Tuesday, June 14, 2011

ರಾತ್ರಿಯಂದು ನ್ನಿನ್ನೊಡನೆ ನನ್ನೀ ಸಂಭಾಷಣೆ...

ನಿನ್ನೆಯ ನೆನೆದೆನು ನಾನು,
ಹೇಳಲಿಚ್ಛಿಸಿದೆ ನಿನಗೆ,
ಹೇಳಲಾಗದೇನೋ ನಾ ತಿಳಿಯೆನು,
ಆದರೆ ಆ ಭಾವನೆಗಳ
ಬಿಚ್ಚಿಡದೆ ಇರೆನು.

ಒಂದೊಮ್ಮೆ ಹೇಳಿದ್ದೆ ನೀ
ಪ್ರೀತಿಬೇಡವೆಂದು,
ಕೇಳಿ ಏರಿತ್ತು ಕೋಪ
ಆ ಹಿಮಾಲಯವನು.
ಮನಸ್ಸಲ್ಲಿ ನಿನ್ನ ಕಳೆದುಕೊಳ್ಳುವೆನೆಂಬ
ಭಯದಲಿ ಕೋಪವು ಹೆಚ್ಚಿತ್ತು.
ನೋವಾಯಿತೆ ಆ ಭಾವದಲಿ
ನಾ ಹೋಡೆದಿದ್ದು?
ಕ್ಷಮಿಸು ತಡೆಯಲಾಗಿರಲಿಲ್ಲ
ನನ್ನ ಮುನಿಸು!

ಪ್ರೀತಿಯಲಿ ಹುಚ್ಚಿಯಾಗಿರುವೆ
ನಿನ್ನಿಂದ ಕ್ಷಣದ ಅಗಲಿಕೆಯೂ
ನಾ ಬಯಸೆನು.
ಏಕಾಂಗಿಯಾದರೆ ನಾನು
ನೋಡು ಹೇಳುತಿರುವೆನು
ಬಿಟ್ಟೋಗುವೆ ಎಲ್ಲವನು
ಆದರೆ ಪ್ರೀತಿಸುವೆ
ಸಾವಲ್ಲು ನಿನ್ನನು.
ಹೀಗೆಂದು ಅತ್ತಿದ್ದೆ ನಿನ್ನೆ.
ಹಸಿಯಾರಿತೇನು? ನಿನ್ನ
ಎದೆಮೇಲಿನ ನನ್ನ
ಆ ಬಾಷ್ಪಾಂಜಲಿಯ ಹನಿ?

ಅಷ್ಟು ಬೈದರೂ, ಹೊಡೆದರು,
ಮುನಿಸಿಕೊಂಡರೂ,
ಮಗುವಂತೆ ಕಂಡೆ ನನ್ನನು.
ಇದರಿಂದ ಆದೆ ನಾ
ಶಾಂತಿ ಚಿತ್ತಳು.
ಆಗ ಕೆನ್ನೆಗೆ, ಗಲ್ಲಕ್ಕೆ,
ಕಣ್ಣಿಗಿಟ್ಟ ಮುತ್ತುಗಳು
ಸಾಕಾದವೇನು?
ಮತ್ತೆ ಬಂದು ಇನ್ನೊಮ್ಮೆ
ಕೊಡಲೇನು?

ನಿನ್ನೊಲವು, ನಿನ್ನ ಅನಿವಾರ್ಯತೆಯ
ದೂರವ ನೆನೆದು
ಅತ್ತಿದ್ದೆ ನಾನು, ದುಃಖಿಸಿದ್ದೆ ನಾನು,
ಆ ಕ್ಷಣ ನಿನ್ನ ನಾ ತಬ್ಬಿದ್ದಾಗ
ಏನೋ ಹೇಳಿ ಸಂತೈಸಿದಲ್ಲ,
ಅದೇನು? ಪುನಃ ಹೇಳು..
ಮತ್ತೆ ದುಃಖದಿ ಇರುವೆನು ನಾನು...!!!!


Sunday, June 12, 2011

ಹೀಗೊಂದು ದಿನ...


ನಿಸರ್ಗದ ಚೆಲುವಿನಲಿ
ನನ್ನ ಇನಿಯನ ಮಡಿಲಲಿ
ಮಲಗಿರಲು ನಾ ಸಂತಸದಲಿ
ಕಂಡೆನು ಸ್ವರ್ಗ ಭುವಿಯಲಿ.

