತ್ತಮ್ಮ  ಅವನ  ಹೆಸರು . ನಾನ್  ಕೇಳಿದ್ದು  ಏನಾದ್ರು  special ಇದಿಯ  ಅಂತ . ಅವನು  ಆ  ರೀತಿ  ಕೇಳ್ತಾ  ಇದ್ದಿದ್ದನ್ನ  ನೋಡಿದ್ರೆ  something ಇದೆ  ಅಂತ  ಅನಿಸುತ್ತೆ!?”

“ಇಲ್ವೆ . ಹಾಗೇನು   ಇಲ್ಲ ”
“ಇದನ್ನ  ನಾನು  ನಂಬಬೇಕ? ಹಾಗೇನು  ಇಲ್ಲ  ಅಂತ  ನಿನೆಳೋ  ರೀತಿಲೇ  ಗೊತ್ತಾಗುತ್ತೆ  ಬಿಡು”
ಪವಿ  ಮುಗುಳ್ನಕ್ಕಳಷ್ಟೇ.
“ಲೇ  don’t mind  ಕೆಲಸ  ಇದೆ . ಸ್ವಲ್ಪ  busy ಇದೀನಿ  bye”
“OK carry on. Bye take care”

ದೀಪ  ಹೇಳಿದನ್ನು  ಕೇಳಿ  ಪವಿಗೆ  ಆ  ಚಂದ್ರನೇ  ಕೈಗೆ  ಸಿಕ್ಕಂತಾಯಿತು . ಅವಳ  ಮನಸ್ಸು  ರೆಕ್ಕೆ  ಕೂಡಿ  ಸಂತೋಷದಲ್ಲಿ  ಹಾರಿ  ಹೋಯಿತು . ಕಾಲ್ಗಳು  ನಿಂತಲ್ಲಿ  ನಿಲ್ಲು  ಅಂದರೆ  ಕೇಳುತಿರಲಿಲ್ಲ . ನೋವೆಲ್ಲ  ತೊರೆದು  ಕುಣಿಯಬೇಕು  ಎಂದು  ಅನಿಸುತಿತ್ತು . ಅಷ್ಟರಲ್ಲಿ  ಮರವನ್ನು  ಸರಿಸಲಾಗಿತ್ತು . ಒಂದೊಂದೇ  ಗಾಡಿಗಳು  ಸರಿಯುತಿದ್ದವು . ಪವಿ  ಹೋಗಿ  ಬಸ್  ಒಳಗೆ  ಕೂತಳು . ಈಗ  ಮೋರೆಯಲ್ಲಿ  ಏನೋ  ಚೈತನ್ಯ . ಯಾವುದೊ  ಸಂತೋಷ . ಮನಸ್ಸೊಳಗೆ  ಬೆಚ್ಚಗೆ  ಮುಸುಕು  ಹಾಕಿಕೊಂಡು  ಮಲಗಿದ್ದ  ನಗು  ಎದ್ದಿತ್ತು.

ಮಂಜು  ಏಕೆ  ನನ್  ರೂಂ  ಹತ್ರ  ಬಂದಿದ್ದ ? ಅಷ್ಟು  ಕೇರ್  ಇಂದ  ದೀಪ  ಹತ್ರ  ನನ್  ಬಗ್ಗೆ  ಯಾಕೆ  ಕೇಳ್ದ? ನಂಗೆ  ಅಷ್ಟು  ಸರ್ತಿ  ಯಾಕ್  ಕಾಲ್  ಮಾಡಿದ್ದ ? ಇಷ್ಟು  ದಿವಸಗಳಾದಮೇಲೆ  ನನ್  ಜೊತೆ  ಮಾತಾಡಬೇಕು  ಅಂತ  ಯಾಕೆ  ಅನಿಸ್ತು? ಅವನಿಗೂ  ನನ್  ಮೇಲೆ  ಪ್ರೀತಿ  ಏನಾದ್ರೂ? ಹೀಗೆ  ಅವಳ  ಮನಸ್ಸಲ್ಲಿ  ಪ್ರಶ್ನೆಗಳು  ಮೂಡುತಿದ್ದವು . ಇನ್ನೊಂದು  ಕಡೆ  ಅದೇ  ಮನಸ್ಸು  negativeಆಗಿ  ಯೋಚಿಸುತಿತ್ತು . ಹೀಗೆ  ಜಗಳ  ಆದ್ಮೇಲೆ  ಕೆಲವೊಂದು  ಸಲ  ಅವನೇ  ಬಂದು  ಮಾತಾಡಿಸ್ತಾನೆ. ಇಲ್ಲ  ಯಾವ್ದಾದ್ರು  ಹೆಲ್ಪ್  ಬೇಕಂದ್ರೆ  ಬರ್ತಾನೆ . ಪ್ರೀತಿ  ಗೀತಿ  ಏನು  ಇರಲ್ಲ  ಅಂತ ಹೇಳ್ತಾ ಇತ್ತು . ಅವನು  ಕೇವಲ  ಹೆಲ್ಪ್ಗೋಸ್ಕರ  ಮಾತಾಡಿಸಕ್ಕೆ  ಬಂದಿದ್ನ  ಅಂತ  ಯೋಚಿಸುತ್ತ  ಬೇಸರವಾಯ್ತು  ಅವಳಿಗೆ . ಆದರು  ಹೇಗೋ  ಅವನೇ  ನನ್ನ  ಹುಡ್ಕೊಂಡು  ಬಂದಿದ್ನಲ್ಲ  ಅನ್ನೋ  ಖುಷಿ.

ಹೀಗೆ  ಪವಿ  ಆ  ಖುಷಿ  ಇನ್ದಲೋ , ಸಮಾಧಾನದಿಂದಲೋ  ಮನೆಗೆ  ಒಳ್ಳೆ  mood ಇಂದಾನೆ  ಹೋದಳು . ಸಂಜೆ  5-5:30 ಸಮಯ . ಫ್ರೆಶ್  ಆದಳು. ಅವರದು  joint family. ಸುಮಾರು  ೬ ಗಂಟೆಗೆ  ಎಲ್ಲರ  ಜೊತೆ  ಹರಟುತ್ತ  ಕುಳಿತಳು . ಎಲ್ಲರಿಗು  ಒಂದೇ  ಆಶ್ಚರ್ಯ  ‘ಏನಪ್ಪಾ  ನಮ್  ಪವಿ  ಇಷ್ಟೊಂದು  ಮಾತಾಡ್ತಿದಾಳೆ, ಇಷ್ಟೊತ್ತು  ಎಲ್ಲರ  ಜೊತೆ  ಹಾಸ್ಯ  ಮಾಡ್ಕೊಂಡು  ಹರಟೆ  ಹೊಡಿತಾ  ಇದಾಳೆ ’ ಅಂತ . ಏನೇ  ಹೀಗೆ  ಅಂತ  ಕೇಳಿದ್ದಕ್ಕೆ, ಇನ್ಮೇಲೆ  ಹೀಗೆ  ಅಂತ  ಹೇಳಿ  ತುಂಟ  ನಗೆ  ಬಿರ್ತಾಳೆ. ‘ಏನೋ  ಹೀಗೆ  ಇರು. ಚೆನ್ನಾಗಿದೆ. ನಿನ್  ಈ  ಚೇಂಜ್ ಗೆ  ಕಾರಣ  ಆಗಿರೋರ್ಗೆ  ಒಂದು  ದೊಡ್ಡ  ಥ್ಯಾಂಕ್ಸ್’ ಅವಳ  cousins  ಎಲ್ಲಾ  ಒಟ್ಟಾಗಿ  ಹೇಳ್ತಾರೆ . ಮಾತಾಡ್ತಾ  ಮಾತಾಡ್ತಾ  ಯಾರಗೂ  ಟೈಮ್  ಆಗಿದ್ದೆ  ಗೊತ್ತಾಗ್ಲಿಲ್ಲ . ರಾತ್ರಿ  ಸುಮಾರು  ೧೦:೩೦ಕ್ಕೆ  ಊಟ  ಮಾಡಿ  ಮತ್ತೆ  ಹರಟೆ  ಶುರು!! ಆಮೇಲೆ  ಮಧ್ಯ  ರಾತ್ರಿ  ೧ಗಂಟೆಗೆ  ನಿದ್ದೆ!!

ಇತ್ತ  ಮೈಸೂರಿನಲ್ಲಿ  ಮಂಜು  ಪವಿಗೆ  ಕಾಲ್  ಮಾಡ್ತಾನೆ  ಇದ್ದಾನೆ . ಆದ್ರೆ  no use . ಅವಳಿದಿದ್ದು  ಒಂದು  ಸಣ್ಣ  ಊರಲ್ಲಿ . ನೆಟ್ವರ್ಕ್  ಸಿಗೋದು  ತುಂಬಾ  ಕಷ್ಟವಾಗಿತ್ತು.


ಮರು ದಿನ ಪವಿ  ತನ್ನ  ಬಾಲ್ಯದಲ್ಲಿ  ಓದಿದ್ದ  ಶಾಲೆಗೆ  ಒಮ್ಮೆ  ಬೇಟಿ  ಕೊಟ್ಟಿ , ಅಲ್ಲಿ  ಮಕ್ಕಳ  ಜೊತೆ  ತಾನು  ಮುಗುವಾಗಿ  ಆಟವಾಡಿದಳು . ಪಕ್ಕದ  ತೋಟದ  ಮನೆಯ  ಕವಿತಾ , ಗೌಡ್ರು  ಮಗ  ಸತೀಶ , ಹಳೆ  ಬಿದಿ  ಶಿಲ್ಪ , ಮೀಸೆ  ತಮ್ಮಯ್ಯನ  ಮಗ  ಪುಟ್ಟು  ಎಲ್ಲಾ  ಸೆರೆ  ಮದುವೆ  ಆಟ  ಆಡಿದ್ದು  ನೆನೆಪಿಗೆ  ಬಂತು . ಅವಳ  ಗೆಳತಿಯರಿಗೆಲ್ಲ  ಆಗಲೇ  ಮದುವೆ  ಆಗಿ  ಗಂಡರ  ಮನೆಗೆ  ಹೋಗಿದ್ದರು . ಸಿಕ್ಕಿದ್ದು  ಕೇವಲ  ಪುಟ್ಟು  ಒಬ್ಬನೇ . ಅವನ  ಜೊತೆ  ಒಂದಿಷ್ಟೊತ್ತು  ತಮ್ಮ  ಬಾಲ್ಯದ  ಬಗ್ಗೆ  ಮಾತಾಡಿದಳು .

ಹೀಗೆ  ಪವಿಗೆ  ತನ್ನ  ಸಂಭಂದಿಕರ  ಜೊತೆ , ಸ್ನೇಹಿತರ  ಜೊತೆ  ಕಾಲ  ಕಳೆದು  ಹೇಗೆ  ನಾಲ್ಕು  ದಿನಗಳು  ಕಳಿಯಿತು  ಅನ್ನೋದೇ   ತಿಳಿಲಿಲ್ಲ .

