Thursday, September 15, 2011

ಇನ್ನೂರನೆ ಕವನ

ಜೊತೆಗೆಯೇ ಬಂದಿರುವೆ ಓ
ನಲುಮೆಯ ಶ್ವೇತ ಕಾಗದವೆ
ಒಲುಮೆಯ ಕಪ್ಪು ಶಾಯಿಯೆ,
ಧನ್ಯವಾದಗಳು ನಿಮಗೆ. . .

ಮನಸ್ಸಿನ ಭಾವನೆಗಳ ಹೋರ
ಹಾಕಲು ನೀಡಿದಿರಿ ಸಹಾಯ ಹಸ್ತ
ಸಂತೋಷವ ಹೆಚ್ಚಿಸಿರುವಿರಿ
ದುಗುಡವ ನಿಯಂತ್ರಿಸಿರುವಿರಿ
ಏನೆಂದು ಹೇಳಲಿ, ಹೇಗೆಂದು
ಕೃತಜ್ಙತೆ ಸಲ್ಲಿಸಲಿ?

ವೀರ ಯೋಧರ ಬಗೆಗೆ
ಮತ್ತಷ್ಟು ಹೆಚ್ಚಿಸಿದಿರಿ ಅಭಿಮಾನ
ತಾಯಿ ಭಾರತಾಂಬೆಗೆ ಸಲ್ಲಿಸಿಸಿರುವಿರಿ
ಭಕ್ತಿ ತುಂಬಿದ ನಮನ. . .

ಹೆತ್ತಮ್ಮನಿಗೆ ನನ್ನಲ್ಲಿ,
ಅಡಗಿ ಕುಳಿತಿರುವ ಪ್ರೀತಿಯ
ಹೊರ ಹೊಮ್ಮಿಸಿದಿರಿ
ಅವಳಿಗೆ ನಾ ಜನುಮ
ಜನುಮದ ಋಣಿಯಾಗಿರುವೆ
ಎಂಬುದ ತಿಳಿಸಲು ಸಹಕರಿಸಿದಿರಿ. . .

ಕಾಲೇಜಿನ ಆಟ ಪಾಠಗಳು
ಮೋಜು-ಮಸ್ತಿಗಳು,
ಹಾರೈಸುವ ಗುರುವೃಂದದವರು
ಎಲ್ಲರೂ ನಿಮ್ಮ ಕಪ್ಪು-ಬಿಳಿಪಿನ
ನಡುವೆ ಬಂದು ಹೋಗಿಹರು. . .

ನಲ್ಲನ ಮೇಲಿರುವ ಪ್ರೀತಿ,
ಹಾಗೊಮ್ಮೆ ಹೀಗೊಮ್ಮೆ ಮೂಡುವ
ಹುಸಿ ಮಿನಿಸು, ನಸು ನಾಚಿಕೆ,
ಇವ ತೋರಲು, ತಿಳಿ ಹೇಳಲು
ಜೊತೆಗೆ ಬಂದಿದ್ದೀರಿ. . .

ಇನ್ನೂರನೆಯ ಈ ಕವನದಲ್ಲಿ
ನಿಮಗಿದೋ ನನ್ನ ಕೋಟಿ
ಕೋಟಿ ವಂದನೆಗಳು
ಹೀಗೇ ಜೊತೆಗೆ ಇರಿ ಎಂದಿಗೂ
ನನ್ನ ಭಾವನೆ ವ್ಯಕ್ತವಾಗಲಿ
ನಿಮ್ಮ ಮೂಲಕವೆ,
ಅರಿಯಲಿ ಈ ಜಗವು
ನಾನು ನೀವು ಆತ್ಮೀಯ ಸ್ನೇಹಿತರೆಂದೇ. . .

