Saturday, March 26, 2011

ಕಥೆ:-ಸ್ನೇಹದ ಕಡಲಲ್ಲಿ ಮೂಡಿದ ಪ್ರೀತಿಯ ಅಲೆ-2

ಮಂಜುನ  ಮೇಲೆ  ಪವಿಗೆ  ಸ್ನೇಹಕ್ಕೂ  ಮೀರಿದ  ಭಾವನೆಯೊಂದು  ಚಿಗುರುತಿತ್ತು . ಆದರೆ  ಇವಳಿಗೆ  ಭಯ . ಅವನಲ್ಲಿ  ಈ  ಭಾವನೆಗಳಿಲ್ಲದಿದ್ದರೆ  ನನ್ನ  ಗತಿ  ಏನೆಂದು ? ಅವನೆಂದು  ಪ್ರೀತಿಯ  ವಿಷಯವಾಗಿ  ಮಾತಾಡಿದವನಲ್ಲ. ಅವನಲ್ಲಿ  ಪ್ರೀತಿಗೆ ಅಷ್ಟಾಗಿ  ಬೆಲೆ  ಇರಲಿಲ್ಲ. ಪ್ರೀತಿ  ಕೇವಲ  enjoymentಗಾಗಿ  ಇರುವುದು  ಎಂಬುದು  ಅವನ  ಹೇಳಿಕೆಯಾಗಿತ್ತು. ಅದು  ಅವನ  ಕಾರ್ಯಗಳಲ್ಲೂ  ಕಾಣಬಹುದಾಗಿತ್ತು. ಸುಂದರ  ಹುಡುಗಿಯರ  ಜೊತೆ  ಹಾಸ್ಯ  ಮಾಡಿಕೊಂಡು  ಮಾತಾಡೋದು, flirt  ಮಾಡೋದು  ಕೂಡ  ಅವನ  ಹವ್ಯಾಸಗಳಲ್ಲಿ  ಒಂದು  ಎಂದು  ಇವಳಿಗೆ  ತಿಳಿದಿತ್ತು . ಎಷ್ಟೇ  ಆದರೂ  ಅವನು  ನನ್ನ  ಜೊತೆ  ಯಾವದನ್ನು  ಮುಚ್ಚಿಟ್ಟಿಲ್ಲ. ಹುಡುಗಿಯರು  ಚೆನ್ನಾಗಿ  joke ಮಾಡ್ಕೊಂಡು , ತರ್ಲೆ  ಮಾಡ್ಕೊಂಡು  ಇರುವ  ಹುಡುಗರ  ಜೋತೆ  ಮಾತಾಡ್ತಾರೆ  ಹೊರತು  bore ಮಾಡಿಸೋರ  ಜೋತೆ  ಮಾತಾಡಲ್ಲ  ಅದಕ್ಕೆ  ನಾನು  ಹಾಗೆ  ಮಾಡೋದು  ಎಂದು  ತುಂಬಾ  frank ಆಗೇ  ಹೇಳ್ಕೋತ  ಇದ್ದ . ಆದರೆ   ಇವಳ   ಜೊತೆ  ಎಂದೂ  flirt ಮಾಡೋ  ಉದ್ದೇಶ  ಅವನಿಗೆ  ಇರಲಿಲ್ಲ . ಅವನು  ಬೇರೆ  ಅವರ  ಜೊತೆ  ಬೇರೆ  ಥರ  ಇದ್ದರೂ  ನನ್ನ  ಜೊತೆ ಅವನು  ಅವನಾಗೇ  ಇರುತ್ತಾನೆ; ಇದು  ಅವಳಿಗೆ  ಇಡಿಸಿತ್ತು. ಇಷ್ಟು  ಪ್ರೀತಿ ಇದ್ದರೂ ಪವಿ  ಅವನಲ್ಲಿ  ತನ್ನ  ಪ್ರೀತಿಯನ್ನು   ತಿಳಿಸಿರಲಿಲ್ಲ . ಆದರೆ  ಹೃದಯದಲ್ಲಿ  ಆ  ಒಲವಿನ  ಚಿಗುರಿಗೆ  ನೀರೆರೆಯುತ್ತ ಪೋಷಿಸುತಿದ್ದಳು.

