Thursday, September 15, 2011

ಇನ್ನೂರನೆ ಕವನ

ಜೊತೆಗೆಯೇ ಬಂದಿರುವೆ ಓ
ನಲುಮೆಯ ಶ್ವೇತ ಕಾಗದವೆ
ಒಲುಮೆಯ ಕಪ್ಪು ಶಾಯಿಯೆ,
ಧನ್ಯವಾದಗಳು ನಿಮಗೆ. . .

ಮನಸ್ಸಿನ ಭಾವನೆಗಳ ಹೋರ
ಹಾಕಲು ನೀಡಿದಿರಿ ಸಹಾಯ ಹಸ್ತ
ಸಂತೋಷವ ಹೆಚ್ಚಿಸಿರುವಿರಿ
ದುಗುಡವ ನಿಯಂತ್ರಿಸಿರುವಿರಿ
ಏನೆಂದು ಹೇಳಲಿ, ಹೇಗೆಂದು
ಕೃತಜ್ಙತೆ ಸಲ್ಲಿಸಲಿ?

ವೀರ ಯೋಧರ ಬಗೆಗೆ
ಮತ್ತಷ್ಟು ಹೆಚ್ಚಿಸಿದಿರಿ ಅಭಿಮಾನ
ತಾಯಿ ಭಾರತಾಂಬೆಗೆ ಸಲ್ಲಿಸಿಸಿರುವಿರಿ
ಭಕ್ತಿ ತುಂಬಿದ ನಮನ. . .

ಹೆತ್ತಮ್ಮನಿಗೆ ನನ್ನಲ್ಲಿ,
ಅಡಗಿ ಕುಳಿತಿರುವ ಪ್ರೀತಿಯ
ಹೊರ ಹೊಮ್ಮಿಸಿದಿರಿ
ಅವಳಿಗೆ ನಾ ಜನುಮ
ಜನುಮದ ಋಣಿಯಾಗಿರುವೆ
ಎಂಬುದ ತಿಳಿಸಲು ಸಹಕರಿಸಿದಿರಿ. . .

ಕಾಲೇಜಿನ ಆಟ ಪಾಠಗಳು
ಮೋಜು-ಮಸ್ತಿಗಳು,
ಹಾರೈಸುವ ಗುರುವೃಂದದವರು
ಎಲ್ಲರೂ ನಿಮ್ಮ ಕಪ್ಪು-ಬಿಳಿಪಿನ
ನಡುವೆ ಬಂದು ಹೋಗಿಹರು. . .

ನಲ್ಲನ ಮೇಲಿರುವ ಪ್ರೀತಿ,
ಹಾಗೊಮ್ಮೆ ಹೀಗೊಮ್ಮೆ ಮೂಡುವ
ಹುಸಿ ಮಿನಿಸು, ನಸು ನಾಚಿಕೆ,
ಇವ ತೋರಲು, ತಿಳಿ ಹೇಳಲು
ಜೊತೆಗೆ ಬಂದಿದ್ದೀರಿ. . .

ಇನ್ನೂರನೆಯ ಈ ಕವನದಲ್ಲಿ
ನಿಮಗಿದೋ ನನ್ನ ಕೋಟಿ
ಕೋಟಿ ವಂದನೆಗಳು
ಹೀಗೇ ಜೊತೆಗೆ ಇರಿ ಎಂದಿಗೂ
ನನ್ನ ಭಾವನೆ ವ್ಯಕ್ತವಾಗಲಿ
ನಿಮ್ಮ ಮೂಲಕವೆ,
ಅರಿಯಲಿ ಈ ಜಗವು
ನಾನು ನೀವು ಆತ್ಮೀಯ ಸ್ನೇಹಿತರೆಂದೇ. . .

10 comments:

  1. ಹ್ಯಾಟ್ಸಫ್ ವಿದ್ಯಾ ಸಿಸ್ಟರ‍್ ೨೦೦ ಕವನ ಆದಷ್ಟು ಬೇಗ ೨೦೦೦ ಕವನಗಳನ್ನೂ ದಾಟಲಿ..
    ನಿಮ್ಮ ಬರವಣಿಗೆ ಈಗೆ ಸಾಗಲಿ ನಿರಂತರವಾಗಿ...
    ಶುಭ ದಿನ..
    ಶುಭ ಮುಂಜಾನೆ...

    ReplyDelete
  2. ಕವನಗಳ ದ್ವಿಶತಕ ಹೊಡೆದು ನಾಟೌಟ್ ನಿ೦ತಿರುವ ವಿದ್ಯಾ, ನಿಮಗೆ ಶುಭವಾಗಲಿ. ನಿಮ್ಮ ಕವನಯಾತ್ರೆ ನಿರ೦ತರವಾಗಿರಲಿ. ಹೊಳೆನರಸಿಪುರ ಮ೦ಜುನಾಥ.

    ReplyDelete
  3. Heartly congragulations for your 200 th poem...God bless you....keep writing !!!

    ReplyDelete
  4. ವಿದ್ಯಾ

    ಕವನದ ಆಶಯ ತುಂಬಾ ಚೆನ್ನಾಗಿದೆ

    ಒಂದು ಸಣ್ಣ ಸಲಹೆ, ಕವನದಲ್ಲಿ ಕನ್ನಡದ ತಪ್ಪುಗಳು ಆದಷ್ಟು ಕಡಿಮೆ ಇರಬೇಕು

    ಎರಡನೆಯ ಪ್ಯಾರದಲ್ಲಿ ಹೋರ ಎಂದು ಬರೆದಿದ್ದೀರಿ, ಅದು ''ಹೊರ'' ಆಗಬೇಕಿದೆ

    ಹಾಗೆಯೇ ೩ ನೆ ಪ್ಯಾರಾದಲ್ಲಿ ಸಲ್ಲಿಸಿಸಿರುವಿರಿ ಎಂದು ಬರೆದಿರುವಿರಿ, ಅದು ''ಸಲ್ಲಿಸಿರುವಿರಿ'' ಎಂದಾಗಬೇಕಿತ್ತು

    ಸುಂದರ ಶೈಲಿಯ ಕವನ

    ಹೆಚ್ಚೆಚ್ಚು ಬರೆಯುತ್ತಿರಿ

    ReplyDelete
  5. Congrats for your 200th Poem... Along with Pen & Paper, you should also be thank full for Google Blogger.

    ReplyDelete
  6. @manju,
    thank u so much anna...:)

    ReplyDelete
  7. @manju,
    thank u...nanna blog'gige nimage svaagata...:)

    ReplyDelete
  8. @sagaradaache inchara,
    thank u nanna blog ge bandiddakke.... kandita mundina dinagalalli intaha tappugalu aagade iro haage nodikolteeni....mundeyu tappugalu kandare tiddi heli...:)

    ReplyDelete
  9. @sandeep.k.b,
    thank u...:) hehe ya thanks for even them. . .:)

    ReplyDelete