Monday, September 5, 2011

ಹೀಗಿರಬೇಕು ನನ್ನ ನಲ್ಲ

ಹೀಗೆ friends ಎಲ್ಲಾ ಒಟ್ಟಿಗೆ ಕುಳಿತಿದ್ದು ಏನೂ ಮತಾಡಲಿಕ್ಕೆ ಇರಲಿಲ್ಲ ಅಂದ್ರೆ ಬರೊ ವಿಷಯ "ನಿನ್ನ ನಲ್ಲ ಹೇಗಿರಬೇಕು?" "ಹೇಗೆ ನೋಡ್ಕೊಬೇಕು?" ಅನ್ನೋದು... ಬರಿ ಇಲ್ಲೆ ಅಲ್ಲ... ಎಲ್ಲಿ ಹೋದ್ರು ಇದೇ ಪ್ರಶ್ನೆ ಬರೊದು ಯಾವ ವಿಷಯವು ಇಲ್ಲ ಅಂದ್ರೆ... ಈ gmail, facebook, orkutನಲ್ಲು ಇವೇ ಅಂತೆ... ಇನ್ನು ಆ ಪ್ರಶ್ನೆಗೆ ಆಗ ಒಂದೆರಡು lineನಲ್ಲಿ ಹೇಳ್ತಾರೆ ಇಲ್ಲ ಅಂದ್ರೆ ಅದರ ಬಗ್ಗೆ ಇನ್ನ ಯೋಚಿಸಿಲ್ಲ (ಆದ ಹೇಳೋಕೆ ಆಗಲ್ಲ ಅಂತ ಹೀಗೆ ಹೇಳ್ತಾರೆ) ಅಂತ ಉತ್ತರ ಬರುತ್ತೆ.. ಇಷ್ಟಾದ್ರು ಕೆಲವರು ಆ ಪ್ರಶ್ನೆ ಕೇಳೋದು ನಿಲ್ಲಿಸೊದೇ ಇಲ್ಲ... ಹೀಗೆ ನನಗೂ ಯಾರದ್ರು ಕೇಳ್ಬಹುದೆನೋ..ಅದಕ್ಕೆ ನಾನು ಯೋಚಿಸಿ ಎಲ್ಲರಿಗೂ ಒಂದೊಂದು ಸರತಿ ಹೇಳಿ, ಕೆಲವೊಂದನ್ನು miss ಮಾಡೊದು ಯಾಕೆ ಅಂತ ಇಲ್ಲೆ ಒಟ್ಟಿಗೆ ತುಂಬಾ ಮುಖ್ಯವಾಗಿರೊದನ್ನ ಹೇಳ್ತೀನಿ....:P

    ಎಲ್ಲರಿಗೂ.., ಅದರಲ್ಲೂ ಹೆಣ್ಣು ಮಕ್ಕಳಿಗೆ ತಮ್ಮದೇ ಆದ ಆಸೆ, ಆಕಾಂಕ್ಷೆಗಳಿರುತ್ತದೆ. ಅದು ಯಾವ ವಿಷಯದಲ್ಲೇ ಆಗಿರಬಹುದು.. ಆ ವಿಷಯಗಳಲ್ಲಿ ಒಂದಾದುದು "ತನ್ನ ನಲ್ಲ ಹೀಗೆಲ್ಲಾ ಇರಬೇಕು" ಎಂಬುದು. ಹಾಗೇ ನನಗೂ ಕೂಡಾ ಆ "ನನ್ನ ನಲ್ಲ" ಹೀಗೆಲ್ಲಾ ಇರಬೇಕು, ಹೀಗೆ ನೋಡಿಕೊಳ್ಳಬೇಕು, ಅದು ಕೊಡಿಸಬೇಕು, ಇದು ಮಾಡ್ಬೇಕು ಹಾಗೇ ಹೀಗೆ ಅಂತ ಕೆಲವೊಂದು ಆಸೆಗಳುಂಟು.

