ಪವಿ ಮತ್ತೆ ತನ್ನ ಊರಿಗೆ ಹಿಂದಿರುಗಿಬಿಡುವುದಾಗಿ ಅನಿಸಿತು . ಹೇಗೋ ಹೃದಯ ಗಟ್ಟಿ ಮಾಡಿಕೊಂಡಳು. ಆದರೆ ಒಳಗೆ ತಡೆಯಲಾರದಷ್ಟು ದುಃಖ. ಮೊದಲ ಪ್ರೀತಿ ಹೀಗೆ ಆಯಿತಲ್ಲ, ಇದ ಮರೆಯುವುದಾದರೂ ಹೇಗೆ? ಇಷ್ಟು ದಿನ ಪಟ್ಟಿದ್ದ ಸಂಕಟವೇ ನರಕದಂತಿತ್ತು. ಇನ್ನು ಮುಂದೆ? ಅಯ್ಯೋ ಹೇಗೆ ಈಚೆ ಬರೋದು ಈ ಪ್ರೀತಿಯಿಂದ? ಮನಸ್ಸು ಸೊರಗಿತು . ತನುವಿನಲ್ಲೇ ಆಗಲಿ ಮನದಲ್ಲೇ ಆಗಲಿ ಚೈತನ್ಯವಿರಲಿಲ್ಲ.
ಅಂತು ಮೈಸೂರಿಗೆ ಬಂದಾಯಿತು . ಸಬರ್ಬ್ ಬಸ್ ಸ್ಟ್ಯಾಂಡ್ ಇಂದ ಆಟೋ ಇಡಿದು ರೂಮ್ನತ್ತ ಹೊರಟಳು . ಈ ಸಪ್ಪೆ ಮೊರೆ ಇಟ್ಟುಕೊಂಡು ಹೇಗೆ ಹೋಗೋದು? ಸ್ವಲ್ಪವಾದರೂ ಹುಸಿನಗುವಾದರೂ ಇರಲಿ ಎಂದುಕೊಂಡು ಮುಖವಾಡದ ನಗು ಹೊತ್ತಳು. ಆಟೋ ಅವಳ ರೂಮ್ನ ಮುಂದೆ ನಿಂತಿತು . ರೂಮ್ನ ಮುಂದೆ ಮಂಜು!! ನೋಡಿ ಕಣ್ಣಲ್ಲಿ ಜೋಗ ಹರಿಯುವಂತಾಯಿತು. ಮಂಜು ಅವಳನು ಕಂಡೊಡನೆ ಓಡಿ ಹೋಗಿ ಬಿಗಿಯಾಗಿ ಅಪ್ಪಿಕೊಂಡ [ಮೊದಲ ಅಪ್ಪುಗೆ!]ಪವಿಗೆ ಹೇಗೆ ಪ್ರತಿಕ್ರಯಿಸಬೇಕೆಂದು ತಿಳಿಯಲಿಲ್ಲ.
“I missed you a lot ಕಣೆ ಗೂಬೆ . ಅಟ್ ಲೀಸ್ಟ್ ನಿನಾದ್ರು ಮಾತಾಡಿಸಬಾರದಿತ್ತ?”
“ಹ್ಮ್ ... ಸಾರೀ”
“ಅಯ್ಯೋ ಬಿಡೆ ಆಗಿದೆಲ್ಲ ಆಗೋಯ್ತು . ಅದ್ಸರಿ ಯಾಕ್ ಟೆನ್ಶನ್ ? Cheer up!!”
“ಹ್ಮ್...”
“ಯಾಕೆ ಹೀಗಿದ್ದಿಯ?”
“tired ಆಗಿದೆ ಅಲ್ವ ಅದಕ್ಕೆ”
“ಸಾಕು ಮುಚ್ಚು. ನನ್ಗೊತ್ತಗಲ್ವ? ಏನಾಯ್ತು?
“ಏನಿಲ್ಲ... lover ಸಿಕ್ಕಿದಾಳೆ ನಿನಗೆ... ಇನ್ನು ನಮ್ಮ ಜೊತೆ ಅಷ್ಟಾಗಿ ಬೇರೆಯಲ್ಲ ಅಲ್ವ ಅದಕ್ಕೆ...!”
“ಅಯ್ಯೋ ಹುಚ್ಚಿ. Friendship first ಆಮೇಲೆ love”
ಪವಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ.
“ಲೇ ನನ್ ಹುಡುಗಿ ಬಗ್ಗೆ ಕೇಳೋಲ್ವ?”
“ಹಾಂ ಹೇಳು ..ನಿನ್ ಹುಡುಗಿ ಬಗ್ಗೆ” ಮೆಲ್ಲ ಧನಿಯಲ್ಲಿ.