ಏನೋ  ಮೈಸೂರು , ಮೈಸೂರಿನ  ಫ್ರೆಂಡ್ಸ್  ಎಲ್ಲಾ  ಕೈ  ಬೀಸಿ ಕರಿತಿದ್ದಾರೆನೋ  ಅನ್ನೋ  ಹಾಗೆ  ಭಾಸವಾಯಿತು. ಅಂತು  ಮೈಸೂರಿಗೆ  ಹೊರಡೋ  ದಿನ  ಬಂದೆ  ಬಿಡ್ತು . ಅವಳಮ್ಮ  ಅವಳಿಗೆ  ಸಂಡಿಗೆ , ಹಪ್ಪಳ , ಉಪ್ಪಿನ  ಕಾಯಿ  ಅದು  ಇದು, ಇದು  ಅದು  ಅಂತ  ಪ್ಯಾಕ್  ಮಾಡಿ  ಕೊಟ್ರು . ಅವಳ  cousins  ಎಲ್ಲಾ  'ಮುಂದಿನ  ಸರ್ತಿ  ಬರುವಾಗಲೂ  ಇದೆ  ರೀತಿ  ಇರೆ  ಮಾರಾಯ್ತಿ'  ಅಂತ  ಹೇಳಿದ್ರು.

ಬೆಳಗೆ  ೯ಕ್ಕೆ  ಬಸ್ಸೇರಿದಳು . ಹೋದ  ತಕ್ಷಣ  ಮಂಜುವನ್ನೇ  ಕಾಣಬಹುದೇನೋ, ಅವನು  ನನ್ನ  ರೂಮ್ನ  ಹತ್ರ  ಕಾಯುತ್ತ  ಇರುತಾನೇನೋ . ಹೀಗೆ  ಉಹೆಗಳ  ಸುರಿಮಳೆ!! ಗುಡ್ಡ  ಪ್ರದೇಶಗಳ  ಬಿಟ್ಟು  ಪಟ್ಟನಗಳ  ಕಡೆ  ಮುಖ  ಮಾಡಿತು  ಬಸ್. ಆಗ  ದೊರೆಯಿತು  ನೋಡಿ  ‘ನೆಟ್ವರ್ಕ್’!!

ಒಂದೆರಡು  ನಿಮಿಷಗಳಾದ  ಮೇಲೆ  ಅವಳ  ಮೊಬೈಲ್ಗೆ ಒಂದು  ಮೆಸೇಜ್  ಬಂದಿತು . ಮೆಸೇಜ್  ಟ್ಯೂನ್  ಕೇಳಿಸಿದಾಗ  ಮೊಬೈಲ್  ಅನ್ನು  ತನ್ನ  wallet ಇಂದ  ತೆಗೆದು  ಓದಲು  ಮುಂದಾದಳು . ಅವಳು  ಅಂದುಕೊಂಡ  ಹಾಗೆ  ಅದು  ಮಂಜು  ಕಳಿಸಿದ  ಮೆಸೇಜ್  ಆಗಿತ್ತು . “missing you. ನೆಟ್ವರ್ಕ್  ಸಿಕ್ಕಿದ  ತಕ್ಷಣ  ಕಾಲ್  ಮಾಡು” ಅಂತ  ಇತ್ತು . ಕಾಲ್  ಏನೋ  ಮಾಡಬೇಕು  ಅಂತ  ಅನಿಸ್ತು  ಅವಳಿಗೆ,  ಆದರೆ  ಅವನೇ  ಮಾಡ್ಲಿ  ಇಷ್ಟೊಂದು  ಸತಾಯಿಸಿದಾನಲ್ಲ  ಅಂತ  ಹೇಳ್ಕೊಂಡು  ಸುಮ್ಮನಾದಳು . ಹೀಗೆ  ಮಾಡಲೋ  ಬೇಡವೋ  ಅಂತ  ಇರುವಾಗ  ಮಂಜುಯಿಂದ  ಕಾಲ್  ಬಂತು . ನೋಡಿದ  ಇವಳಿಗೆ  ಸಂತೋಷ  ಎಲ್ಲೇ  ಮೀರಿತ್ತು .

“ಹೇಗಿದ್ದಿಯೇ? ಎಷ್ಟು  ದಿವಸ  ಆಯಿತು  ಮಾತಾಡಿ? ಏನು?ಊರಿಗೆ  ಹೋಗಿಬಿಟ್ಟಿದಿಯ? ಅಲ್ವೇ  ಇಷ್ಟು  ದಿವ್ಸ  ನನ್ನ  ಜೊತೆ  ಮಾತಾಡಬೇಕು  ಅಂತ  ಅನಿಸಲೇ  ಇಲ್ವಾ  ನಿಂಗೆ??
ಪವಿ  ಏನು  ಮಾತಾಡಲಿಲ್ಲ
“ಹಲೋ.….ಮಾತಾಡೆ”
“ಇಷ್ಟೊಂದು  ಪ್ರಶ್ನೆ  ಕೇಳಿದ್ರೆ  ಯಾವುದಕ್ಕೆ  ಅಂತ  ಉತ್ತರ  ಕೊಡಲಿ?”ಹುಸಿ  ಕೋಪದಿಂದ.
“ಹ್ಮ್ ಎಷ್ಟೋ  ದಿವಸ  ಆಯ್ತಲ್ಲ  ಮಾತಾಡಿ  ಅದಕ್ಕೆ  ಇಷ್ಟೊಂದ್  ಪ್ರಶ್ನೆಗಳು:) ಸೊ  ಹೇಗಿದಿಯೇ?
“ಚೆನ್ನಗಿದಿನೋ. ನೀನು?”
“ಚೆನ್ನಾಗಿಲ್ವೆ...ಏನು  ಸರಿ  ಇಲ್ಲ . ನೀನಿಲ್ದೆ  ಎಲ್ಲಾ  ಖಾಲಿ-ಖಾಲಿ. ಬೇಗ  ಬಂದುಬಿಡೆ  ಮಾತಾಡೋಣ”
“ಹ್ಮ್  ಯಾಕೋ  ಏನು  ಸರಿ  ಇಲ್ಲ? ಆರೋಗ್ಯವಾಗಿ ಇದ್ದೀಯ ತಾನೇ? I’m on my way ಕಣೋ . ಇನ್ನೊಂದು  ಗಂಟೇಲಿ  ಅಲ್ಲಿರುತ್ತೇನೆ"
“ಹ್ಮ್  ಬೇಗ  ಬಾರೆ . ನಿನ್ನಿಂದ  ಒಂದ್ ಹೆಲ್ಪ್  ಬೇಕು .
ಮನಸ್ಸು  ಹೇಳ್ದಂಗೆ  ಇವನು  ಕೇವಲ  ಹೆಲ್ಪ್ಗಾಗಿ  ನನ್ನ  ಮಾತಾಡಿಸುತ್ತ  ಇದಾನೆ !? ಬೇರೆ  ಯಾವ  ಭಾವನೆನು  ಇಲ್ವಾ  ಇವನಿಗೆ??ಛೆ! ಆದ್ರೆ  ನನ್ನಿಂದ  ಏನ್  ಹೆಲ್ಪ್  ಬೇಕು  ಇವನಿಗೆ  ಎಂದುಕೊಳ್ಳುತ್ತ...,
“ಏನ್  ಹೆಲ್ಪ್  ಬೇಕೋ??”
“ಬಾ  ಹೇಳ್ತೀನಿ”
“ಏನು  ಅಂತ  ಹೇಳು . ಹೇಗೆ  ಹೆಲ್ಪ್  ಮಾಡೋದು  ಅಂತ  ಥಿಂಕ್  ಮಾಡ್ತಿರ್ತೀನಿ ;)”
“ಹ್ಮ್ಮ್ಮ್ …I’m in love ಕಣೆ . ಆ  ಹುಡುಗಿ  ಸ್ವಲ್ಪ  ನಿನ್  ಥರ . ಸೊ  ಹೇಗೆ  ಅವಳಿಗೆ  ಪ್ರೊಪೋಸ್  ಮಾಡಿದ್ರೆ  ಒಪ್ಕೊತಾಳೆ  ಅನ್ನೋದರ ಬಗ್ಗೆ  ನಿನ್  ಹತ್ರ  ಐಡಿಯಾ  ಕೇಳೋಣ  ಅಂತ”

ಪವಿ  ಮನಸ್ಸಿನಲ್ಲಿ  ಅಲೆಗಳ  ಆರ್ಭಟ . ಮಿಂಚು  ಸಿಡಿಲಿನ  ಒಡನಾಟ . ಏನೋ  ಸಂಕಟ . ಆ  ಹುಡುಗಿ  ನಿನ್  ಥರ  ಅನ್ನೋ  ಬದ್ಲು  ನೀನೆ  ಅಂತ  ಹೇಳಿದಿದ್ರೆ? ಕಣ್ಣಂಚು  ಒದ್ದೆಯಾಯಿತು . ಗಂಟಲು  ಒಣಗಿತು . ಮಾತು  ಹೊರಬರದಂತಾಯಿತು.

“ಹಲೋ.. ಏನೇ  ಶಾಕ್  ಆದ್ಯ ? ನಂಗು  ಇದು  ಪ್ರೀತಿ  ಅಂತ  ಗೊತ್ತಾದಾಗ  ಫುಲ್  ಶಾಕ್!!! ಅದರಲ್ಲೂ  ಅವಳನ್ನ  ಅಂತ  ಗೊತ್ತಾದಾಗ  ಡಬಲ್  ಶಾಕ್. ಅವಳಿಗೂ  ಪ್ರೀತಿ  ಇರಲಿ  ಅಂತ  ಬೇಡ್ಕೊತ  ಇದಿನೆ. ನೀನು  ಬೇಡ್ಕೋ... ಮತ್ತೆ  ಹೇಗೆ  ಪ್ರೊಪೋಸ್  ಮಾಡ್ಲಿ  ಅಂತ ಹೇಳು ಓಕೆ?”
ಪವಿಗೆ  ಏನು  ಹೇಳಬೇಕು  ಅಂತ  ತಿಳಿಯಲಿಲ್ಲ .
“ಹ್ಮ್  ಸರಿ  will get you later bye”
“ಹ್ಮ್  OK take care. ಬೇಗ  ಬಂದ್ಬಿಡು  with nice idea”
ಅತ್ತ  ಮಂಜು  ಸಡಗರದ  ಸಾಗರದಲ್ಲಿ  ತೆಲಾಡುತಿದ್ದ. ಇತ್ತ  ಪವಿ  ದುಃಖದ  ಕಡಲಲಿ  ಮುಳುಗುತಿದ್ದಳು..


ಮುಂದುವರೆಯುತ್ತದೆ....

