Sunday, April 13, 2014

ಅಲೆಗಳು

1.
ಮೌನದೇಣಿಯ ಏರಿ ಈ ಸಂಜೆ
ಮಾತಾಡಬೇಕಿದೆ ಕಣ್ಣಲ್ಲೆ
ಬಂದು ಬಿಡು ಬೇಗನೆ!


2.
ಕನಸೂ ಒಪ್ಪದ ಕಥೆಗೆ
ಮನಸ್ಸು ಅಂತ್ಯವಾಡಿಲ್ಲ!
  

3.
ಓಲೆಗಳೊಳಗೆ ವಿರಹದ ಹನಿಗಳಿವೆ,
ಜಾರಿ ಹೋಗುವ ಮುನ್ನ ಓದಿಕೊ!


4.
ದಡದ ತುಂಬ ಹೆಜ್ಜೆ ಗುರುತು
ಮನದ ತುಂಬ ನಿನ್ನ ನೆನಪಿನಂತೆ.


5.
ಸಾವಿನ ಮನೆಯಲಿ
ರಚ್ಚೆ ಹಿಡಿಯುವ ಕಂದನದೂ ನೀರವತೆ!


6.
ಮೋಡಗಳ ಮುದ್ದುಮಾಡಬೇಕಿದೆ 
ಹಕ್ಕಿಯಾಗಿ ಹಾರಿಹೋಗಲೆ?

7.
ಮೌನಕ್ಕೂ ಧ್ವನಿ ಉಂಟು ಹುಡುಗ
ಕೇಳುವ ಕಿವುಡು ಹೃದಯ ಬೇಕಷ್ಟೇ..!


8.
ಮೊಗೆ ಮೊಗೆದು ತಂದ ಕನಸುಗಳಂತೆ
ಬೊಗಸೆಯಲ್ಲಿನ ಪಾರಿಜಾತ..

9.
ಕಿಟಕಿಯಿಂದ ಇಣುಕಿ ನೋಡುವ ಕಣ್ಣುಗಳಲಿ
ಕಾಯುವಿಕೆಯ ಕನವರಿಕೆ. 



10.
ಶ್ಮಶಾನವಾಸಿಯದು
ಪರ್ವತದೆತ್ತರದ ಪ್ರೀತಿಯಂತೆ ಹುಡುಗಿ.
ನನ್ನೊಲವೊ,
ದಿನವು ನಿನ್ನ ಹೆರಳ ಸೇರೊ
ಬೊಗಸೆಯ ಜಾಜಿಯಷ್ಟೆ!


11.
ಒಲವ ಗೋರಿಯೊಳಗೆ
ಹುಸಿ ಮಾತು ಬೆತ್ತಲಾಯಿತು.

12.
ಮರೆತ ಮುದ್ದು ಕನಸೊಂದು
ಮುಂದಿದೆ ಹುಡುಗ
ಮಗುವಿನಂತೆ ಮಲಗಿಬಿಡಲೆ?

 
13.
ವಿರಹದ ಕೂಪದಲಿ
ಕುದಿದ್ದು ಕಣ್ಣನೀರು
ಬೆಂದದ್ದು ಹೃದಯ!


14.
ಮರೆಯದ ಕಥೆಗಳದೆಷ್ಟೋ
ಮೂಗುತಿಗೂ ನೆನಪಿನ ಗುಂಗು....


15.
ಬೆಚ್ಚರಿಸುವ ಕನಸುಗಳಲಿ
ವಿರಹವೇ ಕಥಾನಾಯಕ.....
 
 
 



 
-ವಿದ್ಯಾ ರಮೇಶ್

Wednesday, January 22, 2014

ಮುಖವಾಡದ ಲೋಕ

ಕನ್ನಡಿ ಹಿಂದೊಂದು 
ಲೋಕವಿದೆ,
ಮುಖವಾಡದ
ಹ್ಯಾಲೋವೀನ್ ಹಬ್ಬವಿದೆ.

ಕಂಡದೆಲ್ಲವೂ ಭ್ರಮೆಯೇ.
ಹೊರಗೊಂದು ಒಳಗೊಂದು.
ಬೀಭತ್ಸ ದಿನಗಳಲೊಂದು 
ತೋರಿಕೆಯ ಒಯ್ಯಾರ. 

ಗಂಟಲು ಒಣಗುವಷ್ಟು ಚೀರಿದರೂ,
ಆಂತರ್ಯದಲೆಲ್ಲೊ
ನೀರವದ ಹುಡುಕಾಟ! 
ಮುಕ್ತನಾಗುವ ಹಂಬಲ!

ಕಾಲಕ್ಕೆ ತಕ್ಕಂತೆ 
ಸಿಕ್ಕ ವೇಷ ಧರಿಸುವ
ರೂಪಧಾರಿಗಳು!
ಥೇಟ್ ಶೋರೂಂ ನ 
ಬೊಂಬೆಗಳಂತೆ! 

ಟಿಶ್ಯೂ ಪೇಪರ್ ಅಂತೆ 
ಬೆಸೆದುಕೊಂಡ ಸಂಬಂಧಗಳ
ಹರಾಜು ಹಾಕುವ 
ಸಿದ್ಧ ಮಾರುಕಟ್ಟೆ!
ಹಳಸಿದ ಭಾವನೆಗಳ 
ಉಣ್ಣ ಬಡಿಸೊ
ಭಟ್ಟರ ಪಾಕಶಾಲೆ. 

ಕನ್ನಡಿ ಹಿಂದೆ ಹೀಗೊಂದು 
ಲೋಕವಿದೆ 
ಮುಖವಾಡದ 
ಹ್ಯಾಲೋವೀನ್ ಹಬ್ಬವಿದೆ.

-ವಿದ್ಯಾ ರಮೇಶ್

Sunday, January 12, 2014

ಅನಂತವಾಗಿ

ಅಲ್ಲೆಲ್ಲೊ ಕಂಡೂ ಕಾಣದ ಗುರಿ. 
ನಡೆದೆ ನಡೆದೆ ನಡೆದೆ 
ಕಲ್ಲು ಮುಳ್ಳುಗಳ 
ಹಾದಿಯ ದಾಟಿ. 

ಒಂದೊಂದು ಗೆಲುವು, 
ಒಂದೊಂದು ಸೋಲು. 
ಸೋತರೂ, ಗೆದ್ದರೂ
ದಿಗಂತವ ಮುಟ್ಟಿಲ್ಲ. 
ಮತ್ತಷ್ಟು ನಡೆದೆ. 

ನಡೆದಷ್ಟು ಮುಗಿಯದ ಕೇರಿ. 
ನಿಲ್ಲಬೇಕೆಂಬ 
ಆಸೆ ಇಲ್ಲದ ನದಿಯಂತೆ ಓಡಿದೆ 
ಧಣಿವ ಜೊತೆಗೂ. 
ಥತ್! ಎಡವಿದೆ! 
ಏನಾಯಿತೆಂದು ಹಿಂದಿರುಗಿದರೆ, 
'ನಿಧಾನಿಸೆ ಹುಡುಗಿ'
ಎಂಬಂತೆ ಒಂದು ಕಲ್ಲು. 

ಕುಳಿತೆ
ಬಂದ ದಾರಿಯನ್ನೆ ದಿಟ್ಟಿಸುತ. 
ಸಾಗಿ ಬಂದಷ್ಟು ದೂರ 
ನೆನಪುಗಳ ಹೊತ್ತು ತಂದಿದ್ದೆ;
ನನ್ನ ಗೆಲುವು ಎಂಬಂತೆ, 
ಬಾಯರಿದ ಮನಕ್ಕೆ ಅಮೃತದಂತೆ! 

ನಡೆಯಲೆದ್ದು ನಿಂತೆ 
ಮತ್ತದೆ ಮುಗ್ಧ ಉತ್ಸಾಹದೊಂದಿಗೆ. 
ನಡೆದೆ, ನಡೆದೆ, ನಡೆದೆ.. 
ಸೋಲು ಗೆಲುವಿನ ಜೊತೆಗೆ 
ನಡೆಯುತಲೇ ಇರುವೆ 
ನಿಂತಲ್ಲಿ ನಿಲ್ಲದೆ
ಅನಂತವಾಗಿ.

Sunday, July 1, 2012

ನಾನಿನ್ನು ವಿಧವೆ!


ಅಮ್ಮನ ಒಡಲಲ್ಲಿ
ನನಗಿಂದು ಸಂತಸ.
ಕಾಣಲೊರಟಿರುವೆ
ಬಾಹ್ಯ ಲೋಕವ!

ನಾನೊಂದು ಹೆಣ್ಣು!
ಅಯ್ಯನ ಕಂಗಳಲ್ಲಿ ತೃಪ್ತಿಯಿಲ್ಲ,
ಅಜ್ಜ-ಅಜ್ಜಿಯ ಹಿಡಿ ಶಾಪವೇ
ಅವ್ವನಿಗೆಲ್ಲ.
ಕಣ್ಣಲ್ಲೇನೋ ಕಂಡರು ಕೊಂಚ ಪ್ರೀತಿ,
ತುಂಬಿದೆ ಅಸಹಾಯಕತೆ ಸ್ಥಿತಿ.

ಐದು ತುಂಬುವಷ್ಟರಲ್ಲಿ
ಮನೆಯ ಕೆಲಸ ಸಿದ್ಧಿ
ನೆಂಟರಿಷ್ಟರು 'ಅಯ್ಯೋ'ಎನ್ನುವರು
ಅವ್ವನ ನೋಡಿ;
'ಛೇ! ಗಂಡಾಗಲಿಲ್ಲವಲ್ಲಾ!' ಎಂದು.

ಒಂಬತ್ತಕ್ಕೆ, ಕೊರಳಲ್ಲಿ
ಹಳದಿ ದಾರಜಾತ್ರೆಗೆ ಹೋದರೂ
ಬಣ್ಣದ ಟೇಪು ಖರೀದಿಸುವ ತವಕ.
ಬಳೆಗಾರ ಬಂದರೆ ಕೈಯ
ತುಂಬೆಲ್ಲ ಬಣದ ಚಿತ್ತಾರ!

ಹದಿಮೂರಕ್ಕೆ ಬಂತು
ರಂಗು ರಂಗಿನ ಆಸೆಗಳು
ನನ್ನ ಓರಗೆಯವರ ಜೊತೆ
ಆಡಿ ನಲಿಯಬೇಕೆಂದು.
ತಿಂಗಳುಗಳು ತುಂಬುವಷ್ಟರಲ್ಲಿ,
ಮಡಿಲು ತುಂಬಿಹೋಯಿತು!

ಹೆಣ್ಣು ಮಗು!
ಏಕೆ ಎಂದು ತಿಳಿಯದಿದ್ದರೂ
ಕಣ್ಣೇಕೋ ಹನಿಯುತಿತ್ತು.
ಅತ್ತೆ-ಮಾವ-ವಾರಗಿತ್ತಿಯರ
ಹೀಯಾಳಿಕೆಯಲ್ಲೇ ಬೆಳೆಯುತಿದೆ
ಮಗು ತೆವಳುತಿದೆ.

ಹುಟ್ಟಿ ವರುಷ ತುಂಬಿಹುದು
ಹಾಲು ಬಿಡಿಸಿಲ್ಲ
ಹುಟ್ಟು ದಿನಕ್ಕೆ ಸಡಗರವಿಲ್ಲ
ಸಿಹಿಯಿಲ್ಲ.
ಹೊಲಗೇರಿಯ ಶ್ವಾನದಂತೆ
ಹಳಸೇ ನನಗೆ; ಮಗುವಿಗೆ!

ಹಾಂ! ಚೀರಿದ ಗಂಡನೆಂಬುವವ,
ಉಸಿರಿಡಿದ; ಒಮ್ಮೆಲೇ ಬಿಟ್ಟೇಬಿಟ್ಟ!
ಮನೆಯೆಂಬುದು ನರಕವಾಗಿ ಹೋಯಿತು
ಆಡುವವರ ಬಾಯಿಗೊಂದು ಸುದ್ಧಿ ಸಿಕ್ಕಿತು
ಮೌನದ ನಿಟ್ಟುಸಿರು ತಿಳಿಯಲಿಲ್ಲ ಯಾರಿಗೂ!

ಸಿಂಗರಿಸಿದರು ವಧುವಂತೆ;
ಮುಡಿಯ ತುಂಬೆಲ್ಲ ಮಲ್ಲೆ, ಕನಕ
ಕೈಯ ತುಂಬೆಲ್ಲ ಹಸಿರು ಕೆಂಪು ಬಳೆ
ಹಣೆಯಲ್ಲಿ ರಾರಜಿಸುವ ಸಿಂಧೂರ
ಕೆನ್ನೆಗೆ ಲಕ್ಶ್ಮೀ ದೇವಿಯ ಅರಿಶಿನ
ಕಿವಿಗೆ ಜುಮಕಿ, ಕಾಲಿಗೆ ಸುತ್ತು ಗೆಜ್ಜೆ!

ಹೊಯ್ದರು ಸ್ಮಶಾನಕ್ಕೆ.
ಕಿತ್ತೆಸೆದರೇಕೆ ಮಲ್ಲಿಗೆ?
ಒಡೆದ ಬಳೆಯ ಸದ್ದಲಿದೆ
ನನ್ನ ಶೋಕ ಗೀತೆ.
ಸಿಂಧೂರವಿಲ್ಲದ ಖಾಲಿ ಹಣೆ
ಸಾರುವುದು ಮುಂದಿನ ಕಥೆ!
ನಾನಿನ್ನು ವಿಧವೆ!

Thursday, January 5, 2012

ನೀ ಹೋದ ಮೇಲೆ


 
ತಿಳಿನೀರ ಕೊಳ, ಕೆಂಪೇರಿದ ಬಾನು,
ನೀರವ ಮೌನ, ಏಕಾಂಗಿ ನಾನು.

ದೂರವಾಗುತ್ತಿರುವೆ ನೀ, ಕಳೆದಂತೆ ಕಾಲ,
ಕುಗ್ಗುತಿರುವೆ ಒಳಗೆ, ಮನದಲ್ಲಿಲ್ಲದೆ ಬಲ.

ಚಂದಿರನು ನೀ, ಭೂಮಿಯು ನಾ; ಭಾವಿಸಿದ್ದೆನು ಹೀಗೆ,
ನನ್ನ ಸುತ್ತದೆ ದೂರಾದೆ ಹೇಗೆ?

ಮುಂಗಾರಿಲ್ಲ, ಹಿಂಗಾರಿಲ್ಲ, ಹಸಿರೇಗೆ ಇದ್ದೀತು?
ಚೈತ್ರ ಬರದು, ಕೋಗಿಲೆ ಹೇಗೆ ಹಾಡೀತು?

ಸುಖಾಂತ್ಯವ ತರದೆ ನಡುವೆಯೇ ದುಃಖವ ತಂದೆ
ಕಾರಂಜೆಯ ಹಾಗೆ ನಲಿವ ಚಿಮ್ಮಿಸಬಾರದಿತ್ತೆ?