    ಹ್ಮ್.. ಎಲ್ಲಾ ಹುಡುಗಿ ಇಷ್ಟಪಡೋ ಹಾಗೆ ನನಗೂ ಎತ್ತರದ ಹುಡುಗ ಬೇಕು. ನನಗಿಂತ ಎರಡು-ಮೂರು ಇಂಚು ಉದ್ದ ಇರಬೇಕು. ನಾ ಅವನನ್ನ ತಬ್ಬಿಕೊಂಡಾಗಲೆಲ್ಲಾ ಅವನ ಎದೆ ಬಡಿತ ಕೇಳಿಸ್ಬೇಕು. ಇನ್ನು ಅವನು ನನ್ನ ಮಗು ಥರ ನೋಡಿಕೊಳ್ಬೇಕು.(over ಆಯಿತು ಅಲ? :P ) ನಾನು ಮೊದ್ಲೇ ಒಂದ್ ಥರ ಭಾವಜೀವಿ. ಬೇಗ ಎಲ್ಲಾನು ಮನಸ್ಸಿಗಚ್ಚಿಕೊಂಡುಬಿಡ್ತೀನಿ. so ನನಗೆ ಖುಷಿಯಾದಾಗೆಲ್ಲ. ಇಲ್ಲ ದುಃಖ ಆದಾಗ ಸ್ವಲ್ಪ over ಆಗಿ react ಮಾಡ್ತೀನಿ. ಅದಕ್ಕೆ ನಾನು ಸಂತೋಷದಲ್ಲಿದ್ದಾಗ ಅವನೂ ಕೂಡಾ ನನ್ನ ಜೊತೆ ಬೆರೆತು ನನ್ನ ಖುಷಿ ಹೆಚ್ಚಿಸ್ಬೇಕು. ಇನ್ನು ನಾ ದುಃಖಿಸುತ್ತಾ, ಅಳುತ್ತಾ ಇದ್ರೆ ಕಣ್ಣೀರು ಒರೆಸಿ, ಮಗುವಿಗೆ ಸಮಾಧಾನ ಮಾಡೋ ಹಾಗೆ ಮಡ್ಬೇಕು..

    ನನ್ಗೆ ಇಷ್ಟ ಆಗೋದನ್ನೇಲ್ಲಾ ಕೊಡಿಸ್ಬೇಕು. ನನ್ನ ಲಿಸ್ಟ್ ಎಣು ದೊಡ್ಡದಲ್ಲ. ದೊಡ್ಡದ್ದೆ but costlyದಲ್ಲ. ಈ key chains, finger ring, cartoon stickers, ಮಣಿಸರ, ಬಳೆ, ಬಿಂದಿ, ರಿಬ್ಬನ್, nail polish ಹೀಗೆ ಎಲ್ಲವೂ :P  ಅದು ಬಿಟ್ರೆ ನನ್ಗೆ ತಿಂಡಿಗಳಂದ್ರೆ ತುಂಬಾ ಇಷ್ಟ.. so ನನ್ಗೆ ಇಷ್ಟ ಆಗೊ ತಿಂಡಿನೆಲ್ಲ ಅವನೇ ಮಾಡಿ ನನಗೆ ತುತ್ತು ತಿನ್ನಿಸ್ಬೇಕು. ಏನು ಬರಲಿಲ್ಲ ಅಂದ್ರು ಚಿತ್ರನ್ನ ಮಾತ್ರ must and should ಅದು ಬಿಟ್ರೆ ಬಿಸಿಬೇಳೆ ಬಾತ್, ಕಾರಟ್ ಪಲ್ಯ, ದೋಸೆ, and so on ಮತ್ತೆ ವಾರದ ಕೊನೆಯಲ್ಲಿ ಅಂವ ಸಂಜೆ ನನ್ನ ಈಚೆ ಕರೆದುಕೊಂಡು ಹೋಗಿ ಗೋಲ್ಗಪ್ಪ ಕೋಡಿಸ್ಬೇಕು...,ನಾನು ಸಾಕು ಅನ್ನೋ ತನಕ. . . ಹಾಗೆ ice cream ಕೂಡ. ಈ ice cream ವಿಷಯ ಬರೋದು ಜಾಸ್ತಿ ಮಳೆಗಾಲ ಹಾಗೂ ಚಳಿಗಾಲದಲ್ಲಿ. ಸೋನೆಮಳೆಲೇ ಆಗ್ಲಿ, ಸುಯ್ ಅಂತ ಸುರಿಯೊ ಜಡಿಮಳೇಲೇ ಆಗ್ಲಿ ನನಗೆ ice cream ಕೊಡಿಸ್ಲೇಬೇಕು. ಶೀತ ಆಗುತ್ತೆ ಅದು ಇದು ಅನ್ನೊ explanation ಇರಕೂಡದು.

