Friday, April 29, 2011

ನಿನ್ನ ಪ್ರೀತಿಗೆ ನನ್ನ ಕಾಣಿಕೆ

ಆನಂದ ಕಂಬನಿ ತುಂಬಿದೆ ಕಣ್ಣುಗಳ
ಕೇಳಿ ಒಲವ ಮಾತುಗಳ.


ಎಲ್ಲಿ ಬಚ್ಚಿಟ್ಟುಕೊಂಡಿರುವೆ ಅಷ್ಟು ಪ್ರೀತಿ?
ತಿಳಿದು ಬದಲಾಗಿದೆ ನನ್ನ ಸ್ಥಿತಿ.

ನಿನ್ನಷ್ಟು ಯಾರೂ ಪ್ರೀತೀಸಲಾರರು ನನ್ನನು,
ಸಾವಿರ ಜನುಮಕ್ಕೂ ನಿನ್ನನ್ನೇ ಬೇಡುವೆನು.

ಆಣೆ ಹಾಕುವೆನು ಗೆಳೆಯ ಉಳಿಸಿಕೊಳ್ಳುವೆನು ಈ ಬಂಧ,
ನೀಡುವೆನು ನಿನಗೆ ಎಲ್ಲಾ ಆನಂದ.

ಜೊತೆಗಿರುವೆನು ಎಂದೆಂದಿಗೂ,
ಮಳೆಯಲಿ ಪ್ರೀತಿಯ ಕೊಡೆಯಾಗಿ,
ಚಳಿಯಲಿ ಬೆಚ್ಚನೆಯ ಅಪ್ಪುಗೆಯಾಗಿ.

ಹೇಳುತಿರುವೆನು ಕೇಳು, ನಿನ್ನೆಡೆಗಿಲ್ಲ ನನ್ನಲ್ಲಿ
ಯಾವುದೇ ಸಂಕೊಂಚ,
ನನ್ನನ್ನೇ ಅರ್ಪಿಸಿರುವೆ ನಿನಗೆ ನಾ. . .

Wednesday, April 27, 2011

ಮನವು ಒಲವ ಬಯಸಿದ್ದೇ ತಪ್ಪ?


ದೇವರೆ ಇದು ತರವೆ?
ಎನ್ನ ವಿನೋದವ ಕೊಂದೆ ಏಕೆ?
ನಿನಗೆಕಿಷ್ಟು ಕ್ರೂರ ಮನಸ್ಸು?
ನನ್ನ ಮೆಲೆ ಕೊಂಚವಾದರೂ ಕನಿಕರಿಸು.
ಉಸಿರುಸಿರಿಗು ಸಾವು,
ಪ್ರತಿ ಸಂತೋಷಕ್ಕೂ ನೋವು.
ಮನವು ಒಲವ ಬಯಸಿದ್ದೇ ತಪ್ಪ?
ಬಣ್ಣದ ಬದುಕಿಗೇಕೆ ಎಸದೆ ನೀ ಕಪ್ಪ?
ನನ್ನದೋ ನಿರುಪಮ ಪ್ರೀತಿ
ಒಪ್ಪದೆ ಹೋದನೋ ಅವನು ಯಾವ ರೀತಿ
ನಿರ್ನಾಮವಾಯಿತು ನನ್ನ ಅನುರಾಗ
ಇದುವೆ ಎನೋ ನನ್ನ ದೌರ್ಭಾಗ್ಯ?

Monday, April 25, 2011

ತಿಳಿಸಲೇಳುತಿರುವೆಯ ನನ್ನ ಪ್ರೀತಿಯನು?


ಕೇಳುತಿರುವೆಯ ನನ್ನ ಪ್ರೀತಿ ಎಷ್ಟೆಂದು?
ತಿಳಿಯೆಯ ಹೇಳದೆ ನಾನೆಂದು?
ನೋಡು ಆ ನೀಲಿ ಆಕಾಶವ,
ಹೇಳುವೆಯ ಅದರ ಕೊನೆಯ?
ಇತ್ತ ನೋಡು ಈ ಕೊಳ,
ಹೇಳುವೆಯ ಅದರಲ್ಲಿರುವ
ಹನಿಗಳ ಸಂಖ್ಯೆಯ?
ಕಣ್ಣಾಯಿಸು ಆ ಕಾರ್ಮೊಡದ ಕಡೆ
ಎಣಿಸುವೆಯ ಆ ಚುಕ್ಕಿ ತಾರೆಗಳ?
ಎಲ್ಲಿರುವುದು ನೋಡು ಹಿಡಿ ಮಣ್ಣು,
ತಿಳಿಯೆಯ ಇದರಲ್ಲಿರುವಷ್ಟು ಅಣುಗಳನು?
ಹಿಡಿದಿಕೋ ಈ ಕೈಯನು
ಎಣಿಸುವೆಯ ಆ ರೇಖೆಗಳನು?
ಚಿಕ್ಕ ಸಂಗತಿಯೇ ತಿಳಿಸಲಾದೆ ನೀನು
ಅಂತಹದರಲ್ಲಿ ತಿಳಿಸಲೇಳುತಿರುವೆಯ
ನನ್ನ ಪ್ರೀತಿಯನು?
ನೋಡೆನ್ನ ಕಣ್ಣುಗಳನು ಕಾಣುವುದು ಒಲವಿನಧಾರೆ
ಬಳಸೆನ್ನ ಸನಿಹದಿ, ನೀ ತಿಳಿಯುವೆ ನಿನಗಿರುವ ರಕ್ಷಣೆ
ಹಿಡಿದು ನಡೆ ಎನ್ನ ಕೈ, ಕಾಣುವೆ ನೀ ಹರುಷವಲ್ಲಿ
ಹೀಗೆ ಬಣ್ನಿಸುತಿರಬಹುದು ಎನ್ನ ಪ್ರೀತಿಯನು
ಆದರೆ ಸಾಕಾಗುವುದಿಲ್ಲವೋ ಆ ಅಕ್ಷರ ಮಾಲೆಯ ಪದಗಳು.
ಹೇಳಲಾಗದು ಈ ಪ್ರೀತಿ, ನೋಡಲಾಗದು ಈ ಪ್ರೀತಿ
ಕೇವಲ ತಿಳಿಯಬೇಕು ಅಂತರಂಗದಲ್ಲಿರುವ
ಪ್ರೀತಿಯ ಭಾವನೆಯಲಿ ಮುಳುಗಿ.

Saturday, April 23, 2011

ಅವನು....


ನಲ್ಲನ ನಲುವಿನ ನಗೆ ಶಶಿಯು ಬೆಳಗಿದಂತೆ,
ಅವನ ನುಡಿಯು ಮುತ್ತುಗಳುದುರಿದಂತೆ,
ಅವನ ನೋಟವು ಮನ್ಮತ ಬಾಣ ಬಿಟ್ಟಂತೆ,
ಅವನ ಧನಿಯು ಕೊಳಲಿನ ಮಧುರ ಗೀತೆಯಂತೆ
ಅವನ ಸ್ಪರ್ಶವು ತಿಳಿ ತಂಗಾಳಿಯಂತೆ
ಅವನ ಪ್ರತಿ ಮಾತು ಭಾಷೆಯಿಟ್ಟಂತೆ
ಅವನ ಒಲವು ಆಕಾಶ ಜ್ಯೋತಿಯಂತೆ
ಇವೆಲ್ಲ ಮೀರಿ ಅವನು ನನ್ನ ಪ್ರಾಣವಂತೆ.