ಆದರೆ  ವಿಧಿಯಾಟವೇ  ಬೇರೆ . ಯಾವುದೊ  ಒಂದು  ಸಣ್ಣ  ವಿಷಯಕ್ಕಾಗಿ  ಮುನಿಸಾಗಿತ್ತು.  ಮುನಿಸು  ಜಗಳವಾಗಿ  ಅವರ  ಮಧ್ಯೆ  contact ತಪ್ಪಿ  ಹೋಯಿತು. ಒಬ್ಬರನ್ನೊಬ್ಬರು  ನೋಡಿದರು  ಯಾರೋ  ಅಪರಿಚಿತರೆನ್ನುವ  ಹಾಗೆ  ಇರುತಿದ್ದರು . ಆದರೆ  ಪವಿಗೆ  ಮನಸ್ಸಲ್ಲೇ  ಬೇಗೆ . ತನ್ನ  ಪ್ರೀತಿಯನ್ನು  ಬಚ್ಚಿಡಲು  ಆಗದೆ , ಹೇಳಲು  ಆಗದೆ  ಕಡಲ  ದಡದ  ಮೇಲೆ  ಬಿದ್ದ  ಮೀನಿನ  ಹಾಗೆ  ಚಡಪಡಿಸುತಿದ್ದಳು . ಎಷ್ಟೋ  ಸರತಿ  ಅವನ  ಜೊತೆ  ಮಾತಾಡಲು , ಕ್ಷಮೆಯಾಚಲು  ಪ್ರಯತ್ನಿಸಿದಳಾದರು , ಮಂಜು  ಅವಳನ್ನು  ಕಾಣುತಿದ್ದಂತೆಯೇ  ಆ  ಜಾಗವನ್ನು  ಕಾಲಿ  ಮಾಡಿಬಿಡುತಿದ್ದ. ಇವಳಲಿ  ಇದ್ದ  ಸ್ವಾಭಿಮಾನ  ಎಚ್ಚರಕೊಂಡಿತು . ಅವಳು  ಮತ್ತೆ  ಅವನನ್ನು  ತಾನಾಗಿಯೇ  ಮಾತಾಡಿಸುವುದು  ಬೇಡ  ಎಂದು  ತಿರ್ಮಾನಿಸಿದಳು . ಹಾಗೆಯೆ  ಅವಳು  ಮುಂದೆಂದು  ಅವನನ್ನು  ಮಾತನಾಡಿಸುವ  ಪ್ರಯತ್ನ  ಮಾಡಲೇ  ಇಲ್ಲ .

ಆದರೆ  ಮಂಜುವಿನ  ನೆನಪು  ಮಾತ್ರ  ಅವಳಿಗೆ  ದಿನವಿಡೀ  ಕಾಡುತಿತ್ತು . ಬದುಕಿನಲ್ಲಿ  ಅಮ್ಮನನ್ನು  ಬಿಟ್ಟು  ಹೆಚ್ಚಾಗಿ  ಮಾತನಾಡಿರುವುದು , ಕಾಲ  ಕಳೆದಿರುವುದು  ಅವನ  ಜೊತೆಗೆಯೇ . ಅವನನ್ನು  ಮರೆಯಲು  ಅವಳಿಗೆ  ಸಾಧ್ಯವೇ  ಆಗುತಿರಲಿಲ್ಲ . ಅವನ  ನೆನಪೇ  ಅವಳಿಗೆ  ಬದುಕಾಗಿ  ಹೋಗಿತು . ತಾನು  ಎಲ್ಲಿಯು  ಆಸಕ್ತಿ  ತೋರಿಸುತಿರಲಿಲ್ಲ . ಓದು  ಕೂಡ  ಕೊಂಚ  ಕಡಿಮೆಯಾಯಿತು . ಮೊದಲನೇ  ವರ್ಷದಲಿ  ತೆಗೆದಷ್ಟು  ಉತ್ತಮ  ಪಲಿತಾಂಶವಿರಲಿಲ್ಲ . ಒಬ್ಬಳೇ  ಸುಮ್ನೆ  ಕೂತುಬಿಡುತಿದ್ದಳು . ಒಮ್ಮೊಮ್ಮೆ  depress ಆಗುತಿದ್ದಳು . ಒಬ್ಬಳೇ  ರೂಮ್ನಲ್ಲಿ  ಕೂತು  ಜೋರಾಗಿ  ಅಳುತಿದ್ದಳು .