Thursday, March 24, 2011

ನುಡಿ ನಮನ


ವೀರ ಮರಣವ ಹೊಂದಿದರು ಮೂವರು ಅಂದು
ಅದುವೇ ಆಗಿ ೮೦ ವರುಷವಾಗಿದೆ ಇಂದು
ಪೂರ್ಣ ಸ್ವಾತಂತ್ರ್ಯವೇ ಅವರ ಗುರಿ
ಒಪ್ಪಲಿಲ್ಲ ಬ್ರೀಟಿಷರ ಆಳ್ವಿಕೆ ನಿ ಕೇಳು ಮರಿ
ನೌಜವಾನ್ ಭಾರತ್ ಸಭಾದ ಸದಸ್ಯರಾಗಿ
ಸೇರಿಸಿದರು ಹಿಂದೂ ಮುಸಲ್ಮಾನರನು
ಒಗ್ಗೂಡಿಸಿದರು ಯುವಜನರನು
ಮೊಳಗಿಸಿದರು ಹಿಂದೂ-ಮುಸ್ಲಿಂ
ಅಣ್ಣ ತಮ್ಮರೆಂಬ ಘೋಷಣೆಯನು
ಯುವ ಜನರಲಿ ಬಿತ್ತಿದರು ನಾವೆಲ್ಲಾ
ಒಂದೇ;ಭಾರತೀಯರೆಂಬ ಭಾವನೆಯನು
ಎಸೆದರು ಸಿಡಿಗುಂಡುಗಳನು,ಹೇಳಿದರು
ಇದುವೇ ಕೂಗು ಕಿವುಡರಿಗೆ ಎಂದು
ಘೋಷಿಸಿದರು ಇಂಕ್ವಿಲಾಬ್ ಜಿನ್ದಾಬಾದ್ ಎಂದು
ಬಂಧಿತರಾದರು ಜೈಲಿನಲಿ
ಆದರು ನಿಲ್ಲಿಸಲಿಲ್ಲ ತಮ್ಮ ಕಾರ್ಯಾಚರಣೆಗಳನು
ಮುಂದುವರೆಸಿದರು ಕ್ರಾಂತಿಯನು
೬೪ ದಿನಗಳ ಉಪವಾಸದಿ ಗಳಿಸಿಕೊಂಡರು
ತಾವು ನೀಡಿದ ಬೇಡಿಕೆಗಳನು ಹಾಗು
ಸಾಮಾನ್ಯ ಜನರ ಬೆಂಬಲವನ್ನು
ಸ್ಯಾಂಡರ್ಸ್ನ ಕೊಲೆ ಆಪಾದನೆಯಲಿ
ಈ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು
ಸಾಯುವ ಸಮಯದಳು ಭಾರತ ಮಾತೆಯ ನೆನೆದರು
ಭಾರತ ಮಾತೆಗೆ ಜಯವಾಗಲೆಂದೂ
ಇಂಕ್ವಿಲಾಬ್ ಜಿನ್ದಾಬಾದ್ ಎಂದು
ಮುಗಿಲು ಮುಟ್ಟುವ ಹಾಗೆ ಘೋಷಿಸಿದರು
ನೇಣು ಹಗ್ಗಕ್ಕೆ ಮುತ್ತಿಟ್ಟರು
ಭಾರತ ಮಾತೆಯ ನೆನೆದರು
ಯುವಕರಿಗೆ ಮಾದರಿಯಾದರು
ಭಾರತೀಯರ ಮನೆ ಮನಗಳಲಿ ಚಿರವಾದರು.

Saturday, March 19, 2011

ಕಥೆ:-ಸ್ನೇಹದ ಕಡಲಲ್ಲಿ ಮೂಡಿದ ಪ್ರೀತಿಯ ಅಲೆ

ಧಾರಾಕಾರವಾಗಿ  ಮಳೆ  ಸುರಿದ  ಕಾರಣ  ಅಂದು  ಮೈಸೂರಿನ  ಸಬರ್ಬ್  ಬಸ್  ಸ್ಟ್ಯಾಂಡ್  ಸ್ವಲ್ಪ  ಜಾಸ್ತಿಯೇ  ಹದಗೆಟ್ಟಿತ್ತು. ಎಲ್ಲಿ  ನೋಡಿದರಲ್ಲಿ  ಜನ, ವಾಹನಗಳ  ಮಿಂಚಿನ  ಓಟ ಮಧ್ಯೆ  ಮಳೆರಾಯನ  ಆರ್ಭಟ, ಧುಳೆದ್ದ  ಪ್ರದೇಶ. ಯಾರಲ್ಲಿಯೂ  ಶಾಂತಿ  ಚಿತ್ತವಿಲ್ಲ . ಅಂದು  ಮೈಸೂರು  ಮಾಲಿನ್ಯಕ್ಕೆ  ಇನ್ನೊಂದು  ಹೆಸರಾಗಿ  ಬಿಟ್ಟಿತ್ತು . ಇಂತಹ  ಜನ ಜನ್ದುಳಿಯಲ್ಲೂ  ಪವಿ  ಒಂಟಿತನದ  ಬೇಗೆಯಲಿದ್ದಳು…
 
ಪವಿ  ಮಲೆನಾಡ  ಹೆಣ್ಣು  ಮಗಳು . ಶಿವಮೊಗ್ಗ  ಜಿಲ್ಲೆಯ  ಒಂದು  ಚಿಕ್ಕ  ಹಳ್ಳಿ  ಅವಳ  ಹುಟ್ಟೂರು . ‘ಮಾತು  ಬೆಳ್ಳಿ  ಮೌನ  ಬಂಗಾರ’ ಇದು  ಅವಳ  ಪೋಲಿಸಿ ಆಗಿತ್ತು. ಹೆಚ್ಚಾಗಿ  ಅಗತ್ಯವಿಲ್ಲದೆ  ಮಾತನಾಡುವ  ಹುಡುಗಿಯಲ್ಲ . ಇನ್ನು  ಹೊಸಬರ  ಜೊತೆ  ಬೆರೆಯುವುದು  ತುಂಬಾ  ಕಡಿಮೆ . ಯಾರಾದರು  ಹತ್ತಿರದವರೋ  ಇಲ್ಲ  ಇಷ್ಟವದವರೋ  ಸಿಕ್ಕರೆ  ಕೆಲ  ಕಾಲ  ಹರಟುತಾಳಷ್ಟೇ. ಇಲ್ಲದಿದ್ದರೆ  ಮಾತು  ಕೇಳಲು  ಚಾತಕ  ಪಕ್ಷಿಗಳಂತೆ  ಕಾಯಬೇಕು!!?

ಮಲೆನಾಡ  ಹುಡುಗಿ  ಸಾಂಸ್ಕೃತಿಕ  ನಗರಿ  ಮೈಸೂರಿಗೆ  ಓದುವ  ಸಲುವಾಗಿ  ಬಂದಿದ್ದಳು. ಚಿಕ್ಕಂದಿನಿಂದಲೂ  ಓದುವದರಲ್ಲಿ   ಮುಂದಿದ್ದಳು . ಆದ  ಕಾರಣ  ಮೈಸೂರಿನಲ್ಲಿ  ಓದುತೇನೆ  ಎಂದು  ಹೇಳಿದಾಗ  ಮನೆಯವರು  ದೂಸರಾ  ಮಾತಾಡದೆ  ಒಪ್ಪಿದರು . ಮೈಸೂರಿನ  ಒಂದು  ಹೆಸರುವಾಸಿ  ಕಾಲೇಜ್  ನಲ್ಲಿ  ಸೀಟ್ ಕೂಡ  ಸಿಕ್ಕಿತು . ಕಾಲೇಜ್ ನ  ಸಮೀಪದಲ್ಲೇ  ಒಂದು  ರೂಂ  ಕೂಡ  ಮಾಡಿಕೊಂಡಳು .
 
ನಾಲ್ಕು  ದಿನದ  ಮಟ್ಟಿಗೆ  ರಜೆ  ಸಿಕ್ಕ  ಕಾರಣ  ತನ್ನ ಹುಟ್ಟುರಿಗೆ  ಹೋಗಲು  ನಿರ್ಧರಿಸಿ  ಸಬರ್ಬ್ ಬಸ್ ಸ್ಟ್ಯಾಂಡ್ನಲ್ಲಿ  ಕೂತಿದ್ದಾಳೆ . ಧಾರಾಕಾರ  ಮಳೆ , ಜನರು  ಜಾಸ್ತಿ . ಆದರು  ಇವಳಿಗೆ  ತಾನು  ಒಂಟಿ  ಎಂಬ  ಭಾವನೆ . ಮೊದಲಿನಿಂದಲೂ  ಚಿಕ್ಕ  ಚಿಕ್ಕ  ಸಂಗತಿಗೂ  ತಲೆ  ಕೆಡಿಸಿಕೊಳ್ಳುವುದು  ಅಭ್ಯಾಸವಾಗಿ  ಬಿಟ್ಟಿತ್ತು . ತುಂಬಾ  sensitive  ಹಾಗು  sentimental . Sappy ಅಂದ್ರು  ತಪ್ಪಾಗಲಾರದು.

ಆ  ಗಜಿಬಿಜಿಯಲ್ಲೂ  ಪವಿ  ನೆನಪುಗಳಿಗೆ  ತನ್ನ  ಅರಿವಿಲ್ಲದಂತೆ  ಆಮಂತ್ರಣ  ಕೊಟ್ಟಿದ್ದಳು.
ಅಂದು  ಆದಿತ್ಯವಾರದ  ಸುಂದರ  ಸವಿ  ಸಂಜೆ . ಪವಿ,  ಹತ್ತಿರದಲ್ಲೇ  ಇದ್ದ  ಒಂದು  ಪಾರ್ಕಿಗೆ  ತನ್ನದಾವುದೋ  ಸಬ್ಜೆಕ್ಟ್ನ  ಪುಸ್ತಕವನ್ನು  ಎತ್ತಿಕೊಂಡು  ಹೊರಟಳು . ಆ  ಪಾರ್ಕಿನಲ್ಲಿ  ಎಲ್ಲ  ವಯಸ್ಸಿನವರು  ಇದ್ದರು . ಇವಳು  ತಾನು  ತಂದ  ಪುಸ್ತಕದ  ಒಂದೊಂದೇ  ಹಾಳೆಯನ್ನು  ತಿರುಗಾಕುತ್ತ  ಓದಿನಲ್ಲಿ  ಮಗ್ನಳಗಿದ್ದಳು .

“ಹಲೋ, ಯಾವುದ್ರಿ  ಬುಕ್? ಕಾದಂಬರಿನ ?ಲವ್  ಬಗ್ಗೆನ?” ಪಕ್ಕದಲ್ಲೇ  ತನ್ನ  ಸ್ನೇಹಿತರಗಾಗಿ  ಕಾದು  ಕೂತಿದ್ದ  ಮಂಜು  ಬೋರ್  ಅನಿಸಿದ  ಕಾರಣ  ಇವಳ  ಜೊತೆ  ಮಾತಿಗಿಳಿದ .

“ಇಲ್ಲ . ಇದು  ನನ್ನ  b.com accounts book” ಮನಸ್ಸಿಲ್ಲದಾ  ಮನಸ್ಸಿನಿಂದ  ಪವಿ  ಉತ್ತರಿಸಿದಳು .

“ನೀವೂ commerce ಸ್ಟುಡೆಂಟ?ನಾನು  ಕೂಡ . ಆದ್ರೆ  ನಂದು  BBM ನಿಮ್ಮದು  B.Com ಅಷ್ಟೇ  ವ್ಯತ್ಯಾಸ. ಅದ್ಸರಿ  ಟೆಕ್ಸ್ಟ್  ಬುಕ್  ಓದೋಕೆ  ಬೋರ್  ಆಗಲ್ವೇನ್ರಿ ? ನಂಗಂತೂ  ಬುಕ್  ನೋಡಿದ್ರೆ  ಸಾಕು  ನಿದ್ದೆ  ಬರುತ್ತೆ .”

