Thursday, January 5, 2012

ನೀ ಹೋದ ಮೇಲೆ


 
ತಿಳಿನೀರ ಕೊಳ, ಕೆಂಪೇರಿದ ಬಾನು,
ನೀರವ ಮೌನ, ಏಕಾಂಗಿ ನಾನು.

ದೂರವಾಗುತ್ತಿರುವೆ ನೀ, ಕಳೆದಂತೆ ಕಾಲ,
ಕುಗ್ಗುತಿರುವೆ ಒಳಗೆ, ಮನದಲ್ಲಿಲ್ಲದೆ ಬಲ.

ಚಂದಿರನು ನೀ, ಭೂಮಿಯು ನಾ; ಭಾವಿಸಿದ್ದೆನು ಹೀಗೆ,
ನನ್ನ ಸುತ್ತದೆ ದೂರಾದೆ ಹೇಗೆ?

ಮುಂಗಾರಿಲ್ಲ, ಹಿಂಗಾರಿಲ್ಲ, ಹಸಿರೇಗೆ ಇದ್ದೀತು?
ಚೈತ್ರ ಬರದು, ಕೋಗಿಲೆ ಹೇಗೆ ಹಾಡೀತು?

ಸುಖಾಂತ್ಯವ ತರದೆ ನಡುವೆಯೇ ದುಃಖವ ತಂದೆ
ಕಾರಂಜೆಯ ಹಾಗೆ ನಲಿವ ಚಿಮ್ಮಿಸಬಾರದಿತ್ತೆ?

5 comments:

  1. ಉತ್ತರವಿಲ್ಲದಾ ಪ್ರಶ್ನೆಗಳೇ ಮನಸಿನಲ್ಲಿ ಅಲೆ ಎಬ್ಬಿಸುವವು. ನೆಲಸುವುದು ಕೊನೆಗೆ ಗಟನೆಗಳು, ನೆನಪುಗಳು.
    ಒಮ್ಮೆ ಯಾದರು ನೆನಪಿಸಿ ಕೊಂಡರೆ ಮನಸ್ಸಿದೆ ಅನ್ನಿಸುತ್ತದ್ದೆ. ಮನಸ್ಸಿಲ್ಲದಿದ್ದರೆ ನೆನಪೇಕೆ ಬಂದೀತು.
    ಮನಸ್ಸಿಗೆ ಕೊನೆಗಾಲವಿಲ್ಲ. ನೆನಪಿನ ದೋಣಿಯಲಿ ಅಳಿವು ಉಳಿವುಗಳಿಗೆ ಉತ್ತರ ಹುಡುಕುತ್ತಾ ಹೊರಟರೆ ಎಲ್ಲಾದರೂ ಏನಾದರು ಸಿಕ್ಕೀತು ಎಂಬ ನಂಬಿಕೆ.
    ಕವಿತೆ ಬಹಳ ಚೆನ್ನಾಗಿದೆ. :) ...

    ReplyDelete
  2. very nice.. congrats n happy new year.. plz happy yaagiri sakhi.

    ReplyDelete
  3. vidya...tumbaa chennagi bareddiddiri...very nice..

    ReplyDelete
  4. @mohan,
    tumbaa thanks..:)

    @kirti,
    hehe,,,,:) happy aage irtini pa..just poem ashte idu...:)

    @mounaraaga,
    thank u so much...:D

    ReplyDelete
  5. cHennagi barididora Vidya ...

    How about this ??

    ದೂರವಾಗುತ್ತಿರುವೆ ನೀ, ಕಳೆದಂತೆ ಕಾಲ,
    ಕುಗ್ಗುತಿರುವೆ ನಾನು, ಮನದಲ್ಲಿಲ್ಲದೆ ಬಲ.


    --Manjunath Jogalli

    ReplyDelete