ಬಸ್  suddenಆಗಿ  ಬ್ರೇಕ್  ಹಾಕಿತು . ಮುಂದೆ  ನೋಡಿದರೆ  ದೊಡ್ಡ  ಜಾಮ್!!! ಯಾವುದೊ  ಒಂದು  ದೊಡ್ಡ  ಮರ  ಬಿದ್ದು  ಹೋಗಿತ್ತು . ಅದನ್ನು  ಸರಿಸಲು  ಇನ್ನು  ಸಮಯ  ಹಿಡಿಯುತ್ತದೆ  ಎಂದು  ಹೇಳಿದರು . ಸುತ್ತ  ಹಸಿರು, ಸೋನೆ  ಮಳೆ, ಮೋಡದ  ಮರೆಯಿಂದ  ಇಣುಕಿ  ನೋಡುವ  ಸೂರ್ಯ, ಹಕ್ಕಿಗಳ  ಇಂಚರ..., ಇಷ್ಟು  ಸಾಕಲ್ಲವೇ  ಸಮಯ  ಕಳೆಯಲು? ಪವಿಗೂ  ತನ್ನ  ಮನಸ್ಸು  relax ಆಗಬೇಕು  ಎಂದು  ಅನಿಸಿತು . ಆದ  ಕರಣ  ಬಸ್ಸಿಂದ  ಕೆಳಗಿಳಿದಳು . ಸುತ್ತ  ಮುತ್ತ  ಕಣ್ಣಾಯಿಸಿ  ಪ್ರಕೃತಿಯ  ಸೌಂದರ್ಯವನ್ನು  ಸವಿಯುತಿದ್ದಳು . ತನ್ನ  ಪ್ರಿಯತಮನ  ಬೆರಳುಗಳ  ಜೊತೆ  ತನ್ನ  ಬೆರಳುಗಳ  ಬೆಸೆದು  ಹೆಗಲ  ಮೇಲೆ  ತಲೆ  ಇಟ್ಟು  ನಡೆಯುತಿದ್ದ  ಹುಡುಗಿಯರನ್ನು  ಕಂಡು  ಅವಳ  ಹೊಟ್ಟೆಯಲ್ಲಿ  ಹುಳಿ  ಹಿಂಡಿದ  ಹಾಗೆ  ಅನಿಸಿತು . ನಾನು  ಕೂಡ  ಹೀಗೆ  ಮಂಜು  ಜೊತೆ  ಹೋಗುತಿದ್ದಾರೆ  ಎಷ್ಟು  ಚೆನ್ನ  ಎಂದು  ಅನಿಸಿತು . ಹೌದು . ಆ  climate ಹಾಗಿತ್ತು . ಮಳೆ, ತಂಪಾದ  ಗಾಳಿ, ಹಕ್ಕಿ  ಹಾಡು, ಒಂಟಿತನ  can make any girl to sing “ನನಗು  ಒಬ್ಬ  ಗೆಳೆಯ  ಬೇಕು”


ಇಷ್ಟರ  ನಡುವೆ  ಆ  ಗುಡ್ಡ  ಪ್ರದೇಶದಲ್ಲಿ  network ಸಿಕ್ಕಿದ್ದು  ಅದೃಷ್ಟ  ಎಂದರೆ  ತಪ್ಪಾಗಲಾರದು . Network ಸಿಕ್ಕಿದ್ದು  ಹಾಗೆ  ಒಂಟಿ  ಅಂತ  ಅನಿಸುತಿದ್ದರಿಂದ  ಪವಿ  ತನ್ನ  ಬೆಸ್ಟ್  ಫ್ರೆಂಡ್  ದೀಪಾಗೆ  ಕಾಲ್  ಮಾಡಿದಳು.
“ಹೇಗಿದ್ದೀಯ??ಊಟ  ಆಯ್ತಾ?”
“ಯಾವಾಗಲೇ  ಹೋದೆ? ನಂಗೆ  ತಿಳಿಸಲೇ  ಇಲ್ಲ?ಮನೆ  ತಲುಪಿದ್ಯ?”
“ಇನ್ನ  ಇಲ್ವೆ  ಮರಬಿದ್ದು  ಹೋಗಿದೆ  ಇನ್ನ  ಟೈಮ್  ಆಗುತ್ತೆ”
ಹೀಗೆ  ಮಾತು  ಮುಂದುವರೆದಿತ್ತು . ದೀಪ  ಏನೋ  ಮರೆತದನು  ನೆನಪಿಸಿಕೊಂಡು....,