Saturday, November 12, 2011

ನೀ ಬರಲೆಂದು, ಬೆಳಕ ತರಲೆಂದು ಬೇಡುವೆ



ಮನದ ಕೋರಿಕೆಯು ಕೇಳಿಸದೇನೋ ಇನಿಯ?
ಬಂದೇಕೆ ಒಪ್ಪಲಾಗದು ನನ್ನ ಬಯಕೆಯ?
ನೀ ಹೇಳಿದಂತೆ ಇರುವುದು ದೀಪಾವಳಿಗೆ ಅಗಾಧ ಅರ್ಥ
ಪ್ರಣತಿಯಾಗಿ ಬರಲಿಚ್ಛಿಸುವೆ ನೀ ಅದ ತಿಳಿಯಲಾರೆಯ?

ಕರಾಳ ರಾತ್ರಿಯಲಿ ಬೆಚ್ಚುವೆ ನಾ ಒಬ್ಬಳೆ,
ನೀ ಬರಲೆಂದು, ಬೆಳಕ ತರಲೆಂದು ಬೇಡುವೆ
ಸಂಜೆಯ ತಂಪೊತ್ತಿನಲ್ಲಿ ಒಂಟಿಯಾಗಿ ಸಾಗುವ ವೇಳೆಗೆ,
ನೆನೆಯುವೆ, ತಡವರಿಸುವೆ ನಿನ್ನ ಒಲವಿನ ಕೂಗಿಗೆ

ಅಸ್ತು ಎಂದು ಹೇಳೋ ಹೃದಯೇಶ್ವರ,
ಓಡೋಡಿ ಬರುವೆ, ಬಂದೊಮ್ಮೆ ಅಪ್ಪುವೆ.
ಆನಂದದ ಭಾಷ್ಪದಲಿ ಹೃದಯವ ಮೀಯಿಸುವೆ,
ಮತ್ತೆಂದು ನಿನ್ನ ಬಿಡೆನು, ನಾ ಭಾಷೆ ಕೊಡುವೆ. . . 

Monday, October 10, 2011

ಹಾಗೆ ಸುಮ್ಮನೆ. . . :)

"ಸೊ ನಿಮ್ ಪ್ರೀತಿ ಬಗ್ಗೆ, ಪ್ರೀತಿಸುತಿರುವರ ಬಗ್ಗೆ ಹೇಳ್ಬೇಕು ಅನ್ನಿಸಿದರೆ, ಯಾರಿಗಾದ್ರು song dedicate ಮಾಡ್ಬೇಕು ಅಂದ್ರೆ ಕಾಲ್ ಮಾಡಿ 3927972ಗೆ.......... ಕೇಳಿ ಕೇಳಿಸಿ life ನಿಮ್ಮದಾಗಿಸಿ....."


"ನಾ ನಗುವ ಮೊದಲೆನೆ, ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ
ನಾ ನುಡಿವ ಮೊದಲೆನೆ, ತೊದಲುತಿದೆ ಹೃದಯವಿದು ಒಳಗೊಳಗೇ.."


ಹ್ಮ್ಮ್ಮ್....ಸಂಜೆ ೫ರ ಸಮಯ...ಮೊಬೈಲ್ ಗೆ head set ಹಾಕಿಕೊಂಡ, ಕಿಟಕಿ ಪಕ್ಕ ಕೂತ್ಕೊಂಡು ಕಣ್ಣು ಮುಚ್ಚಿ FM ಕೇಳ್ತಾ ಇದ್ಳು. ಮೇಲೆ ತಿಳಿಸಿದ ಹಾಡು ಬಂದ ಕೂಡಲೆ ಮುಗುಳ್ನಕ್ಕಳು.ಕಾರಣ ಅದು ಅವಳ favorite ಹಾಡು. ಅವಳ favorite song! ಕಾರಣ ಅದು ಅವನ favorite ಹಾಡು. ಹ್ಹಾ.. ಅವನು ಅವಳ ಅಚ್ಚು ಮೆಚ್ಚು...

ಅವರಿಬ್ಬರು ಎರಡು ವರುಷದಿಂದ love ಮಾಡ್ತಿದ್ದಾರೆ! ಆದ್ರೆ ಎಲ್ಲಾ lovers ಥರ ಅಲ್ಲ ಇವರು.....ಎಲ್ಲ lovers ದಿನಾ ಗಂಟೆಗಟ್ಟಲೆ ಮಾತನಾಡಿ, ಊರೆಲ್ಲ ಸುತ್ತಾಡ್ತಾರೆ., ಆದ್ರೆ ಇವರು ಹಾಗಲ್ಲ...ಒಟ್ಟಿಗೆ ಗಂಟೆಗಟ್ಟಲೆ ಮಾತಾಡುವುದಿಲ್ಲ....ಬರಿ ರಾತ್ರಿ ಮಾತ್ರ ಅವರ ಮಾತು....ಆದ್ರೆ ದಿನ message ಮಾಡ್ತಿರುತ್ತಾರೆ...ಆದ್ರೆ ದಿನ ಪೂರ್ತಿ ಅಲ್ಲ...total ಆಗಿ ಒನ್ದ್ ಎರಡು ಗಂಟೆ ಮೆಸೆಜ್ ಮಾಡಿರುತ್ತಾರಷ್ಟೆ...ಅದರಲ್ಲಿ ಮೂರು ಮೆಸೆಜ್ ಅಂತು forward love message ಆಗಿರುತ್ತೆ...

ಹ್ಮ್ಮ್.........ಹಿಂದಿನ ದಿನ ರಾತ್ರಿ ಮಾತಾಡ್ಬೇಕಾದ್ರೆ, ಅವನು ಏನೋ ಅಂದ ಅಂತ, ಇವಳು response ಮಾಡ್ದೆ call cut ಮಾಡ್ಬಿಟ್ಟಿದ್ಳು. ಆದ್ರೆ ಅದು seriousಇಂದ ಅಲ್ಲ... but ಅವನು, ಅವಳ responseಗೆ ತುಂಬಾನೇ ಬೇಜಾರು ಮಾಡ್ಕೊಂಡಿದ್ದ. ಹಾಗೆ ಕೋಪ ಕೂಡ ಬಂದಿತ್ತು. ಕಾರಣ ಅವನು ಮತ್ತೆ ಕಾಲ್ ಮಾಡೊ ಪ್ರಯತ್ನ ಮಾಡಲಿಲ್ಲ...ಆದರೆ ಅವಳು, ಅವನು ಮಾಡ್ತಾನೆ ಅಂತ ಕಾಯ್ತಾನೇ ಇದ್ಳು. ಗಂಟೆ ರಾತ್ರಿ ೩ ರಾದರು ಅವನು ಕಾಲ್ ಇರ್ಲಿ, ಮೆಸ್ಸೆಜ್ ಕೂಡ ಮಾಡ್ಲಿಲ್ಲ...ಅವಳಿಗೆನೊ ಮಾಡ್ಬೇಕು ಅನ್ನಿಸಿತು. ಆದ್ರೆ ego ತಡಿದ್ದಿತ್ತು..ಆದರೆ ಅವನ ನೆಚ್ಚಿನ ಹಾಡು ಕೇಳಿದಾಕ್ಷಣ, ego ಎಲ್ಲ ಮರೆತು ಅವನ ಜೊತೆ ಮಾತಾಡಿ, convince ಆಗಬೇಕು ಎಂದನ್ನಿಸಿ, ಅವನಿಗೆ call ಮಾಡಲು ಮುಂದಾದಳು 974….78 ಒತ್ತಿ call button press ಮಾಡಿದ್ಳು..

"Even in my heart I see,
You’re not being true to me
Deep within my soul I feel
Nothing’s like it used to be.
Sometimes I wish I could turn back time
Impossible as it may seem
But I wish I could so bad baby
Quit playing games with my heart. . ."

ಅವನು ಈ ಹಾಡನ್ನ ತನ್ನ caller tune ಆಗಿ ಯಾಕೆ ಹಾಕಿಸಿಕೊಂಡಿದ್ದಾನೆ!? ತನ್ನ moodಗೆ ತಕ್ಕಂತೆ, situationಗೆ ತಕ್ಕಂತೆ ಅವನು ತನ್ನ caller tune set ಮಾಡ್ಕೊತಾನೆ...ಇಷ್ಟು ದಿನ "ಉಡಿಸಲೆ ಬೆಳಕಿನ ಸೀರೆಯ" ಇದ್ದ ಹಾಡು ಈ ಹಾಡಿಗೆ ಏಕೆ change ಆಯ್ತು!? ಇವನು ಬೇಸರದಲ್ಲಿದ್ದಾನ? ನನ್ನಿಂದ ಬೇಸರವಾಗಿದ್ದೀಯ ಇವನಿಗೆ? ನಿನ್ನೆ ವಿಷಯಕ್ಕ? ಛೆ! ತಪ್ಪು ಮಾಡಿದ್ನ ನಾನು? ಅವಳು ತನ್ನಲ್ಲೇ ಹೇಳ್ಕೊತಾ ಇದ್ಳು. ಎಷ್ಟೆ ಸರತಿ call ಮಾಡ್ತಿದ್ರು ಅವನು receive ಮಾಡ್ತಿರಲಿಲ್ಲ...

ಅವಳು ಸಂಜೆ ಇಂದ ರಾತ್ರಿವರೆಗೂ call ಮಾಡ್ತಾನೆ ಇದ್ಳು. ಆದ್ರೆ ಅವನು ತನ್ನ ಹಠ/ಕೋಪ ಬಿಡಲಿಲ್ಲ. ಅವಳಿಗೆ ಊಟ ಮಾಡ್ಬೇಕೆಂದೂ ಅನಿಸಲಿಲ್ಲ.ಅಮ್ಮನಿಗೆ ಹಸಿವಿಲ್ಲ, ಓದ್ಕೊಬೇಕು, ಯಾರೂ disturb ಮಾಡ್ಬೇಡಿ ಅಂತ ಹೇಳಿ ರೂಮ್ ಒಳಗೆ ಹೋದಳು. ಆ ಕಡೆ ಅವನು ಕೂಡ ಊಟ ಮಾಡಿರಲಿಲ್ಲ. ಅವನಿಗೂ ತಡಿಯಲಾಗಲಿಲ್ಲ. ದಿನಕ್ಕೆ ಒಂದು ಸರತಿಯಾದರು ಅವಳ voice ಕೇಳದಿದ್ದರೆ ಅವತ್ತು ಅವನಿಗೆ ನಿದ್ದೇಯೇ ಬರುತಿರಲಿಲ್ಲ.

ಅವಳು ಇತ್ತ ಕಡೆಯಿಂದ "i'm sorry kano.... i love you...." ಎಂದು message ಕಳುಹಿಸಿದಳು. ಅದೆ ಸಮಯಕ್ಕೆ ಅತ್ತ ಕಡೆಯಿಂದ "i'm sorry kane....love u pa...missing u a lot..." ಅಂತ ಅವನೂ message ಕಳುಹಿಸಿದ್ದ...ಅಲ್ಲಿ ಅವನು, ಅವಳ message ನೋಡಿ call ಮಾಡಿದ. ಇತ್ತ ಕಡೆ ಅವಳು ಕೂಡ. "the number you are trying to call is currently busy. try again later" ಅಂತ ಇಬ್ಬರಿಗು ಬಂತು. ಆಗ ತಿಳಿಯಿತು ಇಬ್ಬರು ಒಬ್ಬರಿಗೊಬ್ಬರಿಗೆ call ಮಾಡ್ತಿದ್ದಾರೆಂದು. ಆಗಾಗಿ ಅವಳು ಮತ್ತೆ ಮಾಡಲಿಲ್ಲ. ಅವನೇ ಕಾಲ್ ಮಾಡಿದ. ಅಷ್ಟರಲ್ಲಾಗಲೆ ಇಬ್ಬರ ಕಣ್ಣು ಒದ್ದೆಯಾಗಿತ್ತು...

"da sorry ಕಣೊ...ನಾನು ತಮಾಷೆಗೆ ಹಾಗೆ ಹೇಳಿದ್ದು. ಆದ್ರೆ ಕೋತಿ, ನೀನು serious ಆಗಿ ತಗೊಂಡು call cut ಮಾಡ್ಬಿಟ್ಟೆ....!"

"ಅಲ್ಲೊ, ನಾನು ಎಷ್ಟು ಸರತಿ ಹೀಗೆ ಮಾಡಿಲ್ಲ ಹೇಳು? ಮೊದ್ಲೆಲ್ಲ ಮತ್ತೆ ಕಾಲ್ ಮಾಡ್ತಿದ್ದವ್ನು ನಿನ್ನೆ ಯಾಕೆ ಮಾಡ್ಲಿಲ್ಲ???? ಕೊಬ್ಬ loafer?

"ಹ್ಹಾ ಏನ್ ಕೊಬ್ಬು? ಯಾವಾಗ್ಲು ನಾನೇ convince ಆಗ್ಬೇಕ? ನೀನೆ ಮಾಡ್ಬಹುದಿತ್ತಲ್ಲ?"

"ನಿನ್ಗೆ ಎಷ್ಟು egoನೊ ನನ್ಗು ಅಷ್ಟೆ ಇದೆ ಸ್ವಾಮಿ. ಅರ್ಥ ಮಾಡ್ಕೊಳಿ.."

"ಆಯ್ತ್ ಬಿಡಮ್ಮ. ಹುಡ್ಗಿರ್ಗೆ ನಾವ್ ಹುಡುಗ್ರು ಬಗ್ಗದೆ ಇರಕ್ಕಾಗುತ್ತ?"

"ಲೊ ಏನು ಯಾವಾಗ್ಲು ನೀನೇ convince ಆಗೊ ಹಾಗೆ ಮಾತಾಡ್ತಿದ್ದೀಯಲ್ಲ..!!?"

"ಅಯ್ಯೋ! ಇಲ್ವೇ! ಬಿಡೆ ಆ ವಿಷಯ convince ಆಗೋಕೆ ಕಾಲ್ ಮಾಡಿದ್ರೆ, ಮತ್ತೆ ಜಗಳ ತೆಗಿತಿಯಲ್ಲ!!"

"ಹ್ಮ್  chorry"

"ಲೇ ಹೊಟ್ಟೆ ಹಸಿತಿದೆ ಕಣೆ!"

"ನನ್ಗೂ ಕಣೊ"

"ಹೆಯ್ ಇನ್ನ ಊಟ ಮಾಡಿಲ್ವೆನೆ?"

"ಇಲ್ಲೊ...ನೀನ್ ಮಾತಾಡ್ಲಿವಲ್ಲ so ಮಾಡಕ್ಕೆ ಮನಸ್ಸಾಗ್ಲಿಲ್ಲ... ನೀನ್ ಮಾಡ್ದ? ಹೊಟ್ಟೆ ಹಸಿತಿದೆ ಅಂದೆ!?"

"same here ಪುಟ್ಟ. ನನ್ wife voice ಕೇಳಿಲ್ಲ ಅಲ್ವ, ಅದಕ್ಕೆ ನನ್ಗೆ ಇವತ್ತು no mood on anything.."

"ಅಚ್ಚೋ!!! ಏನ್ husby ಸಾಬ್ ಅಷ್ಟು love ಮಾಡ್ತಿರೊ ನನ್ನನ್ನ?"

