ಶುರುವಾಗಿತ್ತು ನಮ್ಮೊಲವು
ಕೇವಲ ಸಂದೇಶದಲಿ,
ಚಿಗುರೊಡೆಯಿತು ಸಂತೋಷದಲಿ
ಬೆಳೆಯಿತು ಹರುಷದಲಿ.
ಸಣ್ಣ ಪುಟ್ಟ ಮಾತಿಗೂ ಮನಸ್ತಾಪ
ಚಿಕ್ಕ ಚಿಕ್ಕ ವಿಷಯದಲ್ಲೂ ಉತ್ಸಾಹ.
ಹೀಗೆ ಎಷ್ಟು ಚೆಂದವಿತ್ತು
ಆ ನಿನ್ನೊಡನೆ ಕಳೆದ ಸಮಯವು.
ನನ್ನ ನೋವೆಲ್ಲ ನಿನ್ನದೆಂದು ತಿಳಿದವ ನೀನು
ನನ್ನ ಸಂತೋಷವೆಲ್ಲ ನಿನ್ನದೆಂದವ ನೀನು.
ಮಿತಿ ಇಲ್ಲದ ಪ್ರೀತಿಯಾಗಿತ್ತು ಅಂದು
ನಿನ್ನ ಪ್ರೀತಿ.
ಆದರೆ ಎಲ್ಲಿ ಬಿರುಕು ಮೂಡಿತೊ
ನಮ್ಮ ಪ್ರೀತಿ ಮಹಲಲಿ,
ಯಾರು ನಿಂಬೆ ಹುಳಿ ಹಿಂಡಿದರೊ
ನಮ್ಮ ಪ್ರೀತಿ ಹಾಲ್ಗಡಲಲಿ,
ನಶಿಸಿ ಹೋಯಿತು ನಮ್ಮ ಪ್ರೀತಿ!
ಏಕೆ ಆ ರೀತಿ ಇದ್ದವ ಹೀಗಾದೆ
ಎಂದು ತಿಳಿಯಲೋಗಿ ನಾ ನೊಂದೆ
ನೊವಲ್ಲೆ ಇರುವೆ!
ಪ್ರೀತಿ ಎಂದರೆ ನೀನು
ನೀನು ಎಂದರೆ ಉಸಿರು
ಉಸಿರು ನಿಂತರೆ ಸಾವು ಎಂದು ತಿಳಿದು
ಇನ್ನು ಕಾಯುತಿರುವೆ,
ನಿನ್ನ ಒಲವ ಶಾಶ್ವತವಾಗಿ ಪಡೆಯದ
ನತದೃಷ್ಟ ಹುಡುಗಿ. . . !
Wow wow !!!!Nice !!
ReplyDeleteNice Lines....
ReplyDeleteಏಕೆ ಆ ರೀತಿ ಇದ್ದವ ಹೀಗಾದ ? ....
ಬಹುಶ: ಪ್ರೇಮ ಪರೀಕ್ಷೆಗೆ ಸಿದ್ದ ಇರಲಿಲ್ಲ ಅನಿಸುತ್ತೆ .......
Good lines ....
ReplyDeletenice ....
@girish,
ReplyDeletethank u so much....
@sandeep,
haage irbahudeno...:P
@jyothibelagibarali,
thank u:)
nice lines.........:)
ReplyDelete