“ಹ್ಮ್.. . ತುಂಬಾ ಒಳ್ಳೆ ಹುಡುಗಿ . B.com ಓದ್ತಾ ಇದ್ದಾಳೆ. ಮಾತು ಸ್ವಲ್ಪ ಕಮ್ಮಿ . ನನ್ ಜೊತೆ ಮಾತ್ರ ತುಂಬಾ ಮಾತಾಡ್ತಾಳೆ. ಆಗಾಗ ಕಥೆ, ಕವನ ಬರಿತಾಳೆ. ಭಾವಗೀತೆ ಅಂದ್ರೆ ತುಂಬಾ ಇಷ್ಟ. ಭಾವನೆನೆ ಜೀವನ ಅಂದ್ಕೊಂಡಿರುವವಳು. ಸ್ವಲ್ಪ seriousness ಜಾಸ್ತಿನಿ . ಜೊತೆಗೆ sense of humor ಕೂಡ ಇದೆ ಆದ್ರೆ ನನ್ನಷ್ಟ್ ಇಲ್ಲ.., ನನ್ ಜೊತೆ ಮಾತಾಡಕ್ಕೆ ತುಂಬಾ ಇಷ್ಟ ಅವಳಿಗೆ. ನನಗು ಇಷ್ಟನೇ ಆದ್ರೆ ತೋರಿಸ್ಕೊಂಡಿಲ್ಲ.... ಹಾಂ ಅವಳು ಜಗಳಗಾತಿ ಕಣೆ . ಕಾಲ್ ಕೆರ್ಕೊಂಡ್ ಜಗಳಕ್ ಬರ್ತಾಳೆ. ಎಷ್ಟೋ ಸರ್ತಿ ಜಗಳ ಆಡಿದಿವಿ . ಈಗಲೂ ಅಷ್ಟೇ ಜಗಳ ಆಗಿತ್ತು ಸೊ ೬ months ಕಾಂಟಾಕ್ಟ್ ಇರಲಿಲ್ಲ . ಇವತ್ತು ಮಧ್ಯಾನ ಮಾತಾಡಿಸಿದೆ . ಅವಳಿಗೆ ಇನ್ನ ನಾನ್ ಪ್ರಿತ್ಸ್ತಿರೋದು ಹೇಳಿಲ್ಲ . ಹೇಗೆ ಹೇಳಿ ಅಂತ ಗೊತ್ತಾಗ್ತಾ ಇಲ್ಲ”
ಅವನು ಹೇಳ್ತಾ ಇರೋ ಹುಡುಗಿ ಯಾರು ? ಕನ್ನಡಿಯಲ್ಲಿ ನನ್ನ ನೋಡಿದಾಗೆ ಇತ್ತು . ಇವನು ನನ್ನ ಪ್ರಿತಿಸ್ತಿದಾನ? ಹೀಗೆ ಪವಿ ಮನಸ್ಸಲ್ಲಿ ಹೇಳ್ಕೋತ ಇದ್ಲು. ಅವಳಿಗೆ ತಿಳಿಯದೆ ಇರೋ ಹಾಗೆ ಅಧರದ ಮೇಲೊಂದು ಮಂದಾರ!!ಆ ಹುಡುಗಿ ಯಾರು ಅಂತ ಬೇಗ ತಿಳಿದಿಕೋ ಎಂದು ಮನಸ್ಸು ಒಂದೇ ಸಮನೆ ಹೇಳ್ತಾ ಇತ್ತು.
“ಮಂಜು, ಅವಳ ಹೆಸರೇನು?”
“ಪವಿ.. ಪವಿತ್ರ..!!”
ಪವಿಗೆ ಆಶ್ಚರ್ಯ . ಜೊತೆಗೆ ಆನಂದ.
“are you talking about me?”
“ಹೌದೆ. ನೀನೆ ನಾನ್ ಲವ್ ಮಾಡ್ತಿರೋ ಹುಡುಗಿ. ಬಿಟ್ಟಿರಕ್ಕೆ ಆಗಲ್ವೇ ನಿನ್ನ. ನೀನೆ ಹೇಳು ಹೇಗೆ ಪ್ರೊಪೋಸ್ ಮಾಡಬೇಕು ಅಂತ . ನೀನು ಒಪ್ಪಿಕೊಳ್ಳೋ ಹಾಗೇನೆ ಪ್ರೊಪೋಸ್ ಮಾಡ್ತೀನಿ. ನಿಜವಾಗ್ಲೂ!”