"ಲೇ ಕತ್ತೆ ಮುಚ್ಚು! ಏನು ಗೊತ್ತಿಲ್ದೆ ಇರೋರ ಥರ ಆಡ್ಬೇಡ"

"ಹಹ್ಹಹ್ಹ....ಸರಿ... ಅಪ್ಪಿ ಹೋಗೊ ಏನಾದ್ರು ತಿನ್ನು ಮೊದ್ಲು."

"ಇಲ್ಲೊ ನೀನ್ ತಿನ್ನು ಮೊದ್ಲು. ನಾನು ಆಮೆಲೆ ತಿನ್ತೀನಿ"

"ಇಲ್ಲ ನೀನ್ ತಿನ್ನು ಮೊದ್ಲು"

"ನೀನು"

"ನೀನು"

"ಹೆಯ್ ನೀನು"

"ಅಬ್ಬಬ್ಬಾ...ಇಬ್ರು ತಿನ್ನೋಣ ಒಕೆ?

"ಹ್ಮ್ಮ್ಮ್ so ready... ನೀನು ತಿನ್ನು ನಾನು ತಿನ್ತೀನಿ.."

ಅವಳು ಅವನಿಗೆ ಇಷ್ಟವಾದ sunfeast dark fantasy biscuit ಹಾಗೂ kitkat chocolate ತಿಂದ್ಳು, ಅವನು ಅವಳಿಗೆ ಇಷ್ಟವಾದ dairy milk fruit and nut ಹಾಗು hide and seek biscuit ತಿಂದ.

ಒಂದು ದಿನ ಹೀಗೆ ಜಗಳ ಆಡಿ ಊಟ ಮಾಡದೆ ಇದ್ದಾಗ ಅವಳು ಕೊಟ್ಟ ಪ್ಲಾನ್ ಇದು. ಇಬ್ಬರ ಹತ್ತಿರವು ಅವರಿಷ್ಟ ಪಡುವ biscuit ಹಾಗು chocolate ಇರ್ಬೇಕು. ಜಗಳ ಆಡಿ convince ಆದ್ಮೇಲೆ ತಿನ್ಬೇಕು ಅಂತ!

ತಿಂದಾದ್ಮೇಲೆ ಮತ್ತೆ ಮಾತು ಶುರುವಾಯ್ತು. ಅದೇ same ತುಂಟತನದ, ಪ್ರೀತಿಯ, ಕೋಪದ ಮಾತುಗಳು. ರಾತ್ರಿ ಎರಡು ಗಂಟೆ ತನಕ ಮಾತಾಡ್ತಾನೆ ಇದ್ರು. ಅಷ್ಟರಲ್ಲಿ ಅವಳಿಗೆ ನಿದ್ದೆ ಬರ್ತಾ ಇದೆ ಅಂತ ತಿಳಿದ ಅವನು,

"ನಿದ್ದೆ ಬರ್ತಿದ್ದ್ಯೇನೆ ಪುಟ್ಟ? ಮಲ್ಕೊತ್ಯ?"

" ಹ್ಮ್ ಅಪ್ಪಿ"

"ಸರಿ ಮಲ್ಕೊ ಪಾಪು good night"

"good night"

"sweet dreams"

"sweet dreams"

"ನನ್ ಹೆಂಡ್ತಿ ಚೆನ್ನಾಗಿ ನಿದ್ದೆ ಮಾಡ್ಲಪ್ಪ ದೇವ್ರೆ"

"ನನ್ ಗಂಡ ಕೂಡ!"

"ಸರಿ ಕಣೊ see you"

"ಹ್ಮ್ಮ್ಮ್ call cut ಮಾಡೊ...ಬಿಟ್ರೆ ಮಾತಾಡ್ತಾನೆ ಇರ್ತ್ಯ...ನಾನ್ ಮಲ್ಕೊಬಾರ್ದ?"

"ಹ್ಹಾ ಸರಿ ಪುಟ್ಟ love you...see ya"

Wednesday, October 5, 2011

ಹೀಗೆ ಕೆಲವೊಮ್ಮೆ. . .

    ಒಂಟಿ ರಸ್ತೆಯಲಿ, ತಲೆ ತಗ್ಗಿಸಿ ಏಕಾಂತವಾಗಿ ನಡೆಯುತ್ತಿದ್ದಳು "ಅವಳು". ಮನಕ್ಕಾದ ನೋವು ಉತ್ತುಂಗಕ್ಕೇರಿತ್ತು. ಅರಿವಿಲ್ಲದೆಯೋ, ಮನಸ್ಸ ಇಚ್ಛೆ ಕೇಳಿಯೋ ಏನೋ ಹೊರಕ್ಕೆ ಜಿಗಿಯಿತು ಒಂದು ಹನಿ ಕಣ್ಣಿನಿಂದ. ಪ್ರೀತಿಯು ಬರುಡಾಗಿದೆ, ಕಣ್ಣೀರಿನ ಕೋಡಿ ಹರಿಸಿಯಾದರೂ ಜೀವ ತುಂಬುವ ಆಸೆಯೋ ಏನೊ ಒಂದೊಂದೆ ಹನಿಯನೂ ಹೊರ ದಬ್ಬಲು ಆರಂಭಿಸಿದಳು. ನಡುವೆ ಎಲ್ಲಿಂದಲೊ ಕೇಳಿಸಿದ ಯಾರದೋ ಧನಿಯಿಂದ ಎಚ್ಚರಗೊಂಡು, ನಾನು ಜನರ ನಡುವೆ ಇದ್ದೇನೆ, ಇದು ನನ್ನ ಕತ್ತಲೆಯ ಕೋಣೆಯಲ್ಲ ಎಂದುಕೊಂಡು ಕಣ್ಣೀರು ಕಣ್ಣಿನಿಂದ ಹೊರಬರದಂತೆ ನೋಡಿಕೊಂಡಳು. ಆದರೆ ಮನಸ್ಸು ಬಿಕ್ಕಿ ಬಿಕ್ಕಿ ಅಳುತಿತ್ತು. ಯಾರನ್ನೋ ನೆನೆಯುತ್ತಿತ್ತು, ಯಾರಿಗೋ ಕಾಯುತಿತ್ತು, ಯಾರೊಂದಿಗೋ ಸಂಭಾಷಿಸುತಿತ್ತು. ಮತ್ಯಾರಿಗೋ ಶಪಿಸುತಿತ್ತು. ಹೀಗೆ ತಲುಪಿದಳು ತನ್ನ ಸೂರಿಗೆ. ಮನ ಅವಳ ಕೋಣೆಯ ಒಂದು ಮೂಲೆಯನು ಬಯಸುತಿತ್ತು. ಧಾವಿಸಿದಳು ತನ್ನ ಕೋಣೆಗೆ, ಬಾಗಿಲನು ಬಿಗಿಯಾಗಿ ಹಾಕಿ ಅಲ್ಲೇ ಕುಸಿದಳು. ಕಣ್ಣನ್ನು ಕೈಯಲ್ಲಿ ಮುಚ್ಚಿ ಬಿಕ್ಕಿ ಬಿಕ್ಕಿ ಅಳತೊಡಗಿದಳು! ಏನೋ ಹೇಳಬೇಕು, ಯಾರೊಂದಿಗಾದರು ತನ್ನ ದುಃಖವ ಹಂಚಿಕೊಳ್ಳಬೇಕು ಎಂದು ಮನಸ್ಸು ಆಶಿಸುತಿತ್ತು. ಆದರೆ ಅವಳಿಗೆ ಇದ್ದವರಾದರು ಯಾರು? ಒಂಟಿ ಹುಡುಗಿ.., ಮನಸ್ಸೇ ಅವಳಿಗೆ ಎಲ್ಲಾ. ಯಾರ ಜೊತೆ ಮಾತನಾಡಬೇಕು ಎಂದನಿಸಿದರೆ ಹಾಗೇ ಮಾತಾಡುವಳು, ನೋವ ಹೊರಹಾಕುವಳು ಕಣ್ಣೀರಿಡುತ್ತ. ಎಲ್ಲ ಕೇಳಿಸಿಕೊಳ್ಳುತಿದ್ದ ಆ ಗಾಳಿಯು ಅವಳ ಮೊಗವ ಒಮ್ಮೆ ಸವರಿ, ಕಣ್ಣೀರಾರಿಸಿ ಹೋಗುತಿದ್ದವು. ಅವುಗಳಿಂದಲೇ ಅವಳಿಗೆ ಸಮಾಧಾನ! ದಿನವೂ ನಾಲ್ಕು ಮೂಲೆಯ ಆ ಕತ್ತಲೆ ಕೋಣೆ, ಸಂಜೆಯ ಆ ಆಗಸ ಹಾಗೂ ತಂಗಾಳಿ, ನೆಚ್ಚಿನ ಭಾವಗೀತೆ, ನೊಂದ ಮನಸ್ಸೇ ಅವಳಿಗೆ ಜಂಟಿಯಾಗಿ ಬರುತಿದ್ದರು. ಹೀಗೆ ಅವಳು ತನ್ನ ತಪ್ಪೆ, ತನ್ನ ನಲ್ಲನ ತಪ್ಪೆ, ಅಥವಾ ಮನಸ್ಸಿನದೊ ಇಲ್ಲ ವಯಸ್ಸಿನದೋ ಎಂದು ಉತ್ತರವೇ ಇಲ್ಲದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಕೂರುತಿದ್ದಳು.


    ಅಗಾಧವಾಗಿ ಅವನನ್ನು ಹಚ್ಚಿಕೊಂಡಿದ್ದವಳು, ಇಂದು ಅವನು ಬೇಡವೆಂಬ ನಿರ್ಧಾರಕ್ಕೆ ಬಂದಿದ್ದಾಳೆ. ಕಾರಣ ಅವನು ತನ್ನ ಜೊತೆಗೆ ಹೆಚ್ಚಿನ ಸಮಯ ಇರುವುದಿಲ್ಲ ಎಂಬುದು..! ಹಾಗೂ ಆ ಯೋಚನೆಗೆ ಈಗ ಅವನು ಮೊದಲಿನಂತೆ ಇಲ್ಲವೆಂದೂ, ಮೊದಲಿನಂತೆ ಪ್ರೀತಿ ತೋರುತಿಲ್ಲವೆಂದು ಹಾಗೂ ಅವಳನ್ನು ನಿರ್ಲಕ್ಷಿಸುತಿರುವನು ಎಂದೂ ಹೇಳಲು ಶುರು ಮಾಡಿದೆ ಮನವು.!


    ಹುಡುಗೀರ ಮನಸ್ಸೇ ಹೀಗೆ! ತಾವು ಅಚ್ಚಿಕೊಂಡವರು, ಆಪ್ತರಾದವರು ಯಾವಾಗಲೂ ತಮ್ಮೊಟ್ಟಿಗೆಯೇ ಇರಬೇಕೆಂಬ ಬಯಕೆ. ಮನಸ್ಸಲ್ಲಿ ಯಾರದರು ಒಂದು ಸ್ಥಾನ ಗಿಟ್ಟಿಸಿಕೊಂಡಿದ್ದರೆ, ಆ ಸ್ಥಾನದಲ್ಲಿ ಕೇವಲ ಅವರಿಗೆ ಮಾತ್ರ ಜಾಗ. ಅವರು ಎದ್ದು ಹೋದರೂ ಅವರದೇ ಚಿಂತೆ. ಅವರೇ ಆ ಜಾಗ ತುಂಬ ಬೇಕೆಂಬ ಬಯಕೆ. ತಮ್ಮ ಸುಖ ದುಃಖಗಳಿಗೆ ಕಿವಿಯಾಗುತಿದ್ದವರು, ಸಂತೋಷ-ಉತ್ಸಾಹ ನೀಡುತಿದ್ದವರು ದೂರವಾದರೆ, ಜೊತೆಗೆ ಯಾರೂ ಇಲ್ಲವಾಗಿ ಒಂಟಿಯಾದರೆ ಹೆಣ್ಣು ಮಕ್ಕಳ ಸುತ್ತ ಸುತ್ತುವರೆದು ನಿಲ್ಲುವುದು ಕೇವಲ ನೆನಪು! ಆ ನೆನಪುಗಳ ನೆನೆದು ಅವನೆಲ್ಲ ಮತ್ತೊಬ್ಬರ ಜೊತೆಗೆ ಅಂಚಿಕೊಳ್ಳಬೇಕೆಂಬ ಬಯಕೆ ಉಂಟಾದಾಗ ಜೊತೆಯಾಗುವುದು ಆ ಕೆಂಪೇರಿದ ಮೋಡ, ಇಲ್ಲವೆ ಕೆಂಪು ಸೂರ್ಯನನ್ನು ತೆರೆಯ ಹಿಂದೆ ಸರಿಸಿ, ಕಾರ್ಮೋಡದ ನಡುವೆ ಬಂದ ತಿಂಗಳು, ಅದರ ಸುತ್ತ ಮುತ್ತ ಪಳ ಪಳನೆ ಹೊಳೆಯುವ ನಕ್ಷತ್ರಗಳು, ತಂಪಾಗಿ ಎಲ್ಲಿಂದಲೋ ಬೀಸಿ ಬರುವ ತಂಗಾಳಿ, ಇಲ್ಲದಿದ್ದರೆ ತನ್ನ ಕೋಣೆಯು, ಅದರೊಳಗೆ ಇನ್ನೂ ಅವಳ ನಿಟ್ಟುಸಿರ ಬಿಸಿ ಆರದ ಕಾವು, ಇಲ್ಲವೆ
                                    "ಬಾನಿನಲ್ಲಿ ಒಂಟಿ ತಾರೆ, ಸೋನೆ ಸುರುವ ಇರುಳ ಮೋರೆ,
                                    ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೊ ನೀರೆ"
ಎಂಬ ಮೆಚ್ಚಿನ ಭಾವಗೀತೆಯ ನೆಚ್ಚಿನ ಸಾಲುಗಳು ಜೊತೆಯಾಗಿ ಅವಳ ಜೊತೆ ದುಃಖಿಸುತವೆ!


    ಹಾಗೇ ಆಗಿದ್ದು "ಅವಳ"ಲ್ಲಿಯೂ. ಅಚ್ಚಿಕೊಂಡ ನಲ್ಲನನ್ನು ದೂರಮಾಡಿದ್ದಾಳೆ. ಅಚ್ಚಿಕೊಂಡ ತಪ್ಪಿಗೆ, ದೂರ ಮಾಡಿದ ತಪ್ಪಿಗೆ ಕೊರಗುತಿದ್ದಾಳೆ! ನರಳುತಿದ್ದಾಳೆ! ಬಿಕ್ಕುತಿದ್ದಾಳೆ!