Tuesday, April 19, 2011

ಮೊದಲ ಮಳೆಗೆ...........


ಇಳಿಹೊತ್ತಿಗೆ ಶುರುವಾಯ್ತು ಮಳೆ
ವರುಷದ ಮೊದಲ ಮಳೆ
ತುಂಬು ಚಂದ್ರನ ಬೆಳದಿಂಗಳಲಿ
ತಂಪ್ಪಾದ ತಂಗಾಳಿಯ ಜೊತೆ
ಮನವ ನೆನೆಸಲು ಬಂತು
ತುಂತುರು ಮಳೆ.
ವರುಣದೇವನ ಈ ಬರುವಿಕೆಯೇ
ಕಾಯುತ್ತಿದ್ದ ಹೂದೋಟಗಳು ನಲಿಯುತಿವೆ
ಭುವಿಯು ಘಮಿಸುತಿದೆ
ಆ ಮಣ್ಣಿನ ಸುವಾಸನೆಗೆ ಎನ್ನ
ಮನಸ್ಸು ಬಯಸುತಿದೆ ಎಂದೂ ಬಯಸದ
ಲೋಕವ;ಪ್ರೇಮ ಲೋಕ!
ಬಯಸಿದೆ ಮನ ಒಬ್ಬ ಗೆಳೆಯನನು
ತವಕಿಸುತಿದೆ ಹೃದಯವು ಪ್ರೀತಿ ಎಂಬ
ಲೋಕವ ಸುತ್ತಿ ಬರಲು!
ಬೇಕೆಂದಿದೆ ಭಾವನೆಗಳ ಪ್ರಪಂಚ,
ಎಲ್ಲಿ ಇರುವಳು ನಲ್ಲೆ ನಲ್ಲನ ಆಸರೆಯಡಿಯಲಿ,
ಪ್ರೀತಿಯ ಬೆಚ್ಚುಗೆಯಲಿ!
ಬಯಸುತಿರುವೇನು ಒಲವ ಸಿಂಚನ,
ಆಗಲಿ ಅದು ಅವನ ನನ್ನ ಮನದ ಆಲಿಂಗನ
ಕೇವಲ ಪ್ರೀತಿಯೇ ನನ್ನ ಮನದ ಸಂಜೀವನ
ಅದಕ್ಕೆ ಅರ್ಪಿಸುವೆನು ನಾ ನಮನ.

Saturday, April 16, 2011

ಕೇವಲ ಸುಳ್ಳು ಕವಿತೆ!!!!!?


ಮರದ ಮರೆಯಲಿ ಮನಸ್ಸಿದೆ ದಿನವಿಡೀ
ತಿಲಿಯದೆ ಹಾರಿಹೊಯಿತ್ತೆಲ್ಲೋ ಅಲ್ಲೆ ಇದ್ದ ಹಕ್ಕಿ.
ಒಲವಿನ ಅಣತೆ ಹುರಿದು-ಹುರಿದೆ ಸತ್ತು
ಕಪ್ಪು ತಂದಿದೆ ಸುತ್ತಲು
ಮತ್ತೆ ಬರುವುದೋ ಬೆಳಕೆಂಬ ಪ್ರೀತಿ
ಹೋಗಿ ಈ ಕತ್ತಲು.
ಹುರಿಯುವ ಬೆಂಕಿಯೋಳಗೆ ಬಿದ್ದಂತಾಗಿದೆ ಎನ್ನ
ಮನಸ್ಸು ಪ್ರಿತಿಯ ಹುಡುಕಲೋಗಿ.
ಯಾರೂ ಇಲ್ಲದಂತ್ತಾದರು ಸಂತೈಸಲು
ನನ್ನ ಮನವ ತೂಗಿ.
"ಯಾರಿಗೂ ಯಾರು ಇಲ್ಲ ಈ ಜಗದಲಿ"
ಸತ್ಯವೇ ಈ ಮಾತು ಮನವೆ? ಸತ್ಯವೆ?
ಹೌದು ಅದು ಸತ್ಯ ಎನ್ನ ಬಾಳಲಿ
ತಿಳಿದುಕೊಂಡಿರುವೆನು ಹಾಗೆಂದು ನಾನಿಲ್ಲಿ.
ವಿಶಾಲವಾದ ತಿಳಿ ನೀರಿನಂತಿದ್ದ ಮನಸ್ಸಿಗೆ
ಎಸೆದರು ನೋವೆಂಬ ಕಲ್ಲ.
ಸಂತಸದ ಹಸಿರು ನೆಲದಲಿ
ಖುಷಿಯಲ್ಲಿರುವ ಹುಡುಗಿ ನಾನಲ್ಲ.
ತೊರಲಾಗದು ಇನ್ನು ನನ್ನೀ ನಟನೆಯ ನಗು
ಆ ಅರ್ಥವಿಲ್ಲದ ಮಾತುಗಳೂ ಸಾಕು.
ಇಂತ್ತಾದರು ನನಗೆ ಆ ಹುಸಿ ಪ್ರೀತಿ ಬೇಕೆ?
ಸತ್ತೋದರು ಆ ಮುಗುಳುನಗೆ, ನನಗೆ ಈ ಬದುಕೇಕೆ?
ತಿಳಿಯದೆ ನಿಮಗೆ ನಾನೇಕಿರುವೆ ಹೀಗೆ?
ಹುಡುಕಲೋಗದಿರಿ ಇದು ಕೇವಲ ಸುಳ್ಳು ಕವಿತೆ.

Thursday, April 14, 2011

ಒಂದು ಮುಂಜಾವಿನ ದಿನ...

ಮುರಿದು ಬಿದ್ದ ಸೇತುವೆಯ ಮೇಲೆ ಕುಳಿತು
ಕಾಲುಗಳ ತಿಳಿ ನೀರಲಿ ನೆನೆಯ ಬಿಟ್ಟು
ಕಣ್ಣುಗಳ ರೆಪ್ಪೆಗಳು ಅಪ್ಪಲಾಗದಂತೆ ಮಾಡಿ
ಕಣ್ಣುಗಳಲೇ ಮಾತನಾಡಿ
ಮಾತು ಮುಗಿಯುವ ಮೊದಲೇ 
ತಂಗಾಳಿಗೆ ಮನಸೋತಿ
ನಿನ್ನ ಹೆಗಲಮೇಲೆ ತಲೆಯಿಟ್ಟು
ನಿನ್ನ ಅಂಗೈಯ ಜೊತೆ ನನ್ನ
ಬೆರಳಿಂದ ಚಿತ್ರ ಬಿಡಿಸುವ ಆಟವಾಡುತ್ತಾ
ನೀರಿಗೆ ನೆನೆಯಲು ಬಿಟ್ಟ ಕಾಲುಗಳಿಂದ
ಶಾಂತಿಯುತವಾದ ನೀರ ನಿನ್ನ ನನ್ನ 
ಹೆಸರ ಬರೆದು ಕದಡುತ
ನಡುವೆಯೇ ಹುಸಿ ಮುನಿಸಿಗೆ ಆಮಂತ್ರಣ ನೀಡುತ
ಮರುಕ್ಷಣವೇ ಕೋಪವ ತೊರೆದು ರಾಜಿಯಾಗುತ
ಮತ್ತೆ ತಿಳಿ ನೀರಿಗೆ ಕಾಲುಗಳ ನೆನೆಯಲು ಬಿಡುತ್ತಾ
ನಿನ್ನ ಪ್ರೀತಿಯ ಸವೆಯುತ ಕಳೆದ
ಆ ಮುಂಜಾವು ಅತಿ ಮಧುರ
ಓ ನನ್ನ ಇನಿಯ....


