ಧಾರಾಕಾರವಾಗಿ ಮಳೆ ಸುರಿದ ಕಾರಣ ಅಂದು ಮೈಸೂರಿನ ಸಬರ್ಬ್ ಬಸ್ ಸ್ಟ್ಯಾಂಡ್ ಸ್ವಲ್ಪ ಜಾಸ್ತಿಯೇ ಹದಗೆಟ್ಟಿತ್ತು. ಎಲ್ಲಿ ನೋಡಿದರಲ್ಲಿ ಜನ, ವಾಹನಗಳ ಮಿಂಚಿನ ಓಟ ಮಧ್ಯೆ ಮಳೆರಾಯನ ಆರ್ಭಟ, ಧುಳೆದ್ದ ಪ್ರದೇಶ. ಯಾರಲ್ಲಿಯೂ ಶಾಂತಿ ಚಿತ್ತವಿಲ್ಲ . ಅಂದು ಮೈಸೂರು ಮಾಲಿನ್ಯಕ್ಕೆ ಇನ್ನೊಂದು ಹೆಸರಾಗಿ ಬಿಟ್ಟಿತ್ತು . ಇಂತಹ ಜನ ಜನ್ದುಳಿಯಲ್ಲೂ ಪವಿ ಒಂಟಿತನದ ಬೇಗೆಯಲಿದ್ದಳು…
ಪವಿ ಮಲೆನಾಡ ಹೆಣ್ಣು ಮಗಳು . ಶಿವಮೊಗ್ಗ ಜಿಲ್ಲೆಯ ಒಂದು ಚಿಕ್ಕ ಹಳ್ಳಿ ಅವಳ ಹುಟ್ಟೂರು . ‘ಮಾತು ಬೆಳ್ಳಿ ಮೌನ ಬಂಗಾರ’ ಇದು ಅವಳ ಪೋಲಿಸಿ ಆಗಿತ್ತು. ಹೆಚ್ಚಾಗಿ ಅಗತ್ಯವಿಲ್ಲದೆ ಮಾತನಾಡುವ ಹುಡುಗಿಯಲ್ಲ . ಇನ್ನು ಹೊಸಬರ ಜೊತೆ ಬೆರೆಯುವುದು ತುಂಬಾ ಕಡಿಮೆ . ಯಾರಾದರು ಹತ್ತಿರದವರೋ ಇಲ್ಲ ಇಷ್ಟವದವರೋ ಸಿಕ್ಕರೆ ಕೆಲ ಕಾಲ ಹರಟುತಾಳಷ್ಟೇ. ಇಲ್ಲದಿದ್ದರೆ ಮಾತು ಕೇಳಲು ಚಾತಕ ಪಕ್ಷಿಗಳಂತೆ ಕಾಯಬೇಕು!!?
ಮಲೆನಾಡ ಹುಡುಗಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಓದುವ ಸಲುವಾಗಿ ಬಂದಿದ್ದಳು. ಚಿಕ್ಕಂದಿನಿಂದಲೂ ಓದುವದರಲ್ಲಿ ಮುಂದಿದ್ದಳು . ಆದ ಕಾರಣ ಮೈಸೂರಿನಲ್ಲಿ ಓದುತೇನೆ ಎಂದು ಹೇಳಿದಾಗ ಮನೆಯವರು ದೂಸರಾ ಮಾತಾಡದೆ ಒಪ್ಪಿದರು . ಮೈಸೂರಿನ ಒಂದು ಹೆಸರುವಾಸಿ ಕಾಲೇಜ್ ನಲ್ಲಿ ಸೀಟ್ ಕೂಡ ಸಿಕ್ಕಿತು . ಕಾಲೇಜ್ ನ ಸಮೀಪದಲ್ಲೇ ಒಂದು ರೂಂ ಕೂಡ ಮಾಡಿಕೊಂಡಳು .