ಎಂಥ  ಹುಡುಗನಪ್ಪ. ಇವನ  ಬಾಯಿಗೆ  ಯಾರು  ಕೈಯಾಕಿದ್ರೊ ಶಿವನೆ  ಎಂದು  ಬೈದುಕೊಳ್ಳುತ್ತಾ ."ನಂಗೆ  ಬೋರ್  ಏನು  ಆಗಲ್ಲ . ನೀವಿಗೇನ?ಗುರುತು  ಪರಿಚಯ  ಇಲ್ದೆ  ಇರೋರ  ಹತಿರ  ಅವರ  ಹೆಸರನ್ನು  ತಿಳಿದುಕೊಳ್ಳದೆ ಮಾತಾಡೋದು?”

"ಹೀಗೆ  ಮಾತಾಡ್ತಾ  ಇದ್ರೆ  ಗೊತ್ತಗುತ್ತಪ್ಪ. ಈಗ  ಹೇಳಿ  ಯಾವ್ದಾದ್ರು  ಕೋರ್ಟ್ ನಲ್ಲಿ  ಮೊದ್ಲು  ಹೆಸರು  ತಿಳ್ಕೊಂಡೆ  ಮಾತಾಡಬೇಕು  ಅಂತ  ರೂಲ್ಸ್  ಮಾಡಿದರ?ಇಲ್ಲ  ಅಲ್ವ? ಸರಿ  ಅದೆಲ್ಲ  ಬಿಡಿ . ನನ್  ಹೆಸರು  ಮಂಜು . ನಿಮ್  ಹೆಸರೇನು?"

ಪವಿಗೆ  ಎಲ್ಲಿಲ್ಲದ  ಕೋಪ ."ಸಾರೀ  ನಾನು  strangers ಜೊತೆ  ಮಾತಾಡಲ್ಲ . ನಿಮ್ಮ  ಜೊತೆ  ಇಷ್ಟೊತ್ತು  ಮಾತಾಡಿದ್ದೆ  ಹೆಚ್ಚು . Please don’t disturb me"

“ಅಲ್ಲ  ನನ್  ಹೆಸರು  ತಿಳ್ಕೊಂಡು  ನಿಮ್  ಹೆಸರು  ಹೇಳ್ದೆ  ಹೊರ್ದ್ರೆ  ಹೇಗೆ ? ಹೇಳು  ಏನ್  ನಿನ್ನೆಸರು?”

ಪವಿ  ಏನನ್ನು  ಮಾತಾಡಲಿಲ್ಲ. ಸುಮ್ಮನೆ  ಒಂದು  ಮಿಚ್ಚಿನಂತಹ  ನೋಟ  ಬೀರಿ  ಸುಮ್ಮನಾದಳು.

“ಹಲೋ. ಹೇಳು  ಏನ್  ನಿನ್ನೆಸರು ? ಫ್ರೆಂಡ್ಸ್  ಎಲ್ಲ  ಮೊದ್ಲು  strangers ಆಗಿರ್ತಾರೆ . ಆಮೇಲೆ  ತಾನೇ  ಫ್ರೆಂಡ್ಸ್  ಆಗೋದು . ಅದೇ  ಇಲ್ಲೂ  ಆಗ್ತಾ  ಇರೋದು . ಸೊ  ಹೇಳು  ಏನ್  ನಿ…”

“ಪವಿತ್ರ” ಅವನು  ತನ್ನ  ವಾಕ್ಯ  ಪೂರ್ತಿ  ಮಾಡುವ  ಮೊದಲೇ  ಉತ್ತರಿಸಿದಳು. ಅವನ  ಮಾತು  ಕೂಡ  ನಿಜ  ಎಂದನಿಸಿತು .'Strangers are just waiting to be friends' ಎಂದು  ಎಲ್ಲೋ  ಓದಿದ್ದು  ನೆನಪಿಗೆ  ಬಂತು .

ಇದಾಮೇಲೆ  ಮಂಜು  ಅವಳನ್ನು  ಮಾತಿಗಿಳಿಸಿದ. ಯಾರ  ಜೋತ್ತೆಯು  ಅದರಲ್ಲೂ  ಅಪರಿಚಿತರ  ಜೋತೆ  ಮಾತನಾಡದ  ಅವಳು  ಅಂದು  ಮಂಜು  ಜೊತೆ  ಸ್ವಲ್ಪ  ಜಾಸ್ತಿಯೇ  ಹರಟಿದಳು!ಅವನ  ರಾಗ  ಎಳೆದು  ಮಾತಾಡುವ  ವಾಯ್ಸ್  ಅವಳಿಗೆ  ತುಂಬಾನೇ  ಇಡಿಸಿತು .

“ದಿನ  ಬರ್ತೀಯ  ಪಾರ್ಕ್ಗೆ ? ಯಾವತ್ತು  ನಿನ್ನ  ನೋಡೇ  ಇಲ್ಲ . Mostly first time ಅನಿಸುತ್ತೆ.”
“ಹ್ಮ್ ಹೌದು  ಫಸ್ಟ್  ಟೈಮ್. ನೀವು  ದಿನ  ಬರ್ತಿರ ?
“ ವೀಕೆಂಡ್ಸ್  ಮತ್ತೆ  ಹಾಲಿಡೆಸ್ನಲ್ಲಿ ಜಾಸ್ತಿ  ಇಲ್ಲೇ  ಇರ್ತೀನಿ . ಇದು  ನಮ್ಅಡ್ಡ . ಫ್ರೆಂಡ್ಸ್  ಎಲ್ಲ  ಒಟ್ಟಿಗೆ  ಸೇರ್ತಿವಿ  ಸಂಜೆ  ಟೈಮ್ . ಆದ್ರೆ  ಇವತ್ತು  ಅಪರೂಪಕ್ಕೆ  ನಾನ್ ಕರೆಕ್ಟ್  ಟೈಮ್  ಗೆ  ಬಂದಿದೀನಿ  ಆದ್ರೆ  ಫ್ರೆಂಡ್ಸ್  ಅನಿಸ್ಕೊಂಡ  ನನ್ ಮಕ್ಳು  ಇನ್ನು  ಬಂದಿಲ್ಲ  so waiting”
“ಫ್ರೆಂಡ್ಸ್ಗೆ ಬೈತಿರ ?”
“ಥು ಇಲ್ಲವೆ . ಪ್ರೀತಿ  ಜಾಸ್ತಿ  ಆದಾಗ  ಈ  ರೀತಿ  ಹೇಳ್ತೀನಿ  ಅಷ್ಟೇ” 
ಅವನು  ‘ಥು’ ಅಂತ  ಹೇಳಿದ್  ಸ್ಟೈಲ್  ಅವಳಿಗೆ  ಇಷ್ಟವಾಯಿತು..., ಹೀಗೆ  ಹೇಗೋ  ನಮ್ಮುಡುಗಿ  ಮುತ್ತು  ಉದುರಿ  ಹೋಗುತ್ತೇನೋ  ಅನ್ನೋ  ಹಾಗೆ  ಮಾತಾಡ್ತಾ  ಇದ್ರೆ  ಆ  ಕಡೆ  ಮಂಜು  ಮಾತೆ  ಬಂಡವಾಳ  ಅನ್ನೋ  ಹಾಗೆ  ಮಾತಾಡ್ತಾ  ಇದ್ದ . ಅವನು  ಪ್ರಶ್ನೆ  ಕೇಳಿ  guess ಮಾಡಿ  ಉತ್ತರವೂ  ಹೇಳ್ತಿದ್ದ . ಇವಳು  ಅವನು  ಕೇಳಿದ  ಪ್ರಶ್ನೆಗೆಲ್ಲ  1mark question ಗೆ  answer ಮಾಡೋ  ರೀತಿ  one word ನಲ್ಲಿ  ಉತ್ತರಿಸ್ತ  ಇದ್ಲು. ಅಂತು  ಚಂದ್ರೋದಯದ  ಸಮಯ  ಆಯಿತು. ಪವಿ  ತಡಮಾಡೋದು ಬೇಡ  ಅಂತ..
“ನಾನಿನ್ನು  ಹೊರಟೆ  ಬೈ”
“ಇರೆ  ಸ್ವಲ್ಪ  ಹೊತ್ತು . ನನ್  ಫ್ರೆಂಡ್ಸ್  ಬರೋತನಕ  at least?”
“ಇಲ್ಲ  ಕತ್ಲಾಗ್ತಾ  ಇದೆ  ಹೋಗ್ಬೇಕು . ನೀವೂ  ಬೇಗ  ಹೋಗಿ  ಮನೆ  ತಲುಪಿ”
“ಅಯ್ಯೋ! ಇನ್ನ  7 ಗಂಟೆ..ಇಷ್ಟು  ಬೇಗ  ಮನೆಗೆ  ಹೋಗಿ  ನಾನ್  ಏನ್  ಮಾಡ್ಲೇ??ನಿನ್  ಹೊರಡು  ಬೇಕಾದರೆ . ಬಟ್  ನೀವೂ  ತಾವು  ಅಂತ  ಮಾತಾಡಿಸ್ಬೇಡ . ನೀನು  ಅಂತಾನೆ  ಕರಿ  ಓಕೆನ ?"
“ಸರಿ   ಹಾಗಾದ್ರೆ  ನಾನಿನ್ನು  ಹೋಗ್ಬಿಟ್  ಬರ್ತೀನಿ”
“ಬರಬೇಡ”
“?????????”
“ಅಯ್ಯೋ  ಗೂಬೆ  ಸುಮ್ನೆ  ತಮಾಷೆಗೆ  ಹೇಳ್ದೆ. ಮತ್ತೆ  ಮತ್ತೆ  ಸಿಗ್ತಾ  ಇರು ” ಮಂಜು  ಫ್ರೆಂಡ್ಸ್  ಬರೋದನ್ನ  ನೋಡಿ  ಮುಂದುವರೆಸಿದ "ಸರಿ  ನನ್  ಫ್ರೆಂಡ್ಸ್  ಕೂಡ  ಬಂದ್ರು  ಬೈ  take care”
“bye. Have a fine evening”

ಮಂಜು  ಅವನ  ಫ್ರೆಂಡ್ಸ್  ಜೊತೆ  ಹೋದ . ಇತ್ತ  ಪವಿ  ಅವನಾಡಿದ  ಮಾತುಗಳನ್ನು  ನೆನೆಯುತ್ತ  ರೂಮ್ನ  ಕಡೆ  ನಡೆದಳು . "ತುಂಬಾ  ಒಳ್ಳೆಯ  ಹುಡುಗ . ತಾನು  ನಕ್ಕಿ  ಎಲ್ಲರನ್ನು  ನಗಿಸಬಲ್ಲವ . ಬೇಗ  ಇಷ್ಟವಾಗುವ  ಜೀವಿ . Happy-go-lucky nature . ಹೀಗೆ  ಅವನ  ಗುಣಗಳನ್ನು  ತನಗೆ  ತಾನೇ  ಹೇಳಿಕೊಳ್ಳುತ್ತಾ  ಹೋಗುತಿದ್ದಳು . ಅವನ  ಜೊತೆ  ಮಾತಾಡಿ  ಆ ದಿನ  ತುಂಬಾ  ಸಂತಸದಿಂದಿದ್ದಳು . ಪಾರ್ಕ್ನಲ್ಲಿ  ಮಾತಾಡುತಿರುವಾಗ  ಮುಂದೆ  ಸಿಕ್ಕಿದಾಗ  ಸ್ವಲ್ಪ  tuitionಗೋಗಿ ಮಾತನಾಡೋದನ್ನ  ಕಲಿತುಕೊಂಡು  ಬಂದಿರು  ಎಂದಿದು  ನೆನಪಾಗಿ  ಮುಗುಳ್ನಕ್ಕಳು.