“ಲೇ  ಯಾರೇ  ಮಂಜು ? ನಿನ್ನ  ಕೇಳ್ತಾ  ಇದ್ದ . ಇವತ್ತು  ಬೆಳಗೆ  ಸುಮಾರ್  ೧೧ ಗಂಟೆಗೆ  ನಿನ್ನ  ನೋಡೋಣ  ಅಂತ  ನಿನ್  ರೂಂ  ಹತ್ರ  ಬಂದಿದ್ದೆ . ನಿಮ್  owner ಹೇಳಿದ್ರು  ನೀನು  ಊರಿಗೆ  ಹೋಗಿದ್ದೀಯ  ಅಂತ . ಈಚೆ  ಬಂದಾಗ  ಅವನು  ಅಲ್ಲೇ  ಇದ್ದ . ನಿಮ್  owner ಮಾತು  ಕೆಳಿಸ್ಕೊಂಡಿದ್ದ  ಅನಿಸುತ್ತೆ , ಪವಿ  ಊರಿಗೆ  ಹೋಗಿದಾಳ ? ಯಾವಾಗ  ಬರ್ತಾಳೆ ? ಹೇಗಿದ್ದಾಳೆ? sudden ಆಗಿ  ಯಾಕ್  ಹೋದಳು? Exams ಎಲ್ಲ  ಆಯ್ತಾ ? ಹಾಗೆ  ಹೀಗೆ  ಅಂತ  ಪ್ರಶ್ನೆ  ಮೇಲೆ  ಪ್ರಶ್ನೆ  ಕೇಳ್ತಿದ್ದ .  ನಾನು, ನಂಗು  ಗೊತ್ತಿಲ್ಲ  inform ಮಾಡಿರಲಿಲ್ಲ , ಈಗಲೇ ನನಗು  ಗೊತ್ತಾಗಿದ್ದು  ಅಂತ  ಹೇಳ್ದೆ .ಆಮೇಲೆ  ಅವನು  ನಿಂಗೆ  ಕಾಲ್  ಮಾಡ್ತಿದ್ದ  ಅನಿಸುತ್ತೆ, ಫೋನ್  ಮಾಡ್ತಿದೀನಿ  ಸಿಗ್ತಾ  ಇಲ್ಲ  ಅಂತ  ಹೇಳ್ತಿದ್ನೆ” ದೀಪ ಒಂದೇ  ಸಮನೆ  ಹೇಳಿದಳು.
ಪವಿಗೆ  ಆಶ್ಚರ್ಯ . ಅರಿವಿಲ್ಲದೆ  ತುಟಿಯ  ಮೇಲೆ  ಹುವಿನಂತಹ  ನಗೆ .
“ಯಾರೇ  ಅವನು?ಚೆನ್ನಾಗಿ  ಮಾತಾಡ್ತಾನೆ!”
ಹ್ಮ್   ಎಲ್ಲಾ  ಹುಡ್ಗಿರು  ಇದ್ನೆ  ಹೇಳೋದು  ಅವನಿಗೆ!!!
“ನನ್  ಫ್ರೆಂಡ್  ಕಣೆ . ಮಂಜು  ಅಂತ”
“ನನಗು  ಗೊತ್ತಮ್ಮ  ಅವನ  ಹೆಸರು . ನಾನ್  ಕೇಳಿದ್ದು  ಏನಾದ್ರು  special ಇದಿಯ  ಅಂತ . ಅವನು  ಆ  ರೀತಿ  ಕೇಳ್ತಾ  ಇದ್ದಿದ್ದನ್ನ  ನೋಡಿದ್ರೆ  something ಇದೆ  ಅಂತ  ಅನಿಸುತ್ತೆ!?”

“ಇಲ್ವೆ . ಹಾಗೇನು   ಇಲ್ಲ ”
“ಇದನ್ನ  ನಾನು  ನಂಬಬೇಕ? ಹಾಗೇನು  ಇಲ್ಲ  ಅಂತ  ನಿನೆಳೋ  ರೀತಿಲೇ  ಗೊತ್ತಾಗುತ್ತೆ  ಬಿಡು”
ಪವಿ  ಮುಗುಳ್ನಕ್ಕಳಷ್ಟೇ.
“ಲೇ  don’t mind  ಕೆಲಸ  ಇದೆ . ಸ್ವಲ್ಪ  busy ಇದೀನಿ  bye”
“OK carry on. Bye take care”

ದೀಪ  ಹೇಳಿದನ್ನು  ಕೇಳಿ  ಪವಿಗೆ  ಆ  ಚಂದ್ರನೇ  ಕೈಗೆ  ಸಿಕ್ಕಂತಾಯಿತು . ಅವಳ  ಮನಸ್ಸು  ರೆಕ್ಕೆ  ಕೂಡಿ  ಸಂತೋಷದಲ್ಲಿ  ಹಾರಿ  ಹೋಯಿತು . ಕಾಲ್ಗಳು  ನಿಂತಲ್ಲಿ  ನಿಲ್ಲು  ಅಂದರೆ  ಕೇಳುತಿರಲಿಲ್ಲ . ನೋವೆಲ್ಲ  ತೊರೆದು  ಕುಣಿಯಬೇಕು  ಎಂದು  ಅನಿಸುತಿತ್ತು . ಅಷ್ಟರಲ್ಲಿ  ಮರವನ್ನು  ಸರಿಸಲಾಗಿತ್ತು . ಒಂದೊಂದೇ  ಗಾಡಿಗಳು  ಸರಿಯುತಿದ್ದವು . ಪವಿ  ಹೋಗಿ  ಬಸ್  ಒಳಗೆ  ಕೂತಳು . ಈಗ  ಮೋರೆಯಲ್ಲಿ  ಏನೋ  ಚೈತನ್ಯ . ಯಾವುದೊ  ಸಂತೋಷ . ಮನಸ್ಸೊಳಗೆ  ಬೆಚ್ಚಗೆ  ಮುಸುಕು  ಹಾಕಿಕೊಂಡು  ಮಲಗಿದ್ದ  ನಗು  ಎದ್ದಿತ್ತು.

