Saturday, February 12, 2011

ನೆನಪು

    ಮಾತು  ಮರೆತು  ಹೋಗುತ್ತದೆ . ಆದರೆ  ಈ  ನೆನಪೆಂಬುದು  ನೆನಪಾಗಿ  ನೆನಪೆಂಬ  ಬುತ್ತಿಯನ್ನು  ನೇಯ್ದು  ನಮ್ಮಲ್ಲಿಯೇ,  ನಮ್ಮ ಮನಸ್ಸಲ್ಲಿಯೇ  ಅದನ್ನು  ಬಿಟ್ಟು  ಹೋಗುತ್ತದೆ.  ಸದಾ  ಕಾಲ  ನಮ್ಮೊಂದಿಗೆ  ಇದ್ದು  ಬಿಡುತ್ತದೆ. ಅದ  ಮತ್ತೆ  ಮತ್ತೆ  ನೆನೆಯುತ್ತ  ನಮ್ಮ ಬದುಕಿನ  ಒಂದು  ಭಾಗವಾಗಿ  ಹೊತ್ತು  ತಿರುಗಲು  ಮುಂದಾಗುತ್ತೇವೆ.  ಹಾಗೆ  ಮತ್ತೆ  ಹೊಸ  ನೆನಪುಗಳನ್ನು  ಹೂವಗಿಸಿಕೊಂಡು  ಆ ಬುಟ್ಟಿಯಲ್ಲಿ  ಇಡಲು  ಇಚ್ಚಿಸುತ್ತೇವೆ . ಆ  ಹೂ  ಬುತ್ತಿಯನ್ನು  ಹೂವುಗಳಿಂದ  ಅಲಂಕರಿಸಿ  ಬದುಕೆಂಬ  ಅರಮನೆಯಲಿ,  ಸಂತೋಷವೆಂಬ  ಮಳೆಹನಿ  ತಾಕುವ  ಕಿಟಕಿಯ  ಪಕ್ಕದಲ್ಲಿ  ಇತ್ತು,  ಅದನ್ನು  ನೋಡಿ  ನೆನಪನ್ನು  ಮೆಲುಕು  ಹಾಕುತ್ತ,  ನಮ್ಮ  ಯಾಂತ್ರಿಕ  ಬದುಕಿನ  ಮಧ್ಯೆ  ಬಿಡುವು  ಮಾಡಿಕೊಂಡು  ನೆನಪೆಂಬ  ಶಿಖರವನ್ನೇರಿ  ಇಳಿದು  ಬರಲು  ಮನಸ್ಸಾಗದೆ  ಅಲ್ಲಿಯೇ  ನೆಲಸಿ  ಬಿಡಲು  ಮೊದಲಾಗುತ್ತೇವೆ.  ದುಃಖಕರ  ಘಟನೆಯ  ನೆನೆದು  ಅದಕ್ಕೆ  ನಕ್ಕಿ,  ಸಂತೋಷಕರವಾದ  ನೆನಪಿಗೆ  ನೊಂದು  ನಲಿಯುತ್ತೇವೆ.  ಹಾಗೆಯೆ  ಮತ್ತಿನ್ಯಾವುದೋ  ನೆನಪು  ನಮ್ಮ  ಕಾಡದಿರಲಿ;  ಅದು ಕೇವಲ  ದುಃಖದ  ಸಂಗತಿ;  ಅದು ಅ ರಿವಿಲ್ಲದೆ  ನಡೆದಂತಹ  ಘಟನೆ  ಎಂದು   ಅದರಿಂದ  ದೂರ  ಸರಿಯಲು  ಬಯಸುತ್ತೇವೆ.  ನಲಿವಿನದೋ  ಅಥವಾ  ನೋವಿನದೋ  ನೆನಪು  ಹಿತ  ಕೊಡುವುದಾದರೆ  ಆ  ನೆನಪು  ಮತ್ತೆ  ಮತ್ತೆ  ನೆನಪಗಲೆಂದು  ಆಶಿಸುತ್ತೇವೆ.  ಬರಿಯ  ಕಹಿಯನ್ನೇ  ಕೊಡುವ  ನೆನಪುಗಳು  ಬೇಡವೆಂದು,  ಅದು  ನಮ್ಮನ್ನು  ಸುಳಿಯಬಾರದೆಂದು   ಕೇಳಿಕೊಳ್ಳುತೆವೆ  ಆದರೆ  ನೆನಪೆಂಬುದು  ನಮ್ಮನ್ನು  ಕೇಳಿಬರುತ್ತದೆಯೇ?  ಭಾವನೆಗಳು  ಹೇಳಿ-ಕೇಳಿ  ಬರುತ್ತವೆಯೇ?  ಸುಖ-ದುಃಖ? ನೋವು-ನಲಿವು?  ಯಾವುದೂ  ಕೂಡ  ನಮ್ಮ  ಅಪ್ಪ್ಪಣೆಯೊಂದಿಗೆ  ಬರುವುದಿಲ್ಲ!  ಹಾಗೆಯೆ  ಈ  ನೆನಪೆಂಬುದು  ಕೂಡ.  ಇಷ್ಟವಿಲ್ಲದಿದ್ದರೂ ಸುಮ್ಮನೆ  ಕಳ್ಳ  ನೆಪ  ಮಾಡಿಕೊಂಡು  ನಮ್ಮ  ಕಾಡಿಸುತ್ತದೆ.  ಪೀಡಿಸುತದೆ,  ನಲಿಸುತದೆ, ನೋವಿಸುತದೆ.
