ಬರಲು ಹೇಳಿದನಲ್ಲ
ಬೆಟ್ಟದ ಬಳಿ ನನ್ನ ನಲ್ಲಬಿಡಲು ಸಿದ್ದಳಾದೆನು ಹಟ್ಟಿ
ಅವನು ಕೊಡಿಸಿದ ಸೀರೆಯ ಉಟ್ಟಿ
ಮುಡಿದೆನು ಕೇಶರಾಶಿಗೆ ಹೂವ
ಕಣ್ಣಿಗೆ ಇಟ್ಟೆ ಕಾಡಿಗೆಯ
ಕಾಲ ಸುತ್ತಿತು ಜಲ್ ಎನ್ನುವ ಕಾಲ್ಗೆಜ್ಜೆ
ಕೈಯ ಸುತ್ತಿತು ಗಲ್ ಎನ್ನುವ ಗಾಜಿನ ಬಳೆ
ಕೊರಳ ಆವರಿಸಿತು ಮುತ್ತಿನ ಸರ
ಬೈತಲೆಯ ಬೊಟ್ಟು ಇಣುಕಿತು ಹಣೆ ಎಂಬ ಇಳಿಜಾರ
ಕಿವಿಯ ತುಂಬಿತು ವಾಲೆ-ಜುಮುಕಿ
ಸಂತಸದಿ ಕಂಡಿತು ಅಕ್ಷಿ.
No comments:
Post a Comment