Friday, February 18, 2011

ಪ್ರೀತಿ-ವೇದನೆ



ಮರೆಯದ ಒಲವಿನ ಓಲೆ ಇದು ನಲ್ಲ
ಕೇವಲ ಪದಗಳ ಜೋಡಣೆ ಅಲ್ಲ
ತಂದಿದ್ದೆ ಬೆಳದಿಂಗಳ ಚಂದ್ರಮನ ಭುವಿಗೆ
ತೋರಿದ್ದೆ ಮಿತಿ ಇಲ್ಲದ ಪ್ರೀತಿ ನನಗೆ
ನೋಡೀಗ ಪದವಾಗಿ ಹೊರ ಬರುತಿದೆ ವಿರಹದ ವೇದನೆ
ಬೆಳಕ ನೋಡಲಾಗದ ಸ್ತಿತಿಗೆ ಹೊಗೆನ್ದಿದೆ ಈ ಯಾತನೆ
ನೆನಪಿನ ನೋವೆ ನನ್ನ ಸಾವೇ ಮನವೇ
ಮತ್ತೊಂದು ಬದುಕಿಲ್ಲವೆ ನನಗೆ
ಏಕೆ ಹಿಗೆ ಈ ಪ್ರೀತಿ?
ತರುವುದು ದುಃಖದ ಸ್ಥಿತಿ
ಸಂತೋಷದ ಘಳಿಗೆಗೆ ಹಕ್ಕಿಲವೇ ನನಗೆ?
ಮತ್ತೆಂದೂ ಬಾರದೆ ಖುಷಿಯೂ ಈ ಮನಸಿಗೆ?


Tuesday, February 15, 2011

college ಇಷ್ಟೇನೆ

ಬೆಳಗೆ ಹೇಗೋ ಬೇಗ ಎದ್ದು
bagಗೆ ಬುಕ್ಕು ಇಟ್ಟುಕೊಂಡು
ಕಷ್ಟ ಸುಖವೋ ಕಾಲೇಜ್ಗೆ ಹೋಗು
ಕಾಲೇಜ್ ಇಷ್ಟೇನೆ

ಕಾಲೇಜ್ ಪ್ರೆಮಿಸೆಸ್ ಎಂಟರ್ ಆಗು
ಸೋಮಾರಿ ಕಟ್ಟೆಲಿ ಗೊಸ್ಸಿಪ್ ಮಾಡು
ಬರ್ರೋರ್ಗೆಲ್ಲ ರಾಗಿಂಗ್ ಮಾಡ್ಕೋ
ಕಾಲೇಜ್ ಇಷ್ಟೇನೆ

ಕೇವಲ enjoyment ಎಲ್ಲರಿಗ್ಬೇಕು
ಸ್ವಲ್ಪ ಪಾಠ ಇದ್ರೆ ಸಾಕು
ಯಾವುದೊ ಒಂದು ಕ್ಲಾಸ್ಗೆ ಹೋಗು
ಕಾಲೇಜ್ ಇಷ್ಟೇನೆ
****************************
B.P.K ಕ್ಲಾಸ್ನಲ್ ನಿದ್ದೆ ನೋಡು
B.M.P ಕ್ಲಾಸ್ನಲ್ ಮಾತು ಕೇಳು
R.C ಕ್ಲಾಸ್ನಲ್ ಮುಚ್ಕೊಂಡ್ ಕೂತ್ಕೋ
ಕಾಲೇಜ್ ಇಷ್ಟೇನೆ

M.E.S ಕ್ಲಾಸ್ನಲ್ dance ನೋಡು
M.T ಕ್ಲಾಸ್ನಲ್ loud speaker ಏನು
ಏನೇ ಆದರು ನಮ್ಮದೇ ಗೇಮು
ಕಾಲೇಜ್ ಇಷ್ಟೇನೆ

class testನಲ್ ಅಚ್ಚು ಇಡಿಸು
monthly testನಲ್ ಚೀಟಿ ಎತ್ತು
mid-termನಲ್ ಪಕ್ಕ ನೋಡು
ಕಾಲೇಜ್ ಇಷ್ಟೇನೆ
****************************
lunchbreakನಲ್ ಕೂಳೆ ಮಾಡು
dolphinsನಲ್ಲಿ ಟಿಕಾಣಿ ಹೊಡ್ಕೋ
seize ಆದ್ಮೇಲ್ ಪಾತಾಳ ನೋಡು
ಕಾಲೇಜ್ ಇಷ್ಟೇನೆ

lectures ಮಧ್ಯೆ ಮೆಸೇಜು ಮಾಡು
ಕೆಳವೊಂದ್ ಟೈಮ್ ಹಾಡು ಹಾಕು
ಆಗೋದು ಆಗಿಯೇ ಹೋಗ್ಲಿ
ಕಾಲೇಜ್ ಇಷ್ಟೇನೆ