    ನೆನಪು  ಒಂದು  ನೆನಪಲ್ಲಿ  ನೆನಪಾಗಿ  ಉಳಿದಿರುವ  ನೆನಪಾಗಿದೆ.  ಮನಸ್ಸನ್ನದಗೊಳಿಸುವ  ನನಪು , ಭಯ  ಹುಟ್ಟಿಸುವ   ನೆನಪು, ಕಿರುನಗೆ  ತರಿಸುವ  ನೆನಪು,  ತುಸು  ಕೋಪವ  ಮೂಡಿಸುವ  ನೆನಪು. ನೆನಪು!  ಸವಿಯಾದ,  ತಿಳಿಯದ ನೆನಪು!  ಕವಿಯ  ಭಾವನೆಯಲಿ ಸಿಲುಕಿ  ಪದವಾಗಿ  ಹೊರಹೊಮ್ಮಿದ  ನೆನಪು. ಪ್ರೇಮಿಗಳ  ನಡುವೆ  ಹೂಮಳೆಯಾಗಿ  ಬಂದ  ನೆನಪು. ಸ್ನೇಹಿತರ  ಬಾಯಿಂದ  ಸಂಭ್ರಮದಿ  ಬಂದ  ಮಾತಿನ  ನೆನಪು. ಅಮ್ಮನ  ಹೃದಯದಲ್ಲಿ  ಕಂದನ  ಗೆಜ್ಜೆಯ  ನಾದದ  ಸವಿ  ನೆನಪು.  ಅಪ್ಪನ  ಎದೆಯಲಿ  ಮಗುವಿನ  ಆಟದ ನೆನಪು.  ತಂಗಿಗೆ  ಅಣ್ಣನ  ಕಿಡಿಗೇಡಿ  ಆಟದ  ನೆನಪು. ಅಣ್ಣನಿಗೆ  ತಂಗಿಯ  ಹುಡುಗಾಟದ  ನೆನಪು.  ಅಕ್ಕನಿಗೆ  ತಮ್ಮನ  ತಂಟೆ  ಪ್ರೆಶ್ನೆಯ ನೆನಪು.  ತಮ್ಮನಿಗೆ  ಅಕ್ಕನ  ಬೈಗುಳಗಳ  ನೆನಪು. ತಂಗಿಗೆ  ಅಕ್ಕನ  ಪ್ರೀತಿಯ  ನೆನಪು. ಅಕ್ಕನಿಗೆ  ತಂಗಿಯ  ಕೂಗಿನ  ನೆನಪು. ವಿಧ್ಯಾರ್ಥಿಗಳಿಗೆ  ಶಿಕ್ಷಕರ  ಬೆತ್ತದೆಟಿನ  ನೆನಪು.
    ನೆನಪು  ನೆನಪು  ನೆನಪು!!!
    ಎಲ್ಲರು  ಪ್ರೀತಿಸುವ  ನೆನಪು. ಎಲ್ಲರು  ಬಯಸುವುದು  ನೆನಪನ್ನ.  ನೆನಪ  ನೊರೆ  ಹಾಲ  ಕುಡಿದು  ಸಂತೋಷ  ಪಟ್ಟು  ಮತ್ತೆ  ಅದನ್ನು ನೆನಪನ್ನಾಗಿಸಿ  ಬಿಟ್ಟು  ನಡೆಯುವುದೇ  ಒಂದು  ಸುಂದರ  ನೆನಪು.
ಸವಿಯಾದ,  ನವಿರಾದ  ನೆನಪು
ಸುಂದರ  ಸೃಷ್ಟಿಯ  ನೆನಪು
ಕಾಲದ  ಜ್ಞಾನದ  ನೆನಪು
ಪ್ರೀತಿಯ  ಸ್ನೇಹದ  ನೆನಪು
ವಿರಸ  ಸರಸದ  ನೆನಪು
ಹೀಗೆ  ನೆನಪು  ನೆನಪು  ಎಂಬ  ಸಾಗರದಲಿ
ಮುಳುಗೆಳಲು  ಬಯಸಿತ್ತು  ಹೃದಯ
ಅಂತೆಯೇ  ಮುಳುಗಿದನೋ  ಈ  ನೆನಪಲಿ
ಆದರೆ  ಏಳಲಾಗಲಿಲ್ಲ  ನನಗಿಲ್ಲಿ.

4 comments: