Saturday, March 19, 2011

ಕಥೆ:-ಸ್ನೇಹದ ಕಡಲಲ್ಲಿ ಮೂಡಿದ ಪ್ರೀತಿಯ ಅಲೆ

ಧಾರಾಕಾರವಾಗಿ  ಮಳೆ  ಸುರಿದ  ಕಾರಣ  ಅಂದು  ಮೈಸೂರಿನ  ಸಬರ್ಬ್  ಬಸ್  ಸ್ಟ್ಯಾಂಡ್  ಸ್ವಲ್ಪ  ಜಾಸ್ತಿಯೇ  ಹದಗೆಟ್ಟಿತ್ತು. ಎಲ್ಲಿ  ನೋಡಿದರಲ್ಲಿ  ಜನ, ವಾಹನಗಳ  ಮಿಂಚಿನ  ಓಟ ಮಧ್ಯೆ  ಮಳೆರಾಯನ  ಆರ್ಭಟ, ಧುಳೆದ್ದ  ಪ್ರದೇಶ. ಯಾರಲ್ಲಿಯೂ  ಶಾಂತಿ  ಚಿತ್ತವಿಲ್ಲ . ಅಂದು  ಮೈಸೂರು  ಮಾಲಿನ್ಯಕ್ಕೆ  ಇನ್ನೊಂದು  ಹೆಸರಾಗಿ  ಬಿಟ್ಟಿತ್ತು . ಇಂತಹ  ಜನ ಜನ್ದುಳಿಯಲ್ಲೂ  ಪವಿ  ಒಂಟಿತನದ  ಬೇಗೆಯಲಿದ್ದಳು…
 
ಪವಿ  ಮಲೆನಾಡ  ಹೆಣ್ಣು  ಮಗಳು . ಶಿವಮೊಗ್ಗ  ಜಿಲ್ಲೆಯ  ಒಂದು  ಚಿಕ್ಕ  ಹಳ್ಳಿ  ಅವಳ  ಹುಟ್ಟೂರು . ‘ಮಾತು  ಬೆಳ್ಳಿ  ಮೌನ  ಬಂಗಾರ’ ಇದು  ಅವಳ  ಪೋಲಿಸಿ ಆಗಿತ್ತು. ಹೆಚ್ಚಾಗಿ  ಅಗತ್ಯವಿಲ್ಲದೆ  ಮಾತನಾಡುವ  ಹುಡುಗಿಯಲ್ಲ . ಇನ್ನು  ಹೊಸಬರ  ಜೊತೆ  ಬೆರೆಯುವುದು  ತುಂಬಾ  ಕಡಿಮೆ . ಯಾರಾದರು  ಹತ್ತಿರದವರೋ  ಇಲ್ಲ  ಇಷ್ಟವದವರೋ  ಸಿಕ್ಕರೆ  ಕೆಲ  ಕಾಲ  ಹರಟುತಾಳಷ್ಟೇ. ಇಲ್ಲದಿದ್ದರೆ  ಮಾತು  ಕೇಳಲು  ಚಾತಕ  ಪಕ್ಷಿಗಳಂತೆ  ಕಾಯಬೇಕು!!?

ಮಲೆನಾಡ  ಹುಡುಗಿ  ಸಾಂಸ್ಕೃತಿಕ  ನಗರಿ  ಮೈಸೂರಿಗೆ  ಓದುವ  ಸಲುವಾಗಿ  ಬಂದಿದ್ದಳು. ಚಿಕ್ಕಂದಿನಿಂದಲೂ  ಓದುವದರಲ್ಲಿ   ಮುಂದಿದ್ದಳು . ಆದ  ಕಾರಣ  ಮೈಸೂರಿನಲ್ಲಿ  ಓದುತೇನೆ  ಎಂದು  ಹೇಳಿದಾಗ  ಮನೆಯವರು  ದೂಸರಾ  ಮಾತಾಡದೆ  ಒಪ್ಪಿದರು . ಮೈಸೂರಿನ  ಒಂದು  ಹೆಸರುವಾಸಿ  ಕಾಲೇಜ್  ನಲ್ಲಿ  ಸೀಟ್ ಕೂಡ  ಸಿಕ್ಕಿತು . ಕಾಲೇಜ್ ನ  ಸಮೀಪದಲ್ಲೇ  ಒಂದು  ರೂಂ  ಕೂಡ  ಮಾಡಿಕೊಂಡಳು .
 
ನಾಲ್ಕು  ದಿನದ  ಮಟ್ಟಿಗೆ  ರಜೆ  ಸಿಕ್ಕ  ಕಾರಣ  ತನ್ನ ಹುಟ್ಟುರಿಗೆ  ಹೋಗಲು  ನಿರ್ಧರಿಸಿ  ಸಬರ್ಬ್ ಬಸ್ ಸ್ಟ್ಯಾಂಡ್ನಲ್ಲಿ  ಕೂತಿದ್ದಾಳೆ . ಧಾರಾಕಾರ  ಮಳೆ , ಜನರು  ಜಾಸ್ತಿ . ಆದರು  ಇವಳಿಗೆ  ತಾನು  ಒಂಟಿ  ಎಂಬ  ಭಾವನೆ . ಮೊದಲಿನಿಂದಲೂ  ಚಿಕ್ಕ  ಚಿಕ್ಕ  ಸಂಗತಿಗೂ  ತಲೆ  ಕೆಡಿಸಿಕೊಳ್ಳುವುದು  ಅಭ್ಯಾಸವಾಗಿ  ಬಿಟ್ಟಿತ್ತು . ತುಂಬಾ  sensitive  ಹಾಗು  sentimental . Sappy ಅಂದ್ರು  ತಪ್ಪಾಗಲಾರದು.

ಆ  ಗಜಿಬಿಜಿಯಲ್ಲೂ  ಪವಿ  ನೆನಪುಗಳಿಗೆ  ತನ್ನ  ಅರಿವಿಲ್ಲದಂತೆ  ಆಮಂತ್ರಣ  ಕೊಟ್ಟಿದ್ದಳು.
ಅಂದು  ಆದಿತ್ಯವಾರದ  ಸುಂದರ  ಸವಿ  ಸಂಜೆ . ಪವಿ,  ಹತ್ತಿರದಲ್ಲೇ  ಇದ್ದ  ಒಂದು  ಪಾರ್ಕಿಗೆ  ತನ್ನದಾವುದೋ  ಸಬ್ಜೆಕ್ಟ್ನ  ಪುಸ್ತಕವನ್ನು  ಎತ್ತಿಕೊಂಡು  ಹೊರಟಳು . ಆ  ಪಾರ್ಕಿನಲ್ಲಿ  ಎಲ್ಲ  ವಯಸ್ಸಿನವರು  ಇದ್ದರು . ಇವಳು  ತಾನು  ತಂದ  ಪುಸ್ತಕದ  ಒಂದೊಂದೇ  ಹಾಳೆಯನ್ನು  ತಿರುಗಾಕುತ್ತ  ಓದಿನಲ್ಲಿ  ಮಗ್ನಳಗಿದ್ದಳು .

“ಹಲೋ, ಯಾವುದ್ರಿ  ಬುಕ್? ಕಾದಂಬರಿನ ?ಲವ್  ಬಗ್ಗೆನ?” ಪಕ್ಕದಲ್ಲೇ  ತನ್ನ  ಸ್ನೇಹಿತರಗಾಗಿ  ಕಾದು  ಕೂತಿದ್ದ  ಮಂಜು  ಬೋರ್  ಅನಿಸಿದ  ಕಾರಣ  ಇವಳ  ಜೊತೆ  ಮಾತಿಗಿಳಿದ .

“ಇಲ್ಲ . ಇದು  ನನ್ನ  b.com accounts book” ಮನಸ್ಸಿಲ್ಲದಾ  ಮನಸ್ಸಿನಿಂದ  ಪವಿ  ಉತ್ತರಿಸಿದಳು .

“ನೀವೂ commerce ಸ್ಟುಡೆಂಟ?ನಾನು  ಕೂಡ . ಆದ್ರೆ  ನಂದು  BBM ನಿಮ್ಮದು  B.Com ಅಷ್ಟೇ  ವ್ಯತ್ಯಾಸ. ಅದ್ಸರಿ  ಟೆಕ್ಸ್ಟ್  ಬುಕ್  ಓದೋಕೆ  ಬೋರ್  ಆಗಲ್ವೇನ್ರಿ ? ನಂಗಂತೂ  ಬುಕ್  ನೋಡಿದ್ರೆ  ಸಾಕು  ನಿದ್ದೆ  ಬರುತ್ತೆ .”

ಎಂಥ  ಹುಡುಗನಪ್ಪ. ಇವನ  ಬಾಯಿಗೆ  ಯಾರು  ಕೈಯಾಕಿದ್ರೊ ಶಿವನೆ  ಎಂದು  ಬೈದುಕೊಳ್ಳುತ್ತಾ ."ನಂಗೆ  ಬೋರ್  ಏನು  ಆಗಲ್ಲ . ನೀವಿಗೇನ?ಗುರುತು  ಪರಿಚಯ  ಇಲ್ದೆ  ಇರೋರ  ಹತಿರ  ಅವರ  ಹೆಸರನ್ನು  ತಿಳಿದುಕೊಳ್ಳದೆ ಮಾತಾಡೋದು?”

"ಹೀಗೆ  ಮಾತಾಡ್ತಾ  ಇದ್ರೆ  ಗೊತ್ತಗುತ್ತಪ್ಪ. ಈಗ  ಹೇಳಿ  ಯಾವ್ದಾದ್ರು  ಕೋರ್ಟ್ ನಲ್ಲಿ  ಮೊದ್ಲು  ಹೆಸರು  ತಿಳ್ಕೊಂಡೆ  ಮಾತಾಡಬೇಕು  ಅಂತ  ರೂಲ್ಸ್  ಮಾಡಿದರ?ಇಲ್ಲ  ಅಲ್ವ? ಸರಿ  ಅದೆಲ್ಲ  ಬಿಡಿ . ನನ್  ಹೆಸರು  ಮಂಜು . ನಿಮ್  ಹೆಸರೇನು?"

ಪವಿಗೆ  ಎಲ್ಲಿಲ್ಲದ  ಕೋಪ ."ಸಾರೀ  ನಾನು  strangers ಜೊತೆ  ಮಾತಾಡಲ್ಲ . ನಿಮ್ಮ  ಜೊತೆ  ಇಷ್ಟೊತ್ತು  ಮಾತಾಡಿದ್ದೆ  ಹೆಚ್ಚು . Please don’t disturb me"

“ಅಲ್ಲ  ನನ್  ಹೆಸರು  ತಿಳ್ಕೊಂಡು  ನಿಮ್  ಹೆಸರು  ಹೇಳ್ದೆ  ಹೊರ್ದ್ರೆ  ಹೇಗೆ ? ಹೇಳು  ಏನ್  ನಿನ್ನೆಸರು?”

ಪವಿ  ಏನನ್ನು  ಮಾತಾಡಲಿಲ್ಲ. ಸುಮ್ಮನೆ  ಒಂದು  ಮಿಚ್ಚಿನಂತಹ  ನೋಟ  ಬೀರಿ  ಸುಮ್ಮನಾದಳು.

“ಹಲೋ. ಹೇಳು  ಏನ್  ನಿನ್ನೆಸರು ? ಫ್ರೆಂಡ್ಸ್  ಎಲ್ಲ  ಮೊದ್ಲು  strangers ಆಗಿರ್ತಾರೆ . ಆಮೇಲೆ  ತಾನೇ  ಫ್ರೆಂಡ್ಸ್  ಆಗೋದು . ಅದೇ  ಇಲ್ಲೂ  ಆಗ್ತಾ  ಇರೋದು . ಸೊ  ಹೇಳು  ಏನ್  ನಿ…”

“ಪವಿತ್ರ” ಅವನು  ತನ್ನ  ವಾಕ್ಯ  ಪೂರ್ತಿ  ಮಾಡುವ  ಮೊದಲೇ  ಉತ್ತರಿಸಿದಳು. ಅವನ  ಮಾತು  ಕೂಡ  ನಿಜ  ಎಂದನಿಸಿತು .'Strangers are just waiting to be friends' ಎಂದು  ಎಲ್ಲೋ  ಓದಿದ್ದು  ನೆನಪಿಗೆ  ಬಂತು .