    ಯಾರ ತಪ್ಪು ಇಲ್ಲಿ? ಅವನನ್ನು ಅಚ್ಚಿಕೊಂಡ ಇವಳ ತಪ್ಪೆ? ನೆಚ್ಚಿನ ನಲ್ಲ ಎಂದಿಗೂ ನನ್ನೊಂದಿಗೇ ಇರಬೇಕೆಂಬ ಹುಚ್ಚು ಮನಸ್ಸಿನ ತಪ್ಪೆ? ಅವಳ ಜೊತೆ ಇರಬೇಕು ಎಂದು ಬಯಸುತಿದ್ದರೂ, ಆ ರೀತಿ ಆಗುತಿಲ್ಲ ಎಂಬ ಅವನ ತಪ್ಪೆ? ಮೊದಮೊದಲು ಜೊತೆಗೇ ಇದ್ದ, ಹಲವು ಬಾರಿ ಪ್ರೀತಿ ಹೇಳುತಿದ್ದ, ನಲಿವಿನಲ್ಲೇ ಮುಳುಗೇಳಿಸುತಿದ್ದ ಅವನ ಮಾತಿನ ತಪ್ಪೆ? ಭವಿಷ್ಯ ಮುಖ್ಯ ಎನ್ನುವ ಅವನ ಪ್ರಭುದ್ದತೆಯ ತಪ್ಪೆ? ವರ್ತಮಾನದ ಸೊಬಗ ಬಯಸುವ ಅವಳ ತಪ್ಪೆ? ಇಲ್ಲವೆ ಅವಳ ಗುಣವು ಹೀಗಿದ್ದರೂ, ಅವನ ಗುಣ ಹಾಗಿದ್ದರೂ, ಇವರಿಬ್ಬರ ನಡುವೆ ಪ್ರೀತಿ ಎಂಬ ಬಲೆ ಬೀಸಿ ಮೇಲೆ ಇರುವ (!?) ಆ ದೇವರ ತಪ್ಪೆ?


                                    ಕಾಲವು ಅದೆಂತಹ ಕೀಚಕನು
                                    ಪ್ರೀಮಿಗಳ ದೂರ ಮಾಡಿಹನು
                                    ದೇವನಾಗಿರುವನು ಖಳನಾಯಕ
                                    ಪ್ರೀತಿ ಆಗುವುದೆ ನಿರರ್ಥಕ!?

Saturday, October 1, 2011

ಶೃತಿಯ ಮರೆತಿಹನು, ಒಲವ ಮರೆತಿಹನು


ಪ್ರೀತಿಯ ಮೆರವಣಿಗೆ ಮುಗಿದ ಮೇಲೆ
ಖಾಲಿ ಖಾಲಿಯು ಈ ಹಾದಿಯು
ಕೋಗಿಲೆಯ ಸವಿ ಶೃತಿಯು ನಿಂತ ಮೇಲೆ
ಮಸಣದ ಗೂಬೆಯ ಕೂಗೇ ಎಲ್ಲವು. . !

ಒಲವಿಲ್ಲದ ನಾನು
ಶಪಿಸುತ್ತಿರುವೆನು ಈ ಘಳಿಗೆ
ನಲ್ಲನಾಶ್ರಯದಲಿ ಲೋಕ ಮರೆತಿರುವ
ನಲ್ಲೆಯ ಕಂಡು ಒಳಗೇ. . .

ಅನುರಾಗದ ಸ್ವರ ಮೂಡದ
ಮುರಳಿಯ ಹಿಡಿದಿಹನು ನಲ್ಲ
ಶೃತಿಯ ಮರೆತಿಹನು, ಒಲವ ಮರೆತಿಹನು
ಉಸಿರು ಬಾರದು ಹೊರಗೆ,
ನನ್ನ ಮೇಲೆ ಮನಸ್ಸಿಲ್ಲದಾಗಿ ಅವನಿಗೆ. . !

Thursday, September 15, 2011

ಇನ್ನೂರನೆ ಕವನ

ಜೊತೆಗೆಯೇ ಬಂದಿರುವೆ ಓ
ನಲುಮೆಯ ಶ್ವೇತ ಕಾಗದವೆ
ಒಲುಮೆಯ ಕಪ್ಪು ಶಾಯಿಯೆ,
ಧನ್ಯವಾದಗಳು ನಿಮಗೆ. . .

ಮನಸ್ಸಿನ ಭಾವನೆಗಳ ಹೋರ
ಹಾಕಲು ನೀಡಿದಿರಿ ಸಹಾಯ ಹಸ್ತ
ಸಂತೋಷವ ಹೆಚ್ಚಿಸಿರುವಿರಿ
ದುಗುಡವ ನಿಯಂತ್ರಿಸಿರುವಿರಿ
ಏನೆಂದು ಹೇಳಲಿ, ಹೇಗೆಂದು
ಕೃತಜ್ಙತೆ ಸಲ್ಲಿಸಲಿ?

ವೀರ ಯೋಧರ ಬಗೆಗೆ
ಮತ್ತಷ್ಟು ಹೆಚ್ಚಿಸಿದಿರಿ ಅಭಿಮಾನ
ತಾಯಿ ಭಾರತಾಂಬೆಗೆ ಸಲ್ಲಿಸಿಸಿರುವಿರಿ
ಭಕ್ತಿ ತುಂಬಿದ ನಮನ. . .

ಹೆತ್ತಮ್ಮನಿಗೆ ನನ್ನಲ್ಲಿ,
ಅಡಗಿ ಕುಳಿತಿರುವ ಪ್ರೀತಿಯ
ಹೊರ ಹೊಮ್ಮಿಸಿದಿರಿ
ಅವಳಿಗೆ ನಾ ಜನುಮ
ಜನುಮದ ಋಣಿಯಾಗಿರುವೆ
ಎಂಬುದ ತಿಳಿಸಲು ಸಹಕರಿಸಿದಿರಿ. . .

ಕಾಲೇಜಿನ ಆಟ ಪಾಠಗಳು
ಮೋಜು-ಮಸ್ತಿಗಳು,
ಹಾರೈಸುವ ಗುರುವೃಂದದವರು
ಎಲ್ಲರೂ ನಿಮ್ಮ ಕಪ್ಪು-ಬಿಳಿಪಿನ
ನಡುವೆ ಬಂದು ಹೋಗಿಹರು. . .

ನಲ್ಲನ ಮೇಲಿರುವ ಪ್ರೀತಿ,
ಹಾಗೊಮ್ಮೆ ಹೀಗೊಮ್ಮೆ ಮೂಡುವ
ಹುಸಿ ಮಿನಿಸು, ನಸು ನಾಚಿಕೆ,
ಇವ ತೋರಲು, ತಿಳಿ ಹೇಳಲು
ಜೊತೆಗೆ ಬಂದಿದ್ದೀರಿ. . .

ಇನ್ನೂರನೆಯ ಈ ಕವನದಲ್ಲಿ
ನಿಮಗಿದೋ ನನ್ನ ಕೋಟಿ
ಕೋಟಿ ವಂದನೆಗಳು
ಹೀಗೇ ಜೊತೆಗೆ ಇರಿ ಎಂದಿಗೂ
ನನ್ನ ಭಾವನೆ ವ್ಯಕ್ತವಾಗಲಿ
ನಿಮ್ಮ ಮೂಲಕವೆ,
ಅರಿಯಲಿ ಈ ಜಗವು
ನಾನು ನೀವು ಆತ್ಮೀಯ ಸ್ನೇಹಿತರೆಂದೇ. . .

Monday, September 5, 2011

ಹೀಗಿರಬೇಕು ನನ್ನ ನಲ್ಲ

ಹೀಗೆ friends ಎಲ್ಲಾ ಒಟ್ಟಿಗೆ ಕುಳಿತಿದ್ದು ಏನೂ ಮತಾಡಲಿಕ್ಕೆ ಇರಲಿಲ್ಲ ಅಂದ್ರೆ ಬರೊ ವಿಷಯ "ನಿನ್ನ ನಲ್ಲ ಹೇಗಿರಬೇಕು?" "ಹೇಗೆ ನೋಡ್ಕೊಬೇಕು?" ಅನ್ನೋದು... ಬರಿ ಇಲ್ಲೆ ಅಲ್ಲ... ಎಲ್ಲಿ ಹೋದ್ರು ಇದೇ ಪ್ರಶ್ನೆ ಬರೊದು ಯಾವ ವಿಷಯವು ಇಲ್ಲ ಅಂದ್ರೆ... ಈ gmail, facebook, orkutನಲ್ಲು ಇವೇ ಅಂತೆ... ಇನ್ನು ಆ ಪ್ರಶ್ನೆಗೆ ಆಗ ಒಂದೆರಡು lineನಲ್ಲಿ ಹೇಳ್ತಾರೆ ಇಲ್ಲ ಅಂದ್ರೆ ಅದರ ಬಗ್ಗೆ ಇನ್ನ ಯೋಚಿಸಿಲ್ಲ (ಆದ ಹೇಳೋಕೆ ಆಗಲ್ಲ ಅಂತ ಹೀಗೆ ಹೇಳ್ತಾರೆ) ಅಂತ ಉತ್ತರ ಬರುತ್ತೆ.. ಇಷ್ಟಾದ್ರು ಕೆಲವರು ಆ ಪ್ರಶ್ನೆ ಕೇಳೋದು ನಿಲ್ಲಿಸೊದೇ ಇಲ್ಲ... ಹೀಗೆ ನನಗೂ ಯಾರದ್ರು ಕೇಳ್ಬಹುದೆನೋ..ಅದಕ್ಕೆ ನಾನು ಯೋಚಿಸಿ ಎಲ್ಲರಿಗೂ ಒಂದೊಂದು ಸರತಿ ಹೇಳಿ, ಕೆಲವೊಂದನ್ನು miss ಮಾಡೊದು ಯಾಕೆ ಅಂತ ಇಲ್ಲೆ ಒಟ್ಟಿಗೆ ತುಂಬಾ ಮುಖ್ಯವಾಗಿರೊದನ್ನ ಹೇಳ್ತೀನಿ....:P

    ಎಲ್ಲರಿಗೂ.., ಅದರಲ್ಲೂ ಹೆಣ್ಣು ಮಕ್ಕಳಿಗೆ ತಮ್ಮದೇ ಆದ ಆಸೆ, ಆಕಾಂಕ್ಷೆಗಳಿರುತ್ತದೆ. ಅದು ಯಾವ ವಿಷಯದಲ್ಲೇ ಆಗಿರಬಹುದು.. ಆ ವಿಷಯಗಳಲ್ಲಿ ಒಂದಾದುದು "ತನ್ನ ನಲ್ಲ ಹೀಗೆಲ್ಲಾ ಇರಬೇಕು" ಎಂಬುದು. ಹಾಗೇ ನನಗೂ ಕೂಡಾ ಆ "ನನ್ನ ನಲ್ಲ" ಹೀಗೆಲ್ಲಾ ಇರಬೇಕು, ಹೀಗೆ ನೋಡಿಕೊಳ್ಳಬೇಕು, ಅದು ಕೊಡಿಸಬೇಕು, ಇದು ಮಾಡ್ಬೇಕು ಹಾಗೇ ಹೀಗೆ ಅಂತ ಕೆಲವೊಂದು ಆಸೆಗಳುಂಟು.

    ಹ್ಮ್.. ಎಲ್ಲಾ ಹುಡುಗಿ ಇಷ್ಟಪಡೋ ಹಾಗೆ ನನಗೂ ಎತ್ತರದ ಹುಡುಗ ಬೇಕು. ನನಗಿಂತ ಎರಡು-ಮೂರು ಇಂಚು ಉದ್ದ ಇರಬೇಕು. ನಾ ಅವನನ್ನ ತಬ್ಬಿಕೊಂಡಾಗಲೆಲ್ಲಾ ಅವನ ಎದೆ ಬಡಿತ ಕೇಳಿಸ್ಬೇಕು. ಇನ್ನು ಅವನು ನನ್ನ ಮಗು ಥರ ನೋಡಿಕೊಳ್ಬೇಕು.(over ಆಯಿತು ಅಲ? :P ) ನಾನು ಮೊದ್ಲೇ ಒಂದ್ ಥರ ಭಾವಜೀವಿ. ಬೇಗ ಎಲ್ಲಾನು ಮನಸ್ಸಿಗಚ್ಚಿಕೊಂಡುಬಿಡ್ತೀನಿ. so ನನಗೆ ಖುಷಿಯಾದಾಗೆಲ್ಲ. ಇಲ್ಲ ದುಃಖ ಆದಾಗ ಸ್ವಲ್ಪ over ಆಗಿ react ಮಾಡ್ತೀನಿ. ಅದಕ್ಕೆ ನಾನು ಸಂತೋಷದಲ್ಲಿದ್ದಾಗ ಅವನೂ ಕೂಡಾ ನನ್ನ ಜೊತೆ ಬೆರೆತು ನನ್ನ ಖುಷಿ ಹೆಚ್ಚಿಸ್ಬೇಕು. ಇನ್ನು ನಾ ದುಃಖಿಸುತ್ತಾ, ಅಳುತ್ತಾ ಇದ್ರೆ ಕಣ್ಣೀರು ಒರೆಸಿ, ಮಗುವಿಗೆ ಸಮಾಧಾನ ಮಾಡೋ ಹಾಗೆ ಮಡ್ಬೇಕು..

    ನನ್ಗೆ ಇಷ್ಟ ಆಗೋದನ್ನೇಲ್ಲಾ ಕೊಡಿಸ್ಬೇಕು. ನನ್ನ ಲಿಸ್ಟ್ ಎಣು ದೊಡ್ಡದಲ್ಲ. ದೊಡ್ಡದ್ದೆ but costlyದಲ್ಲ. ಈ key chains, finger ring, cartoon stickers, ಮಣಿಸರ, ಬಳೆ, ಬಿಂದಿ, ರಿಬ್ಬನ್, nail polish ಹೀಗೆ ಎಲ್ಲವೂ :P  ಅದು ಬಿಟ್ರೆ ನನ್ಗೆ ತಿಂಡಿಗಳಂದ್ರೆ ತುಂಬಾ ಇಷ್ಟ.. so ನನ್ಗೆ ಇಷ್ಟ ಆಗೊ ತಿಂಡಿನೆಲ್ಲ ಅವನೇ ಮಾಡಿ ನನಗೆ ತುತ್ತು ತಿನ್ನಿಸ್ಬೇಕು. ಏನು ಬರಲಿಲ್ಲ ಅಂದ್ರು ಚಿತ್ರನ್ನ ಮಾತ್ರ must and should ಅದು ಬಿಟ್ರೆ ಬಿಸಿಬೇಳೆ ಬಾತ್, ಕಾರಟ್ ಪಲ್ಯ, ದೋಸೆ, and so on ಮತ್ತೆ ವಾರದ ಕೊನೆಯಲ್ಲಿ ಅಂವ ಸಂಜೆ ನನ್ನ ಈಚೆ ಕರೆದುಕೊಂಡು ಹೋಗಿ ಗೋಲ್ಗಪ್ಪ ಕೋಡಿಸ್ಬೇಕು...,ನಾನು ಸಾಕು ಅನ್ನೋ ತನಕ. . . ಹಾಗೆ ice cream ಕೂಡ. ಈ ice cream ವಿಷಯ ಬರೋದು ಜಾಸ್ತಿ ಮಳೆಗಾಲ ಹಾಗೂ ಚಳಿಗಾಲದಲ್ಲಿ. ಸೋನೆಮಳೆಲೇ ಆಗ್ಲಿ, ಸುಯ್ ಅಂತ ಸುರಿಯೊ ಜಡಿಮಳೇಲೇ ಆಗ್ಲಿ ನನಗೆ ice cream ಕೊಡಿಸ್ಲೇಬೇಕು. ಶೀತ ಆಗುತ್ತೆ ಅದು ಇದು ಅನ್ನೊ explanation ಇರಕೂಡದು.