ಪವಿ  ಹೀಗೆ  ತನ್ನ  ನೆನಪುಗಳಲ್ಲಿ  ಮುಳುಗಿ  ವಾಸ್ತವ  ಜಗದಲ್ಲಿ  ಏನಾಗುತಿರುವುದು  ಎಂಬುದನ್ನೇ  ಮರೆತಿದ್ದಳು . ಅಷ್ಟರಲ್ಲಿ  ಅವಳ  ಊರಿನ  ಬಸ್  ಬಂದಿತು . Bus ಹೊರ್ನ್  ಕೇಳಿ  ಪವಿ  ನೆನಪಿನಿಂದ  ಹೊರಬಂದಳು . ಬೇಗ  ಬಸ್ಸನ್ನು  ಹತ್ತಿ  ಕಿಟಕಿಯ  ಪಕ್ಕ  ಕುಳಿತಳು . ನೆನಪಿನ  ಜೊತೆ  ತೇಲಿ ಹೋಗಲು  ತಣ್ಣನೆ  ಗಾಳಿ  ಬೇಕೆಂದೋ  ಅಥವಾ  ಅವಳ  ಊರಿಗೆ  ಹೋಗುವ  ದಾರಿಯಲ್ಲಿ  ಕಾಣುವ  ಹಚ್ಚ  ಹಸಿರ  ನೋಟವ  ತನ್ನ  ಕಣ್ಣಿನ  ಕ್ಯಾಮೆರಾದಲಿ  ಸೆರೆ  ಹಿಡಿಯಲೋ  ತಿಳಿಯದು! ಪವಿ  ಹೀಗೆ  ಕಿಟಕಿ  ಆಚೆ  ಕಣ್ಣಾಯಿಸಿ  ಜನರನ್ನು , ವಾಹನಗಳನ್ನು , ಕಟ್ಟಡಗಳನ್ನು  ನೋಡುತ್ತ  ಕುಳಿತಳು .

ನೋಡುತಿರುವಾಗ  ಯಾರೋ  ಒಬ್ಬಳು  ತನ್ನ  ಗೆಳೆಯನ  ಜೊತೆ  ಜಗಳವಾಡಿ  ಮುನಿಸಿಕ್ಕೊಂಡು  ಕೂತಿದ್ದನ್ನು  ಕಂಡಳು . ಬಸ್  ನಿಧಾನವಾಗಿ  ಹೋಗ್ತಾ  ಇದ್ದ  ಕಾರಣ  ಕಾಣಿಸಿತು . ತಾನು  ಕೂಡ  ಹೀಗೆ  ಆಡುತಿದ್ದ  ಆದ್ದರಿಂದ  ಅಲ್ಲಿ  ಎನಾಗಿರ  ಬಹುದೆಂದು  ಅರಿತಳು . ಇದು  ಅವಳನ್ನು  ಒಂದೂವರೆ  ವರ್ಷದ  ಹಿಂದಿಗೆ ಇಣುಕುವಂತೆ  ಮಾಡಿತು. 

ಮಂಜು  ಹಾಗು  ಪವಿ  ಬೆಸ್ಟ್  ಅಂಡ್  ಕ್ಲೋಸ್  ಫ್ರೆಂಡ್ಸ್  ಆಗಿದ್ದರು. ಇಬ್ಬರು  ದಿನವು  ಪಾರ್ಕಿನಲ್ಲಿ  ತಪ್ಪದೆ  ಬೇಟಿಯಾಗುತಿದ್ದರು. ದಿನವಿಡೀ  ಏನೆಲ್ಲಾ  ಆಯಿತು  ಅದನ್ನು  ಒಬ್ಬರೊಬ್ಬರಿಗೆ  ಹೇಳಿಕೊಳ್ಳುತಿದ್ದರು . ಯಾರನ್ನು  ಹಚ್ಚಿಕೊಳ್ಳದ  ಪವಿ  ಕೇವಲ  ದಿನಗಳಲಿ  ಮಂಜುನನ್ನು  ಹಚ್ಚಿಕೊಂಡಿದ್ದಳು . ಇಬ್ಬರ  ನಡುವೆ  ಸಲುಗೆ  ಹೆಚ್ಚಿತ್ತು . ಹಾಗೆಯೆ  ಜಗಳವು  ಜಾಸ್ತಿ . ಚಿಕ್ಕ-ಚಿಕ್ಕ  ವಿಷಯಕ್ಕೂ  ಜಗಳವಾಡುತಿದ್ದರು. ಈ  ರೀತಿ  ಜಗಳವಾಡುವಾಗ ಭಾವುಕಳಾಗಿದ್ದ  ಪವಿ  ಎಷ್ಟೋ  ಸರತಿ  ಅತ್ತಿದ್ದು  ಉಂಟು . ಅದು  ಅಲ್ಲದೆ  ತುಂಬಾ  ಹಚ್ಚಿಕೊಂಡಿದ್ದಳು  ನೋಡಿ  ಅದಕ್ಕೆ . ಇದಾದಮೇಲೆ  ಹೇಗೋ  ಸಮಾಧಾನವಾಗುತಿತ್ತು ಅವನ  ಮಾತು  ಕೇಳಿ . ಆದರೆ  ಮಂಜು  ಮಾತ್ರ  ಒಂದು  ಸಾರೀನು  ಕೇಳ್ತಿರಲಿಲ್ಲ  ಅಥವಾ  ಸಮಾಧಾನ  ಪಡಿಸುವ  ಸಲುವಾಗಿ  ಮಾತಾಡ್ತಾ  ಇರಲಿಲ್ಲ . ಆದರೆ  ಪವಿಗೆ   ಹೇಗೋ  ಸಮಾಧನವಾಗುತಿತ್ತು. ಅದಾದಮೇಲೆ  ಇಬ್ರು  ಜಗಳ  ಆಡೇ  ಇಲ್ವೇನೋ  ಅನ್ನೋ  ಹಾಗೆ  ಹರಟೆ  ಹೊಡಿತಿದ್ರು .

ಹೀಗೆ  ಎಲ್ಲವು  ಸುಸೂತ್ರವಾಗಿ  ನಡೆಯುತ್ತಿತ್ತು . ಅವಳಂತೂ  ಮಂಜುನ  ಮಾತಿಗೆ , attitudeಗೆ,  ಸದಾ  ನಗ್ತಾ  ಇರೋದಕ್ಕೆ , ಅವನ  friendly natureಗೆ  ಹುಚ್ಚಿ  ಆಗಿದ್ಲು . ಅವಳಿಗಂತೂ  ಅವನು  ‘one and only’ ಆದರೆ  ಅವನಿಗೆ  ಅವಳು  ‘one of many’. ಅವನು  ಎಲ್ಲ  ಫ್ರೆಂಡ್ಸ್  ಜೊತೆ  ಮಾತಾಡ್ತಾ  ಇದ್ದದೆ  ಹಾಗೆ . ಆದರೆ  ಇದೆ  ಮೊದಲು  ಪವಿ  ಇಂತಹವನ  ಜೊತೆ  ಕೂಡಿದ್ದ  ಅನುಭವಗಿದ್ದು .

                                                                                                                             ಮುಂದುವರೆಯುವುದು...

Wednesday, March 16, 2011

jackie song


ಎಲ್ಲ ಬರಿ ತಪ್ಪು  answersಗಳೇ ನಮ್ ತಲೆಯೊಳಗೆ
Student's future lectures ಕೈಯೊಳಗೆ 
ಎಲ್ಲ ಬರಿ ತಪ್ಪು  answersಗಳೇ ನಮ್ ತಲೆಯೊಳಗೆ
Student's future lectures ಕೈಯೊಳಗೆ
Board examಗೆ ಜೈ ಅಂದು ಬಿಡಿ 
Board examಗೆ ಜೈ ಅಂದು ಬಿಡಿ
ದೇವರವ್ನೆ ನೀ exams ಬರಿ

Simple question ಬಂತು ಅಂದ್ರೆ.. ಪೆದ್ದ ಕೂಡ ಬರಿಬಹುದು
Simple question ಬಂತು ಅಂದ್ರೆ ಪೆದ್ದ ಕೂಡ ಬರಿಬಹುದು 
ಸತ್ತರುನು ಬರೋದಿಲ್ಲ ಕಳ್ನನ್ ಮಗಂದು 
ನಾವ್ ಬರೀಬೇಕು ದೇವರನ್ನೇ ನೆಚ್ಚಿಕೊಂಡು 

ಒಂದೇ question ಒಂದೇ question ಎಂದುಕೊಂಡು ಎಂಡಿನಲ್ಲಿ
ಎಲ್ಲ questions ಬಿಟ್ಟು ಕೂರಬೇಕು 
ನಾವ್ ನಮ್ಮ paper ನಾವುಗಳೇ ಇಟ್ಟುಕೊಂಡು 
Fail ಆಗಬೇಡ ಅಷ್ಟು ಬೇಗ ಸ್ವಲ್ಪ ತಡಿ 
Fail ಆಗಬೇಡ ಅಷ್ಟು ಬೇಗ
Fail ಆಗಬೇಡ ಅಷ್ಟು ಬೇಗ ಸ್ವಲ್ಪ ತಡಿ
ದೇವರವ್ನೆ ನೀ copy ಹೊಡಿ 

ಯಾವ್ದು ಇಲ್ಲಿ right ಆಯ್ತು ಯಾವ್ದು ಇಲ್ಲಿ wrong ಆಯ್ತು
ಯಾವ್ದು ಇಲ್ಲಿ right ಆಯ್ತು ಯಾವ್ದು ಇಲ್ಲಿ wrong ಆಯ್ತು
ಹೇಳುವುದು ಹೇಗೆ marksಎಷ್ಟು ಎಂದು?
ನಾವ್ ತುಂಬಿಸ್ಬೇಕು pageಅನ್ನು ಮುಚ್ಚುಕೊಂಡು

Care free ಮಂದಿ ನಾವು time passಗಾಗಿ ಬರಿತಿವಿ 
ಹೆದ್ರೋರಲ್ಲ ಮನೇಲಿ ಎಷ್ಟೇ ಬೈದರುನು 
ಪಾಪ distinction miss ಆದೊರ್ ಗತಿ ಏನು?
ಈ ಸರ್ತಿ ಹೋಯ್ತು ಅಂದ್ರೆ ಹೋಗ್ಲಿ ಬಿಡಿ 
ಈ ಸರ್ತಿ ಹೋಯ್ತು ಅಂದ್ರೆ ಹೋಗ್ಲಿ ಬಿಡಿ
ದೇವರವ್ನೆ next time pass ಮಾಡಿ


Saturday, March 5, 2011

"ನೀನು"