ಚಿತ್ರ ಕೃಪೆ:Harshad Uday Kamath


Wednesday, April 13, 2011

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ

ಜಲಿಯನ್ ವಾಲಾ ಬಾಗ್.....; ಹೆಸರು ಕೇಳುತಿದ್ದಂತೆ ಕಿವಿ ನೆಟ್ಟಗಾಗುತ್ತದೆ, ಕಣ್ಣು ತುಂಬುತ್ತದೆ,  ಕೋಪ ನೆತ್ತಿಗೇರುತ್ತದೆ, ರೋಷ ಉಕ್ಕಿಬರುತ್ತದೆ. ಕಾರಣ ಅಂದು ಆ ಉದ್ಯಾನವನದಲಿ ನಡೆದ ಸಾವಿರಾರು ಜನರ ಮಾರಣಹೋಮ.

೧೩ ಏಪ್ರಿಲ್ ೧೯೧೯, ಪಂಜಾಬ್ ಪ್ರಾಂತ್ಯದ ಸಿಖ್ಖರ ಪವಿತ್ರ ಕ್ಷೇತ್ರವಾದ ಅಮೃತಸರದಲ್ಲಿರುವ ಚಿನ್ನದ ದೆವಸ್ಥಾನದ ಸಮೀಪದಲ್ಲಿರುವ ಜಲಿಯನ್ ವಾಲಾ ಬಾಗ್ ಉದ್ಯಾನ ವನದಲ್ಲಿ ಸಹಸ್ರಾರು ಮಂದಿ ಬೈಸಾಖಿ/ವೈಸಾಖಿ ಹಬ್ಬವನ್ನಾಚರಿಸಲು ನೆರೆದಿದ್ದರು. ಆದರೆ, ಅಮೃತಸರದಲ್ಲಿ ಮಾರ್ಷಲ್ ನಿಯಮದಂತೆ ನಾಲ್ಕಕಿಂತ ಹೆಚ್ಚಿನ ಜನ ಗುಂಪುಗೂಡುವಂತಿರಲಿಲ್ಲ. ಆದ್ದರಿಂದ ಅಂದು ನಡೆಯಲಾಗಿದ್ದ ಆ ಹಬ್ಬದ ಆಚರಣೆಯು ನಿಯಮದ ಉಲ್ಲಂಘನೆ ಎಂಬ ಕಾರಣದಿಂದ ಅಲ್ಲಿ ಸಾವಿರಾರು ಜನರ ಕಗ್ಗೊಲೆ ನಡೆಯಿತು.


ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡೈಯರ್ ಅವನಿಂದ ಈ ಕೃತ್ಯ ನಡೆಯಿತು. ಬಂದೂಕುಗಳಿಂದ ಸಜ್ಜಿತವಾದ ಐವತ್ತು ಸೈನಿಕರುಳ್ಳ ಒಂದು ಸೇನೆಯ ಗುಂಪು ಉದ್ಯಾನವನದೊಳಗೆ ಪ್ರವೆಶಿಸಿತು. ಬರುತಿದ್ದಂತೆಯೇ ಅಲ್ಲಿ ಹಬ್ಬವನ್ನಾಚರಿಸಲು ನೆರೆದಿದ್ದ ಜನರಿಗೆ ಯಾವುದೇ ರೀತಿಯಾದ ಆದೇಶವಾಗಲಿ, ಎಚ್ಚರಿಕೆಯಾಗಲಿ ಕೊಡದೆ, ಗುಂಡು ಹಾರಿಸುವಂತೆ ಸೈನಿಕರಿಗೆ ಆಜ್ಞೆ ಮಾಡಿದನು ಜನರಲ್ ಡೈಯರ್. ಸತತವಾಗಿ ೧೦ ರಿಂದ ೧೫ ನಿಮಿಷದವರೆಗೆ ಗುಂಡಿನ ಸುರಿಮಳೆಯಾಯಿತು. ಉದ್ಯಾನವನದ ಗೋಡೆಗಳು ಎತ್ತರವಾಗಿದ್ದರಿಂದ ಹಾಗೂ ಇತರೆ ಪ್ರವೇಶದ್ವಾರಗಳು ಶಾಶ್ವತವಾಗಿ ಮುಚ್ಚಲ್ಪಡಲಾಗಿದ್ದರಿಂದ ಬೀತಿಗೊಂಡ ಜನರು, ಗೋಡೆ ಹತ್ತಿಯಾದರು ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದರು. ಇನ್ನು ಕೆಲವರು ಉದ್ಯಾನವನದಲ್ಲಿದ್ದ ಬಾವಿಯೊಳಗೆ ಹಾರಿದರು. ಅಂಕಿಅಂಶದ ಪ್ರಕಾರ, ಬಾವಿಯೊಳಗಿಂದ ನೂರಕ್ಕೂ ಹೆಚ್ಚು ಶವಗಳನ್ನು ತೆಗೆಯಲಾಗಿತ್ತು. '೩೭೯' ಬ್ರಿಟಿಷ್ ಸರ್ಕಾರವು ನೀಡಿದ್ದ ಸಾವಿಗೀಡದವರ ಸಂಖ್ಯೆಯಾಗಿತ್ತು. ಆದರೆ ಇಂಡಿಯನ್ ನಾಶನಲ್ ಕಾಂಗ್ರೆಸ್ ಅವರ ಹೇಳಿಕೆಯ ಪ್ರಕಾರ ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು ಹಾಗೂ ಸಾವಿರದ ಐದುನೂರಕ್ಕು ಹೆಚ್ಚು ಜನ ಗಾಯಗೊಂಡಿದ್ದರು. ಕರ್ಫ್ಯು ಇದ್ದ ಕಾರಣ ಎಷ್ಟೋ ಗಾಯಗೊಂಡ ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಲಿಲ್ಲ.