    ನನ್ನ ಹುಡುಗ ನನ್ನ ತುಂಬ ತುಂಬ ತುಂಬಾ ಪ್ರೀತಿಮಾಡ್ಬೇಕು. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಮುತ್ತು ಕೊಡದೆ ಪ್ರೀತಿ ಮಾಡ್ಬೇಕು, ಮುತ್ತು ಕೊಡದೆ ಮುದ್ದು ಮಾಡ್ಬೇಕು. ಅವನಿಗೆ ಎಷ್ಟು ಸಾಧ್ಯವೋ ಅಷ್ಟೂ ಕಾಲ ನನಗಾಗೇ ಮೀಸಲಾಗಿರಬೇಕು... (selfish  ನಾನು) ನನಗೆ ಅಪ್ಪ ಅಮ್ಮ ಅಣ್ಣ ತಂಗಿ friend ಎಲ್ಲವೂ ಆಗಿರಬೇಕು. ರಾತ್ರಿಯಿಡೀ ನಾನು ಅವನು ಮಾತಾಡ್ತಾನೇ ಇರಬೇಕು. ನಾನು ಅವನ ಹೆಗಲ ಒರಗಿ ಅವನ ಅಂಗೈ ಹಿಡಿದು ಏನೇನನೋ ಗೀಚ್ಚುತ್ತಾ ಮಾತಾಡ್ತಿರಬೇಕು. ಅನಿವಾರ್ಯದಿಂದ ದೂರಾದಗಲೂ ಅಷ್ಟೆ, call ಮಾಡಿ ಅವನು ನನ್ನ ತುಂಬಾ ಪ್ರೀತಿಸ್ತಿದ್ದಾನೆ ಹಾಗೆ ನನ್ನ  miss ಮಾಡ್ಕೊತಿದ್ದಾನೆ ಅಂತ ಹೇಳ್ಬೇಕು. ಹುಡುಗೀರ ಜೊತೆ ಹಾಗಿರಲಿ ಹುಡುಗರ ಜೊತೆಯೂ ಜಾಸ್ತಿ ಮಾತಾಡ್ಬಾರ್ದು. ಅವನು friends ಜೊತೆ ಇದ್ರೆ ನನ್ನ ಕೆಲ ಕಾಲ ಮರೆತು ಬಿಡ್ತಾನಲ್ಲ ಅಂತ ನನಗೆ ಭಯ ಅಷ್ಟೆ...

    ನನಗೆ ಸ್ವಲ್ಪ ಜಾಸ್ತಿನೇ ಮುಂಗೋಪ. ಬೇಗ ಕೋಪ ಬರುತ್ತೆ. ನನ್ನ ಆ ಕೋಪದಿಂದ ಬಂದ ಮಾತನ್ನು ಅವನು ತಲೆಗಾಕಿಕೊಳ್ಳದೆ, ನನ್ನ ಆ ಮಾತಿಗೆ ನಕ್ಕು, ತಲೆಗೆ ಮೊಟಕಿ, ಬಿಗಿದಪ್ಪಿ, "ಅಯ್ಯೋ ಕಂದ" ಅಂತ ಪ್ರೀತಿಲಿ ಹೇಳಿ ನನ್ನ ಸಮಾಧಾನ ಮಾಡ್ಬೇಕು. ಬದಲಾಗಿ ಅವನಿಗೇ ಕೋಪ ಜಾಸ್ತಿ ಅಂದ್ರೆ no use....

    ಇನ್ನು ನಾವೇಲ್ಲೇ ಹೊರಗಡೆ ಹೋದ್ರು ಕೈ ಹಿಡಿದೇ ಹೋಗ್ಬೇಕು. ಹೆಚ್ಚಾಗಿ ನಮ್ಮ ಪಯಣ ಕಾಲ್ನಡಿಗೆಯಲ್ಲೇ ಇರಬೇಕು. ತುಂಬು ಹುಣ್ಣಿಮೆಯ ದಿನದಂದು ಎಷ್ತೇ ಕಷ್ಟವಾದ್ರೂ ಚಂದಿರನ ಬೇಲಕ್ಕಲ್ಲಿ ನಾವಿಬ್ರು ನಡಿಲೇ ಬೇಕು ಅವನ ಕೈ ಹಿಡಿದು...

    ಇನ್ನು ಅವನಿಗಾಗೆ ನಾ ಬರೆಯೊ ಪತ್ರ, ಕವನ ಎಲ್ಲವನ್ನೂ ಅವನು ಓದ್ಬೇಕು. bore ಆಗ್ತಿದೆ ಅಂತ ಹೇಳ್ಬಾರ್ದು... ಇಲ್ಲ ಅಂದ್ರೆ ನನ್ಗೆ ಕೋಪ ಬರುತ್ತೆ.. ಇನ್ನೊಂದು main thing ಅಂದ್ರೆ ನಾವು ಅವಗವಾಗ ಜಗಳ ಆಡ್ತಿರ್ಬೇಕು. serious ಆಗಿ ಅಲ್ಲ... "ಹುಸಿ ಕೋಪ" ಹುಸಿ ಜಗಳ" ಅಂತ್ತಾರಲ್ಲ ಹಾಗೆ....

ದಿನಾ ಕನಸ್ಸಲ್ಲಿ ಎಷ್ಟು ಹತ್ತಿರ ಇರ್ತಾನೋ ಅಷ್ಟೇ ಹತ್ತಿರವಾಗಿರಬೇಕು ಯಾವಾಗ್ಲು... "busy" ಅನ್ನೊ ಪದಾನೇ ಗೊತ್ತಿರಬಾರ್ದು. ಹೇಳಿದ್ದೀನಿ ನಾನು ತುಂಬ selfish. ನನಗೆ ಇಷ್ಟವಾದವರು ನನ್ನ ಜೊತೆಯಲ್ಲೇ ಯಾವಾಗಲು ಇರ್ಬೇಕು ಅನ್ನೊದು ನನ್ನ ಒಂದು ಸಣ್ಣ ಸ್ವರ್ಥ ಆಸೆ... ಇನ್ನು ಮಾತಿಲ್ಲದ ಸಂಜೆ ಅವನ ಎದೆಗೆ ಒರಗಿ ಅಂಗೈ ಹಿಡಿದು ಹಾಗೇ ಜಗತ್ತನ್ನೇ ಮರಿಬೇಕು, ಇನ್ನು ರಾತ್ರಿ ಮಾತಲ್ಲಿ ತುಂಟಾಟ, ಪ್ರೀತಿ, ಹುಸಿ ಕೋಪ ಎಲ್ಲಾ ಇರ್ಬೇಕು. "ನಿದ್ದೆ ಬರ್ತಿದೆ ಆಮೇಲೆ ಮಾತಾಡೋಣ" ಇವೆಲ್ಲ ಇರ್ಲೆಕೂಡದು. ರಾತ್ರಿ ಎರಡಾದ್ರು ನಾವು ಹಾಗೇ ಸುಮ್ನೇ ಏನೋ ಮಾತಾಡ್ತಾ, ಕೋಪಮಾಡ್ಕೊಳ್ತಾ, ನಗ್ತಾ, ಅಳ್ತಾ ಹಾಗೇ ರಾತ್ರಿ ಕಳಿಬೇಕು.

    "ನೀ ಅಳಬಾರದು" ಅನ್ನೊ ಹುಡುಗ ನನಗೆ ಇಷ್ಟವಾಗಲ್ಲ.. ನಾ ಅಳೋದು, ಬೇಜಾರು ಮಾಡ್ಕೊಳೊದು, ಕೋಪ ಮಾಡ್ಕೊಳೋದು ಎಲ್ಲ ಅವನ ಪ್ರೀತಿಗಾಗೇ.. ಹೀಗೆಲ್ಲ ಇರ್ಬೇಕಾದ್ರೆ ಅವನು ಹೇಗೆಲ್ಲ ಸಮಾಧಾನ ಮಾಡ್ತಾನೆ ಅನ್ನೊದು ನಾನ್ ನೋಡ್ಬೇಕು ನೋಡಿ ಖುಷಿಪಡ್ಬೇಕು.

ಹ್ಮ್... ಇಷ್ಟೇಲ್ಲಾ Qualities ನಿಮ್ಮಲ್ಲಿ ಇದೆ ಅಂದ್ರೆ... ಅರ್ಜಿ ಹಾಕ್ರಿ ನೋಡುವ.... :P

Saturday, August 27, 2011

ಮೂರು ಮಾಸವೂ ತುಂಬದ ಪ್ರೀತಿ


ಹೇಳಬೇಕೋ, ಬೇಡವೋ ತಿಳಿಯದು,
ಆದರೂ ಹೇಳಿಯೇ ಬಿಡುತ್ತೇನೆ ಕೇಳು,
ಶುಭಾಷಯಗಳು ನಲ್ಲ, ಇಂದಿಗೆ
ನಮ್ಮ ಪ್ರೀತಿಗೆ, ಮೂರು ಮಾಸದ ಬೆಳವಣಿಗೆ. . .

ನಾ ನಗುವುದೋ, ಅಳುವುದೋ ತಿಳಿಯನು,

ಅಲ್ಲದೆ ಈ ದಿನ ನಿನಗೆ ನೆನಪಿದೆ ಎಂದೂ ನಾ ನಂಬೆನು.
ಏಕಿಷ್ಟು ಅಂತರ ನಮ್ಮಿಬ್ಬರ ನಡುವೆ?
ಪ್ರೀತಿಯಲ್ಲಿ ಈ ವಿರಹದ ವೇದನೆ ಸರಿಯೇ?

ಮೂರು ಮಾಸವೂ ತುಂಬಲಿಲ್ಲ ನಮ್ಮ ಪ್ರೀತಿ,

ಆಗಲೇ ದೂರವಾದೆವು ನಾವು,
ಇಷ್ಟೆಲ್ಲಾ ಆದಮೇಲು ನನಗೆ ಕಾಡುವುದು ಒಂದೆ,
ಅದು ನಿಜವಾಗಿಯು ಪ್ರೀತಿ ಎಂಬ ಪ್ರೀತಿನೇನಾ ಎಂದು. . .

ಸುಳ್ಳಾದರೆ ಆ ಪ್ರೀತಿ ಹೇಳದಿರು ನನಗೆ ನಿನ್ನ

ಪ್ರೀತಿಯ ಪಡೆವ ಯೋಗ್ಯತೆ ಇಲ್ಲವೆಂದು ಸುಮ್ಮನಾಗುವೆ,
ನಿಜವೇ ಆದರೆ ಒಮ್ಮೆ ಹೇಳಿಬಿಡು ನಿನ್ನನೆಂದೂ
ದೂರ ಹೋಗಲು ಬಿಡದೆ ಜೊತೆಗೇ ಬರುವೆ ನೆರಳಿನಂತೆ. . . 

Tuesday, August 9, 2011

ವಿಧಿಯಾಟವೇ ಹೀಗೆ


ಕಿಟಕಿಯಾಚೆ ತುಂತುರು ಮಳೆ,
ಎಂದಿನಂತೆ ನನ್ನ ಕಣಲ್ಲಿ ಸೋನೆಮಳೆ

ವಿಧಿಯಾಟವೇ ಹೀಗೆ,
ಕರೆದೊಯ್ಯುವುದು ಎಲ್ಲಿಂದ ಎಲ್ಲಿಗೋ
ಜೊತೆ ಕೊಡುವುದು ಏಕಾಂಗಿಯ ನೋವೊ
ಇಲ್ಲವೆ ವಿರಹದ ಸಾವೋ

ನಮ್ಮವರು ಎಂದು ನಮ್ಮವರಲ್ಲ
ಜೊತೆಗಿರುವವರು ಎಂದೂ ಜೊತೆಯಾಗರಲ್ಲ
ಏಕೆ ಈ ಬದುಕು ಹೀಗೆ? ವಿಧಿಯ
ಪರೀಕ್ಷೆಗೊಳಗೂಡಿಸಿ ಪಾಠ ಕಲಿಸುತ್ತಲೇ ಇರುವುದು?

ಮನಸ್ಸಿಗೆ ಇಲ್ಲ ಸಲ್ಲದ ಸ್ಥಿತಿಗತಿಯ ನೀಡಿ,
ವಿಧಿಯಾಟದಿ ಸೆಣಸಾಡಿಸಿ
ನಗುವೆನೆಂಬುದ ಮರೆಯುವಂತೆ ಮಾಡಿ
ಕೊನೆಗೆ ಬಿಟ್ಟೋಗುವುದು ಒಳ್ಳೆಯ ಪಾಠ ಕಲಿಸಿ....

Sunday, August 7, 2011

ಸಾಯುವ ಮನಕ್ಕೆ ಜೀವ ತುಂಬುವ ಗೆಳತಿ

ಗೆಳತಿ ಏನೆಂದು ಹೇಳಲಿ ನಿನ್ನ ಸ್ನೇಹವ
ಯಾವ ರೀತಿಯಲಿ ತೀರಿಸಲಿ ಈ ಋಣವ?

ಜೊತೆಗೆ ಕೂಡಿ ಬರೆದ ಕವನ, ಹಂಚಿ ತಿಂದ ತುತ್ತು
ಸಮಯದ ಅರಿವೇ ಇಲ್ಲದೆ ನಡೆದ ಹಾದಿ,
ಮಳೆಯಲಿ ಬಿಸಿ ಬಾದಾಮಿ ಹಾಲಿನ ಬೆಸುಗೆ
ಎಲ್ಲ ಸಂತೋಷವು ನೀ ಕೊಟ್ಟ ಉಡುಗೊರೆ

ಜಡಿ ಮಳೆಯಲಿ ನೆನೆದು ನಡೆದು
ಹಳೆಯ ನೆನಪಿಗೆ ಮೈ-ಮನ ಹಸಿಯಾಗಿಸಿ
ಮೌನ ಮನೆಮಾಡಿ ಕೂತಾಗ
ಪ್ರೀತಿಯ ನಗೆ ಬೀರಿ ಸ್ವರ್ಗ ತೋರಿಸಿದವಳು ನಿ. . .

ಮನಸ್ಸಿಗೆ ಕಾಯಿಲೆ ಬಿದ್ದಾಗ ಮದ್ದಾಗುವೆ 

ಕಣ್ಣೀರಿನ ಕೋಡಿ ಹರಿಸುವಾಗ ಮನ ಬಯಸುವುದೂ
ನಿನ್ನ ತೋಳನು, ನಿನ್ನ ಸಾಂತ್ವನವನ್ನೇ!
ನೋವಿನ ಕಾವ ಆರಿಸುವ ತಂಪು ನೀನು. . .