ನಾಲ್ಕು ದಿನದ ಮಟ್ಟಿಗೆ ರಜೆ ಸಿಕ್ಕ ಕಾರಣ ತನ್ನ ಹುಟ್ಟುರಿಗೆ ಹೋಗಲು ನಿರ್ಧರಿಸಿ ಸಬರ್ಬ್ ಬಸ್ ಸ್ಟ್ಯಾಂಡ್ನಲ್ಲಿ ಕೂತಿದ್ದಾಳೆ . ಧಾರಾಕಾರ ಮಳೆ , ಜನರು ಜಾಸ್ತಿ . ಆದರು ಇವಳಿಗೆ ತಾನು ಒಂಟಿ ಎಂಬ ಭಾವನೆ . ಮೊದಲಿನಿಂದಲೂ ಚಿಕ್ಕ ಚಿಕ್ಕ ಸಂಗತಿಗೂ ತಲೆ ಕೆಡಿಸಿಕೊಳ್ಳುವುದು ಅಭ್ಯಾಸವಾಗಿ ಬಿಟ್ಟಿತ್ತು . ತುಂಬಾ sensitive ಹಾಗು sentimental . Sappy ಅಂದ್ರು ತಪ್ಪಾಗಲಾರದು.
ಆ ಗಜಿಬಿಜಿಯಲ್ಲೂ ಪವಿ ನೆನಪುಗಳಿಗೆ ತನ್ನ ಅರಿವಿಲ್ಲದಂತೆ ಆಮಂತ್ರಣ ಕೊಟ್ಟಿದ್ದಳು.
ಅಂದು ಆದಿತ್ಯವಾರದ ಸುಂದರ ಸವಿ ಸಂಜೆ . ಪವಿ, ಹತ್ತಿರದಲ್ಲೇ ಇದ್ದ ಒಂದು ಪಾರ್ಕಿಗೆ ತನ್ನದಾವುದೋ ಸಬ್ಜೆಕ್ಟ್ನ ಪುಸ್ತಕವನ್ನು ಎತ್ತಿಕೊಂಡು ಹೊರಟಳು . ಆ ಪಾರ್ಕಿನಲ್ಲಿ ಎಲ್ಲ ವಯಸ್ಸಿನವರು ಇದ್ದರು . ಇವಳು ತಾನು ತಂದ ಪುಸ್ತಕದ ಒಂದೊಂದೇ ಹಾಳೆಯನ್ನು ತಿರುಗಾಕುತ್ತ ಓದಿನಲ್ಲಿ ಮಗ್ನಳಗಿದ್ದಳು .
“ಹಲೋ, ಯಾವುದ್ರಿ ಬುಕ್? ಕಾದಂಬರಿನ ?ಲವ್ ಬಗ್ಗೆನ?” ಪಕ್ಕದಲ್ಲೇ ತನ್ನ ಸ್ನೇಹಿತರಗಾಗಿ ಕಾದು ಕೂತಿದ್ದ ಮಂಜು ಬೋರ್ ಅನಿಸಿದ ಕಾರಣ ಇವಳ ಜೊತೆ ಮಾತಿಗಿಳಿದ .
“ಇಲ್ಲ . ಇದು ನನ್ನ b.com accounts book” ಮನಸ್ಸಿಲ್ಲದಾ ಮನಸ್ಸಿನಿಂದ ಪವಿ ಉತ್ತರಿಸಿದಳು .
“ನೀವೂ commerce ಸ್ಟುಡೆಂಟ?ನಾನು ಕೂಡ . ಆದ್ರೆ ನಂದು BBM ನಿಮ್ಮದು B.Com ಅಷ್ಟೇ ವ್ಯತ್ಯಾಸ. ಅದ್ಸರಿ ಟೆಕ್ಸ್ಟ್ ಬುಕ್ ಓದೋಕೆ ಬೋರ್ ಆಗಲ್ವೇನ್ರಿ ? ನಂಗಂತೂ ಬುಕ್ ನೋಡಿದ್ರೆ ಸಾಕು ನಿದ್ದೆ ಬರುತ್ತೆ .”
ಎಂಥ ಹುಡುಗನಪ್ಪ. ಇವನ ಬಾಯಿಗೆ ಯಾರು ಕೈಯಾಕಿದ್ರೊ ಶಿವನೆ ಎಂದು ಬೈದುಕೊಳ್ಳುತ್ತಾ ."ನಂಗೆ ಬೋರ್ ಏನು ಆಗಲ್ಲ . ನೀವಿಗೇನ?ಗುರುತು ಪರಿಚಯ ಇಲ್ದೆ ಇರೋರ ಹತಿರ ಅವರ ಹೆಸರನ್ನು ತಿಳಿದುಕೊಳ್ಳದೆ ಮಾತಾಡೋದು?”