ಘಟನೆಯ ನಂತರ ಡೈಯರನು ಮೇಲಧಿಕಾರಿಗಳಿಗೆ, ವಿದ್ರೋಹಿ ಸೈನ್ಯವು ಎದುರಾದುದರಿಂದ ಅವರಿಗೆ ಪಾಠ ಕಲಿಸುವುದಕ್ಕಾಗಿ ಈ ರೀತಿ ಮಾಡಿದೆನೆಂದು ಹೇಳಿದನು. ಪ್ರತಿಯಾಗಿ ಅಂದಿನ ಲೆಫ್ಟಿನೆಂಟ್ ಗವರ್ನರ್ ಆದ ಓ'ಡ್ವಯರ್, 'ಈ ಘಟನೆಯನ್ನು ನಾವು ಒಪ್ಪುತ್ತೆವೆ, ಸರಿಯಾಗಿ ಪಾಠ ಕಲಿಸಿದಿರಿ' ಎಂದು ಸಂದೇಶ ಕಳುಹಿಸಿದ.
 


ನಂತರದಲ್ಲಿ, ವಿಚಾರಣೆಗಾಗಿ ಡೈಯರ್ ನನ್ನು ಹಂಟರ್ ಆಯೋಗಕ್ಕೆ ಬರುವುದಾಗಿ ಆದೇಶ ಕಳುಹಿಸಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ಡೈಯರ್, ಜಲಿಯನ್ ವಾಲ ಬಾಗ್ನಲ್ಲಿ ನಡೆಸಲು ಉದ್ದೆಶಿಸಲಾಗಿದ್ದ ಕಾರ್ಯಕ್ರಮದ ಬಗೆಗೆ ನನಗೆ ಮಧ್ಯಾನವೇ ತಿಳಿದಿತ್ತಾದರೂ, ಅದ ತಡೆಯಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಹಾಗು ತಾನು ಜಲಿಯನ್ ವಾಲಾ ಬಾಗ್ಗಿಗೆ ಗುಂಡು ಹಾರಿಸುವ ಉದ್ದೆಶದಿಂದಲೇ ತೆರಳಿದ್ದಾಗಿ ಹಾಗು ಗಾಯಗೊಂಡವರ ಆರೈಕೆ ಆಸ್ಪತ್ರೆಗಳ ಕರ್ತವ್ಯ ನನ್ನದಲ್ಲ ಎಂದು ರಾಜಾರೋಷವಾಗಿ ಹೇಳಿಕೊಂಡನು. ಇವನ ಈ ಅಮಾನುಷ ಕೃತ್ಯದಿಂದಾಗಿ ಇವನನು 'ಅಮೃತಸರದ ನಿರ್ದಯಿಪಶು' ಅಥವಾ 'The Butcher of Amritsar' ಎಂದು ಕರೆಯುತಿದ್ದರು.


ಈ ಹತ್ಯಾಕಾಂಡವು ಭಾರತದ ಸ್ವತಂತ್ರ್ಯ ಚಳುವಳಿಗೆ ವೇಗೊತ್ಕರ್ಷವಾಗಿ ಪರಿಣಮಿಸಿತು. ಈ ದುರಂತದಿಂದ ಬ್ರಿಟಿಷರು ಹಾಗೂ ಭಾರತೀಯರ ನಡುವೆ ದೊಡ್ಡ ಕಂದರ ನಿರ್ಮಾಣವಾಗಿ ವಿಶ್ವಾಸವಿಟ್ಟವರಲ್ಲೂ ಕೂಡ ನಂಬಿಕೆ ಸಡಿಲವಾಯಿತು. ಆಳುವವರ ಮತ್ತು ಪ್ರಜೆಗಳ ನಡುವೆ ವಿಶ್ವಾಸ-ಸಂಬಂಧ ಕುಸಿದು ಬಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಚಳುವಳಿಯ ರೂಪ ಬದಲಾಯಿತು. ಈ ಘಟನೆಯೇ ಕ್ರಾಂತಿಕಾರಿ 'ಶಹೀದ್ ಭಗತ್ ಸಿಂಗ್' ಅವರನು ಸ್ವತಂತ್ರ್ಯ ಹೋರಟದಲಿ ನಾನೂ ಭಾಗಿಯಾಗಬೇಕು, ಭಾರತಮಾತೆಯನು ಇಂತಹ ಪಶುಗಳಿಂದ  ರಕ್ಷಿಸಬೇಕೆಂಬ ಸ್ಫೂರ್ತಿ ತಂದಿತು. ಈ ಕೃತ್ಯದಿಂದಾಗಿಯೆ ಗಾಂಧಿ ಬ್ರಿಟಿಷರ ವಿರುದ್ಧ ನಡೆಸಿದ 'ಅಸಹಕಾರ ಸತ್ಯಾಗ್ರಹ'ಕ್ಕೆ ಹೆಚ್ಚಿನ ಜನ ಪಾಲ್ಗೊಳ್ಳುವಂತೆ ಪ್ರೇರೇಪಿಸಿತು.

ರಾಷ್ರೀಯ ಚಳುವಳಿಯ ಕಾವನ್ನು ಆರಿಸಲು ಮಾಂಟೇಗೊಚೇಮ್ಸ್ ಫರ್ಡ್ ಸುಧಾರಣೆಗಳನ್ನು ಬ್ರಿಟಿಷ್ ಸರ್ಕಾರ ಪ್ರಕಟಿಸಿತು. ಆದರೆ ಕಾಂಗ್ರೆಸ್ ಅದನ್ನು ಒಪ್ಪಿಕೊಳ್ಳಲ್ಲಿ. ಸುಧಾರಣೆಗಳು ಭಾರತೀಯರಿಗೆ ಸಮಾಧಾನ ತರಲಿಲ್ಲ.
 
ನಂತರ ಮಾರ್ಚ್ ೧೩, ೧೯೪೦, ಉಧಾಮ್ ಸಿಂಗ್ (ಅವರು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿ ಹಾಗೂ ಅಲ್ಲಿ ನಡೆದ ಕೃತ್ಯದಿಂದ ನೋವನುಭವಿಸಿದವರು) ಎಂಬ ವ್ಯಕ್ತಿ ಓ'ಡ್ವಯಾರ್ ನನ್ನು ಲಂಡನ್ನಿನ ಕ್ಯಾಕಿಸ್ಟನ್ ಹಾಲ್ನಲ್ಲಿ ಹತ್ಯೆ ಮಾಡಿದರು. ಓ'ಡ್ವಯಾರ್, ಡೈಯರ್ ನ ಕೃತ್ಯವನ್ನು ಅನುಭೋದಿಸಿದಕ್ಕಾಗಿ ಹಾಗೂ ಸ್ವತಃ ಅವನೇ ಈ ಕೃತ್ಯದ ಯೋಜನೆಗಾರನಾಗಿದ್ದನೆಂಬ ಕಾರಣದಿಂದ ಅವನನ್ನು ಹತ್ಯೆ ಮಾಡಲಾಯಿತು.
    