ಮಂಜು  ಏಕೆ  ನನ್  ರೂಂ  ಹತ್ರ  ಬಂದಿದ್ದ ? ಅಷ್ಟು  ಕೇರ್  ಇಂದ  ದೀಪ  ಹತ್ರ  ನನ್  ಬಗ್ಗೆ  ಯಾಕೆ  ಕೇಳ್ದ? ನಂಗೆ  ಅಷ್ಟು  ಸರ್ತಿ  ಯಾಕ್  ಕಾಲ್  ಮಾಡಿದ್ದ ? ಇಷ್ಟು  ದಿವಸಗಳಾದಮೇಲೆ  ನನ್  ಜೊತೆ  ಮಾತಾಡಬೇಕು  ಅಂತ  ಯಾಕೆ  ಅನಿಸ್ತು? ಅವನಿಗೂ  ನನ್  ಮೇಲೆ  ಪ್ರೀತಿ  ಏನಾದ್ರೂ? ಹೀಗೆ  ಅವಳ  ಮನಸ್ಸಲ್ಲಿ  ಪ್ರಶ್ನೆಗಳು  ಮೂಡುತಿದ್ದವು . ಇನ್ನೊಂದು  ಕಡೆ  ಅದೇ  ಮನಸ್ಸು  negativeಆಗಿ  ಯೋಚಿಸುತಿತ್ತು . ಹೀಗೆ  ಜಗಳ  ಆದ್ಮೇಲೆ  ಕೆಲವೊಂದು  ಸಲ  ಅವನೇ  ಬಂದು  ಮಾತಾಡಿಸ್ತಾನೆ. ಇಲ್ಲ  ಯಾವ್ದಾದ್ರು  ಹೆಲ್ಪ್  ಬೇಕಂದ್ರೆ  ಬರ್ತಾನೆ . ಪ್ರೀತಿ  ಗೀತಿ  ಏನು  ಇರಲ್ಲ  ಅಂತ ಹೇಳ್ತಾ ಇತ್ತು . ಅವನು  ಕೇವಲ  ಹೆಲ್ಪ್ಗೋಸ್ಕರ  ಮಾತಾಡಿಸಕ್ಕೆ  ಬಂದಿದ್ನ  ಅಂತ  ಯೋಚಿಸುತ್ತ  ಬೇಸರವಾಯ್ತು  ಅವಳಿಗೆ . ಆದರು  ಹೇಗೋ  ಅವನೇ  ನನ್ನ  ಹುಡ್ಕೊಂಡು  ಬಂದಿದ್ನಲ್ಲ  ಅನ್ನೋ  ಖುಷಿ.

ಹೀಗೆ  ಪವಿ  ಆ  ಖುಷಿ  ಇನ್ದಲೋ , ಸಮಾಧಾನದಿಂದಲೋ  ಮನೆಗೆ  ಒಳ್ಳೆ  mood ಇಂದಾನೆ  ಹೋದಳು . ಸಂಜೆ  5-5:30 ಸಮಯ . ಫ್ರೆಶ್  ಆದಳು. ಅವರದು  joint family. ಸುಮಾರು  ೬ ಗಂಟೆಗೆ  ಎಲ್ಲರ  ಜೊತೆ  ಹರಟುತ್ತ  ಕುಳಿತಳು . ಎಲ್ಲರಿಗು  ಒಂದೇ  ಆಶ್ಚರ್ಯ  ‘ಏನಪ್ಪಾ  ನಮ್  ಪವಿ  ಇಷ್ಟೊಂದು  ಮಾತಾಡ್ತಿದಾಳೆ, ಇಷ್ಟೊತ್ತು  ಎಲ್ಲರ  ಜೊತೆ  ಹಾಸ್ಯ  ಮಾಡ್ಕೊಂಡು  ಹರಟೆ  ಹೊಡಿತಾ  ಇದಾಳೆ ’ ಅಂತ . ಏನೇ  ಹೀಗೆ  ಅಂತ  ಕೇಳಿದ್ದಕ್ಕೆ, ಇನ್ಮೇಲೆ  ಹೀಗೆ  ಅಂತ  ಹೇಳಿ  ತುಂಟ  ನಗೆ  ಬಿರ್ತಾಳೆ. ‘ಏನೋ  ಹೀಗೆ  ಇರು. ಚೆನ್ನಾಗಿದೆ. ನಿನ್  ಈ  ಚೇಂಜ್ ಗೆ  ಕಾರಣ  ಆಗಿರೋರ್ಗೆ  ಒಂದು  ದೊಡ್ಡ  ಥ್ಯಾಂಕ್ಸ್’ ಅವಳ  cousins  ಎಲ್ಲಾ  ಒಟ್ಟಾಗಿ  ಹೇಳ್ತಾರೆ . ಮಾತಾಡ್ತಾ  ಮಾತಾಡ್ತಾ  ಯಾರಗೂ  ಟೈಮ್  ಆಗಿದ್ದೆ  ಗೊತ್ತಾಗ್ಲಿಲ್ಲ . ರಾತ್ರಿ  ಸುಮಾರು  ೧೦:೩೦ಕ್ಕೆ  ಊಟ  ಮಾಡಿ  ಮತ್ತೆ  ಹರಟೆ  ಶುರು!! ಆಮೇಲೆ  ಮಧ್ಯ  ರಾತ್ರಿ  ೧ಗಂಟೆಗೆ  ನಿದ್ದೆ!!

ಇತ್ತ  ಮೈಸೂರಿನಲ್ಲಿ  ಮಂಜು  ಪವಿಗೆ  ಕಾಲ್  ಮಾಡ್ತಾನೆ  ಇದ್ದಾನೆ . ಆದ್ರೆ  no use . ಅವಳಿದಿದ್ದು  ಒಂದು  ಸಣ್ಣ  ಊರಲ್ಲಿ . ನೆಟ್ವರ್ಕ್  ಸಿಗೋದು  ತುಂಬಾ  ಕಷ್ಟವಾಗಿತ್ತು.


ಮರು ದಿನ ಪವಿ  ತನ್ನ  ಬಾಲ್ಯದಲ್ಲಿ  ಓದಿದ್ದ  ಶಾಲೆಗೆ  ಒಮ್ಮೆ  ಬೇಟಿ  ಕೊಟ್ಟಿ , ಅಲ್ಲಿ  ಮಕ್ಕಳ  ಜೊತೆ  ತಾನು  ಮುಗುವಾಗಿ  ಆಟವಾಡಿದಳು . ಪಕ್ಕದ  ತೋಟದ  ಮನೆಯ  ಕವಿತಾ , ಗೌಡ್ರು  ಮಗ  ಸತೀಶ , ಹಳೆ  ಬಿದಿ  ಶಿಲ್ಪ , ಮೀಸೆ  ತಮ್ಮಯ್ಯನ  ಮಗ  ಪುಟ್ಟು  ಎಲ್ಲಾ  ಸೆರೆ  ಮದುವೆ  ಆಟ  ಆಡಿದ್ದು  ನೆನೆಪಿಗೆ  ಬಂತು . ಅವಳ  ಗೆಳತಿಯರಿಗೆಲ್ಲ  ಆಗಲೇ  ಮದುವೆ  ಆಗಿ  ಗಂಡರ  ಮನೆಗೆ  ಹೋಗಿದ್ದರು . ಸಿಕ್ಕಿದ್ದು  ಕೇವಲ  ಪುಟ್ಟು  ಒಬ್ಬನೇ . ಅವನ  ಜೊತೆ  ಒಂದಿಷ್ಟೊತ್ತು  ತಮ್ಮ  ಬಾಲ್ಯದ  ಬಗ್ಗೆ  ಮಾತಾಡಿದಳು .

ಹೀಗೆ  ಪವಿಗೆ  ತನ್ನ  ಸಂಭಂದಿಕರ  ಜೊತೆ , ಸ್ನೇಹಿತರ  ಜೊತೆ  ಕಾಲ  ಕಳೆದು  ಹೇಗೆ  ನಾಲ್ಕು  ದಿನಗಳು  ಕಳಿಯಿತು  ಅನ್ನೋದೇ   ತಿಳಿಲಿಲ್ಲ .

ಏನೋ  ಮೈಸೂರು , ಮೈಸೂರಿನ  ಫ್ರೆಂಡ್ಸ್  ಎಲ್ಲಾ  ಕೈ  ಬೀಸಿ ಕರಿತಿದ್ದಾರೆನೋ  ಅನ್ನೋ  ಹಾಗೆ  ಭಾಸವಾಯಿತು. ಅಂತು  ಮೈಸೂರಿಗೆ  ಹೊರಡೋ  ದಿನ  ಬಂದೆ  ಬಿಡ್ತು . ಅವಳಮ್ಮ  ಅವಳಿಗೆ  ಸಂಡಿಗೆ , ಹಪ್ಪಳ , ಉಪ್ಪಿನ  ಕಾಯಿ  ಅದು  ಇದು, ಇದು  ಅದು  ಅಂತ  ಪ್ಯಾಕ್  ಮಾಡಿ  ಕೊಟ್ರು . ಅವಳ  cousins  ಎಲ್ಲಾ  'ಮುಂದಿನ  ಸರ್ತಿ  ಬರುವಾಗಲೂ  ಇದೆ  ರೀತಿ  ಇರೆ  ಮಾರಾಯ್ತಿ'  ಅಂತ  ಹೇಳಿದ್ರು.

ಬೆಳಗೆ  ೯ಕ್ಕೆ  ಬಸ್ಸೇರಿದಳು . ಹೋದ  ತಕ್ಷಣ  ಮಂಜುವನ್ನೇ  ಕಾಣಬಹುದೇನೋ, ಅವನು  ನನ್ನ  ರೂಮ್ನ  ಹತ್ರ  ಕಾಯುತ್ತ  ಇರುತಾನೇನೋ . ಹೀಗೆ  ಉಹೆಗಳ  ಸುರಿಮಳೆ!! ಗುಡ್ಡ  ಪ್ರದೇಶಗಳ  ಬಿಟ್ಟು  ಪಟ್ಟನಗಳ  ಕಡೆ  ಮುಖ  ಮಾಡಿತು  ಬಸ್. ಆಗ  ದೊರೆಯಿತು  ನೋಡಿ  ‘ನೆಟ್ವರ್ಕ್’!!

ಒಂದೆರಡು  ನಿಮಿಷಗಳಾದ  ಮೇಲೆ  ಅವಳ  ಮೊಬೈಲ್ಗೆ ಒಂದು  ಮೆಸೇಜ್  ಬಂದಿತು . ಮೆಸೇಜ್  ಟ್ಯೂನ್  ಕೇಳಿಸಿದಾಗ  ಮೊಬೈಲ್  ಅನ್ನು  ತನ್ನ  wallet ಇಂದ  ತೆಗೆದು  ಓದಲು  ಮುಂದಾದಳು . ಅವಳು  ಅಂದುಕೊಂಡ  ಹಾಗೆ  ಅದು  ಮಂಜು  ಕಳಿಸಿದ  ಮೆಸೇಜ್  ಆಗಿತ್ತು . “missing you. ನೆಟ್ವರ್ಕ್  ಸಿಕ್ಕಿದ  ತಕ್ಷಣ  ಕಾಲ್  ಮಾಡು” ಅಂತ  ಇತ್ತು . ಕಾಲ್  ಏನೋ  ಮಾಡಬೇಕು  ಅಂತ  ಅನಿಸ್ತು  ಅವಳಿಗೆ,  ಆದರೆ  ಅವನೇ  ಮಾಡ್ಲಿ  ಇಷ್ಟೊಂದು  ಸತಾಯಿಸಿದಾನಲ್ಲ  ಅಂತ  ಹೇಳ್ಕೊಂಡು  ಸುಮ್ಮನಾದಳು . ಹೀಗೆ  ಮಾಡಲೋ  ಬೇಡವೋ  ಅಂತ  ಇರುವಾಗ  ಮಂಜುಯಿಂದ  ಕಾಲ್  ಬಂತು . ನೋಡಿದ  ಇವಳಿಗೆ  ಸಂತೋಷ  ಎಲ್ಲೇ  ಮೀರಿತ್ತು .

“ಹೇಗಿದ್ದಿಯೇ? ಎಷ್ಟು  ದಿವಸ  ಆಯಿತು  ಮಾತಾಡಿ? ಏನು?ಊರಿಗೆ  ಹೋಗಿಬಿಟ್ಟಿದಿಯ? ಅಲ್ವೇ  ಇಷ್ಟು  ದಿವ್ಸ  ನನ್ನ  ಜೊತೆ  ಮಾತಾಡಬೇಕು  ಅಂತ  ಅನಿಸಲೇ  ಇಲ್ವಾ  ನಿಂಗೆ??
ಪವಿ  ಏನು  ಮಾತಾಡಲಿಲ್ಲ
“ಹಲೋ.….ಮಾತಾಡೆ”
“ಇಷ್ಟೊಂದು  ಪ್ರಶ್ನೆ  ಕೇಳಿದ್ರೆ  ಯಾವುದಕ್ಕೆ  ಅಂತ  ಉತ್ತರ  ಕೊಡಲಿ?”ಹುಸಿ  ಕೋಪದಿಂದ.
“ಹ್ಮ್ ಎಷ್ಟೋ  ದಿವಸ  ಆಯ್ತಲ್ಲ  ಮಾತಾಡಿ  ಅದಕ್ಕೆ  ಇಷ್ಟೊಂದ್  ಪ್ರಶ್ನೆಗಳು:) ಸೊ  ಹೇಗಿದಿಯೇ?
“ಚೆನ್ನಗಿದಿನೋ. ನೀನು?”
“ಚೆನ್ನಾಗಿಲ್ವೆ...ಏನು  ಸರಿ  ಇಲ್ಲ . ನೀನಿಲ್ದೆ  ಎಲ್ಲಾ  ಖಾಲಿ-ಖಾಲಿ. ಬೇಗ  ಬಂದುಬಿಡೆ  ಮಾತಾಡೋಣ”
“ಹ್ಮ್  ಯಾಕೋ  ಏನು  ಸರಿ  ಇಲ್ಲ? ಆರೋಗ್ಯವಾಗಿ ಇದ್ದೀಯ ತಾನೇ? I’m on my way ಕಣೋ . ಇನ್ನೊಂದು  ಗಂಟೇಲಿ  ಅಲ್ಲಿರುತ್ತೇನೆ"
“ಹ್ಮ್  ಬೇಗ  ಬಾರೆ . ನಿನ್ನಿಂದ  ಒಂದ್ ಹೆಲ್ಪ್  ಬೇಕು .
ಮನಸ್ಸು  ಹೇಳ್ದಂಗೆ  ಇವನು  ಕೇವಲ  ಹೆಲ್ಪ್ಗಾಗಿ  ನನ್ನ  ಮಾತಾಡಿಸುತ್ತ  ಇದಾನೆ !? ಬೇರೆ  ಯಾವ  ಭಾವನೆನು  ಇಲ್ವಾ  ಇವನಿಗೆ??ಛೆ! ಆದ್ರೆ  ನನ್ನಿಂದ  ಏನ್  ಹೆಲ್ಪ್  ಬೇಕು  ಇವನಿಗೆ  ಎಂದುಕೊಳ್ಳುತ್ತ...,
“ಏನ್  ಹೆಲ್ಪ್  ಬೇಕೋ??”
“ಬಾ  ಹೇಳ್ತೀನಿ”
“ಏನು  ಅಂತ  ಹೇಳು . ಹೇಗೆ  ಹೆಲ್ಪ್  ಮಾಡೋದು  ಅಂತ  ಥಿಂಕ್  ಮಾಡ್ತಿರ್ತೀನಿ ;)”
“ಹ್ಮ್ಮ್ಮ್ …I’m in love ಕಣೆ . ಆ  ಹುಡುಗಿ  ಸ್ವಲ್ಪ  ನಿನ್  ಥರ . ಸೊ  ಹೇಗೆ  ಅವಳಿಗೆ  ಪ್ರೊಪೋಸ್  ಮಾಡಿದ್ರೆ  ಒಪ್ಕೊತಾಳೆ  ಅನ್ನೋದರ ಬಗ್ಗೆ  ನಿನ್  ಹತ್ರ  ಐಡಿಯಾ  ಕೇಳೋಣ  ಅಂತ”

ಪವಿ  ಮನಸ್ಸಿನಲ್ಲಿ  ಅಲೆಗಳ  ಆರ್ಭಟ . ಮಿಂಚು  ಸಿಡಿಲಿನ  ಒಡನಾಟ . ಏನೋ  ಸಂಕಟ . ಆ  ಹುಡುಗಿ  ನಿನ್  ಥರ  ಅನ್ನೋ  ಬದ್ಲು  ನೀನೆ  ಅಂತ  ಹೇಳಿದಿದ್ರೆ? ಕಣ್ಣಂಚು  ಒದ್ದೆಯಾಯಿತು . ಗಂಟಲು  ಒಣಗಿತು . ಮಾತು  ಹೊರಬರದಂತಾಯಿತು.

“ಹಲೋ.. ಏನೇ  ಶಾಕ್  ಆದ್ಯ ? ನಂಗು  ಇದು  ಪ್ರೀತಿ  ಅಂತ  ಗೊತ್ತಾದಾಗ  ಫುಲ್  ಶಾಕ್!!! ಅದರಲ್ಲೂ  ಅವಳನ್ನ  ಅಂತ  ಗೊತ್ತಾದಾಗ  ಡಬಲ್  ಶಾಕ್. ಅವಳಿಗೂ  ಪ್ರೀತಿ  ಇರಲಿ  ಅಂತ  ಬೇಡ್ಕೊತ  ಇದಿನೆ. ನೀನು  ಬೇಡ್ಕೋ... ಮತ್ತೆ  ಹೇಗೆ  ಪ್ರೊಪೋಸ್  ಮಾಡ್ಲಿ  ಅಂತ ಹೇಳು ಓಕೆ?”
ಪವಿಗೆ  ಏನು  ಹೇಳಬೇಕು  ಅಂತ  ತಿಳಿಯಲಿಲ್ಲ .
“ಹ್ಮ್  ಸರಿ  will get you later bye”
“ಹ್ಮ್  OK take care. ಬೇಗ  ಬಂದ್ಬಿಡು  with nice idea”
ಅತ್ತ  ಮಂಜು  ಸಡಗರದ  ಸಾಗರದಲ್ಲಿ  ತೆಲಾಡುತಿದ್ದ. ಇತ್ತ  ಪವಿ  ದುಃಖದ  ಕಡಲಲಿ  ಮುಳುಗುತಿದ್ದಳು..


ಮುಂದುವರೆಯುತ್ತದೆ....

6 comments:

  1. ಮಂಜು ಲವ್ ಮಾಡ್ತಿದಿನಿ ಅಂತ ಹೇಳುತ್ತಿರುವ ಹುಡಗಿ ಪಲ್ಲವಿನೆ ತಾನೆ?

    ReplyDelete
  2. ayooo small confustion ayitu.... hogali bidu manju love madtirova hudagi pavithrane tane?

    ReplyDelete
  3. just wait...last part baaki ide ashte...innod post odu tiliyutte:)

    ReplyDelete