"ಹೀಗೆ ಮಾತಾಡ್ತಾ ಇದ್ರೆ ಗೊತ್ತಗುತ್ತಪ್ಪ. ಈಗ ಹೇಳಿ ಯಾವ್ದಾದ್ರು ಕೋರ್ಟ್ ನಲ್ಲಿ ಮೊದ್ಲು ಹೆಸರು ತಿಳ್ಕೊಂಡೆ ಮಾತಾಡಬೇಕು ಅಂತ ರೂಲ್ಸ್ ಮಾಡಿದರ?ಇಲ್ಲ ಅಲ್ವ? ಸರಿ ಅದೆಲ್ಲ ಬಿಡಿ . ನನ್ ಹೆಸರು ಮಂಜು . ನಿಮ್ ಹೆಸರೇನು?"
ಪವಿಗೆ ಎಲ್ಲಿಲ್ಲದ ಕೋಪ ."ಸಾರೀ ನಾನು strangers ಜೊತೆ ಮಾತಾಡಲ್ಲ . ನಿಮ್ಮ ಜೊತೆ ಇಷ್ಟೊತ್ತು ಮಾತಾಡಿದ್ದೆ ಹೆಚ್ಚು . Please don’t disturb me"
“ಅಲ್ಲ ನನ್ ಹೆಸರು ತಿಳ್ಕೊಂಡು ನಿಮ್ ಹೆಸರು ಹೇಳ್ದೆ ಹೊರ್ದ್ರೆ ಹೇಗೆ ? ಹೇಳು ಏನ್ ನಿನ್ನೆಸರು?”
ಪವಿ ಏನನ್ನು ಮಾತಾಡಲಿಲ್ಲ. ಸುಮ್ಮನೆ ಒಂದು ಮಿಚ್ಚಿನಂತಹ ನೋಟ ಬೀರಿ ಸುಮ್ಮನಾದಳು.
“ಹಲೋ. ಹೇಳು ಏನ್ ನಿನ್ನೆಸರು ? ಫ್ರೆಂಡ್ಸ್ ಎಲ್ಲ ಮೊದ್ಲು strangers ಆಗಿರ್ತಾರೆ . ಆಮೇಲೆ ತಾನೇ ಫ್ರೆಂಡ್ಸ್ ಆಗೋದು . ಅದೇ ಇಲ್ಲೂ ಆಗ್ತಾ ಇರೋದು . ಸೊ ಹೇಳು ಏನ್ ನಿ…”
“ಪವಿತ್ರ” ಅವನು ತನ್ನ ವಾಕ್ಯ ಪೂರ್ತಿ ಮಾಡುವ ಮೊದಲೇ ಉತ್ತರಿಸಿದಳು. ಅವನ ಮಾತು ಕೂಡ ನಿಜ ಎಂದನಿಸಿತು .'Strangers are just waiting to be friends' ಎಂದು ಎಲ್ಲೋ ಓದಿದ್ದು ನೆನಪಿಗೆ ಬಂತು .
ಇದಾಮೇಲೆ ಮಂಜು ಅವಳನ್ನು ಮಾತಿಗಿಳಿಸಿದ. ಯಾರ ಜೋತ್ತೆಯು ಅದರಲ್ಲೂ ಅಪರಿಚಿತರ ಜೋತೆ ಮಾತನಾಡದ ಅವಳು ಅಂದು ಮಂಜು ಜೊತೆ ಸ್ವಲ್ಪ ಜಾಸ್ತಿಯೇ ಹರಟಿದಳು!ಅವನ ರಾಗ ಎಳೆದು ಮಾತಾಡುವ ವಾಯ್ಸ್ ಅವಳಿಗೆ ತುಂಬಾನೇ ಇಡಿಸಿತು .
“ದಿನ ಬರ್ತೀಯ ಪಾರ್ಕ್ಗೆ ? ಯಾವತ್ತು ನಿನ್ನ ನೋಡೇ ಇಲ್ಲ . Mostly first time ಅನಿಸುತ್ತೆ.”
“ಹ್ಮ್ ಹೌದು ಫಸ್ಟ್ ಟೈಮ್. ನೀವು ದಿನ ಬರ್ತಿರ ?