ವಿಚಾರಣ ವೇಳೆ ನ್ಯಾಯಾಲಯದಲಿ ಉಧಾಮ್ ಸಿಂಗ್ ಅವರು, "ನಾನು ಹೀಗೆ ಮಾಡಲು ಅವನ ಮೇಲೆ ಇದ್ದ ಹಗೆಯೇ ಕಾರಣ. ಈ ಸೇಡು ತೀರಿಸಿಕೊಳ್ಳಲು ೨೧ ವರುಷಗಳಿಂದ ಕಾಯುತಿದ್ದೆ. ಕೊನೆಗೂ ನಾನು ಯಶಸ್ವಿಯಾಗಿದ್ದೇನೆ. ನನಗೆ ಸಂತೋಷವಾಗುತಿದೆ. ನನಗೆ ಸಾಯಲು ಭಯವಿಲ್ಲ. ನನ್ನ ದೇಶಕ್ಕಾಗಿ ಮಡಿಯುತಿದ್ದೇನೆ. ನನ್ನ ದೇಶದ ಜನರು ಬ್ರಿಟೀಷರ ಆಳ್ವಿಕೆಯಡಿಯಲ್ಲಿ ನೋವನುಭವಿಸುತಿರುವುದನು ನಾನು ನೋಡಿದ್ದೇನೆ. ನನ್ನ ಕರ್ತವ್ಯ ನಾನು ಮಾಡಿದ್ದೇನೆ. ತಾಯ್ನಾಡಿಗಾಗಿ ಪ್ರಾಣತ್ಯಾಗ ಮಾಡುವುದಕ್ಕಿಂತ ಹೆಚ್ಚಿನ ಗೌರವ ನನಗೆ ಬೇರೆ ಯಾವುದರಿಂದಲೂ ಸಿಗುವುದಿಲ್ಲ" ಎಂದು ಹೇಳಿದರು.

ಉಧಾಮ್ ಸಿಂಗ್ ಅವರನ್ನು ೧೯೪೦, ಜುಲೈ ೩೧ರಂದು ಓ'ಡ್ವಯಾರ್ ನ ಹತ್ಯೆಯ ಆರೋಪದ ಮೇಲೆ ಗಲ್ಲಿಗೇರಿಸಲಾಯಿತು. ಉಧಾಮ್ ಸಿಂಗ್ ಅವರ ಕಾರ್ಯಕ್ಕೆ ಎರಡೂ ರೀತಿಯಾದ ಪ್ರತಿಕ್ರಿಯೆಗಳು ಬಂದಿದ್ದವು. ಪ್ರಶಂಸೆಯ ಜೊತೆಗೆ ಖಂಡನೆಯೂ. ಗಾಂಧಿ, ನೆಹರು ಹಾಗೂ ಮತ್ತಿತ್ತರ ಅಹಿಂಸವಾದಿಗಳು ಒಳಗೊಂಡಂತೆ, ಉಧಾಮ್ ಸಿಂಗ್ ಅವರ ಕೃತ್ಯವನ್ನು 'ವಿವೇಚನಾ ರಹಿತ' ಎಂದು ಖಂಡಿಸಿದರು.

ಆದರೆ ೧೯೫೨ರಲ್ಲಿ ನೆಹರು, "ನಮ್ಮೆಲ್ಲರನು ಸ್ವತಂತ್ರ್ಯ ಭಾರತದಲ್ಲಿ ನಲಿಯಲೆಂದು ಮೃತ್ಯು ಬಾಗಿಲನ್ನು ತಟ್ಟಿದ ಶಾಹಿದ್-ಇ-ಆಜೀಮ್ ಉಧಾಮ್ ಸಿಂಗ್ ಅವರನ್ನು ಗೌರವದಿಂದ ನಮಿಸುತ್ತೇನೆ" ಎಂದು ಪ್ರಶಂಸಿದರು!?
 

ಏನೇ ಆಗಲಿ ಇಂದಿಗೆ ಈ ಘೋರ ಕೃತ್ಯ ನಡೆದು ೯೨ ವರುಶವಾಗಿದೆ. ಸ್ವತಂತ್ರ್ಯ ಸಂಗ್ರಾಮದಲ್ಲಿ ಹೋರಡಿದ, ಹೆಸರೂ ತಿಳಿಯದ ಸ್ವತಂತ್ರ್ಯ ಹೋರಾಟಗಾರರಿಗೆ, ಇಂತಹ ದುರಂತಗಳಲಿ ಸಾವಿಗೀಡಾದ ಅಮಾಯಕರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ಅವರು ಶ್ರಮಿಸಿ ನೀಡಿರುವ ನಮ್ಮ ಈ ಸ್ವತಂತ್ರ್ಯ ದೇಶವು ಮತ್ತೆ ಇಂತಹ ಕ್ರೂರಿಗಳ ಕಾಣದಂತೆ ಕಾಪಾಡುವ ಬನ್ನಿ. . . . .

Tuesday, April 12, 2011

ವಿರಹ ಕವಿತೆ


ಇನಿಯ,
ತಾಳಲಾರೆ  ಇನ್ನು  ನಾ  ಈ  ದೂರವ 
ಬಂದು  ಬೇಗ  ಒಪ್ಪಿಕೊ  ಈ  ಪ್ರೀತಿಯ
ಇದೆ  ಬದುಕು  ಒಂದು  ಸುಡುಗಾಡಲ್ಲಿದಂತೆ
ಇದೆ  ಮನಸ್ಸು  ಕೂಡ  ಸತ್ತಂತೆ

ಅನಿಸುತಿಲ್ಲವೇ  ನಾ  ನಿನಗೆ  ಬೇಕೆಂದು?
ಬಿಟ್ಟು  ಹೋಗಲು  ನಿರ್ಧರಿಸಿರುವೆಯ  ನೀ  ಎಂದೂ?
ಬೇಡವೋ  ಈ  ವಿರಹದ  ಬೇಗೆ  ನನಗೆ
ಯಾಕುಂಟು  ನಿನಗೆ  ನನ್ನ  ಮೇಲೆ  ಈ  ಹಗೆ?

ನಗುವೆನು  ಜಗತ್ತಿಗಾಗಿ  ಹೊರಗೆ
ಮರುಗುವೇನು  ಪ್ರಿತಿಗಾಗಿ  ಒಳಗೆ
ನೋಡು  ಕಾದಿ  ಕೂತಿರುವೇನು  ನಾನು
ಬಂದು  ಮತ್ತೆ  ನೀಡು  ನಿನ್ನ ಪ್ರೀತಿಯನು

ದಿನವು  ನೊಂದು  ಅಳುವಂತೆ  ಮಾಡಿದೆ
ಆ  ನಿನ್ನ  ಪ್ರೀತಿಯ  ನೋವು
ಆದರು  ಮಾಸುವುದಿಲ್ಲ  ನಿನ್ನೆಡೆಗಿರುವ
ಈ  ಒಲವು
ಅಮರವಾಗಿರುವೆ  ನೀ  ಎನ್ನ  ಮನದಲಿ
ನನ್ನ  ಬದುಕಿರುವವರೆಗೆ
ಪ್ರಿತಿಸುವೇನು  ನಿನ್ನ  ನಾನು 
ನನ್ನೀ  ಉಸಿರಿನ  ಜೊತೆಗೆ. . .

Friday, April 8, 2011

ನನ್ನ ಮನದ ಭಾವನೆ ಎ(ಯಾ)(ಲ್ಲ)ರಿಗೂ ತಿಳಿಯದು. . .