ಇದಾಮೇಲೆ  ಮಂಜು  ಅವಳನ್ನು  ಮಾತಿಗಿಳಿಸಿದ. ಯಾರ  ಜೋತ್ತೆಯು  ಅದರಲ್ಲೂ  ಅಪರಿಚಿತರ  ಜೋತೆ  ಮಾತನಾಡದ  ಅವಳು  ಅಂದು  ಮಂಜು  ಜೊತೆ  ಸ್ವಲ್ಪ  ಜಾಸ್ತಿಯೇ  ಹರಟಿದಳು!ಅವನ  ರಾಗ  ಎಳೆದು  ಮಾತಾಡುವ  ವಾಯ್ಸ್  ಅವಳಿಗೆ  ತುಂಬಾನೇ  ಇಡಿಸಿತು .

“ದಿನ  ಬರ್ತೀಯ  ಪಾರ್ಕ್ಗೆ ? ಯಾವತ್ತು  ನಿನ್ನ  ನೋಡೇ  ಇಲ್ಲ . Mostly first time ಅನಿಸುತ್ತೆ.”
“ಹ್ಮ್ ಹೌದು  ಫಸ್ಟ್  ಟೈಮ್. ನೀವು  ದಿನ  ಬರ್ತಿರ ?
“ ವೀಕೆಂಡ್ಸ್  ಮತ್ತೆ  ಹಾಲಿಡೆಸ್ನಲ್ಲಿ ಜಾಸ್ತಿ  ಇಲ್ಲೇ  ಇರ್ತೀನಿ . ಇದು  ನಮ್ಅಡ್ಡ . ಫ್ರೆಂಡ್ಸ್  ಎಲ್ಲ  ಒಟ್ಟಿಗೆ  ಸೇರ್ತಿವಿ  ಸಂಜೆ  ಟೈಮ್ . ಆದ್ರೆ  ಇವತ್ತು  ಅಪರೂಪಕ್ಕೆ  ನಾನ್ ಕರೆಕ್ಟ್  ಟೈಮ್  ಗೆ  ಬಂದಿದೀನಿ  ಆದ್ರೆ  ಫ್ರೆಂಡ್ಸ್  ಅನಿಸ್ಕೊಂಡ  ನನ್ ಮಕ್ಳು  ಇನ್ನು  ಬಂದಿಲ್ಲ  so waiting”
“ಫ್ರೆಂಡ್ಸ್ಗೆ ಬೈತಿರ ?”
“ಥು ಇಲ್ಲವೆ . ಪ್ರೀತಿ  ಜಾಸ್ತಿ  ಆದಾಗ  ಈ  ರೀತಿ  ಹೇಳ್ತೀನಿ  ಅಷ್ಟೇ” 
ಅವನು  ‘ಥು’ ಅಂತ  ಹೇಳಿದ್  ಸ್ಟೈಲ್  ಅವಳಿಗೆ  ಇಷ್ಟವಾಯಿತು..., ಹೀಗೆ  ಹೇಗೋ  ನಮ್ಮುಡುಗಿ  ಮುತ್ತು  ಉದುರಿ  ಹೋಗುತ್ತೇನೋ  ಅನ್ನೋ  ಹಾಗೆ  ಮಾತಾಡ್ತಾ  ಇದ್ರೆ  ಆ  ಕಡೆ  ಮಂಜು  ಮಾತೆ  ಬಂಡವಾಳ  ಅನ್ನೋ  ಹಾಗೆ  ಮಾತಾಡ್ತಾ  ಇದ್ದ . ಅವನು  ಪ್ರಶ್ನೆ  ಕೇಳಿ  guess ಮಾಡಿ  ಉತ್ತರವೂ  ಹೇಳ್ತಿದ್ದ . ಇವಳು  ಅವನು  ಕೇಳಿದ  ಪ್ರಶ್ನೆಗೆಲ್ಲ  1mark question ಗೆ  answer ಮಾಡೋ  ರೀತಿ  one word ನಲ್ಲಿ  ಉತ್ತರಿಸ್ತ  ಇದ್ಲು. ಅಂತು  ಚಂದ್ರೋದಯದ  ಸಮಯ  ಆಯಿತು. ಪವಿ  ತಡಮಾಡೋದು ಬೇಡ  ಅಂತ..
“ನಾನಿನ್ನು  ಹೊರಟೆ  ಬೈ”
“ಇರೆ  ಸ್ವಲ್ಪ  ಹೊತ್ತು . ನನ್  ಫ್ರೆಂಡ್ಸ್  ಬರೋತನಕ  at least?”
“ಇಲ್ಲ  ಕತ್ಲಾಗ್ತಾ  ಇದೆ  ಹೋಗ್ಬೇಕು . ನೀವೂ  ಬೇಗ  ಹೋಗಿ  ಮನೆ  ತಲುಪಿ”
“ಅಯ್ಯೋ! ಇನ್ನ  7 ಗಂಟೆ..ಇಷ್ಟು  ಬೇಗ  ಮನೆಗೆ  ಹೋಗಿ  ನಾನ್  ಏನ್  ಮಾಡ್ಲೇ??ನಿನ್  ಹೊರಡು  ಬೇಕಾದರೆ . ಬಟ್  ನೀವೂ  ತಾವು  ಅಂತ  ಮಾತಾಡಿಸ್ಬೇಡ . ನೀನು  ಅಂತಾನೆ  ಕರಿ  ಓಕೆನ ?"
“ಸರಿ   ಹಾಗಾದ್ರೆ  ನಾನಿನ್ನು  ಹೋಗ್ಬಿಟ್  ಬರ್ತೀನಿ”
“ಬರಬೇಡ”
“?????????”
“ಅಯ್ಯೋ  ಗೂಬೆ  ಸುಮ್ನೆ  ತಮಾಷೆಗೆ  ಹೇಳ್ದೆ. ಮತ್ತೆ  ಮತ್ತೆ  ಸಿಗ್ತಾ  ಇರು ” ಮಂಜು  ಫ್ರೆಂಡ್ಸ್  ಬರೋದನ್ನ  ನೋಡಿ  ಮುಂದುವರೆಸಿದ "ಸರಿ  ನನ್  ಫ್ರೆಂಡ್ಸ್  ಕೂಡ  ಬಂದ್ರು  ಬೈ  take care”
“bye. Have a fine evening”

ಮಂಜು  ಅವನ  ಫ್ರೆಂಡ್ಸ್  ಜೊತೆ  ಹೋದ . ಇತ್ತ  ಪವಿ  ಅವನಾಡಿದ  ಮಾತುಗಳನ್ನು  ನೆನೆಯುತ್ತ  ರೂಮ್ನ  ಕಡೆ  ನಡೆದಳು . "ತುಂಬಾ  ಒಳ್ಳೆಯ  ಹುಡುಗ . ತಾನು  ನಕ್ಕಿ  ಎಲ್ಲರನ್ನು  ನಗಿಸಬಲ್ಲವ . ಬೇಗ  ಇಷ್ಟವಾಗುವ  ಜೀವಿ . Happy-go-lucky nature . ಹೀಗೆ  ಅವನ  ಗುಣಗಳನ್ನು  ತನಗೆ  ತಾನೇ  ಹೇಳಿಕೊಳ್ಳುತ್ತಾ  ಹೋಗುತಿದ್ದಳು . ಅವನ  ಜೊತೆ  ಮಾತಾಡಿ  ಆ ದಿನ  ತುಂಬಾ  ಸಂತಸದಿಂದಿದ್ದಳು . ಪಾರ್ಕ್ನಲ್ಲಿ  ಮಾತಾಡುತಿರುವಾಗ  ಮುಂದೆ  ಸಿಕ್ಕಿದಾಗ  ಸ್ವಲ್ಪ  tuitionಗೋಗಿ ಮಾತನಾಡೋದನ್ನ  ಕಲಿತುಕೊಂಡು  ಬಂದಿರು  ಎಂದಿದು  ನೆನಪಾಗಿ  ಮುಗುಳ್ನಕ್ಕಳು.

ಪವಿ  ಹೀಗೆ  ತನ್ನ  ನೆನಪುಗಳಲ್ಲಿ  ಮುಳುಗಿ  ವಾಸ್ತವ  ಜಗದಲ್ಲಿ  ಏನಾಗುತಿರುವುದು  ಎಂಬುದನ್ನೇ  ಮರೆತಿದ್ದಳು . ಅಷ್ಟರಲ್ಲಿ  ಅವಳ  ಊರಿನ  ಬಸ್  ಬಂದಿತು . Bus ಹೊರ್ನ್  ಕೇಳಿ  ಪವಿ  ನೆನಪಿನಿಂದ  ಹೊರಬಂದಳು . ಬೇಗ  ಬಸ್ಸನ್ನು  ಹತ್ತಿ  ಕಿಟಕಿಯ  ಪಕ್ಕ  ಕುಳಿತಳು . ನೆನಪಿನ  ಜೊತೆ  ತೇಲಿ ಹೋಗಲು  ತಣ್ಣನೆ  ಗಾಳಿ  ಬೇಕೆಂದೋ  ಅಥವಾ  ಅವಳ  ಊರಿಗೆ  ಹೋಗುವ  ದಾರಿಯಲ್ಲಿ  ಕಾಣುವ  ಹಚ್ಚ  ಹಸಿರ  ನೋಟವ  ತನ್ನ  ಕಣ್ಣಿನ  ಕ್ಯಾಮೆರಾದಲಿ  ಸೆರೆ  ಹಿಡಿಯಲೋ  ತಿಳಿಯದು! ಪವಿ  ಹೀಗೆ  ಕಿಟಕಿ  ಆಚೆ  ಕಣ್ಣಾಯಿಸಿ  ಜನರನ್ನು , ವಾಹನಗಳನ್ನು , ಕಟ್ಟಡಗಳನ್ನು  ನೋಡುತ್ತ  ಕುಳಿತಳು .

ನೋಡುತಿರುವಾಗ  ಯಾರೋ  ಒಬ್ಬಳು  ತನ್ನ  ಗೆಳೆಯನ  ಜೊತೆ  ಜಗಳವಾಡಿ  ಮುನಿಸಿಕ್ಕೊಂಡು  ಕೂತಿದ್ದನ್ನು  ಕಂಡಳು . ಬಸ್  ನಿಧಾನವಾಗಿ  ಹೋಗ್ತಾ  ಇದ್ದ  ಕಾರಣ  ಕಾಣಿಸಿತು . ತಾನು  ಕೂಡ  ಹೀಗೆ  ಆಡುತಿದ್ದ  ಆದ್ದರಿಂದ  ಅಲ್ಲಿ  ಎನಾಗಿರ  ಬಹುದೆಂದು  ಅರಿತಳು . ಇದು  ಅವಳನ್ನು  ಒಂದೂವರೆ  ವರ್ಷದ  ಹಿಂದಿಗೆ ಇಣುಕುವಂತೆ  ಮಾಡಿತು. 

ಮಂಜು  ಹಾಗು  ಪವಿ  ಬೆಸ್ಟ್  ಅಂಡ್  ಕ್ಲೋಸ್  ಫ್ರೆಂಡ್ಸ್  ಆಗಿದ್ದರು. ಇಬ್ಬರು  ದಿನವು  ಪಾರ್ಕಿನಲ್ಲಿ  ತಪ್ಪದೆ  ಬೇಟಿಯಾಗುತಿದ್ದರು. ದಿನವಿಡೀ  ಏನೆಲ್ಲಾ  ಆಯಿತು  ಅದನ್ನು  ಒಬ್ಬರೊಬ್ಬರಿಗೆ  ಹೇಳಿಕೊಳ್ಳುತಿದ್ದರು . ಯಾರನ್ನು  ಹಚ್ಚಿಕೊಳ್ಳದ  ಪವಿ  ಕೇವಲ  ದಿನಗಳಲಿ  ಮಂಜುನನ್ನು  ಹಚ್ಚಿಕೊಂಡಿದ್ದಳು . ಇಬ್ಬರ  ನಡುವೆ  ಸಲುಗೆ  ಹೆಚ್ಚಿತ್ತು . ಹಾಗೆಯೆ  ಜಗಳವು  ಜಾಸ್ತಿ . ಚಿಕ್ಕ-ಚಿಕ್ಕ  ವಿಷಯಕ್ಕೂ  ಜಗಳವಾಡುತಿದ್ದರು. ಈ  ರೀತಿ  ಜಗಳವಾಡುವಾಗ ಭಾವುಕಳಾಗಿದ್ದ  ಪವಿ  ಎಷ್ಟೋ  ಸರತಿ  ಅತ್ತಿದ್ದು  ಉಂಟು . ಅದು  ಅಲ್ಲದೆ  ತುಂಬಾ  ಹಚ್ಚಿಕೊಂಡಿದ್ದಳು  ನೋಡಿ  ಅದಕ್ಕೆ . ಇದಾದಮೇಲೆ  ಹೇಗೋ  ಸಮಾಧಾನವಾಗುತಿತ್ತು ಅವನ  ಮಾತು  ಕೇಳಿ . ಆದರೆ  ಮಂಜು  ಮಾತ್ರ  ಒಂದು  ಸಾರೀನು  ಕೇಳ್ತಿರಲಿಲ್ಲ  ಅಥವಾ  ಸಮಾಧಾನ  ಪಡಿಸುವ  ಸಲುವಾಗಿ  ಮಾತಾಡ್ತಾ  ಇರಲಿಲ್ಲ . ಆದರೆ  ಪವಿಗೆ   ಹೇಗೋ  ಸಮಾಧನವಾಗುತಿತ್ತು. ಅದಾದಮೇಲೆ  ಇಬ್ರು  ಜಗಳ  ಆಡೇ  ಇಲ್ವೇನೋ  ಅನ್ನೋ  ಹಾಗೆ  ಹರಟೆ  ಹೊಡಿತಿದ್ರು .

ಹೀಗೆ  ಎಲ್ಲವು  ಸುಸೂತ್ರವಾಗಿ  ನಡೆಯುತ್ತಿತ್ತು . ಅವಳಂತೂ  ಮಂಜುನ  ಮಾತಿಗೆ , attitudeಗೆ,  ಸದಾ  ನಗ್ತಾ  ಇರೋದಕ್ಕೆ , ಅವನ  friendly natureಗೆ  ಹುಚ್ಚಿ  ಆಗಿದ್ಲು . ಅವಳಿಗಂತೂ  ಅವನು  ‘one and only’ ಆದರೆ  ಅವನಿಗೆ  ಅವಳು  ‘one of many’. ಅವನು  ಎಲ್ಲ  ಫ್ರೆಂಡ್ಸ್  ಜೊತೆ  ಮಾತಾಡ್ತಾ  ಇದ್ದದೆ  ಹಾಗೆ . ಆದರೆ  ಇದೆ  ಮೊದಲು  ಪವಿ  ಇಂತಹವನ  ಜೊತೆ  ಕೂಡಿದ್ದ  ಅನುಭವಗಿದ್ದು .

                                                                                                                             ಮುಂದುವರೆಯುವುದು...

3 comments:

  1. sakattagide..ondu line tumba ista aythu., ಫ್ರೆಂಡ್ಸ್ ಎಲ್ಲ ಮೊದ್ಲು strangers ಆಗಿರ್ತಾರೆ . ಆಮೇಲೆ ತಾನೇ ಫ್ರೆಂಡ್ಸ್ ಆಗೋದು...bega mundindu bari :)

    ReplyDelete
  2. @prashu
    thanks.....ya aadashtu bega haktini:)

    @harshad
    thanx pa...bardagide post madodu baaki;)

    ReplyDelete