ಪಾಠದ್ ಮಧ್ಯೆ ಕಾಮೆಂಟ್ ಮಾಡು
ನಿನ್ ಹುಡ್ಗಿನ್ ಕನ್ಮುಚ್ದೆ ನೋಡು
ಆಮೇಲ್ ಜಗಳ ಇದ್ದಿದೇನೆ
ಕಾಲೇಜ್ ಇಷ್ಟೇನೆ
*****************************
ಸ್ಪೆಷಲ್ ಕ್ಲಾಸ್ನಲ್ಲಿ ಕ್ಲಾಸು ಕಾಲಿ
annual day ನಲ್ ಫುಲ್ಲು ಭರ್ತಿ
ಕೇಳಿದ್ರೆ ಸುಮ್ನೆ ಕಾಗೆ ಹಾರ್ಸಿ
ಕಾಲೇಜ್ ಇಷ್ಟೇನೆ

break timeನಲ್ಲಿ ಜೋಕು ಹೇಳ್ಕೋ
ಸ್ವಲ್ಪ non-veg ನು ಇಟ್ಕೋ
ಹಾಗೋ ಹೇಗೋ ಓತ್ಲಾ ಹೊಡ್ಕೋ
ಕಾಲೇಜ್ ಇಷ್ಟೇನೆ

attendenceಗಾಗಿ lecturers ಹಿಂದೆ ಸುತ್ತು
exam time ನಲ್ ಕೂತ್ಕೊಂಡ್ ಓದ್ಕೋ
ಫೈಲ್ ಆದ್ರೆ ಗೋಲಿ ಮಾರೋ
ಕಾಲೇಜ್ ಇಷ್..ಟೇ....ನೆ....
 ಹ ಹ ಹ ಕಾಲೇಜ್ ಇಷ್ಟೇನೆ.
*******************************

Sunday, February 13, 2011

ಕಥೆ ಅಲ್ಲ ವ್ಯಥೆ


ಅಂದೊಂದು  ದಿನ  ರಾತ್ರಿ  11 ಗಂಟೆ. ಆಕಾಶದಲಿ  ಕಪ್ಪು, ಅರ್ಧ  ಚಂದ್ರನ ಬಿಳುಪು, ನಡುವೆ  ಅಲ್ಲೊಂದು  ಇಲ್ಲೊಂದು  ಬೆಳ್ಳಿಯ  ಚುಕ್ಕಿಗಳ  ಹೊಳಪು. ಇಡೀ  ಜಗವೇ  ಕತ್ತಲೆಯ  ಆ  ಕಪ್ಪಿಗೆ  ರಂಗೆರಚಲು  ಯೋಜನೆಗಳ  ಹಾಕುತ್ತ, ಕನಸುಗಳ  ನೆಯ್ಯುತ್ತ  ಮಲಗಿದ್ದಾರೆ. ಆದರೆ  ಇತ್ತ  ಒಬ್ಬಳು  ಹೆಣ್ಣು  ಮಗಳು, ತನ್ನ  ಪ್ರಿಯತಮನನ್ನು  ನೆನೆಯುತ್ತ, ಕಿಟಕಿ  ಆಚೆಗಿರುವ  ಚಂದ್ರನಲ್ಲಿ  ತನ್ನ  ನಲ್ಲನನ್ನು  ಚಿತ್ರಿಸುತ್ತ  ಹೊತ್ತಿನ  ಅರಿವಿಲ್ಲದೆ  ಕಣ್ತೆರೆದೆ  ಕನಸು  ಕಾಣುವಲ್ಲಿ  ನಿರತಳಗಿದ್ದಳು.

ತಿಳಿ  ತಂಗಾಳಿ  ಬೀಸಿ  ಬಂದಾಗ,  ತನ್ನ a ಮುಂಗುರುಳು  ಕಣ್ಣ  ತಾಕಿದಾಗಲೇ  ಅವಳಿಗೆ  ಆ  ಕನಸಿನಿಂದ  ಎಚ್ಚರವಾಗಿದ್ದು . ಅತ್ತ  ಬೀದಿಯ ಕಡೆ  ನೋಡುತಾಳೆ  ಆದರೆ  ಬೀದಿಯಲ್ಲಿ  ಒಂದು  ನರಪಿಲ್ಲೆಯ  ಸುಳಿವೂ  ಇರಲಿಲ್ಲ . ಅವಳು  ಬಯಸಿದ್ದು  ಅದನ್ನೇ . ಇಡೀ  ಜಗತ್ತಿನಲ್ಲಿ  ತಾನು  ಹಾಗು  ತನ್ನ  ಇನಿಯ  ಇಬ್ಬರೇ  ಇದ್ದಾರೆ  ಚೆನ್ನ  ಎಂಬುದು  ಅವಳ  ಅನಿಸಿಕೆ  ಆಗಿತ್ತು . ಅವನು  ಸನಿಹದಲ್ಲಿ  ಇಲ್ಲದಿದ್ದರೂ , ಅವನ  ನೆನಪು , ಪ್ರೀತಿ  ಅವನ  ಧನಿ  ಮಾತು  ಅವಳಲ್ಲಿ  ತುಂಬಿಕೊಂಡಿತ್ತು . ಆ  ದಿನದಂದು  ಅವಳು  ಭಾವನೆ  ಎಂಬ  ಮಹಾ  ಲೋಕವನ್ನೇ  ಸುತ್ತು  ಬರಲು  ಹೊರಡುವವಳಗಿದ್ದಳು. ಹೌದು  ಹೊರಟಳು . 


ಆದರೆ  ಮತ್ತೆ  ಈ  ಲೋಕಕ್ಕೆ  ಬರುವ  ಯಾವ  ಸುಚನೆಯು  ಇರಲಿಲ್ಲ . ಕಾರಣ ಅವಳ  ಪ್ರಿಯತಮನ  ಸಂದೇಶ  ಇನ್ನು  ಬಂದಿರಲಿಲ್ಲ . ಅವನ  ‘ಶುಭ  ರಾತ್ರಿ'  ಎಂಬ  ಸಂದೇಶ  ನೋಡದೆ  ಅವಳು  ಮಲುಗುವವಳಾಗಿರಲಿಲ್ಲ . ಅವನ  ಧನಿ ಕೇಳದೆ  ಅವಳಿಗೆ  ಯಾವ  ಕೆಲಸದ  ಮೆಲಿಯೂ  ಆಸಕ್ತಿ  ಮುಉದುತಿರಲಿಲ್ಲ . ಅಂತಹದರಲ್ಲಿ  ಇನ್ನು  ಅವಳ  ನಲ್ಲನಿಂದ  ಕರೆ  ಬಾರದ  ಕಾರಣ  ಅವಳು  ತನ್ನ  ಭಾವನೆಯ  ಪ್ರಪಂಚದಲ್ಲೇ  ಮುಳುಗಿ ಏಳಲು  ಇಚ್ಚಿಸದೆ  ಅಲ್ಲಿಯೇ  ನೆಲಸಿದ್ದಳು .