    ನನ್ನ ಹುಡುಗ ನನ್ನ ತುಂಬ ತುಂಬ ತುಂಬಾ ಪ್ರೀತಿಮಾಡ್ಬೇಕು. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಮುತ್ತು ಕೊಡದೆ ಪ್ರೀತಿ ಮಾಡ್ಬೇಕು, ಮುತ್ತು ಕೊಡದೆ ಮುದ್ದು ಮಾಡ್ಬೇಕು. ಅವನಿಗೆ ಎಷ್ಟು ಸಾಧ್ಯವೋ ಅಷ್ಟೂ ಕಾಲ ನನಗಾಗೇ ಮೀಸಲಾಗಿರಬೇಕು... (selfish  ನಾನು) ನನಗೆ ಅಪ್ಪ ಅಮ್ಮ ಅಣ್ಣ ತಂಗಿ friend ಎಲ್ಲವೂ ಆಗಿರಬೇಕು. ರಾತ್ರಿಯಿಡೀ ನಾನು ಅವನು ಮಾತಾಡ್ತಾನೇ ಇರಬೇಕು. ನಾನು ಅವನ ಹೆಗಲ ಒರಗಿ ಅವನ ಅಂಗೈ ಹಿಡಿದು ಏನೇನನೋ ಗೀಚ್ಚುತ್ತಾ ಮಾತಾಡ್ತಿರಬೇಕು. ಅನಿವಾರ್ಯದಿಂದ ದೂರಾದಗಲೂ ಅಷ್ಟೆ, call ಮಾಡಿ ಅವನು ನನ್ನ ತುಂಬಾ ಪ್ರೀತಿಸ್ತಿದ್ದಾನೆ ಹಾಗೆ ನನ್ನ  miss ಮಾಡ್ಕೊತಿದ್ದಾನೆ ಅಂತ ಹೇಳ್ಬೇಕು. ಹುಡುಗೀರ ಜೊತೆ ಹಾಗಿರಲಿ ಹುಡುಗರ ಜೊತೆಯೂ ಜಾಸ್ತಿ ಮಾತಾಡ್ಬಾರ್ದು. ಅವನು friends ಜೊತೆ ಇದ್ರೆ ನನ್ನ ಕೆಲ ಕಾಲ ಮರೆತು ಬಿಡ್ತಾನಲ್ಲ ಅಂತ ನನಗೆ ಭಯ ಅಷ್ಟೆ...

    ನನಗೆ ಸ್ವಲ್ಪ ಜಾಸ್ತಿನೇ ಮುಂಗೋಪ. ಬೇಗ ಕೋಪ ಬರುತ್ತೆ. ನನ್ನ ಆ ಕೋಪದಿಂದ ಬಂದ ಮಾತನ್ನು ಅವನು ತಲೆಗಾಕಿಕೊಳ್ಳದೆ, ನನ್ನ ಆ ಮಾತಿಗೆ ನಕ್ಕು, ತಲೆಗೆ ಮೊಟಕಿ, ಬಿಗಿದಪ್ಪಿ, "ಅಯ್ಯೋ ಕಂದ" ಅಂತ ಪ್ರೀತಿಲಿ ಹೇಳಿ ನನ್ನ ಸಮಾಧಾನ ಮಾಡ್ಬೇಕು. ಬದಲಾಗಿ ಅವನಿಗೇ ಕೋಪ ಜಾಸ್ತಿ ಅಂದ್ರೆ no use....

    ಇನ್ನು ನಾವೇಲ್ಲೇ ಹೊರಗಡೆ ಹೋದ್ರು ಕೈ ಹಿಡಿದೇ ಹೋಗ್ಬೇಕು. ಹೆಚ್ಚಾಗಿ ನಮ್ಮ ಪಯಣ ಕಾಲ್ನಡಿಗೆಯಲ್ಲೇ ಇರಬೇಕು. ತುಂಬು ಹುಣ್ಣಿಮೆಯ ದಿನದಂದು ಎಷ್ತೇ ಕಷ್ಟವಾದ್ರೂ ಚಂದಿರನ ಬೇಲಕ್ಕಲ್ಲಿ ನಾವಿಬ್ರು ನಡಿಲೇ ಬೇಕು ಅವನ ಕೈ ಹಿಡಿದು...