ಸಾಯುವ ಮನಕ್ಕೆ ಜೀವ ತುಂಬುವ ಗೆಳತಿ 

ನನ್ನ ಬಾಳಿನ ಧ್ರುವ ತಾರೆ ನೀ
ಅಮ್ಮನೊಲವ ತೋರುವ ನಲುಮೆಯ ಮೈತ್ರಿ ನಿನ್ನದು
ನೀನಿದ್ದರೆ ಪ್ರತಿ ಜನುಮದಲು ನಾ ಸುಖಿ. . .

Monday, August 1, 2011

ನೊಂದ ಹುಡುಗಿಯ ಡೈರಿಯಿಂದ

ದೇವರೆ,
    ಇದೊ ನಿನಗೊಂದು ಪತ್ರ. ಏನು ಈ ಹುಚ್ಚು ಹುಡುಗಿ ನನಗೆ ಪತ್ರ ಬರೆಯುತ್ತಿದ್ದಾಳೆ ಎಂದುಕೊಳ್ಳುತ್ತಿದ್ದೀಯ? ಏನು ಮಾಡಲಿ, ನಿನ್ನ ಜೊತೆ ಯಾವಗಲೊ ಒಂದು ಸರತಿ ಸಂಪರ್ಕಿಸುವ ನಾನು, ಒಂದೇ ಕ್ಷಣದಿ ಎಲ್ಲಾ ಹೇಳಲು ಹೇಗೆ ಸಾಧ್ಯ? ಅದು ಅಲ್ಲದೆ ನಿನಗೆ ಎಲ್ಲಾ ಕೇಳುವ ತಾಳ್ಮೆಯಾದರು ಎಲ್ಲಿದೆ? ಎಷ್ಟೋ ಜನರ ಕೋರಿಕೆಗಳನ್ನ ನೋಡ್ಕೊಬೇಕು ನೀನು.., ಅಂತಹದರಲ್ಲಿ ನನ್ನ ನಿಧಾನಗತಿಯಲ್ಲಿ ಹೇಳುವ ಮಾತುಗಳ ಕೇಳಿಸಿಕೊಳ್ಳಲು ಸಧ್ಯವೆ ನಿನಗೆ? ಕಂಡಿತಾ ಇಲ್ಲ. ಇನ್ನು ನೀನು ಈ ಪತ್ರವನ್ನೂ ಓದ್ತಿಯಾ ಅಂತ ನಾ ಅಂದುಕೊಂಡಿಲ್ಲ...ಹಾಗೆ ಅಂದುಕೊಳ್ಳುವುದು ಮೂರ್ಖತನ ಅಂತಲೂ ಗೊತ್ತು. ಆದ್ರೇನು ಮಾಡ್ಲಿ, ಹೇಗಾದರು ನಿನಗೆ ಕನಿಕರ ಬಂದೋ ಏನೊ ಒಮ್ಮೆ ಈ ಪತ್ರ ಓದಿ ನನ್ನ ಮನಸ್ಥಿತಿ ತಿಳಿದಿಕೊಳ್ತಿಯೇನೋ ಅನ್ನೊ ಒಂದು ಚೂರು ನಂಬಿಕೆ..., ಅದಕ್ಕೆ ನಿನಗೆ ಪತ್ರ ಬರೆಯುತಿರುವುದು...


    ನಿನಗೆ ತಿಳಿದಿದೆ ಅಲ್ವ ದೇವ್ರೆ, ನಾನು ನಿನ್ನನ್ನು ಜಾಸ್ತಿ ಏನೂ ಕೇಳಿಕೊಳ್ಳುವುದಿಲ್ಲ. ಅಲ್ಲದೆ ನಿನ್ನ ಬಳಿ ಬರುವುದು ನಾನು ಎಂದೊ ಒಂದು ದಿನ, ಯಾವುದೋ ಹಬ್ಬದಂದು. ಆಗ "ಎಲ್ಲರನ್ನು ಚೆನ್ನಾಗಿ ಇಡು" ಅಥವಾ ಪರೀಕ್ಷೆಗಳು ಹತ್ತಿರ ಬರುತಿದ್ದರೆ "ಓದು ಚೆನ್ನಾಗಿ ಆಗಲಿ, ಪರೀಕ್ಷೆ ಸುಲಭವಾಗಿ ಇರಲಿ" ಎಂದು ಕೇಳಿಕೊಳ್ಳುತೀನಿ. ಅದು ಬಿಟ್ಟು ಬೇರೆ ಏನಾದರು ಕೇಳಿರುವೆನೇನು? ಬೆಳಗೆ ಎದ್ದಾಗ ಒಮ್ಮೆ ನಿನ್ನ ಆ ಫೋಟೊ ನೋಡಿದರೆ ಮತ್ತೆ ನಿನ್ನ ನೋಡುವುದು ಮಾರನೆ ದಿನವೇ! ಇದೇ ನಿನಗೆ ಕೋಪವನ್ನುಂಟು ಮಾಡುತಿದೇಯ? ಮನಸ್ಸಿನಲ್ಲಿರುವ ಭಕ್ತಿ ಸಾಲದೆ? ಬೂಟಾಟಿಕೆಗಾಗಿ ನಡೆಸುವವರ ಭಕ್ತಿಯೇ ನಿನಗೆ ಮೆಚ್ಚೆ?


    ಮಧ್ಯಮ ವರ್ಗದಲ್ಲಿದ್ದರೂ ನಿನ್ನ ಎಂದೂ ಇಶ್ವರ್ಯಕ್ಕಾಗಿ ಕೇಳಿಲ್ಲ. ನನ್ನನ್ನು ಸಿರಿಯುಳ್ಳವರ ಮನೆಯಲ್ಲಿ ಹುಟ್ಟಿಸಲಿಲ್ಲವಲ್ಲ ಎಂದು ದೂಡಿಲ್ಲ.., ಅಂತಹದರಲ್ಲಿ ಇದ್ದ ಅಲ್ಪ ಸ್ವಲ್ಪ ಖುಷಿಗೂ ಕಲ್ಲೊಡೆಯುವುದೆ ನೀನು? ಸಂತೊಷವ ಬಯಸಲೇ ಬಾರದೆ ನಾನು? ಬಯಸಬಾರದಂತಾದರೆ ನಾನು ಮಾಡಿರುವ ತಪ್ಪಾದರೂ ಏನು? 


    ಚಿಕ್ಕಂದಿನಿಂದಲೂ ಒಂದು ಥರ ಭಾವಜೀವಿ ನಾನು. ಮೃಧು ಮನಸ್ಸುಳ್ಳವಳು. ಚಿಕ್ಕ ಸಂಗತಿಯನ್ನೂ ಮನಸ್ಸಿಗಚ್ಚಿಕೊಳ್ಳುವವಳು. ಸ್ನೇಹ ಬಳಗಕ್ಕಾಗಿ ಚಡಪಡಿಸುತ್ತಿದ್ದವಳು. ಸ್ನೇಹಿತರೇ ಹಿತೈಶಿಗಳು ಎಂದು ನಂಬಿದ್ದವಳು. ಆದರೆ ಏಕೆ ನನಗೆ ಆ ರೀತಿಯ ಹಿಂಸೆ? ಎಲ್ಲರೂ ನನ್ನ ಕಡೆಗಣಿಸುವಂತೇಕೆ ಮಾಡಿದೆ?ಮರದ ಕೆಳಗಿದ್ದ ಜಾರುಗುಪ್ಪೆಯ ಮೇಲೆ ಹರಿಯುತ್ತಿದ್ದ ಆ ಕಪ್ಪಿರುವೆಯ ಮರಕ್ಕೆ ಬಿಟ್ಟವಳನ್ನು ಆಡಿ ಹೀಯಾಳಿಸಿದ್ದರಲ್ಲ.. ಎಷ್ಟು ನೋವಾಗಿತ್ತು ನನಗೆ ಅಂದು ಗೊತ್ತ ನಿನಗೆ? ಎಲ್ಲಿ ಹೋಗಿ ಅತ್ತಿದ್ದೆ ಅಂತ ಗೊತ್ತ ನಿನಗೆ? ನಿನಗೆಲ್ಲಿ ತಿಳಿದೀತು.., ತಿಳಿದಿದ್ದರೆ ಮುಂದೇಂದೂ ಹಾಗಾಗದಂತೆ ನೋಡಿಕೊಳ್ಳುತಿದ್ದೆ. ಈ ರೀತಿ ಸುಮ್ಮನ್ನಿರುತಿರಲಿಲ್ಲ. ಮುಂದಿನ ತರಗತಿಗಳಲ್ಲಿ ಹೇಗೋ ಚೆನ್ನಾದ ಸ್ನೇಹ ಬಳಗದಲಿ ಎಲ್ಲರಿಗೂ ದೊರೆಯುತ್ತಿದ್ದ ಗೌರವ, ಪ್ರೀತಿ ನನಗೂ ದೊರೆಯುತಿದೆ ಅಂದುಕೊಂಡಿದ್ದೆ...ಆದರೇನು ಮಾಡುವುದು ಎಳೆ ಮನಸ್ಸು ಬೆಳ್ಳಗಿರುವುದೆಲ್ಲ ಹಾಲು ಎಂದು ನಂಬಿದ್ದೆ. ಆದರೆ ತಿಳಿತಿದೆ ಎಲ್ಲಾವು ಬರೀ ಡೊಳ್ಳು ಎಂದು. ಇನ್ನು ಮುಂದಿನ  ದಿನಗಳಲಂತು ನಾ ಪಟ್ಟ ಪಾಡು ಯಾರಿಗೂ ಬೇಡ... 


    use and throw ಆಗಿಬಿಟ್ಟಿದ್ದೆ ನಾನು. ಸ್ನೇಹಕ್ಕೆ ಬೆಲೆ ಇಲ್ಲದವರ, ಸ್ನೇಹ ಅಂದರೇನೆಂದು ಅರಿಯದವರ ಬಳಿ ಸೇರಿಬಿಟ್ಟಿದ್ದೆ. ಆದರೆ ಅವರದ್ದೇನು ತಪ್ಪಿಲ್ಲ ಬಿಡು..ಅವರಿಗೆ ಬೇಕಾದಂತವರು ಅವರಂತಿದ್ದವರು, ಆದರೆ ನಾನು ಅವರಂತಿರಲಿಲ್ಲವಲ್ಲ, ಅವರಂತೆ ನೀ ನನ್ನ ಹುಟ್ಟಿಸಲಿಲ್ಲವಲ್ಲ. ಅದಕ್ಕಾಗಿ ಅವರನ್ನ ದೂಡಲಾರದು. ಅವರ ಪಾಡಿಗೆ ಅವರ ಬಿಟ್ಟು ಸ್ನೇಹ ಶೋಧನೆಗೆ ನಾನು ಸಿದ್ಧಳಾದೆ. ಮತ್ತೆ ದೊರೆತವರು ಒಂದು ರೀತಿ ನನ್ನಂತವೆ ಆದರೆ ಅಲ್ಲೂ ಏನೂ ಸ್ನೇಹಕ್ಕೆ ಗೌರವ ಇರಲಿಲ್ಲ. ತಮಗೆ ನೋವಾದಾಗ ಮಾತ್ರ ಬಂದು ಅತ್ತುಕರೆದು ಸಮಾಧಾನ ಮಾಡಿಸಿಕೊಂಡು ಒಂದು thanks ಹೇಳಿ ನೀನ್ ನನ್ನ best friend ನೀನೇ ನನ್ನ ಎಲ್ಲಾ ದುಃಖಕ್ಕೂ ಸಮಾಧಾನ ಮಾಡೋಳು. thank you so much ಎಂದು ಹೇಳುತಿದ್ದರು. ಆದರೆ ನನಗೂ ದುಃಖಗಳಿರುತ್ತದೆ ನನಗೂ ಸಮಾಧಾನ ಮಾಡಬೇಕೆಂಬುದ ಮರೆತರು. ಹೀಗಲೂ ಕರೆ ಮಾಡುತ್ತಾರೆ ನಿನ್ನ ಹತ್ತಿರ ಏನೋ ಹೇಳ್ಕೊಬೇಕು ಒಂದು ದಿನ ಸಿಗು, ಇಲ್ಲ ಮನೆಗೆ ಬಾ ಎಂದು ಕರೆಯುತ್ತಾರೆ. ಆದರೆ "ಚೆನ್ನಾಗಿದ್ದೀಯ? ಎಲ್ಲವೂ ಕ್ಷೇಮವ? .....ನಲ್ಲಿ ಎಲ್ಲಾ ಸರಿ ಇದೆಯ? ಎಂದು ಕೇಳರು. ತಮ್ಮ ದುಖಃಕ್ಕಾಗಿ ನನ್ನ ನೆನಪಿಸಿಕೊಳ್ಳುವವರೋ ಹೊರತಾಗಿ ಬೆರ್ಯಾವುದಕ್ಕೂ ಅಲ್ಲ.tissue paper ಆಗಿ ಹೋಗಿದ್ದೀನಿ.., ಮನಸ್ಸಿಗೆ ದುಃಖವಾದಾಗ ಆದ ಕಲೆ ಹೊರೆಸಲು ಬೇಕು ನಾನು, ಹೊರೆಸಿದ ನಂತರ ಬಿಸಾಡಿಬಿಡುತ್ತಾರೆ...!!


    collegeನಲ್ಲಿಯಾದರು ಒಂದೊಳ್ಳೆ ಬಳಗ ಸಿಗುವುದೆಂದುಕೊಂಡೆ..ಸಿಕ್ಕೂ ಇದೆ..ಆದರೆ ನೆಮ್ಮದಿಯೇ ಇಲ್ಲ! ನಿನಗೆ ತಿಳಿದಿದೆ ನನಗೆ ಪಾಠ ತಲೆಗತ್ತುವುದಿಲ್ಲ...ನಾನು ಓದುವುದರಲ್ಲಿ ಹಿಂದು ಅಂತ. ಅಷ್ಟು ಗೊತ್ತಿದ್ದರೂ ಇಂತಹ ಬಳಗ ನೀಡುವುದೆ? ಗೆಳತಿಯರೆಲ್ಲ ಓದುವುದರಲ್ಲಿ ಮುಂದು. ನಾನೊಬ್ಬಳೇ ಹಿಂದೆ ಎಂತಾದರೆ ನನಗಲ್ಲಿ ಗೌರವ ಸಿಗುವುದೆ? ತಿಳಿಕೋ ದೇವರೆ ಈ ಜಗದಲ್ಲಿ ಓದುವವರಿಗೆ ಮಾತ್ರ ಗೌರವ, ಪ್ರೀತಿ ದೊರಕುವುದು. ಮನೆಯಲ್ಲಾಗಲಿ, ಹೊರಗಲ್ಲಾಗಲಿ ನಮ್ಮಂತ ಭಾವುಕರಿಗೆ ಸಿಗುವುದು ಕೇವಲ ದುಃಖ...ಆದರಿಂದ ನಾವೂ ಚೆನ್ನಾಗಿ ಓದಬೇಕೆಂದು ಹೋದರೂ ಹಾಳಾದ ಮನಸ್ಸು ಆ ನೋವಲ್ಲೆ ಕೊರಗಿ ಕೊರಗಿ ಓದುವುದನ್ನೂ ನಿಲ್ಲಿಸಿಬಿಡುತ್ತದೆ..!