“ ವೀಕೆಂಡ್ಸ್ ಮತ್ತೆ ಹಾಲಿಡೆಸ್ನಲ್ಲಿ ಜಾಸ್ತಿ ಇಲ್ಲೇ ಇರ್ತೀನಿ . ಇದು ನಮ್ಅಡ್ಡ . ಫ್ರೆಂಡ್ಸ್ ಎಲ್ಲ ಒಟ್ಟಿಗೆ ಸೇರ್ತಿವಿ ಸಂಜೆ ಟೈಮ್ . ಆದ್ರೆ ಇವತ್ತು ಅಪರೂಪಕ್ಕೆ ನಾನ್ ಕರೆಕ್ಟ್ ಟೈಮ್ ಗೆ ಬಂದಿದೀನಿ ಆದ್ರೆ ಫ್ರೆಂಡ್ಸ್ ಅನಿಸ್ಕೊಂಡ ನನ್ ಮಕ್ಳು ಇನ್ನು ಬಂದಿಲ್ಲ so waiting”
“ಫ್ರೆಂಡ್ಸ್ಗೆ ಬೈತಿರ ?”
“ಥು ಇಲ್ಲವೆ . ಪ್ರೀತಿ ಜಾಸ್ತಿ ಆದಾಗ ಈ ರೀತಿ ಹೇಳ್ತೀನಿ ಅಷ್ಟೇ”
ಅವನು ‘ಥು’ ಅಂತ ಹೇಳಿದ್ ಸ್ಟೈಲ್ ಅವಳಿಗೆ ಇಷ್ಟವಾಯಿತು..., ಹೀಗೆ ಹೇಗೋ ನಮ್ಮುಡುಗಿ ಮುತ್ತು ಉದುರಿ ಹೋಗುತ್ತೇನೋ ಅನ್ನೋ ಹಾಗೆ ಮಾತಾಡ್ತಾ ಇದ್ರೆ ಆ ಕಡೆ ಮಂಜು ಮಾತೆ ಬಂಡವಾಳ ಅನ್ನೋ ಹಾಗೆ ಮಾತಾಡ್ತಾ ಇದ್ದ . ಅವನು ಪ್ರಶ್ನೆ ಕೇಳಿ guess ಮಾಡಿ ಉತ್ತರವೂ ಹೇಳ್ತಿದ್ದ . ಇವಳು ಅವನು ಕೇಳಿದ ಪ್ರಶ್ನೆಗೆಲ್ಲ 1mark question ಗೆ answer ಮಾಡೋ ರೀತಿ one word ನಲ್ಲಿ ಉತ್ತರಿಸ್ತ ಇದ್ಲು. ಅಂತು ಚಂದ್ರೋದಯದ ಸಮಯ ಆಯಿತು. ಪವಿ ತಡಮಾಡೋದು ಬೇಡ ಅಂತ..
“ನಾನಿನ್ನು ಹೊರಟೆ ಬೈ”
“ಇರೆ ಸ್ವಲ್ಪ ಹೊತ್ತು . ನನ್ ಫ್ರೆಂಡ್ಸ್ ಬರೋತನಕ at least?”
“ಇಲ್ಲ ಕತ್ಲಾಗ್ತಾ ಇದೆ ಹೋಗ್ಬೇಕು . ನೀವೂ ಬೇಗ ಹೋಗಿ ಮನೆ ತಲುಪಿ”
“ಅಯ್ಯೋ! ಇನ್ನ 7 ಗಂಟೆ..ಇಷ್ಟು ಬೇಗ ಮನೆಗೆ ಹೋಗಿ ನಾನ್ ಏನ್ ಮಾಡ್ಲೇ??ನಿನ್ ಹೊರಡು ಬೇಕಾದರೆ . ಬಟ್ ನೀವೂ ತಾವು ಅಂತ ಮಾತಾಡಿಸ್ಬೇಡ . ನೀನು ಅಂತಾನೆ ಕರಿ ಓಕೆನ ?"
“ಸರಿ ಹಾಗಾದ್ರೆ ನಾನಿನ್ನು ಹೋಗ್ಬಿಟ್ ಬರ್ತೀನಿ”
“ಬರಬೇಡ”
“?????????”
