Saturday, August 27, 2011

ಮೂರು ಮಾಸವೂ ತುಂಬದ ಪ್ರೀತಿ


ಹೇಳಬೇಕೋ, ಬೇಡವೋ ತಿಳಿಯದು,
ಆದರೂ ಹೇಳಿಯೇ ಬಿಡುತ್ತೇನೆ ಕೇಳು,
ಶುಭಾಷಯಗಳು ನಲ್ಲ, ಇಂದಿಗೆ
ನಮ್ಮ ಪ್ರೀತಿಗೆ, ಮೂರು ಮಾಸದ ಬೆಳವಣಿಗೆ. . .

ನಾ ನಗುವುದೋ, ಅಳುವುದೋ ತಿಳಿಯನು,

ಅಲ್ಲದೆ ಈ ದಿನ ನಿನಗೆ ನೆನಪಿದೆ ಎಂದೂ ನಾ ನಂಬೆನು.
ಏಕಿಷ್ಟು ಅಂತರ ನಮ್ಮಿಬ್ಬರ ನಡುವೆ?
ಪ್ರೀತಿಯಲ್ಲಿ ಈ ವಿರಹದ ವೇದನೆ ಸರಿಯೇ?

ಮೂರು ಮಾಸವೂ ತುಂಬಲಿಲ್ಲ ನಮ್ಮ ಪ್ರೀತಿ,

ಆಗಲೇ ದೂರವಾದೆವು ನಾವು,
ಇಷ್ಟೆಲ್ಲಾ ಆದಮೇಲು ನನಗೆ ಕಾಡುವುದು ಒಂದೆ,
ಅದು ನಿಜವಾಗಿಯು ಪ್ರೀತಿ ಎಂಬ ಪ್ರೀತಿನೇನಾ ಎಂದು. . .

ಸುಳ್ಳಾದರೆ ಆ ಪ್ರೀತಿ ಹೇಳದಿರು ನನಗೆ ನಿನ್ನ

ಪ್ರೀತಿಯ ಪಡೆವ ಯೋಗ್ಯತೆ ಇಲ್ಲವೆಂದು ಸುಮ್ಮನಾಗುವೆ,
ನಿಜವೇ ಆದರೆ ಒಮ್ಮೆ ಹೇಳಿಬಿಡು ನಿನ್ನನೆಂದೂ
ದೂರ ಹೋಗಲು ಬಿಡದೆ ಜೊತೆಗೇ ಬರುವೆ ನೆರಳಿನಂತೆ. . . 

3 comments:

  1. ವಾಸ್ತವತೆಯ ಪ್ರತಿಬಿಂಬ ನಿಮ್ಮ ಕವಿತೆ "ಸುಳ್ಳಾದರೆ ಆ ಪ್ರೀತಿ ಹೇಳದಿರು ನನಗೆ ನಿನ್ನ
    ಪ್ರೀತಿಯ ಪಡೆವ ಯೋಗ್ಯತೆ ಇಲ್ಲವೆಂದು ಸುಮ್ಮನಾಗುವೆ,
    ನಿಜವೇ ಆದರೆ ಒಮ್ಮೆ ಹೇಳಿಬಿಡು ನಿನ್ನನೆಂದೂ
    ದೂರ ಹೋಗಲು ಬಿಡದೆ ಜೊತೆಗೇ ಬರುವೆ ನೆರಳಿನಂತೆ. . . " ಇಷ್ಟವಾದ ಸಾಲುಗಳು, ಆದರೂ ಈ ಸಾಲುಗಳಲ್ಲಿ ಹೆಣ್ಣಿನ ಅಸಹಾಯಲತೆ ಪ್ರತಿಬಿಂಬಿಸುವುದಿಲ್ಲವೇ ?? ಎಂಬ ಅನಿಸಿಕೆ ನನ್ನದು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  2. Hmmm..... chennagi barediddiya...kone para thumba ishta ayitu..

    ReplyDelete
  3. @nimmolagobba,
    thank u sir...:) asahaayakate enu illa... bhavanegalalli muligidre heege barodu hudigirinda...:)

    girish,
    thank u thank u...:)

    ReplyDelete