ದೊರಕುತಿರುವುದು  ನೋಡು  ಮೆಚ್ಚುಗೆ 
ಹೊಗಳಿಕೆ  ನನ್ನ  ಕವನಗಳಿಗೆ 
ಯಾರಿಗೂ  ತಿಳಿಯಲಿಲ್ಲ  ಅದು 
ಒಲವಿನ  ಶೋಕ  ಗೀತೆ.
ಕೇವಲ  ನೋಡುವರು  ನನ್ನ  ಬರಹವ 
ಆದರೆ  ತಿಳಿಯರು  ನಾ  ಪಟ್ಟಿರುವ  ನೋವ.


Thursday, April 7, 2011

ಪಾಪಿ ಎಂಬ ಭಾವದಿಂದ....ಬದುಕಿನಲಿ ನಿರಾಶೆ...


ನೋಡತ್ತ ಮನವೆ
ನಿನ್ನ ಆಸೆ ನೆರವೆರುತಿದೆ
ಸಾವೆಂಬ ಗುರಿಯ ತಲುಪುತಿರುವೆ
ಕೆಟ್ಟ ಜಗವ ಬಿಟ್ಟು ಹೋಗಲು ಕೇವಲ
ಕೆಲವೆ ಗಳಿಗೆ ಬಾಕಿ ಇದೆ
ನಿನ್ನ ಸಭ್ಯವಿಲ್ಲದ ಕೆಲಸಗಳ
ತೊಯ್ಯಲು ಸಿಕ್ಕಿದೆ ನಿನಗೊಂದು ದಾರಿ;ಸಾವು
ಮಡಿದು ಬಿಡು.. ಚಿತೆಯಲಿ ಬೆಂದು ಬಿಡು...
ನಿನ್ನ ಪಾಪವ ತೊಳೆದು ಬಿಡು...
ಮತ್ತೆ ಹುಟ್ವುವುದಾದರೆ
ಹುಟ್ಟ ಬೇಡ ಮಾನವನಾಗಿ
ಬಾವನೆಯೆಂಬ ಮಹಾಸಾಗರದಲಿ
ಸಿಲುಕಿ ಬಿಡುವೆ.. ಸತ್ತು ಬಿಡುವೆ...
ಬೇಡವೋ ಬೇಡ...
ಈ ಮಾನವ ಜನ್ಮ ನಿನಗೆ
ಬೇಡ ಮನವೇ ಬೇಡ!!!