“ಅಯ್ಯೋ ಗೂಬೆ ಸುಮ್ನೆ ತಮಾಷೆಗೆ ಹೇಳ್ದೆ. ಮತ್ತೆ ಮತ್ತೆ ಸಿಗ್ತಾ ಇರು ” ಮಂಜು ಫ್ರೆಂಡ್ಸ್ ಬರೋದನ್ನ ನೋಡಿ ಮುಂದುವರೆಸಿದ "ಸರಿ ನನ್ ಫ್ರೆಂಡ್ಸ್ ಕೂಡ ಬಂದ್ರು ಬೈ take care”
“bye. Have a fine evening”
ಮಂಜು ಅವನ ಫ್ರೆಂಡ್ಸ್ ಜೊತೆ ಹೋದ . ಇತ್ತ ಪವಿ ಅವನಾಡಿದ ಮಾತುಗಳನ್ನು ನೆನೆಯುತ್ತ ರೂಮ್ನ ಕಡೆ ನಡೆದಳು . "ತುಂಬಾ ಒಳ್ಳೆಯ ಹುಡುಗ . ತಾನು ನಕ್ಕಿ ಎಲ್ಲರನ್ನು ನಗಿಸಬಲ್ಲವ . ಬೇಗ ಇಷ್ಟವಾಗುವ ಜೀವಿ . Happy-go-lucky nature . ಹೀಗೆ ಅವನ ಗುಣಗಳನ್ನು ತನಗೆ ತಾನೇ ಹೇಳಿಕೊಳ್ಳುತ್ತಾ ಹೋಗುತಿದ್ದಳು . ಅವನ ಜೊತೆ ಮಾತಾಡಿ ಆ ದಿನ ತುಂಬಾ ಸಂತಸದಿಂದಿದ್ದಳು . ಪಾರ್ಕ್ನಲ್ಲಿ ಮಾತಾಡುತಿರುವಾಗ ಮುಂದೆ ಸಿಕ್ಕಿದಾಗ ಸ್ವಲ್ಪ tuitionಗೋಗಿ ಮಾತನಾಡೋದನ್ನ ಕಲಿತುಕೊಂಡು ಬಂದಿರು ಎಂದಿದು ನೆನಪಾಗಿ ಮುಗುಳ್ನಕ್ಕಳು.
ಪವಿ ಹೀಗೆ ತನ್ನ ನೆನಪುಗಳಲ್ಲಿ ಮುಳುಗಿ ವಾಸ್ತವ ಜಗದಲ್ಲಿ ಏನಾಗುತಿರುವುದು ಎಂಬುದನ್ನೇ ಮರೆತಿದ್ದಳು . ಅಷ್ಟರಲ್ಲಿ ಅವಳ ಊರಿನ ಬಸ್ ಬಂದಿತು . Bus ಹೊರ್ನ್ ಕೇಳಿ ಪವಿ ನೆನಪಿನಿಂದ ಹೊರಬಂದಳು . ಬೇಗ ಬಸ್ಸನ್ನು ಹತ್ತಿ ಕಿಟಕಿಯ ಪಕ್ಕ ಕುಳಿತಳು . ನೆನಪಿನ ಜೊತೆ ತೇಲಿ ಹೋಗಲು ತಣ್ಣನೆ ಗಾಳಿ ಬೇಕೆಂದೋ ಅಥವಾ ಅವಳ ಊರಿಗೆ ಹೋಗುವ ದಾರಿಯಲ್ಲಿ ಕಾಣುವ ಹಚ್ಚ ಹಸಿರ ನೋಟವ ತನ್ನ ಕಣ್ಣಿನ ಕ್ಯಾಮೆರಾದಲಿ ಸೆರೆ ಹಿಡಿಯಲೋ ತಿಳಿಯದು! ಪವಿ ಹೀಗೆ ಕಿಟಕಿ ಆಚೆ ಕಣ್ಣಾಯಿಸಿ ಜನರನ್ನು , ವಾಹನಗಳನ್ನು , ಕಟ್ಟಡಗಳನ್ನು ನೋಡುತ್ತ ಕುಳಿತಳು .
ನೋಡುತಿರುವಾಗ ಯಾರೋ ಒಬ್ಬಳು ತನ್ನ ಗೆಳೆಯನ ಜೊತೆ ಜಗಳವಾಡಿ ಮುನಿಸಿಕ್ಕೊಂಡು ಕೂತಿದ್ದನ್ನು ಕಂಡಳು . ಬಸ್ ನಿಧಾನವಾಗಿ ಹೋಗ್ತಾ ಇದ್ದ ಕಾರಣ ಕಾಣಿಸಿತು . ತಾನು ಕೂಡ ಹೀಗೆ ಆಡುತಿದ್ದ ಆದ್ದರಿಂದ ಅಲ್ಲಿ ಎನಾಗಿರ ಬಹುದೆಂದು ಅರಿತಳು . ಇದು ಅವಳನ್ನು ಒಂದೂವರೆ ವರ್ಷದ ಹಿಂದಿಗೆ ಇಣುಕುವಂತೆ ಮಾಡಿತು.
