Tuesday, August 9, 2011

ವಿಧಿಯಾಟವೇ ಹೀಗೆ


ಕಿಟಕಿಯಾಚೆ ತುಂತುರು ಮಳೆ,
ಎಂದಿನಂತೆ ನನ್ನ ಕಣಲ್ಲಿ ಸೋನೆಮಳೆ

ವಿಧಿಯಾಟವೇ ಹೀಗೆ,
ಕರೆದೊಯ್ಯುವುದು ಎಲ್ಲಿಂದ ಎಲ್ಲಿಗೋ
ಜೊತೆ ಕೊಡುವುದು ಏಕಾಂಗಿಯ ನೋವೊ
ಇಲ್ಲವೆ ವಿರಹದ ಸಾವೋ

ನಮ್ಮವರು ಎಂದು ನಮ್ಮವರಲ್ಲ
ಜೊತೆಗಿರುವವರು ಎಂದೂ ಜೊತೆಯಾಗರಲ್ಲ
ಏಕೆ ಈ ಬದುಕು ಹೀಗೆ? ವಿಧಿಯ
ಪರೀಕ್ಷೆಗೊಳಗೂಡಿಸಿ ಪಾಠ ಕಲಿಸುತ್ತಲೇ ಇರುವುದು?

ಮನಸ್ಸಿಗೆ ಇಲ್ಲ ಸಲ್ಲದ ಸ್ಥಿತಿಗತಿಯ ನೀಡಿ,
ವಿಧಿಯಾಟದಿ ಸೆಣಸಾಡಿಸಿ
ನಗುವೆನೆಂಬುದ ಮರೆಯುವಂತೆ ಮಾಡಿ
ಕೊನೆಗೆ ಬಿಟ್ಟೋಗುವುದು ಒಳ್ಳೆಯ ಪಾಠ ಕಲಿಸಿ....

4 comments:

  1. ಬದುಕಿನಲ್ಲಿ ಎಲ್ಲ ಅನುಭವಗಳೂ ಆಗಬೇಕಲ್ಲವೇ. ಹಾಗಾಗಿ ಹೀಗೆ.



    _ನನ್ನ ಬ್ಲಾಗಿಗೂ ಬನ್ನಿ.

    ReplyDelete
  2. ನೆನಪಿನಲೆಗಳ ನಡುವೆ ಸಾಗದಿರಲಿ ನಮ್ಮ..
    ಬದುಕ ಹಾಯಿ ದೋಣಿ..!
    ಎಲ್ಲೆಲ್ಲೂ ನೀರೆ ತು೦ಬಿರಲು ಇಲ್ಲಿ..
    ಕಣ್ಣೀರಿಗಾವ ಬೆಲೆಯು..!!

    ದೂರ ತೀರದಲೆಲ್ಲೋ..,
    ಗುರಿಯ ದ್ವೀಪವು ಉ೦ಟು..!
    ಅತ್ತ ಸಾಗಲಿ ಪಯಣ..
    ಮತ್ತೆ ಹರುಷದಲಿ..!!

    ನಗುವ ಹಾಯಿಯ ಏರಿಸಿ..
    ಉತ್ಸಾಹದ ಬಾವುಟ ಹಾರಿಸಿ..,
    ಮು೦ದೆ ಸಾಗಲಿ ವೇಗದಿ..
    ಬಾಳ ಪಯಣ ನಿರ೦ತರ..!

    ReplyDelete
  3. ಆದದ್ದೆಲ್ಲ ಒಳ್ಳೆಯದಕ್ಕೆ ಆಗಿದೆ
    ಆಗುವದೆಲ್ಲ ಒಳ್ಳೆಯದೇ ಆಗುತ್ತಿದೆ
    ಆಗಲಿರುವುದು ಅದೂ ಒಳ್ಳೆಯದೇ ಆಗಲಿದೆ
    ರೋಧಿಸಲು ನೀನೇನು ಕಳೆದುಕೊಂಡಿರುವೆ?
    ಕಳೆದುಕೊಳ್ಳಲು ನೀನು ತಂದಿರುವದಾದರೂ ಏನು?
    ನಾಶವಾಗಲು ನೀನು ನಿರ್ಮಾಣ ಮಾಡಿರುವದಾದರೂ ಏನು?
    ನೀನೇನು ಪಡೆದಿದ್ದರು ಅದನ್ನ ಇಲ್ಲಿಂದಲೇ ಪಡೆದಿರುವೆ
    ಏನನ್ನು ನೀಡಿದ್ದರೂ ಅದನ್ನು ಇಲ್ಲಿಗೆ ನೀಡಿರುವೆ
    ನಿನ್ನೆ ಬೇರೆಯಾರೋದ್ದೋ ಆಗಿದದ್ದು ಇಂದು ನಿನ್ನದಾಗಿದೆ ಮತ್ತು
    ನಾಳೆ ಇನ್ನಯಾರದ್ದೋ ಆಗಲಿದೆ
    ಪರಿವರ್ತನೆ ಜಗದ ನಿಯಮ.

    ReplyDelete
  4. @vichalita,
    hmm correct...

    @kiran,
    sooper poem...chaitanya tumbuvantaha poem...

    @manju,
    hmmm satya satya satya.....

    ReplyDelete