Tuesday, April 5, 2011

ಕಥೆ:-ಸ್ನೇಹದ ಕಡಲಲ್ಲಿ ಮೂಡಿದ ಪ್ರೀತಿಯ ಅಲೆ-3

ಪವಿ  ಮತ್ತೆ  ತನ್ನ  ಊರಿಗೆ  ಹಿಂದಿರುಗಿಬಿಡುವುದಾಗಿ  ಅನಿಸಿತು . ಹೇಗೋ  ಹೃದಯ  ಗಟ್ಟಿ  ಮಾಡಿಕೊಂಡಳು. ಆದರೆ  ಒಳಗೆ  ತಡೆಯಲಾರದಷ್ಟು  ದುಃಖ. ಮೊದಲ  ಪ್ರೀತಿ  ಹೀಗೆ  ಆಯಿತಲ್ಲ, ಇದ  ಮರೆಯುವುದಾದರೂ  ಹೇಗೆ? ಇಷ್ಟು  ದಿನ  ಪಟ್ಟಿದ್ದ  ಸಂಕಟವೇ  ನರಕದಂತಿತ್ತು. ಇನ್ನು  ಮುಂದೆ? ಅಯ್ಯೋ  ಹೇಗೆ  ಈಚೆ  ಬರೋದು  ಈ  ಪ್ರೀತಿಯಿಂದ? ಮನಸ್ಸು  ಸೊರಗಿತು . ತನುವಿನಲ್ಲೇ  ಆಗಲಿ  ಮನದಲ್ಲೇ  ಆಗಲಿ  ಚೈತನ್ಯವಿರಲಿಲ್ಲ.
 ಅಂತು  ಮೈಸೂರಿಗೆ  ಬಂದಾಯಿತು . ಸಬರ್ಬ್  ಬಸ್  ಸ್ಟ್ಯಾಂಡ್  ಇಂದ  ಆಟೋ  ಇಡಿದು  ರೂಮ್ನತ್ತ  ಹೊರಟಳು . ಈ  ಸಪ್ಪೆ  ಮೊರೆ  ಇಟ್ಟುಕೊಂಡು  ಹೇಗೆ  ಹೋಗೋದು? ಸ್ವಲ್ಪವಾದರೂ  ಹುಸಿನಗುವಾದರೂ  ಇರಲಿ  ಎಂದುಕೊಂಡು  ಮುಖವಾಡದ  ನಗು  ಹೊತ್ತಳು. ಆಟೋ  ಅವಳ  ರೂಮ್ನ  ಮುಂದೆ  ನಿಂತಿತು . ರೂಮ್ನ  ಮುಂದೆ  ಮಂಜು!! ನೋಡಿ  ಕಣ್ಣಲ್ಲಿ  ಜೋಗ  ಹರಿಯುವಂತಾಯಿತು. ಮಂಜು  ಅವಳನು  ಕಂಡೊಡನೆ  ಓಡಿ  ಹೋಗಿ  ಬಿಗಿಯಾಗಿ  ಅಪ್ಪಿಕೊಂಡ [ಮೊದಲ  ಅಪ್ಪುಗೆ!]
 ಪವಿಗೆ  ಹೇಗೆ  ಪ್ರತಿಕ್ರಯಿಸಬೇಕೆಂದು  ತಿಳಿಯಲಿಲ್ಲ.
“I missed you a lot ಕಣೆ  ಗೂಬೆ . ಅಟ್  ಲೀಸ್ಟ್   ನಿನಾದ್ರು  ಮಾತಾಡಿಸಬಾರದಿತ್ತ?”
“ಹ್ಮ್ ... ಸಾರೀ”
“ಅಯ್ಯೋ  ಬಿಡೆ  ಆಗಿದೆಲ್ಲ  ಆಗೋಯ್ತು . ಅದ್ಸರಿ  ಯಾಕ್  ಟೆನ್ಶನ್ ? Cheer  up!!”
“ಹ್ಮ್...”
“ಯಾಕೆ  ಹೀಗಿದ್ದಿಯ?”
“tired ಆಗಿದೆ  ಅಲ್ವ  ಅದಕ್ಕೆ”
“ಸಾಕು  ಮುಚ್ಚು. ನನ್ಗೊತ್ತಗಲ್ವ? ಏನಾಯ್ತು?
“ಏನಿಲ್ಲ... lover  ಸಿಕ್ಕಿದಾಳೆ  ನಿನಗೆ... ಇನ್ನು  ನಮ್ಮ  ಜೊತೆ  ಅಷ್ಟಾಗಿ  ಬೇರೆಯಲ್ಲ  ಅಲ್ವ  ಅದಕ್ಕೆ...!”
“ಅಯ್ಯೋ  ಹುಚ್ಚಿ. Friendship first ಆಮೇಲೆ  love”
ಪವಿಗೆ  ಏನು  ಹೇಳಬೇಕೆಂದು  ತಿಳಿಯಲಿಲ್ಲ.
“ಲೇ  ನನ್  ಹುಡುಗಿ  ಬಗ್ಗೆ  ಕೇಳೋಲ್ವ?”
“ಹಾಂ  ಹೇಳು ..ನಿನ್  ಹುಡುಗಿ  ಬಗ್ಗೆ” ಮೆಲ್ಲ  ಧನಿಯಲ್ಲಿ.
“ಹ್ಮ್.. . ತುಂಬಾ  ಒಳ್ಳೆ  ಹುಡುಗಿ . B.com ಓದ್ತಾ  ಇದ್ದಾಳೆ. ಮಾತು  ಸ್ವಲ್ಪ  ಕಮ್ಮಿ . ನನ್  ಜೊತೆ  ಮಾತ್ರ  ತುಂಬಾ  ಮಾತಾಡ್ತಾಳೆ. ಆಗಾಗ  ಕಥೆ, ಕವನ  ಬರಿತಾಳೆ. ಭಾವಗೀತೆ  ಅಂದ್ರೆ  ತುಂಬಾ  ಇಷ್ಟ. ಭಾವನೆನೆ  ಜೀವನ  ಅಂದ್ಕೊಂಡಿರುವವಳು. ಸ್ವಲ್ಪ  seriousness   ಜಾಸ್ತಿನಿ . ಜೊತೆಗೆ  sense of humor ಕೂಡ  ಇದೆ  ಆದ್ರೆ  ನನ್ನಷ್ಟ್  ಇಲ್ಲ.., ನನ್  ಜೊತೆ  ಮಾತಾಡಕ್ಕೆ  ತುಂಬಾ  ಇಷ್ಟ  ಅವಳಿಗೆ. ನನಗು  ಇಷ್ಟನೇ  ಆದ್ರೆ  ತೋರಿಸ್ಕೊಂಡಿಲ್ಲ.... ಹಾಂ  ಅವಳು  ಜಗಳಗಾತಿ  ಕಣೆ . ಕಾಲ್  ಕೆರ್ಕೊಂಡ್  ಜಗಳಕ್  ಬರ್ತಾಳೆ. ಎಷ್ಟೋ  ಸರ್ತಿ  ಜಗಳ  ಆಡಿದಿವಿ . ಈಗಲೂ  ಅಷ್ಟೇ  ಜಗಳ  ಆಗಿತ್ತು  ಸೊ  ೬ months  ಕಾಂಟಾಕ್ಟ್  ಇರಲಿಲ್ಲ . ಇವತ್ತು  ಮಧ್ಯಾನ  ಮಾತಾಡಿಸಿದೆ . ಅವಳಿಗೆ  ಇನ್ನ  ನಾನ್  ಪ್ರಿತ್ಸ್ತಿರೋದು  ಹೇಳಿಲ್ಲ . ಹೇಗೆ  ಹೇಳಿ  ಅಂತ  ಗೊತ್ತಾಗ್ತಾ  ಇಲ್ಲ”
ಅವನು  ಹೇಳ್ತಾ  ಇರೋ  ಹುಡುಗಿ  ಯಾರು ? ಕನ್ನಡಿಯಲ್ಲಿ  ನನ್ನ  ನೋಡಿದಾಗೆ  ಇತ್ತು . ಇವನು  ನನ್ನ  ಪ್ರಿತಿಸ್ತಿದಾನ? ಹೀಗೆ  ಪವಿ  ಮನಸ್ಸಲ್ಲಿ  ಹೇಳ್ಕೋತ  ಇದ್ಲು. ಅವಳಿಗೆ  ತಿಳಿಯದೆ  ಇರೋ  ಹಾಗೆ  ಅಧರದ  ಮೇಲೊಂದು  ಮಂದಾರ!!ಆ  ಹುಡುಗಿ  ಯಾರು  ಅಂತ  ಬೇಗ  ತಿಳಿದಿಕೋ  ಎಂದು  ಮನಸ್ಸು  ಒಂದೇ  ಸಮನೆ   ಹೇಳ್ತಾ  ಇತ್ತು.
“ಮಂಜು, ಅವಳ  ಹೆಸರೇನು?”
“ಪವಿ.. ಪವಿತ್ರ..!!”
ಪವಿಗೆ  ಆಶ್ಚರ್ಯ . ಜೊತೆಗೆ  ಆನಂದ.
“are you talking about me?”
“ಹೌದೆ. ನೀನೆ  ನಾನ್  ಲವ್  ಮಾಡ್ತಿರೋ  ಹುಡುಗಿ. ಬಿಟ್ಟಿರಕ್ಕೆ  ಆಗಲ್ವೇ  ನಿನ್ನ. ನೀನೆ  ಹೇಳು  ಹೇಗೆ  ಪ್ರೊಪೋಸ್  ಮಾಡಬೇಕು  ಅಂತ . ನೀನು  ಒಪ್ಪಿಕೊಳ್ಳೋ  ಹಾಗೇನೆ  ಪ್ರೊಪೋಸ್  ಮಾಡ್ತೀನಿ. ನಿಜವಾಗ್ಲೂ!”