ಮಂಜು ಹಾಗು ಪವಿ ಬೆಸ್ಟ್ ಅಂಡ್ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಇಬ್ಬರು ದಿನವು ಪಾರ್ಕಿನಲ್ಲಿ ತಪ್ಪದೆ ಬೇಟಿಯಾಗುತಿದ್ದರು. ದಿನವಿಡೀ ಏನೆಲ್ಲಾ ಆಯಿತು ಅದನ್ನು ಒಬ್ಬರೊಬ್ಬರಿಗೆ ಹೇಳಿಕೊಳ್ಳುತಿದ್ದರು . ಯಾರನ್ನು ಹಚ್ಚಿಕೊಳ್ಳದ ಪವಿ ಕೇವಲ ದಿನಗಳಲಿ ಮಂಜುನನ್ನು ಹಚ್ಚಿಕೊಂಡಿದ್ದಳು . ಇಬ್ಬರ ನಡುವೆ ಸಲುಗೆ ಹೆಚ್ಚಿತ್ತು . ಹಾಗೆಯೆ ಜಗಳವು ಜಾಸ್ತಿ . ಚಿಕ್ಕ-ಚಿಕ್ಕ ವಿಷಯಕ್ಕೂ ಜಗಳವಾಡುತಿದ್ದರು. ಈ ರೀತಿ ಜಗಳವಾಡುವಾಗ ಭಾವುಕಳಾಗಿದ್ದ ಪವಿ ಎಷ್ಟೋ ಸರತಿ ಅತ್ತಿದ್ದು ಉಂಟು . ಅದು ಅಲ್ಲದೆ ತುಂಬಾ ಹಚ್ಚಿಕೊಂಡಿದ್ದಳು ನೋಡಿ ಅದಕ್ಕೆ . ಇದಾದಮೇಲೆ ಹೇಗೋ ಸಮಾಧಾನವಾಗುತಿತ್ತು ಅವನ ಮಾತು ಕೇಳಿ . ಆದರೆ ಮಂಜು ಮಾತ್ರ ಒಂದು ಸಾರೀನು ಕೇಳ್ತಿರಲಿಲ್ಲ ಅಥವಾ ಸಮಾಧಾನ ಪಡಿಸುವ ಸಲುವಾಗಿ ಮಾತಾಡ್ತಾ ಇರಲಿಲ್ಲ . ಆದರೆ ಪವಿಗೆ ಹೇಗೋ ಸಮಾಧನವಾಗುತಿತ್ತು. ಅದಾದಮೇಲೆ ಇಬ್ರು ಜಗಳ ಆಡೇ ಇಲ್ವೇನೋ ಅನ್ನೋ ಹಾಗೆ ಹರಟೆ ಹೊಡಿತಿದ್ರು .
ಹೀಗೆ ಎಲ್ಲವು ಸುಸೂತ್ರವಾಗಿ ನಡೆಯುತ್ತಿತ್ತು . ಅವಳಂತೂ ಮಂಜುನ ಮಾತಿಗೆ , attitudeಗೆ, ಸದಾ ನಗ್ತಾ ಇರೋದಕ್ಕೆ , ಅವನ friendly natureಗೆ ಹುಚ್ಚಿ ಆಗಿದ್ಲು . ಅವಳಿಗಂತೂ ಅವನು ‘one and only’ ಆದರೆ ಅವನಿಗೆ ಅವಳು ‘one of many’. ಅವನು ಎಲ್ಲ ಫ್ರೆಂಡ್ಸ್ ಜೊತೆ ಮಾತಾಡ್ತಾ ಇದ್ದದೆ ಹಾಗೆ . ಆದರೆ ಇದೆ ಮೊದಲು ಪವಿ ಇಂತಹವನ ಜೊತೆ ಕೂಡಿದ್ದ ಅನುಭವಗಿದ್ದು .
ಮುಂದುವರೆಯುವುದು...
channagide.... next yenagute? bega next part haku
ReplyDeletesakattagide..ondu line tumba ista aythu., ಫ್ರೆಂಡ್ಸ್ ಎಲ್ಲ ಮೊದ್ಲು strangers ಆಗಿರ್ತಾರೆ . ಆಮೇಲೆ ತಾನೇ ಫ್ರೆಂಡ್ಸ್ ಆಗೋದು...bega mundindu bari :)
ReplyDelete@prashu
ReplyDeletethanks.....ya aadashtu bega haktini:)
@harshad
thanx pa...bardagide post madodu baaki;)