    ಎಲ್ಲರಿಂದಲೂ ದೂರವಾಗುತಿರುವವಳು ನಾನು. ಹೆತ್ತಮ್ಮನಿಗೆ ಇದು ತಿಳಿಯಲಾಗುತಿಲ್ಲ. ನನ್ನ ಆ ಹುರುಳಿಲ್ಲದ ನಗುವನ್ನೇ ನಂಬಿಕುಳಿತಿದ್ದಾಳೆ. ಅದೇ ನನಗೂ ಬೇಕಾಗಿರುವುದು ನನ್ನಿಂದ ಅವಳು ದುಃಖಿಸುವುದು ನನಗಿಷ್ಟವಿಲ್ಲ ಬಿಡು. ನನಗಾಗಿ ಅವಳು ಯಾಕೆ ದುಃಖಿಸಬೇಕು? ಅದು ಈ ಪಾಪಿಗಾಗಿ?


    ಏನೇ ಆದರು ನೀ ಮಾಡಿದ್ದು ತಪ್ಪು ದೆವರೆ. ಎಷ್ಟೇ ಹೀಯಳಿಕೆಗೆ, ನೋವಿಗೆ ಒಳಗಾಗಿದ್ದರೂ ಎಂದೂ ಈ ರೀತಿ ದುಃಖಿಸಿದವಳಲ್ಲ ನಾನು. ಆದರೆ ಇಂದು ಸುಮ್ಮನ್ನಿದ್ದರೂ ಕಣ್ಣು ಸೋರುತಿರುವುದು, ಒಂತಿ ರಸ್ತೆಯಲ್ಲಿ ಹೋಗುತಿದ್ದರೆ ಬಿಕ್ಕಳಿಸುತಿರುವೆ.. ಎಲ್ಲರಿಂದಲೂ ದೂರವಾಗುತ್ತಿರುವೆ. ನನ್ನಲ್ಲಿದ್ದ ಆ ನಲಿವು, ವಿನೋದ ಎಲ್ಲವನ್ನೂ ಯಾರೋ ದೋಚಿಕೊಂಡು ಹೋಗಿದ್ದಾರೆ. ಖುಷಿಯಿಂದ ಇದ್ದ ನನ್ನನ್ನು ನಾನೇ "yet happiest girl in the world" ಎಂದು ಹೇಳಿಕೊಳ್ಳಿತ್ತಿದ್ದವಳು, ಇಂದು ಅವೆಲ್ಲ ಜಂಬದ ಮಾತು, ಸೋಲು ಒಪ್ಪಿಕೊಳ್ಳಲಾಗದೆ ಅಹಂಕಾರದಲ್ಲಿ ಹೇಳುತ್ತಿದ್ದ ಮಾತು ಎಂದು ಅನ್ನಿಸುತಿರುವುದು.


    ಇಷ್ಟೊಂದು ನೋವು ನನಗೆ ಕೊಡಬೇಕೆಂದು ನಿನಗೆ ಹೇಗೆ ಅನ್ನಿಸಿತು? ನಾನಷ್ಟು ಪಾಪಿನ? ಇಲ್ಲ ನನ್ನ ಮೇಲೆ ನಿನಗೆ ಕರುಣೆಯೇ ಇಲ್ಲವ? ಒಂದು ದಿನ ನನ್ನ ಜಾಗದಲ್ಲಿ ಬಂದು ನೋಡು ನಾನೇಷ್ಟು ದುಃಖಿಸುತಿರುವೆನೆಂದು ತಿಳಿಯುತ್ತೆ  ನಿನಗೆ. ದೂರ ಮಾಡಿಸಿರುವೆ...ಸ್ನೇಹಿತರಿಂದ..ಗೆಳೆಯನಿಂದ...ಸಂತೋಷದಿಂದ...ಭಾವದಿಂದ ಎಲ್ಲದರಿಂದಲೂ..!!!! ಈಗ ನಾನು ಕೇವಲ ಉಸಿರಾಡುತಿರುವ ಶವ! ಹುಟ್ಟಿಸಿದ್ದಿಯಲ್ಲ ನೀನು, ಅದಕ್ಕೆ ಬದುಕಬೇಕಲ್ಲ ಎಂದು ಬದುಕಿದ್ದೀನಿ. ಆತ್ಮಹತ್ಯೆ ಮಾಡಿಕೊಂಡರೆ ನನ್ನ ನಾ ಗೌರವಿಸುತಿರುವುದು ಕೂಡ ನಾಟಕವೇನೊ ಅನ್ನಿಸಿಬಿಡುತ್ತದೆ. ಅದಕ್ಕಾದರು..,ನನ್ನಮ್ಮ, ಅಪ್ಪನ ನಗುವಿಗಾದರು ನಾ ಏನಾದರು ಸಾಧಿಸಬೇಕು.


    ದಯಮಾಡಿ ಈ ಯೋಜನೆಗೂ ಕಲ್ಲೊಡೆಯಬೇಡ. ಈ ಪತ್ರವ ಎಂದಾರು ಓದಿ ಕೊಂಚವೇ ಕೊಂಚ ಕನಿಕರಿಸು. ಅಷ್ಟೇ ಸಾಕು ಸದಾಕಾಲ ಋಣಿಯಾಗಿರುವೆ. ಸಿಗುವ ಕೊಂಚ ಖುಷಿಯಲ್ಲೆ ಹೇಗೊ ಬದುಕಿಕೊಳ್ಳುವೆ ಬಡಪಾಯಿ.


                                                                                ಇತಿ..,
                                                                                ..................!!?


Tuesday, July 26, 2011

ಕ್ಷಮಿಸಿಬಿಡು

ಅಪ್ಪಿ,
         ಕ್ಷಮಿಸಿಬಿಡೊ...I’m very sorry… ನಿನ್ಗೆ ತುಂಬಾ ನೋವು ಮಾಡ್ಬಿಟ್ಟೆ ಅನ್ನಿಸುತ್ತೆ ಅಲ್ವ? sorry da ...ತುಂಬಾ ಬೇಸರವಾಗಿತ್ತು, ಅದಕ್ಕೆ ಹಾಗೆಲ್ಲಾ ಮಾತಾಡ್ಬಿಟ್ಟೆ....ನೀನು ನನ್ನ ತುಂಬಾ ಪ್ರೀತಿಸ್ತಿದ್ದೀಯ ಅನ್ನೊದನ್ನ ಒಂದು ಕ್ಷಣ ಮರೆತು ಬಿಟ್ಟಿದ್ದೆ(?) ಎಂಥಾ ಪಾಪಿ ಅಲ್ವ ನಾನು? ಕ್ಷಮಿಸಿಬಿಡೊ... ದಿನೇ ದಿನೇ ನಿನ್ಗೆ ನೋವ್ಮಾಡ್ತಾ ಇದಿನಿ... ಬೈಕೊ ಬೇಡ ಪುಟ್ಟಾ, "ಮಾಡೋದೆಲ್ಲ ಮಾಡಿ ಆಮೇಲೆ Sorry ಕೇಳ್ತಾಳೆ" ಅಂತ...

          ತಪ್ಪಾಗಿ ಅರ್ಥ ಮಾಡ್ಕೊಬಿಟ್ಟಿದ್ದೆ ಕಣೊ...ನಿನ್ನಿಂದ ನನ್ನ studiesಗೆ ತೊಂದ್ರೆ ಆಗ್ತಿದೆ, ನನ್ನ life spoil ಆಗ್ತಿದೆ ಅಂದುಕೊಂಡು ಬಿಟ್ಟೆ... ಮತ್ತೆ ಅದನ್ನ ಯೋಚನೆನೂ ಮಾಡ್ದೆ "break up" ಆಗೋಣ , contactನಲ್ಲಿ ಇರೋದು ಬೇಡ ಅಂತ ಹೇಳ್ಬಿಟ್ಟೆ!! ಆದ್ರೆ ಈಗ ತಿಳಿತಿದೆ ಕಣೊ, ನೀನಿಲ್ದೆ lifeಏ ಇಲ್ಲ ಇನ್ನು ಅದು spoil ಆಗೋದಾದ್ರು ಹೇಗೆ ಅಂತ! ದುಡುಕಿ ಬಿಟ್ಟಿದ್ನಲ್ಲೋ ಅಪ್ಪಿ... ಅದ್ಯೇಗೊ ಏನೂ ಮಾತಾಡ್ದೆ ಇದ್ದೆ ನೀನು? break up ಆಗೋಣ ಅಂದಾಗ? ಅಷ್ಟು ಶಾಂತವಾಗಿ ಹೇಗಿದ್ದೊ? contactನಲ್ಲಿ ಇರೋಣ friends ರೀತಿಲಾದ್ರು ಅಂತ ಕೇಳ್ದೆ ನೀನು... ಆದ್ರೆ ನಾನು "ಏನೂ ಬೇಡ" ಅಂತ ಅಂದ್ಬಿಟ್ಟೆ. ನೀನು ಅಷ್ಟು ಕೇಳ್ಕೊಂಡ್ರು ಬೇಡ ಅಂತ ಹೇಳ್ದೆ, ಅದು ಅಲ್ದೆ, "ನಾನು ಸಾಯ್ಬೇಕು ಅಂತ ಏನಾದ್ರು ಇದ್ರೆ contactನಲ್ಲಿ ಇರೋಣ" ಅಂತ ಏನೇನೋ ಹೇಳ್ಬಿಟ್ಟೆ.... ನೀನು ಏನೂ ಮಾತಡ್ದೆ ಒಪ್ಪಿಕೋಂಡುಬಿಟ್ಟಲ್ಲೊ... ನಾನು ಹಾಗೆ ಹೇಳಿದ್ಮೇಲೆ ನೀನು ಒಂದು messageನೂ ಮಾಡ್ಲಿಲ್ಲ, ನಾನೂ ಕೂಡ..!! ಒಂದುವರೆ ದಿನ ನಿನ್ನ ಜೊತೆ ಯಾವ contact ಇಲ್ದೆ ಇದ್ದೆ! ಆದ್ರೆ ನೀನ್ ನೆನಪಾಗ್ಲಿಲ್ಲ ಅಂತ ಸುಳ್ಳು ಹೇಳೋಕೆ ಆಗಲ್ಲ ನನ್ಗೆ.. ಆ ಇಪ್ಪತ್ತನಾಲ್ಕು ಗಂಟೆ ಆದಾಗಲೆ ಒಂದು ಪತ್ರ, ಕವನ ಬರ್ದೆ, ನಿನ್ನ ಏಷ್ಟು miss ಮಡ್ಕೊಳ್ತಿದಿನಿ ಅಂತ.. ಆದ್ರೆ ನಿನ್ಗೆ ತೋರಿಸಿದ್ರೆ ಎಲ್ಲಿ ನಾನು ಸೋಲ್ತೀನೊ ಅಂತ ಹೇಳ್ಳೇ ಇಲ್ಲ...

            ಆದ್ರೊಂದಂತು confirm ಆಯ್ತು ಕಣೊ.., ನಿನ್ನ ಜೊತೆ ಮಾತಾಡ್ದೆ ಹೇಗೋ ದಿನ ಕಳೆದು ಬಿಡ್ಬಹುದು, ಆದ್ರೆ ನಿನ್ನ ಪ್ರೀತಿ, ನಿನ್ನ ಮಾತು, ನಿನ್ನ ಅಕ್ಕರೆ ಎಲ್ಲಾ ಪ್ರತಿ secondsಗೂ ನೆನಪಾಗುತ್ತೆ ಅಂತ.,

            ಇವತ್ತು ಒಂದು blog ಓದ್ದೆ, "ನೀನಿಲ್ಲದೇ" ಅಂತ... ಓದಿ ತುಂಬಾನೆ ಬೇಸರವಾಯ್ತು ಕಣೊ... ನೀನ್ ತುಂಬಾ ತುಂಬಾ ನೆನಪಾಗಿ ಬಿಟ್ಟೆ.. ಕಣ್ಣಲ್ಲಿ ನೀರು ತುಂಬಿ ಬಂತು.. ನಿನ್ನ ಬಿಗಿದಪ್ಪಿ ಅತ್ತು sorry ಕೇಳ್ಬೇಕು ಅನ್ನಿಸ್ತಿತ್ತು... ಕ್ಷಮಿಸಿಬಿಡೊ ಗೆಳೆಯ, ನಿನ್ನ ಬಿಟ್ಟು ನನ್ಗೆ ಇರೋಕೆ ಆಗಲ್ಲ., ಮತ್ತೆ ಮತ್ತೆ ಕೇಳ್ಕೊಳ್ತೀನಿ ದಯಮಾಡಿ ಈ ಮುಂಗೋಪಿನ ಕ್ಷಮಿಸಿಬಿಡು. . .

Tuesday, June 14, 2011

ರಾತ್ರಿಯಂದು ನ್ನಿನ್ನೊಡನೆ ನನ್ನೀ ಸಂಭಾಷಣೆ...

ನಿನ್ನೆಯ ನೆನೆದೆನು ನಾನು,
ಹೇಳಲಿಚ್ಛಿಸಿದೆ ನಿನಗೆ,
ಹೇಳಲಾಗದೇನೋ ನಾ ತಿಳಿಯೆನು,
ಆದರೆ ಆ ಭಾವನೆಗಳ
ಬಿಚ್ಚಿಡದೆ ಇರೆನು.

ಒಂದೊಮ್ಮೆ ಹೇಳಿದ್ದೆ ನೀ
ಪ್ರೀತಿಬೇಡವೆಂದು,
ಕೇಳಿ ಏರಿತ್ತು ಕೋಪ
ಆ ಹಿಮಾಲಯವನು.
ಮನಸ್ಸಲ್ಲಿ ನಿನ್ನ ಕಳೆದುಕೊಳ್ಳುವೆನೆಂಬ
ಭಯದಲಿ ಕೋಪವು ಹೆಚ್ಚಿತ್ತು.
ನೋವಾಯಿತೆ ಆ ಭಾವದಲಿ
ನಾ ಹೋಡೆದಿದ್ದು?
ಕ್ಷಮಿಸು ತಡೆಯಲಾಗಿರಲಿಲ್ಲ
ನನ್ನ ಮುನಿಸು!

ಪ್ರೀತಿಯಲಿ ಹುಚ್ಚಿಯಾಗಿರುವೆ
ನಿನ್ನಿಂದ ಕ್ಷಣದ ಅಗಲಿಕೆಯೂ
ನಾ ಬಯಸೆನು.
ಏಕಾಂಗಿಯಾದರೆ ನಾನು
ನೋಡು ಹೇಳುತಿರುವೆನು
ಬಿಟ್ಟೋಗುವೆ ಎಲ್ಲವನು
ಆದರೆ ಪ್ರೀತಿಸುವೆ
ಸಾವಲ್ಲು ನಿನ್ನನು.
ಹೀಗೆಂದು ಅತ್ತಿದ್ದೆ ನಿನ್ನೆ.
ಹಸಿಯಾರಿತೇನು? ನಿನ್ನ
ಎದೆಮೇಲಿನ ನನ್ನ
ಆ ಬಾಷ್ಪಾಂಜಲಿಯ ಹನಿ?

