Monday, April 25, 2011

ತಿಳಿಸಲೇಳುತಿರುವೆಯ ನನ್ನ ಪ್ರೀತಿಯನು?


ಕೇಳುತಿರುವೆಯ ನನ್ನ ಪ್ರೀತಿ ಎಷ್ಟೆಂದು?
ತಿಳಿಯೆಯ ಹೇಳದೆ ನಾನೆಂದು?
ನೋಡು ಆ ನೀಲಿ ಆಕಾಶವ,
ಹೇಳುವೆಯ ಅದರ ಕೊನೆಯ?
ಇತ್ತ ನೋಡು ಈ ಕೊಳ,
ಹೇಳುವೆಯ ಅದರಲ್ಲಿರುವ
ಹನಿಗಳ ಸಂಖ್ಯೆಯ?
ಕಣ್ಣಾಯಿಸು ಆ ಕಾರ್ಮೊಡದ ಕಡೆ
ಎಣಿಸುವೆಯ ಆ ಚುಕ್ಕಿ ತಾರೆಗಳ?
ಎಲ್ಲಿರುವುದು ನೋಡು ಹಿಡಿ ಮಣ್ಣು,
ತಿಳಿಯೆಯ ಇದರಲ್ಲಿರುವಷ್ಟು ಅಣುಗಳನು?
ಹಿಡಿದಿಕೋ ಈ ಕೈಯನು
ಎಣಿಸುವೆಯ ಆ ರೇಖೆಗಳನು?
ಚಿಕ್ಕ ಸಂಗತಿಯೇ ತಿಳಿಸಲಾದೆ ನೀನು
ಅಂತಹದರಲ್ಲಿ ತಿಳಿಸಲೇಳುತಿರುವೆಯ
ನನ್ನ ಪ್ರೀತಿಯನು?
ನೋಡೆನ್ನ ಕಣ್ಣುಗಳನು ಕಾಣುವುದು ಒಲವಿನಧಾರೆ
ಬಳಸೆನ್ನ ಸನಿಹದಿ, ನೀ ತಿಳಿಯುವೆ ನಿನಗಿರುವ ರಕ್ಷಣೆ
ಹಿಡಿದು ನಡೆ ಎನ್ನ ಕೈ, ಕಾಣುವೆ ನೀ ಹರುಷವಲ್ಲಿ
ಹೀಗೆ ಬಣ್ನಿಸುತಿರಬಹುದು ಎನ್ನ ಪ್ರೀತಿಯನು
ಆದರೆ ಸಾಕಾಗುವುದಿಲ್ಲವೋ ಆ ಅಕ್ಷರ ಮಾಲೆಯ ಪದಗಳು.
ಹೇಳಲಾಗದು ಈ ಪ್ರೀತಿ, ನೋಡಲಾಗದು ಈ ಪ್ರೀತಿ
ಕೇವಲ ತಿಳಿಯಬೇಕು ಅಂತರಂಗದಲ್ಲಿರುವ
ಪ್ರೀತಿಯ ಭಾವನೆಯಲಿ ಮುಳುಗಿ.

5 comments:

  1. This comment has been removed by the author.

    ReplyDelete
  2. wow..!!! awesome!! i jus loved it..:) if anyone tel this poem infont of thier love he/she defntly fall in love with him/her..

    ReplyDelete
  3. @aswini,
    thanks.....:) if it happens wy dont u try for sayin this to your love!!!!???:P

    @kirti,
    thank u pa:)

    @vichalita,
    thank u:)

    ReplyDelete