ಬಿಳಿಯ ಈ ಕಾಗದಲಿ
ಕಪ್ಪು ಶಾಯಿಯ ಅಕ್ಷರಗಳಲ್ಲಿ
ತುಮ್ಬಿರುವೆಯಲ್ಲೋ

ನಿನ್ನ ಪ್ರೀತಿಯ ಬಗೆಯಲ್ಲಿ
ಬರೆದ ವೈಯಕ್ತಿಕ ಪತ್ರದಲ್ಲಿ
ಪದವೆಲ್ಲ ನಿನೆಯಾದೆಯಲ್ಲೋ

ಮನದಿ ಮುಡುತಿರುವ ಭಾವನೆಗಳಲ್ಲಿ
ಒಂದೊಂದು ಸಾಲಿನಲಿ 
ನೀ ಇರುವೆಯಲ್ಲೋ

ಕಣ್ಣಲ್ಲಿ ಪ್ರತಿಬಿಂಬಿಸುವ ಪ್ರತಿ ದೃಶ್ಯದಲ್ಲಿ
ಎಲ್ಲಿ ನೋಡಿದರಲ್ಲಿ
ನೀನೆ ಕಾಣುತಿರುವೆಯಲೋ

ಏನೇ ಚಿಂತಿಸಿದರು "ನೀನು"
ಎತ್ತ ನೋಡಿದರು "ನೀನು"
ಎಲ್ಲಾ ಕನಸುಗಳಲು "ನೀನು"
ನನ್ನ ಮನಸಿನ ಅರಸನು "ನೀನು"
ನೋಡು ಈ ನನ್ನ ಕವನಕೆ ಚೇತನ
ತುಮ್ಬುತಿರುವುದೂ ಕೂಡ ಆ "ನೀನು"


Tuesday, March 1, 2011

ಬೇಸರವು ತಂದ ನೆನಪುಗಳು

 
26/2/2011 ರಂದು  ಬರೆದ  ಒಂದು  ಲೇಖನ  ಇದು …. Exams ಇದ್ದ  ಕಾರಣ  ಈಗ  ಪೋಸ್ಟ್  ಮಾಡ್ತಾ  ಇದ್ದೀನಿ …

ಇವತ್ತು  ಮನಸ್ಸಲ್ಲಿ  ಏಕೋ  ಏನೋ  ಗೊತ್ತಾಗದಂತೆ  ನೋವಾಗುತ್ತಿತ್ತು . ನಂಗೆ  ಬೇಸರವಾಗಿದೆ  ಎಂದು  ಗೊತ್ತಾಗಿದ್ದು , ನಾನು  ಇವತ್ತು  ಜಾಸ್ತಿ  ಸಮಯ  ಮಲಗಿದ್ದೆ  ಹಾಗು  ಒಂಟಿಯಾಗಿದ್ದೆ  ಎಂದು  ತಿಳಿದಾಗ ! ಬೇಸರವಾಗಿದ್ದರೆ , hurt ಆಗಿದ್ದರೆ  ಅಥವಾ  ಯಾರಿಗಾದರೂ  ಬೇಸರ  ಮಾಡಿದ್ದರೆ  hurt ಮಾಡಿದ್ದರೆ  ನಾನು  ಆ  ದಿನ  ಯಾರ  ಜೋತ್ತೆನು  ಹೆಚ್ಚಾಗಿ  ಮಾತಾಡಲ್ಲ… ಬದಲಾಗಿ  ಹೆಚ್ಚು  ಸಮಯ  ಮಲ್ಕೊತೀನಿ[funny ಅನಿಸುತ್ತಾ?] seriously.. ಯಾಕಂದ್ರೆ  ನಾನು  ಬೇಸರವಾದಾಗ  ಅಳ್ತಿನಿ.. ನಾನು  ಅಳುವುದನ್ನ  ಯಾರು  ನೋಡಬಾರದು. ನೋಡಿದ್ರೆ  reason  ಕೇಳ್ತಾರೆ ಆದ್ರೆ ನಂಗೆ ಹೇಳಕ್ಕೆ ಇಷ್ಟ  ಇರಲ್ಲ  so ಅವರಿಗೆ  reason ಹೇಳ್ದೆ  ಬೇಜಾರ್  ಮಾಡಿ  ಮತ್ತೆ  ಅದಕ್ಕೆ  ಆಳುವುದಕ್ಕೆ  ನಂಗೆ  ಇಷ್ಟ  ಇಲ್ಲ .. ಸೊ  ಮಲ್ಕೊತೀನಿ …ಮಲ್ಕೊಂಡು  ಅಳ್ತಿನಿ. ಹಾಗೆ  ಇವತ್ತು  ಹೆಚ್ಚೊತ್ತು  ಮಲ್ಕೊಂಡಿದ್ದೆ .. ಆದ್ರೆ  ಅಳೋಕೆ  ಆಗಿರಲಿಲ್ಲ … ನಂಗೆ  ನಂ  ಬೇಸರಕ್ಕೆ  reason ಗೊತ್ತಿರಲಿಲ್ಲ ..so .. ಸುಮ್ನೆ  ಒಬ್ಳೆ  ಎದ್ದು  ಕುಳಿತ್ಕೊಂಡೆ… ನನ್ನ  right sideನಲ್ಲಿ  mobile[fm on ಆಗಿತ್ತು  ಆದ್ರೆ  ಕೇಳ್ತಾ  ಇರಲಿಲ್ಲ]..and left side ನಲ್ಲಿ  ನನ್ನ  present year dairy.. ಇವೆಲ್ಲ  ಪಕ್ಕದಲ್ಲೇ  ಇದ್ದಾಗ  ನಾನು  ಯಾವತ್ತು  ಸುಮ್ನೆ  ಕುತಿರಲಿಲ್ಲ  ಆದ್ರೆ  ಈ  ದಿನ?ಹೀಗೆ  ಈ  ಬೇಸರದಲ್ಲೇ  ಕಾಲ  ಹೋಗ್ಲೋ  ಬೇಡವೋ  ಅನ್ನೋ  ಹಗೆ  ಹೋಗ್ತಾ  ಇತ್ತು…


                ಮನಸ್ಸಲ್ಲಿ  ಯಾವುದಾವುದೋ  ಘಟನೆಗಳ  ನೆನಪಿನ  ಆಗಮನವಗುತಿತ್ತು . ಚಿಕ್ಕಂದಿನ  ವಿಷಯದಿಂದ  ಇಡಿದು  ನೆನ್ನೆಯವರೆಗಿನ  ವಿಷಯ  ಎಲ್ಲವು  ಒಂದಾದ  ಮೇಲೆ  ಒಂದೊಂದು  ನೆನಪಿಗೆ  ಬರುತಿದ್ದವು . ಕಾರಣ??? ಒಂಟಿತನ . ಹೌದು . ಒಂಟಿಯಾಗಿದ್ದರೆ  ಎಲ್ಲವೂ  ನೆನಪಿಗೆ  ಬರುತವೆ . ಮರೆತು  ಹೋಗಿರುತ್ತೇವೆ  ಅಂದುಕೊಂಡದ್ದು  ಕೂಡ . ಹಾಗೆ  ಒಂದು  ನೆನಪಿಗೆ  ಬಂದದ್ದು---- ನಾನು  9thstandardನಲ್ಲಿ  ಓದ್ತಾ  ಇರಬೇಕಾದ್ರೆ  ಒಂದು  ದಿನ friday, school ಇಂದ  ಮನೆಗೆ  ಹೋಗೋ  ಸಮಯ . ಆದರೆ  ೫ ಗಂಟೆ  ಆದರು  ಇನ್ನ  school ನಲ್ಲೆ ಇದ್ದೆ  ನಾನು . ಕಾರಣ  it was raining. ಜೋರಾಗಿ  ಬರ್ತಿತ್ತಲ್ಲ  so ನಾನು  school ನಲ್ಲೆ  ಇದ್ದೆ . ನನ್ನ  classmate Maimuna ಕೂಡ  ಅಲ್ಲೇ  ಇದ್ಲು .. ಆಟೋಗಾಗಿ  ವಿತ್  ಮಾಡ್ತಿದ್ಲು . ಮಳೆ  ನಿಲ್ತು  ಒಂದ್  ೫ ಗಂಟೆಗೆ . ನನಗೋ  ಹೊಟ್ಟೆ  ಹಸಿತ  ಇತ್ತು . ಆದ್ರೆ  ಕಾಸಿರಲಿಲ್ಲ  ಏನಾದ್ರು  ತಿನ್ನೋಣ  ಅಂದ್ರೆ . ಆಗ  Maimuna ಹತ್ರ  ಎರಡು  ರೂಪಾಯಿ  ಇಸ್ಕೊಂಡು  ಎರಡು  ‘center fruit’ ತಗೆದುಕೊಂಡ್[ತುಂಬಾ ಇಷ್ಟ] chew ಮಾಡ್ತಾ  ಮನೆಗೆ  ಹೋದೆ . ಅವಳಿಗೆ  ಹೇಳಿದ್ದೆ  Monday ಕೊಡ್ತೀನಿ  ಅಂತ . Saturday ಯಾವುದೊ  ಕಾರಣಕ್ಕೆ  school ಗೆ  ರಜೆ  ಇತ್ತು . Sunday as usual holiday. ಬರಿ  ಎರಡು  ರುಪಾಯಿ  ನೋಡಿ  ಎರಡು  ದಿನಕ್ಕೆ  ಮರ್ತೊಗಿದ್ದೆ!! ಆದ್ರೆ  ಈಗ  ನೆನಪಿಗೆ  ಬರ್ತಾ  ಇದೆ . ಅದು ಎರಡು-ಎರಡು ವರೆ  ವರ್ಷ  ಆದ್ಮೇಲ..

ನಂಗೆ  valley ball ಅಂದ್ರೆ  ತುಂಬಾ  ಇಷ್ಟ . Captain ಕೂಡ  ಆಗಿದ್ದೆ . Physical education period ನಲ್ಲಿ  ಬರಿ  ಆ  ಆಟನೇ  ಆಡ್ತಾ  ಇದ್ದೆ  ಹೆಚ್ಚಾಗಿ . ಒಂದು  ದಿನ  ಹೀಗೆ ಆಡ್ಬೇಕದ್ರೆ  build up ಗೋಸ್ಕರ  ತಲೆ  ಇಂದ  ball ಹೊಡ್ದೆ  ನೋಡಿ…. ಅಬ್ಬಾ!!! ಇರೋ  ಬಾರೋ ಲೋಕನೆಲ್ಲ  ನೋಡ್ಬಂದನ್ಗಿತು . ಇನ್ನೊಂದು  ದಿನ  ಅದೇ  P.E period, ಅದೇ  valley ball court.. ನನ್ನ  ಪಕ್ಕ  ನಿಂತಿದಿದ್ದು  Sharanya [one of my best frnd] ball ಇಬ್ಬರ  ಮಧ್ಯೆ  ಬರ್ತಾ  ಇತ್ತು . ಇಬ್ಬರಲ್ಲಿ  ಯಾರು ಕೂಡ  ‘leave’ or ‘take’ ಹೇಳಿಲ್ಲ . ಇಬ್ರು  ಹೊಡಿಯೋಕೆ ಹೋದ್ವಿ.. ಹುಡುಗಿ  ಬಚಾವ್  ಆದ್ಲು ಆದ್ರೆ  ನಂ  ತಲೆ!!???? ಅಯ್ಯೋ!! ನಮ್  ground road ಥರ… tar ಇಂದ  ಮಾಡ್ಸಿದ್ದು.. ಬಿದ್ದಾಗ  ನನ್  ತಲೆ… ಅಯ್ಯೋ!! ಈಗಲೂ  ಭಯ  ಆಗುತ್ತೆ!!ಅತ್ತು  ಬಿಟ್ಟಿದ್ದೆ..ಅಷ್ಟು  ನೋವಾಗಿತ್ತು. ಅದಲ್ದೇ  ಆ  ದಿನದ  2 weeks back ಇಂದ  ನನ್  best friend ‘Prajwala’ ಜೋತ್ತೆ  ಜಗಳ ಆದಿ  ಮಾತಾಡಿಸ್ತ  ಇರಲಿಲ್ಲ . ಅವಳು   ನನ್ನ  ನೋಡಿದರು  courtesy ಗಾದ್ರು  ನೋವಗ್ತಾ  ಇದ್ದೀಯ  ಅಂತ  ಕೇಳಿರಲಿಲ್ಲ!! ಆ  painಗಿಂತ  ಮನಸ್ಸ್ಗಾದ  ನೋವೆ  ಜಾಸ್ತಿ:(