“are you serious? ನಿಜವಾಗ್ಲೂ ನನ್ನ ಪ್ರಿತಿಸುತಿದಿಯ?
“ಹ ಹ ಹ… ಹೋಗೆಲೇ... ನಿನ್ನಂತಹ ಬೋರ್ ಹೊಡ್ಸೋ ಹುಡ್ಗಿನ ಯಾರ್ ಲವ್ ಮಾಡ್ತಾರೆ?”
“????????”
“ಓಯ್ ಓಯ್.…!ಯಾಕೆ ಬೇಜಾರ್ ಮಾಡ್ಕೊತ್ಯ....?ಈ ರೀತಿ ನಿನ್ನ ನೋಡೋಕಾಗಲ್ವೆ.... ನೀನೆ ಕಣೆ....ನಿಜವಾಗ್ಲೂ”
“ನಾನು ಬೋರ್ ಹೊಡ್ಸೋ ಹುಡುಗಿ. ನನ್ನಂಥ ಹುಡ್ಗಿನ ಯಾರ್ ಲವ್ ಮಾಡ್ತಾರೆ ಹೇಳು?” ಅವನ ಮಾತನ್ನು ನೆಗ್ಲೆಕ್ಟ್ ಮಾಡೋ ಹಾಗೆ ಹೇಳುತ್ತಾಳೆ ಪವಿ.
“ನಾನ್ ಮಾಡ್ತಾ ಇದ್ದೀನಲ್ಲ”
“ನಿಜವಾಗ್ಲೂ?”
“ಹ್ಮ್ ಕಣೆ ನಿಜವಾಗ್ಲೂ”
“ಪ್ರಾಮಿಸ್?”
“ಹ್ಮ್ ಪ್ರಾಮಿಸ್ ಕಣೆ. ನಂಬಿಕೆ ಇಲ್ವಾ? ಬೇಕಾದ್ರೆ ನನ್ ಫ್ರೆಂಡ್ಸ್ ನ ಕೇಳು ನಿನ್ನ ಎಷ್ಟು ಮಿಸ್ ಮಾಡ್ಕೊಂಡೆ ಅಂತ ಹೇಳ್ತಾರೆ ಮತ್ತೆ ಲವ್ ಮಾಡ್ತಿರೋದನ್ನು ಕೂಡ”
“ಮತ್ತೆ ಆಗ್ಲೆ ಹೇಳ್ಬಹುದಾಗಿತ್ತಲ್ಲ ಕಾಲ್ ಮಾಡ್ದಾಗ”
“ನಿನ್ನ ಲವ್ ಮಾಡ್ತಿರೋದನ್ನ ಹೀಗೆ ಹೇಳ್ಬೇಕು ಅಂತ ಪ್ಲಾನ್ ಮಾಡಿದ್ದೆ. ನೀನೂ ನನ್ನ ಲವ್ ಮಾಡ್ತಿರುತಿಯ ಅನ್ನೋ confidence ಮೇಲೆ ಹೀಗೆ ಆಟ ಆಡದೆ ;)”
“ಹೋಗೋ ನಾನೇನ್ ನಿನ್ನ ಲವ್ ಮಾಡ್ತಿಲ್ಲ :P”
“ಅಯ್ಯೋ!!!!!! ಪವಿ ಯಾವಾಗಲೇ ಇಷ್ಟು ಚೆನ್ನಾಗಿ ಕಾಮಿಡಿ ಮಾಡೋದ್ ಕಲಿತುಕೊಂಡೆ?"
ಪವಿ ಪ್ರತಿಯುತ್ತರ ಕಣ್ಣಲಿ ಹನಿ ಬಿಂದು, ತುಟಿ ಮೇಲೆ ಕಿರು ನಗು. ಒಮ್ಮೆ ಮಂಜುನನ್ನು ಅಪ್ಪಿಕೊಂಡು
“missed you ಕಣೋ ಕಪಿ. ಇನ್ಮೇಲಾದ್ರು ಸತಾಯಿಸಬೇಡ”
“ಹ್ಮ್ ಸತಾಯಿಸದೆ ಹೇಗಿರೋದು? ನೀನಲ್ದೆ ಇನ್ಯರಿದರೆ ಸತಯಿಸೋಕೆ ?? ಓಕೆ ನೋಡೋಣ ಟೈಮ್ ಹೇಗಿರುತ್ತೆ ಅಂತ:)”
“ದೆವ್ವ...!!!!!”
“ಒಹ್ ನಿನ್ ಹೆಸರಲ್ವ? ಮರತೋಗಿತ್ತು;)”........