ನಟ್ಟಡವಿಯಲಿ ಹಕ್ಕಿಯೊಂದು ಹಾಡಿತು
ತನ್ನ ಜೋಡಿಯ ಕರೆಯಿತು
ಮಧ್ಯೆ ಮಿಂಚೊಂದು ಮೂಡಿತು
ಹೆಣ್ಣು ಹಕ್ಕಿಯ ಹೃದಯವು ಹೇದರಿತು.

ಗಂಡು ಹಕ್ಕಿ ಸಂತೈಸಲು ಮುಂದಾಯಿತು
ತನ್ನ ಜೋಡಿ ಹಕ್ಕಿಗೆ ಧೈರ್ಯ ತುಂಬಿತು
ಹೆಣ್ಣು ಹಕ್ಕಿಯ ಕಣ್ಣು ಸಂತಸದಿ ಕೂಡಿತು
ಪ್ರಿಯನ ಜೊತೆ ಗೂಡು ಸೇರಿತು.

ಇನಿಯನ ಮಡಿಲಲಿ ಮಲಗಿ ಇದ ಕಣ್ಣು ನೋಡುತಿತ್ತು
ಕಂಡ ಕಣ್ಣು ಮುಗುಳ್ನಗೆಯಲಿ ಉತ್ತರಿಸಿ
ಪ್ರಿಯನಾಗಿರುವ ನನ್ನೊಲವು ಹೇಗೋ ಹೆಚ್ಚಾಯಿತು
ಕಾರಣ ಅದು ಮುತ್ತಿನ ಮೂಲಕ ತೋರಿಕೊಂಡಿತು.


Wednesday, June 8, 2011

ಉಸಿರು ನಿಂತರೆ ಸಾವು ಎಂದು ತಿಳಿದು ಇನ್ನು ಕಾಯುತಿರುವೆ


ಶುರುವಾಗಿತ್ತು ನಮ್ಮೊಲವು
ಕೇವಲ ಸಂದೇಶದಲಿ,
ಚಿಗುರೊಡೆಯಿತು ಸಂತೋಷದಲಿ
ಬೆಳೆಯಿತು ಹರುಷದಲಿ.

ಸಣ್ಣ ಪುಟ್ಟ ಮಾತಿಗೂ ಮನಸ್ತಾಪ
ಚಿಕ್ಕ ಚಿಕ್ಕ ವಿಷಯದಲ್ಲೂ ಉತ್ಸಾಹ.
ಹೀಗೆ ಎಷ್ಟು ಚೆಂದವಿತ್ತು
ಆ ನಿನ್ನೊಡನೆ ಕಳೆದ ಸಮಯವು.

ನನ್ನ ನೋವೆಲ್ಲ ನಿನ್ನದೆಂದು ತಿಳಿದವ ನೀನು
ನನ್ನ ಸಂತೋಷವೆಲ್ಲ ನಿನ್ನದೆಂದವ ನೀನು.
ಮಿತಿ ಇಲ್ಲದ ಪ್ರೀತಿಯಾಗಿತ್ತು ಅಂದು
ನಿನ್ನ ಪ್ರೀತಿ.

ಆದರೆ ಎಲ್ಲಿ ಬಿರುಕು ಮೂಡಿತೊ
ನಮ್ಮ ಪ್ರೀತಿ ಮಹಲಲಿ,
ಯಾರು ನಿಂಬೆ ಹುಳಿ ಹಿಂಡಿದರೊ
ನಮ್ಮ ಪ್ರೀತಿ ಹಾಲ್ಗಡಲಲಿ,
ನಶಿಸಿ ಹೋಯಿತು ನಮ್ಮ ಪ್ರೀತಿ!

ಏಕೆ ಆ ರೀತಿ ಇದ್ದವ ಹೀಗಾದೆ
ಎಂದು ತಿಳಿಯಲೋಗಿ ನಾ ನೊಂದೆ
ನೊವಲ್ಲೆ ಇರುವೆ!

ಪ್ರೀತಿ ಎಂದರೆ ನೀನು
ನೀನು ಎಂದರೆ ಉಸಿರು
ಉಸಿರು ನಿಂತರೆ ಸಾವು ಎಂದು ತಿಳಿದು
ಇನ್ನು ಕಾಯುತಿರುವೆ,
ನಿನ್ನ ಒಲವ ಶಾಶ್ವತವಾಗಿ ಪಡೆಯದ

ನತದೃಷ್ಟ ಹುಡುಗಿ. . . !