ನಾನು  ಹಾಗು  ಅವಳು  ತುಂಬಾನೇ  ಜಗಳ  ಆಡ್ತಾ  ಇದ್ವಿ . ಈಗಲೂ  ಆಡ್ತಾನೆ  ಇದಿವಿ . ಹೇಳ್ಬೇಕು  ಅಂದ್ರೆ  9th standardನಲ್ಲಿ  ನಾನು  ಅವಳು  ಹಾವು-ಮುಂಗುಸಿ. But 10th standard ನಲ್ಲಿ  ಅದೆನಿತೋ  ಆ  ಗೂಬೆ  ನಾನು  ‘best of all the friends’ ಆದ್ವಿ .. ಆದರು  ಎಷ್ಟೋ  ಸರತಿ  ಮಾತು  ಬಿತ್ತಿದಿವಿ . School ಇರೋದೇ  ಒಂದ್ 9 ತಿಂಗಳು . ಅದ್ರಲ್ಲಿ  ಇಲ್ಲ  ಅಂದ್ರು  3-4 months ಮಾತಾಡಿರಲಿಲ್ಲ  ನಾವು . ಆದ್ರೆ  ಮಾತಾಡಕ್ಕೆ  ಶುರು ಮಾಡಿದ್ರೆ  ಒಂದೇ  ಸಮನೆ  ಮಾತಾಡ್ತಾ  ಇದ್ವಿ . And ಈಗಲೂ  ಅಷ್ಟೇ  ಮಾತಾಡ್ತಾ  ಇಲ್ಲ . ಒಂದೇ  college. ಅವಳು  science ನಂದು  commerce.. ಎದುರಿಗೆ  ಸಿಕ್ಕಿದರು  ಕೂಡ  ಮಾತಾಡಿಸ್ತಾ  ಇಲ್ಲ . Exam ನಡೀತಾ  ಇದೆ , ಒಂದ್  wish ಕೂಡ  ಮಾಡಿಲ್ಲ  ಇಬ್ರು! 22nd ಇಂದ  ಶುರುವಾಯಿತು.. ಅವಳೇ  ಕೋಪ  ಮಾಡ್ಕೊಂಡು  ಹೋದಳು.


                ಇನ್ನು  ನನ್ನ  ನೆನಪಿನ  ಬಗ್ಗೆ  ಹೇಳ್ತಾ ಇದ್ದೆ  ಅಲ್ವ ??hmm ತುಂಬಾನೇ  ನೆನಪಾಗಿದ್ದು  high school days… specially 10th standard.. ಎಷ್ಟು  ಮಜಾ  ಮಾಡಿದ್ವಿ? ಯಪ್ಪಾ!! Class room ನ  ಹಿಂದೆ  ಇದ್ದ  ಖಾಲಿ  ಜಗದಲ್ಲಿ  ಕುತ್ಕೊಬಿಟ್ರೆ  ಮುಗಿತು . ಅಲ್ಲೇ  ಊಟ , ಆಟ  ಪಾಠ  ಎಲ್ಲ . ಆ  ನಮ್ಮ  class room ಹಿಂದೆ  ಉಳಿದಿದ್ದ  place ಮಾತ್ರ  ಮರಿಯಕ್ಕೆ  ಆಗಲ್ಲ . ಎಲ್ಲರು  ಅವರ  best friends ಜೋತ್ತೆ  ಅಲ್ಲೇ  ಕುತ್ಕೊಂಡು  feelings share ಮಾಡ್ಕೊತ  ಇದ್ರೂ . ಅಲ್ಲೇ  ನಾನು , Praju, Sharu, Pooja, Akshatha ಎಲ್ಲಾ  ಹರಟೆ  ಹೊಡಿತ  ಇದಿದ್ದು . ಇನ್ನು  ಆ  ಜಗದಲ್ಲಿ  ಆಡಿರೋ  ‘ಟಪೋರಿ  dance’! ‘salsa dance’! ಅಬ್ಬಾ!!!!! ನಮ್ಮ  headmistress office ನಮ್  class ಕೆಳಗೆ  ಅನ್ನೋದು  ಮರೆತು  ಆ  ತಮಟೆ  beatsಗೆ  step ಹಾಕಿದ್ದು  ಮರಿಯಕ್ಕೆ  ಆಗದೆ  ಇರೋ  ಅಂತಹದು... ನಮ್  sister[head mistress ನ convent schools ನಲ್ಲಿ  ಹಾಗೆ ಕರಿಯೋದು] ಕೈಲಿ  ಬೈಸ್ಕೊಳದೆ  ಇರೋ   ದಿನನೇ  ಇಲ್ಲ. ದಿನವು  ಬೈಸ್ಕೋತಾ ಇದ್ವಿ!!!! ಇನ್ನು  fare well party ಹಿಂದಿನ  ದಿನ ?? ನಮ್ಮ  classನಲ್ಲಿ ಹಬ್ಬದ  ಸಡಗರ ..:) ಎಲ್ಲರ  ಕೈಲೂ ಮೆಹಂದಿಯ  ಘಮ  ಘಮ!!! ನಮ್ಮ  class ನ  Jains ಮೆಹಂದಿ  ಹಾಕೋದ್ರಲ್ಲಿ  experts. So ಎಲ್ಲರು  ಅವರ  ಹತ್ರ ಹಾಕಿಸ್ಕೊಳದ್ರಲ್ಲಿ  busy ಆಗಿದ್ರು . ಇನ್ನ  ಆ  ದೃಶ್ಯ  ಕಣ್ಣಲೆ ಇದೆ … it was very cool!!!

ಇನ್ನು  fare well party!!? It was classic.. ಎಲ್ಲರು  ಸಾರಿ ಹಾಕೊಂಡಿದ್ರು. ಪಂಚರಂಗಿ!!! Photos ತಗೊಳೋದ್  ಏನು ? Teachers ಹತ್ರ  slam book ಬರೆಸಿಕೊಲ್ಲೋದೆನು ? ಆಹಾ!! ಸುಪರ್ರೋ ಸೂಪರ್… but ಅವತ್ತೇ ನಮ್ಮ  schoolingನ ಕೊನೆಯ  ದಿನ  ಆಗಿತ್ತು-march 10,2010. ಈ  ಸಾರಿ  ಸಡಗರದಲ್ಲಿ  ಮರತೆ  ಹೋಗಿತ್ತು . But ಗೊತ್ತಾದಾಗ  ತುಂಬಾನೇ  ಬೇಸರ  ಆಯ್ತು. ಕಣ್ಣಂಚಲ್ಲಿ  ನೀರು  ಮೂಡಿತ್ತು. ಮಜಾ  ಏನಂದ್ರೆ  ಅವತ್ತು ಕೂಡ  ನಾನು  Praju ಚಿಕ್ಕದಾಗಿ  ಜಗಳ  ಆಡಿದ್ವಿ…ಮನೆಗೆ  ಹೋಗೋ  time ನಲ್ಲಿ . ನೆನೆಸಿಕೊಂಡರೆ  ಎಷ್ಟು  childish ಅಂತ  ಅನಿಸಿ ತುಂಬಾನೇ  ನಗು  ಬರುತ್ತೆ. ಆದರು  ಜಗಳ  ನಿಲ್ಲಿಸಿಲ್ಲ …ನಿಲ್ಲಿಸೋದು  ಇಲ್ಲ.

                ಇಷ್ಟೆಲ್ಲಾ  ನೆನಪಿನ  ಮಧ್ಯೆ ಮತ್ತೊಂದು  ನೆನಪು …ನೆನಪಾದ  ತಕ್ಷಣ  ಓಡಿ  ಹೋಗಿ  ನನ್ನ  2009 dairy ಹುಡುಕೋಕೆ  ಶುರು  ಮಾಡ್ದೆ … ಅದರ  ಜೊತೆ  ಇನ್ನೊಂದು  book; dairyಲಿ  ಜಾಸ್ತಿ  ಬರಿಯೋಕೆ  ಆಗ್ಲಿಲ್ಲ  ಅಂದ್ರೆ  ಈ  ಬೂಕ್ನಲ್ಲಿ  ಬರಿತಾ ಇದ್ದೆ . So ಅದನ್ನು  ಹುಡುಕಲು  ಶುರು  ಮಾಡ್ದೆ . ತಕ್ಷಣ  ಎರಡೂ  ಸಿಕ್ಕಿದವು . ಆಮೇಲೆ  ತಿಳೀತು  ಇನ್ನ  ಎರಡು  books ಇದೆ  ಅಂತ . ಆ  ಎರಡು books ಒಂದೇ  ಥರ  ಇದೆ  ನೋಡೋಕೆ . ಒಂದರಲ್ಲಿ  messages , quotes, jokes ಬರಿತಾ  ಇದ್ದೆ  and last page ನಲ್ಲಿ  favorite songs ದು  ಒಂದೆರಡು  lines and ಬೀಜಾರಗಿದ್ದಾಗ ಏನಾದರು  ಗೀಚಿರುತಿದ್ದೆ ಹಾಗೆ  sometimes reasons ಬರಿದಿರುತಿದ್ದೆ . ಇನ್ನೊಂದು  book ಒಂದ್  ರೀತಿ  dairy  ಥರ ಆದ್ರೆ  ಜಾಸ್ತಿ  ಬರೆದಿರಲಿಲ್ಲ . 2010 May-June or college ಶುರು  ಆದಗಿಂದ  ಬರಿಯೋದು  ನಿಲ್ಸಿದೆ .. ಅವು  ಕೂಡ  ಸಿಕ್ಕಿದವು .. ಸ್ವಲ್ಪ  late ಆಗಿ .. ಈ  ನಾಲ್ಕು  books ನ  ತಗೊಂಡು  ಮೊದಲು  ಕೂತಿದ್ದ  ಜಾಗಕ್ಕೆ  ಬಂದೆ.