ಚಂದ್ರನು  ಆ  ಕಾರ್ಮೋಡದ  ತೆರೆಯ  ಹಿಂದೆ  ಹೋಗುತಿದ್ದನದರು  ಆ  ಹುಡುಗಿ  ತನ್ನ  ಭಾವನೆಗಳಿಂದ  ಇನ್ನ  ಹೊರಬರಲಿಲ್ಲ . ಹಾಗೆಯೆ  ಅವಳ  ಇನಿಯನಿಂದ  ಇಷ್ಟು  ಹೊತ್ತಾದರೂ  ಕರೆ  ಬಂದಿರಲಿಲ್ಲ . ಆದರೂ  ಅವಳ  ‘ಇನಿಯನ  ಧನಿ  ಕೆಲುವು’  ಬಯಕೆಗೆ  ಯಾವುದೇ ಕೊರತೆ  ಇರಲಿಲ್ಲ .

ಅವಳನ್ನು  ಆ  ಭಾವನೆಗಳ  ಪ್ರಪಂಚದಿಂದ  ಹೊರತರಲೆಂದೇ ಏನೋ , ಅವಳ  ಫೋನೆನಿಗೆ ಸಂದೇಶವೊಂದು   ಪ್ರವೇಶ  ಮಾಡಿತು . ಸಂದೇಶದ  ಟ್ಯೂನ್  ಕೆಳುತಿದ್ದಂತೆ  ಅವಳನ್ನು  ಬಡೆದು  ಎಬ್ಬಿಸಿತು  ಅವಳ  ಮನವು . ತನ್ನ  ಪ್ರಿಯನಿಂದಲೇ  ಬಂದಿರಲೆಂದು  ಕೂರುತ್ತ , ಸಂದೆಶವನ್ನೋದಲು  ಮುಂದಾದಳು .

ಸಂದೇಶವ  ಒದಲೋರಟಾಗ  ಅವಳ  ಮುಖ  ಅರಳಿತದರೂ , ಓದಿದ  ಮನವು  ಸಂತ್ಹೊಶದಲ್ಲೇನು  ತೇಲಿ  ಹೋಗಲಿಲ್ಲ . ತನ್ನ  ಇನಿಯನಿಂದ  ‘ದಯಮಾಡಿ  ನನ್ನನ್ನು  ಮರೆಬಿಡು’ ಎಂಬ  ಒಂದು  ಸಂದೇಶವೂ  ಆದೇಶವೂ  ಆಗಿದ್ದ  ಅವನ  ಮಾತು  ಅವಳನ್ನು  ಚಿಂತೆಗೆ  ಕರೆದೊಯ್ಯಿತು.  ಪ್ರತಿ  ರಾತ್ರಿಯೂ  ತಾನು  ಅವಳನ್ನು  ತುಂಬಾ  ಪ್ರಿತಿಸುತಿರುವುದಾಗಿ  ಹೇಳುತಿದ್ದವನು , ಕರೆ  ಮಡಿ  ಅವಳಿಗೆ  ಒಂದು[ಕೇವಲ  ಮಾತಿನಲ್ಲಿ , ಸ್ಪಷ್ಟವಾಗಿ  ಹೇಳುವುದಾದರೆ  ನೂರೆನ್ದರೂ  ತಪ್ಪಾಗುವುದು] ಮುತ್ತಿದುತಿದ್ದವನು , ಇಂದು  ತನ್ನನು  ಮರೆತು  ಬಿಡುವುದಾಗಿ  ಹೇಳಿದ್ದು  ಅವಳನ್ನು  ಚಿಂತೆಯ  ಸಂತೆಗೆ  ಆಮಂತ್ರಣ  ಕೊಟ್ಟಂತಾಯಿತು.

ಭಾವನೆಗಳ  ಲೋಕದಲ್ಲಿದ್ದ  ಅವಳನು  ಚಿಂತೆಯ  ಲೋಕಕ್ಕೆ  ದುಉದಿಸಿತು  ಅಂದು  ಆ  ಒಂದು  ಪುಟ್ಟ  ಸಂದೇಶವು . ತನ್ನ  ಪ್ರಿಯತಮ  ಈಕೆ  ಹೀಗೆ  ಹೇಳಿರುವನು , ಅವನ  ಉದ್ದೇಶವೇನು  ಎಂಬುದನ್ನು  ಅರಿಯಲು  ಪ್ರಯತ್ನಿಸಿದಳದರೂ , ಪ್ರತಿಫಲಿಸಲಿಲ್ಲ .. ಏಕೆ? ಎನ್ನುವ  ಆ  ಪ್ರಶ್ನೆಗೆ  ಪೂರ್ಣ  ವಿರಾಮವಿಲ್ಲದ  ಉತ್ತರವೂ  ಸಿಗಲಿಲ್ಲ . ನಿದ್ರಿಸುವ  ಮನಸ್ಸು  ಅಥವಾ  ಕನಸನ್ನು  ಸ್ವಾಗತಿಸುವ  ಆಸಕ್ತಿಯೂ  ಅವಳಲ್ಲಿರಲಿಲ್ಲ .

ಅವನ  ಆ  ಸಂದೇಶದ  ಬಗೆಗೆಯೇ ಯೋಚಿಸುತ್ತಾ, ಏಕೆ ಎನ್ನುವ  ಆ  ಪ್ರಶ್ನೆಗೆ  ಉತ್ತರ  ಹುಡುಕುತ್ತಾ , ಸಿಕ್ಕ  ಉತ್ತರಕ್ಕೆ  ಮತ್ತೆ  ಪ್ರಶ್ನೆ  ಎಸೆಯುತ್ತ,  ಅದಕ್ಕೆ  ಪುನಃ  ಉತ್ತರ  ಹುಡುಕುತ್ತ , ಕೂತಲ್ಲಿಯೆ  ಇದ್ದುಬಿಟ್ಟಳು .

ಮೂಡಣದ  ಮೋಡ  ತೆರೆಯನ್ನು  ಸರಿಸಿ  ಅರುಣದೆವನನ್ನು ಸ್ವಾಗತಿಸಿದದರೂ , ಅವಳು  ಆ  ಜಾಗದಿಂದ  ಸರೆದಿರಲಿಲ್ಲ … ಹಕ್ಕಿಗಳೆಲ್ಲ  ಹೊಸದೊಂದು  ದಿವಸಕ್ಕಾಗಿ  ದೇವರಿಗೆ  ಪ್ರಾರ್ಥಿಸುತಿದ್ದರೂ  ಇವಳಿಗೆ  ಹೊಸ  ದಿವಸಕ್ಕಾಗಿ  ಯಾವುದೀ  ಆದ  ಯೋಜನೆ , ಕನಸು , ಹೆಚ್ಚಾಗಿ  ಮನಸು  ಇರಲಿಲ್ಲ .

ಆ  ದಿನದ  ರಾತ್ರಿಯಂದು  ಕಂಡದ್ದೇ  ಅವಳ  ಭಲಿನ  ಕೊನೆಯ  ಸವಿಗನಸು . ಅಂದು  ಸಂದೇಶವ  ಓದುವ  ಮುನ್ನ  ಮೂಡಿದ  ಆ  ಹುವಿನಂತಹ   ನಗುವೇ  ಕೊನೆಯ  ನಗು .

ಅವಳು  ಮತ್ತದೇ  ಭಾವನೆಗಳ  ಲೋಕದ  ಹೊಸ್ತಿಲ  ದಾಟಿ  ಒಳಗೆ  ಪ್ರವೇಶಿಸಿದಳು . ಆದರೆ  ಆ  ಲೋಕವು  ಮೊದಲಿನಂತಹ  ಸುಖಕರ  ಭಾವನೆಗಳ  ಲೂಕವಗಿರಲಿಲ್ಲ . ಅದು  ನೋವೆಂಬ  ಮುಳ್ಳಿನಲ್ಲಿ  ಕಟ್ಟಿದ್ದ  ಲೂಕವಗಿತ್ತು . ಆದರೆ  ಅಲ್ಲಿ  ಅವಳ  ಇನಿಯನಿಗೆ  ಇದ್ದ  ಒಲವು  ಮಾಸಿರಲಿಲ್ಲ . ಬದಲಾಗಿ  ದಿನೇ  ದಿನೇ  ಹೆಚ್ಚಾಗಿ  ಹೋಗಿತ್ತು . ಅದು  ಅಲ್ಲಿಯೇ  ಮುಳ್ಳಿನ  ಮಧ್ಯೆ  ಸುಂದರ  ಹೂವಗಿ  ಅರಳಿತ್ತು .


ಅವಳ  ಕೊನೆಯ  ಉಸಿರಿರುವವರೆಗೂ  ಅವಳಲಿ  ಯಾರ  ಮಾತಿಗೂ  ಸ್ಪಂದಿಸುವ  ಆಸೆ  ಇರಲಿಲ್ಲ . ಬಾಳಿನಲಿ  ಪ್ರಿತಿಸಿದವನನ್ನು , ಬಾಳಿಗಿಂತ  ಹೆಚ್ಚಾಗಿ  ಪ್ರಿತಿಸಿದವನನ್ನು  ಕಳೆದುಕೊಂಡ  ಅವಳು ಕಡೆವರೆಗೂ  ತನ್ನ  ಮನಸ್ಸಿನಲ್ಲಿ  ಚೇತನವನ್ನು  ಕಾಣಲೇ  ಇಲ್ಲ …. 


[ವ್ಯಥೆ ಅಲ್ಲ  ಕಥೆ]


Saturday, February 12, 2011

ನೆನಪು

    ಮಾತು  ಮರೆತು  ಹೋಗುತ್ತದೆ . ಆದರೆ  ಈ  ನೆನಪೆಂಬುದು  ನೆನಪಾಗಿ  ನೆನಪೆಂಬ  ಬುತ್ತಿಯನ್ನು  ನೇಯ್ದು  ನಮ್ಮಲ್ಲಿಯೇ,  ನಮ್ಮ ಮನಸ್ಸಲ್ಲಿಯೇ  ಅದನ್ನು  ಬಿಟ್ಟು  ಹೋಗುತ್ತದೆ.  ಸದಾ  ಕಾಲ  ನಮ್ಮೊಂದಿಗೆ  ಇದ್ದು  ಬಿಡುತ್ತದೆ. ಅದ  ಮತ್ತೆ  ಮತ್ತೆ  ನೆನೆಯುತ್ತ  ನಮ್ಮ ಬದುಕಿನ  ಒಂದು  ಭಾಗವಾಗಿ  ಹೊತ್ತು  ತಿರುಗಲು  ಮುಂದಾಗುತ್ತೇವೆ.  ಹಾಗೆ  ಮತ್ತೆ  ಹೊಸ  ನೆನಪುಗಳನ್ನು  ಹೂವಗಿಸಿಕೊಂಡು  ಆ ಬುಟ್ಟಿಯಲ್ಲಿ  ಇಡಲು  ಇಚ್ಚಿಸುತ್ತೇವೆ . ಆ  ಹೂ  ಬುತ್ತಿಯನ್ನು  ಹೂವುಗಳಿಂದ  ಅಲಂಕರಿಸಿ  ಬದುಕೆಂಬ  ಅರಮನೆಯಲಿ,  ಸಂತೋಷವೆಂಬ  ಮಳೆಹನಿ  ತಾಕುವ  ಕಿಟಕಿಯ  ಪಕ್ಕದಲ್ಲಿ  ಇತ್ತು,  ಅದನ್ನು  ನೋಡಿ  ನೆನಪನ್ನು  ಮೆಲುಕು  ಹಾಕುತ್ತ,  ನಮ್ಮ  ಯಾಂತ್ರಿಕ  ಬದುಕಿನ  ಮಧ್ಯೆ  ಬಿಡುವು  ಮಾಡಿಕೊಂಡು  ನೆನಪೆಂಬ  ಶಿಖರವನ್ನೇರಿ  ಇಳಿದು  ಬರಲು  ಮನಸ್ಸಾಗದೆ  ಅಲ್ಲಿಯೇ  ನೆಲಸಿ  ಬಿಡಲು  ಮೊದಲಾಗುತ್ತೇವೆ.  ದುಃಖಕರ  ಘಟನೆಯ  ನೆನೆದು  ಅದಕ್ಕೆ  ನಕ್ಕಿ,  ಸಂತೋಷಕರವಾದ  ನೆನಪಿಗೆ  ನೊಂದು  ನಲಿಯುತ್ತೇವೆ.  ಹಾಗೆಯೆ  ಮತ್ತಿನ್ಯಾವುದೋ  ನೆನಪು  ನಮ್ಮ  ಕಾಡದಿರಲಿ;  ಅದು ಕೇವಲ  ದುಃಖದ  ಸಂಗತಿ;  ಅದು ಅ ರಿವಿಲ್ಲದೆ  ನಡೆದಂತಹ  ಘಟನೆ  ಎಂದು   ಅದರಿಂದ  ದೂರ  ಸರಿಯಲು  ಬಯಸುತ್ತೇವೆ.  ನಲಿವಿನದೋ  ಅಥವಾ  ನೋವಿನದೋ  ನೆನಪು  ಹಿತ  ಕೊಡುವುದಾದರೆ  ಆ  ನೆನಪು  ಮತ್ತೆ  ಮತ್ತೆ  ನೆನಪಗಲೆಂದು  ಆಶಿಸುತ್ತೇವೆ.  ಬರಿಯ  ಕಹಿಯನ್ನೇ  ಕೊಡುವ  ನೆನಪುಗಳು  ಬೇಡವೆಂದು,  ಅದು  ನಮ್ಮನ್ನು  ಸುಳಿಯಬಾರದೆಂದು   ಕೇಳಿಕೊಳ್ಳುತೆವೆ  ಆದರೆ  ನೆನಪೆಂಬುದು  ನಮ್ಮನ್ನು  ಕೇಳಿಬರುತ್ತದೆಯೇ?  ಭಾವನೆಗಳು  ಹೇಳಿ-ಕೇಳಿ  ಬರುತ್ತವೆಯೇ?  ಸುಖ-ದುಃಖ? ನೋವು-ನಲಿವು?  ಯಾವುದೂ  ಕೂಡ  ನಮ್ಮ  ಅಪ್ಪ್ಪಣೆಯೊಂದಿಗೆ  ಬರುವುದಿಲ್ಲ!  ಹಾಗೆಯೆ  ಈ  ನೆನಪೆಂಬುದು  ಕೂಡ.  ಇಷ್ಟವಿಲ್ಲದಿದ್ದರೂ ಸುಮ್ಮನೆ  ಕಳ್ಳ  ನೆಪ  ಮಾಡಿಕೊಂಡು  ನಮ್ಮ  ಕಾಡಿಸುತ್ತದೆ.  ಪೀಡಿಸುತದೆ,  ನಲಿಸುತದೆ, ನೋವಿಸುತದೆ.
    ನೆನಪು  ಒಂದು  ನೆನಪಲ್ಲಿ  ನೆನಪಾಗಿ  ಉಳಿದಿರುವ  ನೆನಪಾಗಿದೆ.  ಮನಸ್ಸನ್ನದಗೊಳಿಸುವ  ನನಪು , ಭಯ  ಹುಟ್ಟಿಸುವ   ನೆನಪು, ಕಿರುನಗೆ  ತರಿಸುವ  ನೆನಪು,  ತುಸು  ಕೋಪವ  ಮೂಡಿಸುವ  ನೆನಪು. ನೆನಪು!  ಸವಿಯಾದ,  ತಿಳಿಯದ ನೆನಪು!  ಕವಿಯ  ಭಾವನೆಯಲಿ ಸಿಲುಕಿ  ಪದವಾಗಿ  ಹೊರಹೊಮ್ಮಿದ  ನೆನಪು. ಪ್ರೇಮಿಗಳ  ನಡುವೆ  ಹೂಮಳೆಯಾಗಿ  ಬಂದ  ನೆನಪು. ಸ್ನೇಹಿತರ  ಬಾಯಿಂದ  ಸಂಭ್ರಮದಿ  ಬಂದ  ಮಾತಿನ  ನೆನಪು. ಅಮ್ಮನ  ಹೃದಯದಲ್ಲಿ  ಕಂದನ  ಗೆಜ್ಜೆಯ  ನಾದದ  ಸವಿ  ನೆನಪು.  ಅಪ್ಪನ  ಎದೆಯಲಿ  ಮಗುವಿನ  ಆಟದ ನೆನಪು.  ತಂಗಿಗೆ  ಅಣ್ಣನ  ಕಿಡಿಗೇಡಿ  ಆಟದ  ನೆನಪು. ಅಣ್ಣನಿಗೆ  ತಂಗಿಯ  ಹುಡುಗಾಟದ  ನೆನಪು.  ಅಕ್ಕನಿಗೆ  ತಮ್ಮನ  ತಂಟೆ  ಪ್ರೆಶ್ನೆಯ ನೆನಪು.  ತಮ್ಮನಿಗೆ  ಅಕ್ಕನ  ಬೈಗುಳಗಳ  ನೆನಪು. ತಂಗಿಗೆ  ಅಕ್ಕನ  ಪ್ರೀತಿಯ  ನೆನಪು. ಅಕ್ಕನಿಗೆ  ತಂಗಿಯ  ಕೂಗಿನ  ನೆನಪು. ವಿಧ್ಯಾರ್ಥಿಗಳಿಗೆ  ಶಿಕ್ಷಕರ  ಬೆತ್ತದೆಟಿನ  ನೆನಪು.
    ನೆನಪು  ನೆನಪು  ನೆನಪು!!!
    ಎಲ್ಲರು  ಪ್ರೀತಿಸುವ  ನೆನಪು. ಎಲ್ಲರು  ಬಯಸುವುದು  ನೆನಪನ್ನ.  ನೆನಪ  ನೊರೆ  ಹಾಲ  ಕುಡಿದು  ಸಂತೋಷ  ಪಟ್ಟು  ಮತ್ತೆ  ಅದನ್ನು ನೆನಪನ್ನಾಗಿಸಿ  ಬಿಟ್ಟು  ನಡೆಯುವುದೇ  ಒಂದು  ಸುಂದರ  ನೆನಪು.
ಸವಿಯಾದ,  ನವಿರಾದ  ನೆನಪು
ಸುಂದರ  ಸೃಷ್ಟಿಯ  ನೆನಪು
ಕಾಲದ  ಜ್ಞಾನದ  ನೆನಪು
ಪ್ರೀತಿಯ  ಸ್ನೇಹದ  ನೆನಪು
ವಿರಸ  ಸರಸದ  ನೆನಪು
ಹೀಗೆ  ನೆನಪು  ನೆನಪು  ಎಂಬ  ಸಾಗರದಲಿ
ಮುಳುಗೆಳಲು  ಬಯಸಿತ್ತು  ಹೃದಯ
ಅಂತೆಯೇ  ಮುಳುಗಿದನೋ  ಈ  ನೆನಪಲಿ
ಆದರೆ  ಏಳಲಾಗಲಿಲ್ಲ  ನನಗಿಲ್ಲಿ.

Tuesday, February 8, 2011

ಭವ್ಯ ಭಾರತ!?


ಪ್ರಜೆಗಳಿಗೆ ಹಕ್ಕಿಲ್ಲದ ಪ್ರಜಾಪ್ರಭುತ್ವ
ಸ್ವಾತಂತ್ರ್ಯವಿಲ್ಲದ ಗಣರಾಜ್ಯ
ಬರಿ ರಾಜಕಾರಣಿಗಳ ದೌರ್ಜನ್ಯ
ಭ್ರಷ್ಟಾಚಾರದಲಿ ಮುಳುಗಿರುವ
ಖಾಸಗಿ, ಸರ್ಕಾರಿ ಸಂಸ್ಥೆ
ನಾಗರಿಕತೆ ಇಲ್ಲದ ನಾಗರಿಕರು
ಅಕ್ಷರಸ್ಥರಾಗಿದ್ದರು ಅನಕ್ಷರಸ್ಥರಾಗಿರುವ
ವಿದ್ಯಾವಂತರು
ಅಕ್ರಮವಾಗಿ ಮತ ನಿಡುವ ಮುರ್ಖರು
ಭಾರತ ಮಾತೆಯ ತುಂಡು ತುಂಡಾಗಿ
ಆವರಿಸುತಿರುವ ವಿದೇಶಿ ಸಂಸ್ಥೆಗಳು
ಇವೆಲ್ಲ ತಿಳಿದೂ ಸುಮ್ಮನಿರುವ ಯುವಕರು
ನಮ್ಮ ಭವ್ಯ ಭಾರತದ ಭಾವಿ ಪ್ರಜೆಗಳು!?


Friday, February 4, 2011

ಒಂದು ಕ್ಷಣದಲಿ



ಒಂದು ಕ್ಷಣದಲಿ
ಮನವನು ದೂಡಾಯ್ತು
ಒಂಟಿತನಕ್ಕೆ

ಒಂದು ಕ್ಷಣದಲಿ
ಮರುಗಿತು ಮನವು
ಒಲವಿನ ನೋವಿಗೆ

ಒಂದು ಕ್ಷಣದಲಿ
ಹೃದಯ ಹೊಳಯ್ತು
ಇನಿಯನ ಮಾತಿಗೆ

ಒಂದು ಕ್ಷಣದಲಿ
ಕಣ್ಣಿನ ಕಟ್ಟೆ ಹೊಡೆಯಿತು
ಮನಸಿಗಾದ ನೋವಿಗೆ.
ಬರಲು ಹೇಳಿದನಲ್ಲ
ಬೆಟ್ಟದ ಬಳಿ ನನ್ನ ನಲ್ಲ
ಬಿಡಲು ಸಿದ್ದಳಾದೆನು ಹಟ್ಟಿ
ಅವನು ಕೊಡಿಸಿದ ಸೀರೆಯ ಉಟ್ಟಿ
ಮುಡಿದೆನು ಕೇಶರಾಶಿಗೆ ಹೂವ
ಕಣ್ಣಿಗೆ ಇಟ್ಟೆ ಕಾಡಿಗೆಯ
ಕಾಲ ಸುತ್ತಿತು ಜಲ್ ಎನ್ನುವ ಕಾಲ್ಗೆಜ್ಜೆ
ಕೈಯ ಸುತ್ತಿತು ಗಲ್ ಎನ್ನುವ ಗಾಜಿನ ಬಳೆ
ಕೊರಳ ಆವರಿಸಿತು ಮುತ್ತಿನ ಸರ
ಬೈತಲೆಯ ಬೊಟ್ಟು ಇಣುಕಿತು ಹಣೆ ಎಂಬ ಇಳಿಜಾರ
ಕಿವಿಯ ತುಂಬಿತು ವಾಲೆ-ಜುಮುಕಿ
ಸಂತಸದಿ ಕಂಡಿತು ಅಕ್ಷಿ.

ಚಿರ ನಿದ್ರೆ ಬಯಸಿದೆ ಮನ!!???



ಬಯಸುವುದು ತಪ್ಪು ಒಡೆಯ
ಬಯಸಿದರೆ ಮುರಿವರು ಹೃದಯ
ಯಾರಿಗೂ ಬೇಕಿಲ್ಲ ನಾನು
ಮಡಿದರೆ ಸಂತಸ ಪಡೆಯದಿಹರೆನು
ಸಾವಿನ ಮಡಿಲೆ ಲೇಸು
ಚಿರ ನಿದ್ರೆ ಪಡೆಯುವುದೇ ಸೊಗಸು
ಸತ್ತರೆ ನಲಿಯುವರು ಮೊದಲು ಜನ
ಖುಷಿಯಲಿ ತುಂಬುವುದು ಅವರ ಮನ
ಕೊರಗುವರು ಕೇವಲ ನಾಲ್ಕು ಜನ
ಮತ್ತೆ ತಳ್ಳುವರು ನೆನಪಿನಿಂದ ನನ್ನ.


ನೊಂದ ಮನಸಿನ ಭಾವನೆ


ಹುರಿ  ಬಿಸಿಲೆ ಬೆಳದಿಂಗಲಾಯಿತು ನನ್ನ ಪಾಲಿಗೆ
ಅಳುತಿದೆ ಮನವು ಅದ ಅಪ್ಪಲು ಆಗದೆ
ಪ್ರೀತಿ ಎಂಬ ಕನಸ ಉಯ್ಯಾಲೆಯ ತೂಗಿ-ತೂಗಿ
ಮುಳುಗಿದೆ ಕಣ್ಣು ಕಣ್ಣಿರಿನ ಅಲೆಗಳಲಿ
ನೋಡು ಬಾಯಾರುತಿದೆ ಪ್ರೀತಿ
ಕಾರಣ ತರುತಿದೆ ನೋವೂ ಜಾಸ್ತಿ
ನೆನಪ ನೆಪದಲಿ ಕರುಗುತಿದೆ ಮನಸಿಲ್ಲಿ
ಮನದ ಪುಟದಿ ಬರೆದ ಕವಿತೆಯ ಮರೆಯಲಾಗದೆ ನಾನಿಲ್ಲಿ
ಕೊಂದೆ ಉಸಿರಲಿದ್ದ ಹಕ್ಕಿ ಗೂಡ
ಹಾಡುತಿರಲಿಲ್ಲವೆ ಅವು ಒಲವಿನ ಹಾಡ
ವಿಸ್ತಾರವಾದ ಈ ಜಗದಲಿ ಪ್ರೀತಿಯ ಉಳಿಸಿಕೊಳ್ಳಲಾದೆ ನಾನಿಲ್ಲಿ
ಆದರೂ ಖುಷಿ ಇದೆ ಈ ನೋವಿನಲಿ
ಏಕೆಂದರೆ ತಿಳಿದಿರುವೇನು ನಾ ಮತ್ತೆ ನಗುವೆನೆಂದು ಬಾಳಿನಲಿ.

ಪ್ರೀತಿಯಲಿ ನೊಂದ ಮನ


ಸಾಕು ಮಾಡು ಇನಿಯ
ನಿನ್ನ ಈ ಹುಸಿ ಪ್ರೀತಿಯ
ಮನವು ಬೆಂದು ನೊಂದಿದೆ
ನೀನಾಡಿದ ಅಪನಂಬಿಕೆಯ ಮಾತಿಗೆ
ಸುಳ್ಳೇ ಆ ಎಲ್ಲಾ ಒಲವಿನ ಮಾತು
ಕೇವಲ ನಟನೆಯೇ ನೀ ಕೊಟ್ಟ ಮುತ್ತು?


ಅವನೋದಾಗಿನಿಂದ

ಹೋದನೋ ಇನಿಯ ಬಲುದೂರ
ಮರಳಿ ಬರುವನೇನೋ ಹತ್ತಿರ.
ತಂಗಾಳಿ ತಂಪು ಬಿಸಿ ಅನಿಸುತಿದೆ ದೇಹಕ್ಕೆ
ಸವಿ ನೋಟವು ಕ್ರುರವಾಗಿದೆ ಕಣ್ಣಿಗೆ.
ತನ್ನ ಜೊತೆಯೇ ಕೊಂಡೊಯ್ದನೋ ನಗೆಯ
ಅಂದೇ ಶುರುಮಾಡಿದನೋ ನನ್ನ ಆತ್ಮದ ಹತ್ಯೆಯ.
ಇದ್ದು ಸತ್ತಂತಿದೆ ನನ್ನ ಮನಸ್ಸು ನೋವಿನಲಿ
ಕಾಣದೆ ಇನಿಯನ ಸನಿಹದಲಿ.
ಇಲ್ಲದೆ ಅವನ ಒಲವು
ಕಾಡುತಿದೆ ಹೃದಯದಲಿ ಕ್ಷಾಮವು.
ಕಣ್ಣಿರಿನ ಮಳೆ ಸುರಿಸಿದರೂ
ಹೋಗುತ್ತಿಲ್ಲ ಮನದ ಬರಗಾಲವು.
ಕಾರ್ಮೋಡ ಕವಿದಾಯ್ತು ಪ್ರೀತಿಯಲಿ
ನಡುಕವು ಶುರುವಾಯ್ತು ಎದೆಯಲಿ
ಪ್ರೀತಿ ಉಳಿಸಿಕೊಲ್ಲುವೆನೇನೋ ಎಂಬ ಭಯದಲಿ
ಶಂಕೆಯು ಮುಡುತಿದೆ ಮನದಲಿ
ಅನಿಸುತಿದೆ ಉಸಿರು ಸತ್ತಂತೆ ಜೀವದಲಿ
ಬೆಂದು ಸೋತಿದೆ ಒಲವು ವಿರಹದಲಿ
ಹರಿಯುತಿದೆ ಕಣ್ಣೀರು ನೋವಿನಲಿ
ತಾಳದೆ ಮರುಗುತಿದೆ ಹೃದಯವು ಭಾವನೆಯಲಿ.

ಮನವಿ

ನಿನ್ನ ಪ್ರೀತಿಯ ಸುರಡಿಯಲಿರುವೆನು ನಾನು,
ಕೈಬಿಡದಿರು ನೀನು
ನಿನ್ನ ಹೃದಯದರಸಿಯಾಗ ಬಯಸಿರುವೆನು ನಾನು,
ದೂರ ತಲ್ಲದಿರು ಎಂದೂ ನೀನು
ಕಲಿಸಿರುವೇನು ಒಲವಿನ ಕರೆಯ,
ಸ್ವಿಕರಿಸದಿರದಿರು ಇನಿಯ
ಪ್ರೀತಿಯ ಆಸರೆಯ ಬೇಡುತಿಹಳು ನಿನ್ನವಳು,
ತೋರದೆ ಇರದಿರು ಪ್ರಿತಿಯನು.
ಪ್ರಿತಿಸುತಿರುವ ಹೂವು ಬಾಡುತಲಿದೆ,
ನಲುಮೆಯ ಮೋಹವು ಕರಗುತಲಿದೆ,
ಪ್ರೀತಿಯ ಭಾವನೆಯನು ಮನಸ್ಸು ಹೊರ ಬಿಸಾಡುತಲಿದೆ,
ತುಟಿಯು ಬೇಡ ಎಂದಿದೆ ಅನುರಾಗದ ಚುಂಬನವ,
ಕಣ್ಣುಗಳು ಸಕೆಂಡಿದೆ ಪ್ರಿಯತಮನಿರುವ ಸ್ವಪ್ನವ,
ನರಕ ಯತನೆಯಲಿ ಮುಳುಗುತಿದೆ ಈ ಜೀವವು,
ಒಲವಿಗೆ ಶರಣಾಗಬೇಡ ಎಂದು ಕೇಳುತ್ತಿಲ್ಲ
ಈ ಪಾಪಿ ಹೃದಯವು.

ಚಿಕ್ಕ ಬಯಕೆಗಳು

ನಿನ್ನ ಒಲವಿನ ಮಡಿಲಲಿ
ನಾ ಮಲಗಬೇಕು,
ತಬ್ಬಿ ನಿನ್ನ ನಾ ಬಿಕ್ಕಿ
ಅಳಬೇಕು,
ನನ್ನ ನೀ ಮಗುವಂತೆ
ಮುದ್ದಿಸಬೇಕು,
ನಾ ಸಂತಸದಿಂದಿರುವಾಗ ಕಣ್ಣುಗಳಿಗೆ
ನೀ ಚುಂಬಿಸಬೇಕು,
ಕಾದು, ಮುನಿದು ಕೂತಿರುವಾಗ ನನ್ನ
ನೀ ಸಂತೈಸಬೇಕು,
ಈ ನನ್ನ ಎಲ್ಲ ಬೇಕು-ಬೇಕುಗಳಿಗೆ
ನೀ ತಲೆದೂಗ ಬೇಕು.

Tuesday, February 1, 2011

ಚಂದಿರನ ಬೆಳದಿಂಗಳಲಿ,
ಮಲಗೆನ್ನ ಮಡಿಲಲಿ.
ಹಾಡುವೆ ನಾ ಲಾಲಿಯ,
ಪ್ರೀತಿ ತುಂಬಿದ ಪದಗಳಲಿ.
ಮಳೆಹನಿಗಳ ಮಲೆಮಡಿ ಕೊಡುವೆ,
ಪ್ರೀತಿಯ ಚುಂಬನವನೆರೆವೆ,
ಮಲಗೆನ್ನ ಒಲವೆ ಮಲಗೆನ್ನ ಒಲವೆ.