ಇಬ್ಬರು ನಗುತ್ತ.., ಮಾತಾಡುತ್ತ ಪಾರ್ಕ್ನ ಕಡೆ ಹೆಜ್ಜೆ ಹಾಕುತ್ತ...,
“ಮನೇಲಿ ಯಾವಾಗ ಹೇಳೋಣ್ವೋ?”
“ಲೇ ಓಡೋಗಿ ಮದ್ವೆ ಆಗೋಣ ಥ್ರಿಲ್ ಆಗಿರುತ್ತೆ”
“ಹೇಯ್ ಕತ್ತೆ ತಮಾಷೆ ಸಾಕು. ನಾನ್ ಸೀರಿಯಸ್ ಆಗಿ ಕೇಳ್ತಾ ಇದ್ರೋದು”
“ಹ್ಮ್ ಓಕೆ.. ಇಬ್ರು ಎಜುಕೇಶನ್ complete ಆಗ್ಲಿ ಕೆಲಸ ಸಿಕ್ಲಿ, ಲೈಫ್ settle ಆಗ್ಲಿ ಆಮೇಲೆ ಹೇಳೋಣ”
“ಹ್ಮ್ಮ್ಮ್ long way to go .!! ಸರಿ ಬಿಡು... ಆದ್ರೆ ನೀನು, ನಿನ್ನ ಆ flirting ಪ್ರೊಗ್ರಾಮ್ ಎಲ್ಲಾ ಬಿಟ್ಬಿಡು . ಇನ್ನು ಹುಡ್ಗೀರ್ ಜೊತೆ ಲಲ್ಲೆಹೊಡಿಯೋದು ಬೇಡ”
“ಅಯ್ಯಪ್ಪಾ!!!!!!! ಪೀಡೆ ಕಣೆ ನೀನು. ಹ್ಮ್ ಓಕೆ ... ಸರಿ ಬಿಡೋಣ. ಕಷ್ಟ ಆಗುತ್ತೆ ಬಟ್ ಓಕೆ I'll try my best :P” ಮಂಜು ಮುಂದುವರೆಸುತ್ತ.. “ಲೇ ಅಲ್ನೋಡೆ ರಚನಾ! ಇವತ್ತು ಸೂಪರ್ ಆಗಿ ಕಾಣಿಸ್ತ ಇದಾಳೆ ಅಲ್ವ!? ನಮ್ ಏರಿಯ ಬೊಂಬಾಟ್ figure! ಕಾಳಾಕ್ಕಕ್ಕೆ ಟ್ರೈ ಮಾಡ್ಬೇಕು. ಹೆಲ್ಪ್ ಮಾಡೇ :P!”
“ಥೂ...ಹೋಗಲೋ ಗಲ್ಲಿ ಹುಚ್ಚ...!!!!”
“ತಮಾಷೆಗೆ ಕಣೆ ಹೇಳಿದ್ದು. ನನ್ ಬಗ್ಗೆ ಗೊತ್ತಿಲ್ವ ನಿನಗೆ ?”
“ಹಾಂ ಗೊತ್ತು ಗೊತ್ತು...”
ಜಗತ್ತನ್ನೇ ಮರೆಸುತ್ತೆ ಪ್ರೀತಿ ಅನ್ನೋದು ನಿಜ . ಇಲು ಅದೇ ಆಯಿತು . ಪವಿ ಮಂಜು ಕೈ ಬೆಸೆದಳು, ಕಾಲ್ಗಳು ಸಮನಾಗಿ.., ನಿಧಾನವಾಗಿ, ಚಲಿಸುತಿದ್ದವು. ಪವಿ ಮಂಜುನ ಹೆಗಲನ್ನು ಒರಗಿಕೊಂಡಳು. ಸುಮ್ಮನೆ ಏನೇನೋ ಮಾತಾಡುತ್ತ, ಜಗಳವಾಡುತ್ತಾ, ಹುಸಿಕೊಪಗಳ ತೋರುತ್ತ ಸಾಗಿತ್ತು ಅವರ ಪ್ರೀತಿಯ ದಿಬ್ಬಣ...., ಆ ದಿನ ಪವಿಗೆ ಮರಿಯಲಾಗದ ದಿನವಾಯಿತು...,
******************************ದಿ ಎಂಡ್*********************
happy ending............ and my guess is correct
ReplyDelete:))))))))))))))
ReplyDeletenice story............
ReplyDeletehey thank u so much kano...:)
ReplyDeleteಕಥೆ...!!?? ತುಂಬ ಚನ್ನಾಗಿದೆ ರೀ... :)
ReplyDeletenice story ri vidya
ReplyDeleteThis comment has been removed by the author.
ReplyDeleteNice story.........
ReplyDeleteSuper
ReplyDelete