Book open ಮಾಡ್ದೆ .. ಅದೇ  ಕೋಳಿ ಕಾಲಿನ  ಅಕ್ಷರ!! ಅಯ್ಯೋ!! ನನಗೀ  ಬೇಜಾರಾಯಿತು.. ಹೀಗೆ  ಬರಿತಾ  ಇದ್ನಲ್ಲ  ಅಂತ. But ಈಗ  I’m improved. ತುಂಬಾನೇ  childishಆಗಿ  ಬರೆದಿದ್ದೀನಿ. ಕೆಲವೊಂದ್  pageನಲ್ಲಿ  ಬರಿ  smiley’s!!! but ಇನ್ನ  ಕೆಲವೊಂದು  pageನಲ್ಲಿ  ಕಣ್ಣ  ಹನಿಗೆ  ink spread ಆಗಿದ್ದ  words!!!:( ಹೀಗೆ  ಓದ್ತಾ  ನೆನಪಾಗಿದ್ದ  ಏನನ್ನೋ  ಹುಡುಕುತ್ತ  ಇದ್ದೆ … ಅಂತು  ಇಂತೂ  ಸಿಕ್ಕೇ ಬಿಡ್ತು…!!!!!!!!! 
ನನ್ನ  ಮೊದಲ  ಕವನ!!!!
                Date specific ಆಗಿ  ಗೊತ್ತಿಲ್ಲ. But 4-11 of march 2009 ಒಳಗೆ.:) ಓದಿ  ಯಾಕೋ  ಏನೋ  ತುಂಬಾ  ನಗು  ಬಂತು.. ಯಾಕೆ??? ಗೊತ್ತಿಲ್ಲ... so here is my first ಕವನ..
ನಾ  ನಿನ್ನ  ಹೇಗೆ  ಮರಿಯಲಿ  ಗೆಳತಿ 
ನೀನೆ  ನನ್ನ  ಹೃದಯದ  ಒಡತಿ 
ನೀನಿಲ್ಲವದರೆ  ನಾನು  ಖಾಲಿ  ಪೂರ್ತಿ 
ನೀನೆ  ಎಂದಿಗೂ  ನನ್ನ  ಜನುಮದ  ಗೆಳತಿ.

ಇನ್ನ  ಕೆಲೋವೊಂದನ್ನ  ಬೇರೆ  ಸರತಿ post ಮಾಡ್ತೀನಿ…ಹೀಗೆ  ಇದನ್ನು ಹುದುಕ್ಬೇಕದ್ರೆ….,march 8th 2009 page ಸಿಕ್ತು… ಆ  ದಿನ  ನಾನು  ನಮ್ಮಣ್ಣ  ಇಬ್ರು  ಒಂದೇ  ತಟ್ಟೇಲಿ  ಊಟ ಮಾಡಿದ್ವಿ… wall-E film ನೋಡ್ತಾ… ಮೂಲಂಗಿ ಬೇಳೆ ಸಾರು  and ದಪ್ಪ  ಮೆಣಸಿನಕಾಯಿ ಬಜ್ಜಿ..!!!! ಆಹಾ!!!

ಇನ್ನು, November 13,Friday… ನಮಗೆ  ಬೆಳಗೆ  9 to 9:45  mathematics special class ಇರುತಿತ್ತು. ನನ್ ಗ್ರಹಚಾರಕ್ಕೆ . ಆಡಿನ  geometry notes ತಗೆದುಕೊಂದೊಗೋದು ಮರ್ತೊಗಿದ್ದೆ. mathematics teacher ಅಂದ್ರೆ  ಸುಮ್ನೆನಾ??ತುಂಬಾ  strict ಆಗಿರ್ತಾರೆ.. ಹಾಗೆ  ಮಕ್ಳುಗು ಅವರ  ಕಂಡ್ರೆ  ಭಯ  ಇದ್ದೆ  ಇರುತ್ತೆ. So ನನಗು  ಭಯ  ಆಗಿದ್ದು  ಸಹಜ.. ತಕ್ಷಣ  ಹೋಗಿ  ಮನೆಗೆ  phone ಮಾಡ್ದೆ . ಒಂದು  ಸರತಿ  schoolಗೆ  enter ಆಯ್ತು  ಅಂದ್ರೆ  ಈಚೆ  ಬಿಡ್ತಿರಲಿಲ್ಲ.. watchman ನನ್  ಅಳು  ಮುಖ  ನೋಡಿ  ಈಚೆ  ಬಿಟ್ಟಿದ್ರು.. class ಶುರು  ಆಗೋ  time ಬಂತು .. ಆದ್ರೆ  ಇನ್ನ  ಯಾರು ತಂದು  ಕೊಡಲಿಲ್ಲ. Books ಎಲೆಲ್ಲೋ  ಹಾಕಿರುತಿದ್ದೆ ಅಲ್ವ  so ಹುಡುಕುತಿದ್ರು  ಅನಿಸುತ್ತೆ. ಅಂತು  ಇಂತೂ  class ಶುರು  ಆಯಿತು. ಹಾಗೆ  ಕಣ್ಣಲ್ಲಿ  ಮಳೆಗಾಲದ  ಜೋಗಜಲಪಾತ; full ಜೋರಾಗಿ  ಅಳೋಕೆ  ಶುರು  ಮಾಡಿದ್ದೆ. Miss classಗೆ  ಬಂದ್ರು  with white ಸಾರಿ[we always used to praise her way of wearing saree and for her saree selection and also for her her style] miss ಮುಂದೆ  ಹೋದೆ .. ಬಿಕ್ಕಳಿಸಿ  ಬಿಕ್ಕಳಿಸಿ  ಅಳೋಕೆ  ಶುರುಮಾಡಿದ್ದೆ. Miss reason ಕೇಳ್ದಾಗ  ಬಿಕ್ಕಳಿಸ್ತಾನೆ  ಹೇಳ್ದೆ. But ಪಾಪ  missಗೆ  ಅರ್ಥ  ಆಗ್ಲಿಲ್ಲ . “ಅತ್ತು  ಬಿಟ್ಟು  ಹೇಳು  ಇಲ್ಲ  ಹೇಳ್ಬಿಟ್ಟು  ಅಳು” ಅಂದ್ರು. So ಅಳೋದನ್ನ  ತಡೆದುಕೊಂಡ್  ಹೇಳ್ದೆ  geometry notes ತಂದಿಲ್ಲ  ಅಂತ. So miss "ಅದಕ್ಕೆ  ಯಾಕೆ  ಅಳ್ತಾ ಇದ್ದೀಯ" ಅಂತ  ಕೇಳ್ದಾಗ “ನೀವು  class ಇಂದ  ಆಚೆ  ಕಳಿಸ್ಬಿಡ್ತಿರ  ಅಲ್ವ  ಅದಕ್ಕೆ” ಅಂತ  ಹೇಳ್ದೆ. So ನಮ್  sahana miss ಸಹನೆ  ಇಂದಾನೆ… “ನೀವು[ನಿಮ್ class ನವರು] ಒಂದೊಂದು  ಸರ್ತಿ  ತುಂಬಾ  ದೊಡ್ದೊರ್ಥರ ಆಡ್ತಿರ.., ಇನ್ ಕೆಲೋವೊಂದು  ಸಲ  ಪಾಪುಗಳ  ಥರ  ಆಡ್ತಿರ. ಅದಕ್ಕೆ  ಆ  ನಿಮ್  innocence ಗೆ  ನಿಮ್  class ನವರು  ನನ್  ಕೈಲಿ  ಜಾಸ್ತಿ  ಈಟು ತಿಂದಿಲ್ಲ[ last year 10 std ನವರು, means ನಮ್ seniors  mathematics class ನಲ್ಲಿ ತುಂಬಾನೇ  ಈಟು  ತಿನ್ಡಿದ್ರು.. ಆದ್ರೆ  ನಮ್  class ನಲ್ಲಿ  ಅಷ್ಟು  ಹೆಚ್ಚಾಗಿ  ಹೊಡೆದಿರಲಿಲ್ಲ] ಮತ್ತೆ  next time ಹೀಗೆ  repeat ಮಾಡಬೇಡ  ಅಂತ  ಹೇಳಿ ಕಳಿಸಿದರು. Sympathyನೋ ಇಲ್ಲ ನಾಳೆ  children’s day ಅಂತನೋ  ಏನೋ  ಗೊತ್ತಿಲ್ಲ. ನಿಗುದ  ರಹಸ್ಯ!!:) ಅಷ್ಟೊತ್ತಿಗೆ  ನಮ್  head mistress ಯಾವುದೊ  ಹುಡುಗಿ  ಕೈಲಿ  ನಮ್ಮಪ್ಪ  ತಂದು  ಕೊಟ್ಟಿದ್ದ  notes ಕೊಟ್ಟು  ಕಳಿಸಿದರು . ಇನ್ನೊಂದು  ಹತ್ತು  ನಿಮಿಷ  ಬೇಗ  ಬಂದಿದ್ರೆ  ಆಳೋ  scene ಇರ್ತಾನೆ  ಇರಲಿಲ್ಲ!!!!

ಇಷ್ಟೆಲ್ಲಾ  ನೆನಿಸ್ಕೊತಾ  ನನ್ನ   dairy, ಕವನ, ನಾನು ಬರೆದಿರೋ ಶೈಲಿ, ನನ್ನ  ಆವತ್ತಿನ  character, feelings express ಮದಿರೋದನೆಲ್ಲ  ಓದ್ತಾ  ಏನೋ  ಖುಷಿ  ಏನೋ  ದುಃಖ!! But ಖುಷಿ  ಜಾಸ್ತಿ  ಆಯಿತು. ಎಷ್ಟು  ಚೆನ್ನಾಗಿತ್ತು  ಆ  school days.. college ಗೆ  ಬಂದು  ಇನ್ನು  ಒಂದು  ವರ್ಷ  ಆಗಿಲ್ಲ, ಆಗ್ಲೇ  college bore ಆಗೋಗಿದೆ. "ಇಲ್ಲಿ  ನೀವು  ‘school children’ ಅಲ್ಲ  ‘college students’ " ಅಂತ  first day ನೆ  ನಮ್ಮ  vice-Principal  ಹೇಳಿದ್ರು.. ಆಗ್ಲೇ  ಅನ್ಕೊಂಡೆ  ನನ್ನ  ಈ  childish and sensitive nature ಬಿಡಬೇಕು  ಅಂತ. ಪ್ರಯತ್ನ  ಮಾಡ್ತಾ  ಇದೀನಿ… ಸ್ವಲ್ಪ  ಬಿಟ್ಟಿದಿನಿ  ಕೂಡ . ಆ  ದಿನ  ಗೊತ್ತಾಯಿತು   ನಂಗೆ  school ನಲ್ಲಿ  ಸಿಗೋ  freedom college ನಲ್ಲಿ  ಸಿಗಲ್ಲ  ಅಂತ . But it should be like that.. life has to change ಅಲ್ವ..? no matter school frnds ಎಲ್ಲಾ  contact ನಲ್ಲೆ  ಇದ್ದಿವಿ.. ಆಗಾಗ  meet ಮಾಡ್ತಿವಿ. ಆದರು  praju and akshatha ಜೊತೆ  ಮಾತಾಡ್ತಾ  ಇಲ್ಲ  at present.. so ಬೇಗ  ಮಾತಾಡಿಸೋ  ಹಾಗೆ  ಆಗ್ಲಿ  ಅಂತ  ದೇವರಲ್ಲಿ  ಬೇಡ್ಕೊತ  ಇದೀನಿ .. if it happens so means we are gonna rock this summer holidays!!! So ನೀವು  ಬೇಡ್ಕೋಳಿ.:)
                At last ನಂಗೆ  ಬೇಸರ  ತರಸಿ  ಈ  ನೆನಪೆಲ್ಲ  ಬರಲು  ಕಾರಣವಾಗಿರುವ  ಆ  ಗೊತ್ತಿಲ್ಲದ  ಕಾರಣಕ್ಕೆ  ‘LOTS OF THANKS’.
                And ನಿಮಗೆ  bore ಮಾಡಿಸಿದರೆ  sorry:([:)]