ಹುರಿ ಬಿಸಿಲೆ ಬೆಳದಿಂಗಲಾಯಿತು ನನ್ನ ಪಾಲಿಗೆ
ಅಳುತಿದೆ ಮನವು ಅದ ಅಪ್ಪಲು ಆಗದೆ
ಪ್ರೀತಿ ಎಂಬ ಕನಸ ಉಯ್ಯಾಲೆಯ ತೂಗಿ-ತೂಗಿ
ಮುಳುಗಿದೆ ಕಣ್ಣು ಕಣ್ಣಿರಿನ ಅಲೆಗಳಲಿ
ನೋಡು ಬಾಯಾರುತಿದೆ ಪ್ರೀತಿ
ಕಾರಣ ತರುತಿದೆ ನೋವೂ ಜಾಸ್ತಿ
ನೆನಪ ನೆಪದಲಿ ಕರುಗುತಿದೆ ಮನಸಿಲ್ಲಿ
ಮನದ ಪುಟದಿ ಬರೆದ ಕವಿತೆಯ ಮರೆಯಲಾಗದೆ ನಾನಿಲ್ಲಿ
ಕೊಂದೆ ಉಸಿರಲಿದ್ದ ಹಕ್ಕಿ ಗೂಡ
ಹಾಡುತಿರಲಿಲ್ಲವೆ ಅವು ಒಲವಿನ ಹಾಡ
ವಿಸ್ತಾರವಾದ ಈ ಜಗದಲಿ ಪ್ರೀತಿಯ ಉಳಿಸಿಕೊಳ್ಳಲಾದೆ ನಾನಿಲ್ಲಿ
ಆದರೂ ಖುಷಿ ಇದೆ ಈ ನೋವಿನಲಿ
ಏಕೆಂದರೆ ತಿಳಿದಿರುವೇನು ನಾ ಮತ್ತೆ ನಗುವೆನೆಂದು ಬಾಳಿನಲಿ.
full feeling poem...
ReplyDelete:)
ReplyDeleteಇದು ಪ್ರೀತಿಯ ನೋವಿನ ಬದುಕು ಅನಿಸುತ್ತದೆ. ಆದರೆ ಜೀವನ ಒಂದು ನಾಟಕ ರಂಗ ಇದು ನಿಮ್ಮ ಜೀವನದಲ್ಲಿ ಈ ಪ್ರೀತಿಯ ನೋವು ಬೇಗ ಮರಿಯಲ್ಲ.
ReplyDelete