ಅಷ್ಟು ಬೈದರೂ, ಹೊಡೆದರು,
ಮುನಿಸಿಕೊಂಡರೂ,
ಮಗುವಂತೆ ಕಂಡೆ ನನ್ನನು.
ಇದರಿಂದ ಆದೆ ನಾ
ಶಾಂತಿ ಚಿತ್ತಳು.
ಆಗ ಕೆನ್ನೆಗೆ, ಗಲ್ಲಕ್ಕೆ,
ಕಣ್ಣಿಗಿಟ್ಟ ಮುತ್ತುಗಳು
ಸಾಕಾದವೇನು?
ಮತ್ತೆ ಬಂದು ಇನ್ನೊಮ್ಮೆ
ಕೊಡಲೇನು?

ನಿನ್ನೊಲವು, ನಿನ್ನ ಅನಿವಾರ್ಯತೆಯ
ದೂರವ ನೆನೆದು
ಅತ್ತಿದ್ದೆ ನಾನು, ದುಃಖಿಸಿದ್ದೆ ನಾನು,
ಆ ಕ್ಷಣ ನಿನ್ನ ನಾ ತಬ್ಬಿದ್ದಾಗ
ಏನೋ ಹೇಳಿ ಸಂತೈಸಿದಲ್ಲ,
ಅದೇನು? ಪುನಃ ಹೇಳು..
ಮತ್ತೆ ದುಃಖದಿ ಇರುವೆನು ನಾನು...!!!!


Sunday, June 12, 2011

ಹೀಗೊಂದು ದಿನ...


ನಿಸರ್ಗದ ಚೆಲುವಿನಲಿ
ನನ್ನ ಇನಿಯನ ಮಡಿಲಲಿ
ಮಲಗಿರಲು ನಾ ಸಂತಸದಲಿ
ಕಂಡೆನು ಸ್ವರ್ಗ ಭುವಿಯಲಿ.

ನಟ್ಟಡವಿಯಲಿ ಹಕ್ಕಿಯೊಂದು ಹಾಡಿತು
ತನ್ನ ಜೋಡಿಯ ಕರೆಯಿತು
ಮಧ್ಯೆ ಮಿಂಚೊಂದು ಮೂಡಿತು
ಹೆಣ್ಣು ಹಕ್ಕಿಯ ಹೃದಯವು ಹೇದರಿತು.

ಗಂಡು ಹಕ್ಕಿ ಸಂತೈಸಲು ಮುಂದಾಯಿತು
ತನ್ನ ಜೋಡಿ ಹಕ್ಕಿಗೆ ಧೈರ್ಯ ತುಂಬಿತು
ಹೆಣ್ಣು ಹಕ್ಕಿಯ ಕಣ್ಣು ಸಂತಸದಿ ಕೂಡಿತು
ಪ್ರಿಯನ ಜೊತೆ ಗೂಡು ಸೇರಿತು.

ಇನಿಯನ ಮಡಿಲಲಿ ಮಲಗಿ ಇದ ಕಣ್ಣು ನೋಡುತಿತ್ತು
ಕಂಡ ಕಣ್ಣು ಮುಗುಳ್ನಗೆಯಲಿ ಉತ್ತರಿಸಿ
ಪ್ರಿಯನಾಗಿರುವ ನನ್ನೊಲವು ಹೇಗೋ ಹೆಚ್ಚಾಯಿತು
ಕಾರಣ ಅದು ಮುತ್ತಿನ ಮೂಲಕ ತೋರಿಕೊಂಡಿತು.


Wednesday, June 8, 2011

ಉಸಿರು ನಿಂತರೆ ಸಾವು ಎಂದು ತಿಳಿದು ಇನ್ನು ಕಾಯುತಿರುವೆ


ಶುರುವಾಗಿತ್ತು ನಮ್ಮೊಲವು
ಕೇವಲ ಸಂದೇಶದಲಿ,
ಚಿಗುರೊಡೆಯಿತು ಸಂತೋಷದಲಿ
ಬೆಳೆಯಿತು ಹರುಷದಲಿ.

ಸಣ್ಣ ಪುಟ್ಟ ಮಾತಿಗೂ ಮನಸ್ತಾಪ
ಚಿಕ್ಕ ಚಿಕ್ಕ ವಿಷಯದಲ್ಲೂ ಉತ್ಸಾಹ.
ಹೀಗೆ ಎಷ್ಟು ಚೆಂದವಿತ್ತು
ಆ ನಿನ್ನೊಡನೆ ಕಳೆದ ಸಮಯವು.

ನನ್ನ ನೋವೆಲ್ಲ ನಿನ್ನದೆಂದು ತಿಳಿದವ ನೀನು
ನನ್ನ ಸಂತೋಷವೆಲ್ಲ ನಿನ್ನದೆಂದವ ನೀನು.
ಮಿತಿ ಇಲ್ಲದ ಪ್ರೀತಿಯಾಗಿತ್ತು ಅಂದು
ನಿನ್ನ ಪ್ರೀತಿ.

ಆದರೆ ಎಲ್ಲಿ ಬಿರುಕು ಮೂಡಿತೊ
ನಮ್ಮ ಪ್ರೀತಿ ಮಹಲಲಿ,
ಯಾರು ನಿಂಬೆ ಹುಳಿ ಹಿಂಡಿದರೊ
ನಮ್ಮ ಪ್ರೀತಿ ಹಾಲ್ಗಡಲಲಿ,
ನಶಿಸಿ ಹೋಯಿತು ನಮ್ಮ ಪ್ರೀತಿ!

ಏಕೆ ಆ ರೀತಿ ಇದ್ದವ ಹೀಗಾದೆ
ಎಂದು ತಿಳಿಯಲೋಗಿ ನಾ ನೊಂದೆ
ನೊವಲ್ಲೆ ಇರುವೆ!

ಪ್ರೀತಿ ಎಂದರೆ ನೀನು
ನೀನು ಎಂದರೆ ಉಸಿರು
ಉಸಿರು ನಿಂತರೆ ಸಾವು ಎಂದು ತಿಳಿದು
ಇನ್ನು ಕಾಯುತಿರುವೆ,
ನಿನ್ನ ಒಲವ ಶಾಶ್ವತವಾಗಿ ಪಡೆಯದ

ನತದೃಷ್ಟ ಹುಡುಗಿ. . . !

Monday, May 23, 2011

ಹಸಿಯಾದ ಕಾಗದ; ಒಲವ ಶೋಕ ಪತ್ರ

ನಿನ್ನ ಪ್ರೀತಿಗೆ ನನ್ನಲಿ ಬೆಲೆ ಇಲ್ಲದಂತಾಯಿತು
ನಿನ್ನೊಲವಿಗೆ ನಾ ತಣ್ಣೀರೆರೆಚಿದಾಯಿತು
ಏಕೆ ಇಷ್ಟಾದರು ಪ್ರೀತಿಸುತಿವೆ ನನ್ನನು?
ನನ್ನಲಿ ಅಂತಹದು ಇರುವುದಾದರು ಏನು?
ಪ್ರೀತಿಗೆ ಹೃದಯದಲಿ ಗುಡಿ ಇಲ್ಲ
ಬರಿಯ ಸ್ಮಶಾಣವೆ ಎಲ್ಲ!
ನಿನ್ನೊಲವ ಪಡೆವ ಅದೃಷ್ಟವ ಪಡೆದಿಲ್ಲ ನಾ
ಮರೆತುಬಿಡು, ಸಾಧ್ಯವಾದರೆ ಕ್ಷಮಿಸಿಬಿಡು

ಗೆಳೆಯ-ಗೆಳತಿಯರಿಬ್ಬರು, ಹೆಚ್ಚು ಪ್ರೀತಿ, ವಾತ್ಸಲ್ಯ, ಮಮತೆ ತೋರಿದರೆ ಅದೋ ಪ್ರೀತಿಯ ಮೊಳಕೆ ಚಿಗುರೊಡೆಯುವುದು! ಕೊಂಚ ಕೋಪ, ಕೊಂಚ ನಗು, ಸ್ವಲ್ಪ ತಲಹರಟೆ. ನಡುವೆಯೆ ನುಸುಳಿ ನುಸುಳಿ ಹೋಗುವ ಹುಸಿ ಮುನಿಸು. ಇದೆ ನೋಡು ಮಾರ್ಪಟ್ಟಿದೆ ಸ್ನೇಹ ಪ್ರೀತಿಗೆ!


ಆದರೆ ನನ್ನಲಿ ನಿನ್ನ ಒಲವ ಬಯಸುವ ಯಾವ ಅರ್ಹತೆಯೂ ಇಲ್ಲ. ಏಕೆಂದರೆ ನನ್ನಲಿ ಪ್ರೀತಿಗೆ ಯಾವ ಜಾಗವೂ ಇಲ್ಲ! ಇಷ್ಟಾದರೂ ಪ್ರೀತಿಸುತಿರುವೆನೆಂಬ ನಂಬಿಕೆ! ಆದರೆ ಒಪ್ಪಲಾಗದ ಕಹಿ ಸತ್ಯವದು.!ಏಕೆ? ಅದೋ ಮರೀಚಿಕೆ! ನಿನ್ನ ಪ್ರತಿ ಮಾತು, ನಿನ್ನ ನಗು, ಆ ನಿನ್ನ ತುಂಟತನ ಎಲ್ಲವೂ ಅತಿ ಮಧುರ. ಆದರೆ ಅದು ಕೇವಲ ನೆನಪಿನಲ್ಲಿ ಅಮರ! ಒಂದೆಡೆ ಪ್ರೀತಿ, ಒಂದೆಡೆ ಕುಟುಂಬ! ಒಪ್ಪದಿದ್ದರೆ ಈ ಪ್ರೀತಿಯ, ಮೇಲೇರುವುದು "ಎರಡರಲ್ಲಿ ಯಾವುದು ಅತಿ ಮುಖ್ಯ?" ಎಂಬ ಯಕ್ಷ ಪ್ರಶ್ನೆ! ಎನೆಂದು ಉತ್ತರಿಸಲಿ ಅಂದು? ನೀನೋ? ಅವರೋ?
ಇದೇ ಕಾರಣಕ್ಕೆ ಇಂದು ಮನ ರೋಧಿಸುತಿದೆ. ಮುಂದೆ ಆಗುವ ಈ ಕಾರ್ಯಕ್ಕೆ ಅಂತ್ಯವಾಡಬೇಕಿದೆ ಇಂದೆ! ಸಾವರಿಸಿಕೊಂಡು ಹೇಳುತಿರುವೆನು ನಿನ್ನ ಪ್ರೀತಿ ನನಗೆ ಬೇಡವೆಂಬ ಸುಳ್ಳನ್ನು! ಎನ್ನ ಸಂತೋಷಕ್ಕೆ ಇತರರ ನೋಯಿಸೆನು. ಅದಕ್ಕೆ ನನಗೆ ನಾನೇ ಮೋಸ ಮಾಡಿಕೊಳ್ಳುತಿರುವೆನು!


ಮನ ಬಿಕ್ಕಳಿಸಿ ಬಿಕ್ಕಳಿಸಿ ಅಳುತಿದೆ ಕಣೋ. ಕಣ್ಣೀರಲ್ಲಿ ಮಿಂದಿರುವ ಕಣ್ಣಿಗೆ ಎಲ್ಲವೂ ಮಂಜು ಮಂಜು! ಎಡಗೈಯಲಿ ರಕ್ತದ ಕಲೆ, ಬಲಗೈಯಲಿ ಕಣ್ಣೀರಿನ ಹನಿ, ಮನದಲಿ ಉರಿದುರಿದು ಸುಡುತಿರುವ ಚಿತೆ! ಎನೆಂದರೂ ತಡೆಯಲಾಗುತಿಲ್ಲ ಆ ಭಾಷ್ಪಾಂಜಲಿಯ! ಕಣ್ಣೀರಿನ ಈ ಮಳೆಗೆ ಕಾಗದವೂ ಹಸಿಹಸಿಯಾಗುತಿದೆ. ಶಾಯಿಯ ಅಕ್ಷರಗಳೆಲ್ಲವು ಹರಡುತಿವೆ.ಹಾಳೆಯು ಹರೆದು ಹೋಗುವ ಸ್ಥಿತಿಯ ತಲುಪಿದೆ. ಗಟ್ಟಿ ಮನಸ್ಸೇ ಇಂದು ಈ ಕಂಬನಿಯಲಿ ನೆನೆದು ಸೊರಗುತಿದೆ ಇನ್ನು ಈ ತಿಳಿ ಹಾಳೆಯ ತಪ್ಪೇನು!?


ನನ್ನ ಮನಸ್ಸಿನಲ್ಲಿರುವುದ, ನಿನ್ನ ಪ್ರೀತಿಗೆ ನನ್ನ ಇಚ್ಛೆ ಕೊಡಲಾಗದಿರುವುದ, ನಿನಗೆ ನೇರವಾಗಿ ಹೇಳಲಾಗದೆ ಈ ಪತ್ರದ ಮೂಲಕೆ ಹೇಳುವ ಬಯಕೆಯಾಯಿತು. ಆದರೆ, ಬಳಿಕ ನಿನ್ನಲಿ ನನ್ನ ಮೇಲೆ ಯಾವ ಭಾವನೆ ಮೂಡುತ್ತದೊ ಎಂಬ ಭಯದಲಿ ಹಿಂದೆ ಸರಿಯುತಿರುವೆ!


ಕೊಡಲೆಂದೇ ಬರೆದ ಪತ್ರ,
ಕೊಡಲಾಗುತಿಲ್ಲ.
ಪ್ರೀತಿಯ ಬಯಸಿ ಪ್ರೀತಿಸಿದ ಮನ
ಇಂದು ಅದ ತೋರುವಂತಾಗುತಿಲ್ಲ.
ಒಲವ ಅಭಿಷೇಕಗೈಯುವಂತೆ ಬಯಸಿದ ನಾನು,
ಇಂದು ಪ್ರೀತಿಯನೇ ಕೊಲ್ಲುತಿರುವೆನಲ್ಲ!

ಎಷ್ಟೇ ಹೆಳಿದರು, ಎಷ್ಟೇ ಕೇಳಿದರು, ಏಷ್ಟೇ ಚರ್ಚಿಸಿದರು, ಎಷ್ಟೇ ಯೊಚಿಸಿದರೂ, ಇದೇ ಉತ್ತರವು ನ(ನಿ)ನ್ನೊಲವಿಗೆ!(?) ಹಸಿಯಾದ ಕಾಗದ; ಒಲವ ಶೋಕ ಪತ್ರ! ಹ್ಮ್ಮ್ಮ್..ಚಿಂತಿಸದಿರು ಇದ ನಾ ನೀಡುವುದಿಲ್ಲ ನಿನಗೆ! ನಿಟ್ಟುಸಿರು ಬಿಟ್ಟು ಮನದಲಿ ಉರಿಯುತಿರುವ ಚಿತೆಗೆ ಹಸಿ ಹಾರಲೆಂದು(?) ಎಸೆಯುವೆನು!
ಕ್ಷಮಿಸುವುದಾದರೆ ಕ್ಷಮಿಸಿಬಿಡು!