“are you serious? ನಿಜವಾಗ್ಲೂ  ನನ್ನ  ಪ್ರಿತಿಸುತಿದಿಯ?
“ಹ  ಹ  ಹ… ಹೋಗೆಲೇ... ನಿನ್ನಂತಹ  ಬೋರ್  ಹೊಡ್ಸೋ  ಹುಡ್ಗಿನ  ಯಾರ್  ಲವ್ ಮಾಡ್ತಾರೆ?”
“????????”
“ಓಯ್  ಓಯ್.…!ಯಾಕೆ  ಬೇಜಾರ್  ಮಾಡ್ಕೊತ್ಯ....?ಈ  ರೀತಿ  ನಿನ್ನ  ನೋಡೋಕಾಗಲ್ವೆ.... ನೀನೆ  ಕಣೆ....ನಿಜವಾಗ್ಲೂ”
“ನಾನು  ಬೋರ್  ಹೊಡ್ಸೋ  ಹುಡುಗಿ. ನನ್ನಂಥ ಹುಡ್ಗಿನ  ಯಾರ್  ಲವ್  ಮಾಡ್ತಾರೆ  ಹೇಳು?” ಅವನ  ಮಾತನ್ನು  ನೆಗ್ಲೆಕ್ಟ್ ಮಾಡೋ  ಹಾಗೆ  ಹೇಳುತ್ತಾಳೆ  ಪವಿ.
“ನಾನ್  ಮಾಡ್ತಾ  ಇದ್ದೀನಲ್ಲ”
“ನಿಜವಾಗ್ಲೂ?”
“ಹ್ಮ್  ಕಣೆ  ನಿಜವಾಗ್ಲೂ”
“ಪ್ರಾಮಿಸ್?”
“ಹ್ಮ್  ಪ್ರಾಮಿಸ್  ಕಣೆ. ನಂಬಿಕೆ  ಇಲ್ವಾ? ಬೇಕಾದ್ರೆ  ನನ್  ಫ್ರೆಂಡ್ಸ್ ನ  ಕೇಳು  ನಿನ್ನ  ಎಷ್ಟು  ಮಿಸ್  ಮಾಡ್ಕೊಂಡೆ  ಅಂತ  ಹೇಳ್ತಾರೆ  ಮತ್ತೆ  ಲವ್  ಮಾಡ್ತಿರೋದನ್ನು  ಕೂಡ”
“ಮತ್ತೆ  ಆಗ್ಲೆ  ಹೇಳ್ಬಹುದಾಗಿತ್ತಲ್ಲ  ಕಾಲ್  ಮಾಡ್ದಾಗ”
“ನಿನ್ನ  ಲವ್  ಮಾಡ್ತಿರೋದನ್ನ  ಹೀಗೆ  ಹೇಳ್ಬೇಕು  ಅಂತ  ಪ್ಲಾನ್  ಮಾಡಿದ್ದೆ. ನೀನೂ  ನನ್ನ  ಲವ್  ಮಾಡ್ತಿರುತಿಯ  ಅನ್ನೋ  confidence ಮೇಲೆ  ಹೀಗೆ  ಆಟ  ಆಡದೆ ;)”
“ಹೋಗೋ  ನಾನೇನ್  ನಿನ್ನ  ಲವ್  ಮಾಡ್ತಿಲ್ಲ :P”
“ಅಯ್ಯೋ!!!!!! ಪವಿ  ಯಾವಾಗಲೇ  ಇಷ್ಟು  ಚೆನ್ನಾಗಿ  ಕಾಮಿಡಿ  ಮಾಡೋದ್  ಕಲಿತುಕೊಂಡೆ?"
ಪವಿ  ಪ್ರತಿಯುತ್ತರ  ಕಣ್ಣಲಿ  ಹನಿ  ಬಿಂದು, ತುಟಿ  ಮೇಲೆ  ಕಿರು  ನಗು. ಒಮ್ಮೆ  ಮಂಜುನನ್ನು  ಅಪ್ಪಿಕೊಂಡು
“missed you ಕಣೋ  ಕಪಿ. ಇನ್ಮೇಲಾದ್ರು  ಸತಾಯಿಸಬೇಡ”
“ಹ್ಮ್  ಸತಾಯಿಸದೆ  ಹೇಗಿರೋದು? ನೀನಲ್ದೆ  ಇನ್ಯರಿದರೆ ಸತಯಿಸೋಕೆ ?? ಓಕೆ  ನೋಡೋಣ  ಟೈಮ್  ಹೇಗಿರುತ್ತೆ  ಅಂತ:)”
“ದೆವ್ವ...!!!!!”
“ಒಹ್  ನಿನ್  ಹೆಸರಲ್ವ? ಮರತೋಗಿತ್ತು;)”........
ಇಬ್ಬರು  ನಗುತ್ತ..,  ಮಾತಾಡುತ್ತ  ಪಾರ್ಕ್ನ  ಕಡೆ  ಹೆಜ್ಜೆ  ಹಾಕುತ್ತ...,
“ಮನೇಲಿ  ಯಾವಾಗ  ಹೇಳೋಣ್ವೋ?”
“ಲೇ   ಓಡೋಗಿ  ಮದ್ವೆ  ಆಗೋಣ  ಥ್ರಿಲ್  ಆಗಿರುತ್ತೆ”
“ಹೇಯ್  ಕತ್ತೆ  ತಮಾಷೆ  ಸಾಕು. ನಾನ್  ಸೀರಿಯಸ್  ಆಗಿ  ಕೇಳ್ತಾ  ಇದ್ರೋದು”
“ಹ್ಮ್  ಓಕೆ.. ಇಬ್ರು  ಎಜುಕೇಶನ್  complete  ಆಗ್ಲಿ  ಕೆಲಸ  ಸಿಕ್ಲಿ, ಲೈಫ್  settle ಆಗ್ಲಿ  ಆಮೇಲೆ  ಹೇಳೋಣ”
“ಹ್ಮ್ಮ್ಮ್   long way to go .!! ಸರಿ  ಬಿಡು... ಆದ್ರೆ  ನೀನು,  ನಿನ್ನ  ಆ  flirting ಪ್ರೊಗ್ರಾಮ್  ಎಲ್ಲಾ  ಬಿಟ್ಬಿಡು . ಇನ್ನು  ಹುಡ್ಗೀರ್  ಜೊತೆ  ಲಲ್ಲೆಹೊಡಿಯೋದು  ಬೇಡ”
“ಅಯ್ಯಪ್ಪಾ!!!!!!! ಪೀಡೆ  ಕಣೆ  ನೀನು. ಹ್ಮ್  ಓಕೆ ... ಸರಿ  ಬಿಡೋಣ. ಕಷ್ಟ  ಆಗುತ್ತೆ  ಬಟ್  ಓಕೆ  I'll   try  my  best :P” ಮಂಜು  ಮುಂದುವರೆಸುತ್ತ.. “ಲೇ  ಅಲ್ನೋಡೆ  ರಚನಾ! ಇವತ್ತು  ಸೂಪರ್  ಆಗಿ  ಕಾಣಿಸ್ತ  ಇದಾಳೆ  ಅಲ್ವ!? ನಮ್  ಏರಿಯ  ಬೊಂಬಾಟ್  figure! ಕಾಳಾಕ್ಕಕ್ಕೆ  ಟ್ರೈ  ಮಾಡ್ಬೇಕು. ಹೆಲ್ಪ್  ಮಾಡೇ :P!”
“ಥೂ...ಹೋಗಲೋ  ಗಲ್ಲಿ  ಹುಚ್ಚ...!!!!”
“ತಮಾಷೆಗೆ  ಕಣೆ ಹೇಳಿದ್ದು. ನನ್  ಬಗ್ಗೆ  ಗೊತ್ತಿಲ್ವ  ನಿನಗೆ ?”
“ಹಾಂ  ಗೊತ್ತು  ಗೊತ್ತು...”
ಜಗತ್ತನ್ನೇ  ಮರೆಸುತ್ತೆ  ಪ್ರೀತಿ  ಅನ್ನೋದು  ನಿಜ . ಇಲು  ಅದೇ  ಆಯಿತು . ಪವಿ  ಮಂಜು  ಕೈ  ಬೆಸೆದಳು, ಕಾಲ್ಗಳು ಸಮನಾಗಿ.., ನಿಧಾನವಾಗಿ, ಚಲಿಸುತಿದ್ದವು. ಪವಿ  ಮಂಜುನ  ಹೆಗಲನ್ನು  ಒರಗಿಕೊಂಡಳು. ಸುಮ್ಮನೆ  ಏನೇನೋ  ಮಾತಾಡುತ್ತ,  ಜಗಳವಾಡುತ್ತಾ, ಹುಸಿಕೊಪಗಳ  ತೋರುತ್ತ  ಸಾಗಿತ್ತು  ಅವರ  ಪ್ರೀತಿಯ  ದಿಬ್ಬಣ...., ಆ  ದಿನ  ಪವಿಗೆ  ಮರಿಯಲಾಗದ  ದಿನವಾಯಿತು...,
******************************ದಿ ಎಂಡ್*********************