    ಇನ್ನು ಅವನಿಗಾಗೆ ನಾ ಬರೆಯೊ ಪತ್ರ, ಕವನ ಎಲ್ಲವನ್ನೂ ಅವನು ಓದ್ಬೇಕು. bore ಆಗ್ತಿದೆ ಅಂತ ಹೇಳ್ಬಾರ್ದು... ಇಲ್ಲ ಅಂದ್ರೆ ನನ್ಗೆ ಕೋಪ ಬರುತ್ತೆ.. ಇನ್ನೊಂದು main thing ಅಂದ್ರೆ ನಾವು ಅವಗವಾಗ ಜಗಳ ಆಡ್ತಿರ್ಬೇಕು. serious ಆಗಿ ಅಲ್ಲ... "ಹುಸಿ ಕೋಪ" ಹುಸಿ ಜಗಳ" ಅಂತ್ತಾರಲ್ಲ ಹಾಗೆ....

ದಿನಾ ಕನಸ್ಸಲ್ಲಿ ಎಷ್ಟು ಹತ್ತಿರ ಇರ್ತಾನೋ ಅಷ್ಟೇ ಹತ್ತಿರವಾಗಿರಬೇಕು ಯಾವಾಗ್ಲು... "busy" ಅನ್ನೊ ಪದಾನೇ ಗೊತ್ತಿರಬಾರ್ದು. ಹೇಳಿದ್ದೀನಿ ನಾನು ತುಂಬ selfish. ನನಗೆ ಇಷ್ಟವಾದವರು ನನ್ನ ಜೊತೆಯಲ್ಲೇ ಯಾವಾಗಲು ಇರ್ಬೇಕು ಅನ್ನೊದು ನನ್ನ ಒಂದು ಸಣ್ಣ ಸ್ವರ್ಥ ಆಸೆ... ಇನ್ನು ಮಾತಿಲ್ಲದ ಸಂಜೆ ಅವನ ಎದೆಗೆ ಒರಗಿ ಅಂಗೈ ಹಿಡಿದು ಹಾಗೇ ಜಗತ್ತನ್ನೇ ಮರಿಬೇಕು, ಇನ್ನು ರಾತ್ರಿ ಮಾತಲ್ಲಿ ತುಂಟಾಟ, ಪ್ರೀತಿ, ಹುಸಿ ಕೋಪ ಎಲ್ಲಾ ಇರ್ಬೇಕು. "ನಿದ್ದೆ ಬರ್ತಿದೆ ಆಮೇಲೆ ಮಾತಾಡೋಣ" ಇವೆಲ್ಲ ಇರ್ಲೆಕೂಡದು. ರಾತ್ರಿ ಎರಡಾದ್ರು ನಾವು ಹಾಗೇ ಸುಮ್ನೇ ಏನೋ ಮಾತಾಡ್ತಾ, ಕೋಪಮಾಡ್ಕೊಳ್ತಾ, ನಗ್ತಾ, ಅಳ್ತಾ ಹಾಗೇ ರಾತ್ರಿ ಕಳಿಬೇಕು.

    "ನೀ ಅಳಬಾರದು" ಅನ್ನೊ ಹುಡುಗ ನನಗೆ ಇಷ್ಟವಾಗಲ್ಲ.. ನಾ ಅಳೋದು, ಬೇಜಾರು ಮಾಡ್ಕೊಳೊದು, ಕೋಪ ಮಾಡ್ಕೊಳೋದು ಎಲ್ಲ ಅವನ ಪ್ರೀತಿಗಾಗೇ.. ಹೀಗೆಲ್ಲ ಇರ್ಬೇಕಾದ್ರೆ ಅವನು ಹೇಗೆಲ್ಲ ಸಮಾಧಾನ ಮಾಡ್ತಾನೆ ಅನ್ನೊದು ನಾನ್ ನೋಡ್ಬೇಕು ನೋಡಿ ಖುಷಿಪಡ್ಬೇಕು.

ಹ್ಮ್... ಇಷ್ಟೇಲ್ಲಾ Qualities ನಿಮ್ಮಲ್ಲಿ ಇದೆ ಅಂದ್ರೆ... ಅರ್ಜಿ ಹಾಕ್ರಿ ನೋಡುವ.... :P