Sunday, July 1, 2012

ನಾನಿನ್ನು ವಿಧವೆ!


ಅಮ್ಮನ ಒಡಲಲ್ಲಿ
ನನಗಿಂದು ಸಂತಸ.
ಕಾಣಲೊರಟಿರುವೆ
ಬಾಹ್ಯ ಲೋಕವ!

ನಾನೊಂದು ಹೆಣ್ಣು!
ಅಯ್ಯನ ಕಂಗಳಲ್ಲಿ ತೃಪ್ತಿಯಿಲ್ಲ,
ಅಜ್ಜ-ಅಜ್ಜಿಯ ಹಿಡಿ ಶಾಪವೇ
ಅವ್ವನಿಗೆಲ್ಲ.
ಕಣ್ಣಲ್ಲೇನೋ ಕಂಡರು ಕೊಂಚ ಪ್ರೀತಿ,
ತುಂಬಿದೆ ಅಸಹಾಯಕತೆ ಸ್ಥಿತಿ.

ಐದು ತುಂಬುವಷ್ಟರಲ್ಲಿ
ಮನೆಯ ಕೆಲಸ ಸಿದ್ಧಿ
ನೆಂಟರಿಷ್ಟರು 'ಅಯ್ಯೋ'ಎನ್ನುವರು
ಅವ್ವನ ನೋಡಿ;
'ಛೇ! ಗಂಡಾಗಲಿಲ್ಲವಲ್ಲಾ!' ಎಂದು.

ಒಂಬತ್ತಕ್ಕೆ, ಕೊರಳಲ್ಲಿ
ಹಳದಿ ದಾರಜಾತ್ರೆಗೆ ಹೋದರೂ
ಬಣ್ಣದ ಟೇಪು ಖರೀದಿಸುವ ತವಕ.
ಬಳೆಗಾರ ಬಂದರೆ ಕೈಯ
ತುಂಬೆಲ್ಲ ಬಣದ ಚಿತ್ತಾರ!

ಹದಿಮೂರಕ್ಕೆ ಬಂತು
ರಂಗು ರಂಗಿನ ಆಸೆಗಳು
ನನ್ನ ಓರಗೆಯವರ ಜೊತೆ
ಆಡಿ ನಲಿಯಬೇಕೆಂದು.
ತಿಂಗಳುಗಳು ತುಂಬುವಷ್ಟರಲ್ಲಿ,
ಮಡಿಲು ತುಂಬಿಹೋಯಿತು!

ಹೆಣ್ಣು ಮಗು!
ಏಕೆ ಎಂದು ತಿಳಿಯದಿದ್ದರೂ
ಕಣ್ಣೇಕೋ ಹನಿಯುತಿತ್ತು.
ಅತ್ತೆ-ಮಾವ-ವಾರಗಿತ್ತಿಯರ
ಹೀಯಾಳಿಕೆಯಲ್ಲೇ ಬೆಳೆಯುತಿದೆ
ಮಗು ತೆವಳುತಿದೆ.

ಹುಟ್ಟಿ ವರುಷ ತುಂಬಿಹುದು
ಹಾಲು ಬಿಡಿಸಿಲ್ಲ
ಹುಟ್ಟು ದಿನಕ್ಕೆ ಸಡಗರವಿಲ್ಲ
ಸಿಹಿಯಿಲ್ಲ.
ಹೊಲಗೇರಿಯ ಶ್ವಾನದಂತೆ
ಹಳಸೇ ನನಗೆ; ಮಗುವಿಗೆ!

ಹಾಂ! ಚೀರಿದ ಗಂಡನೆಂಬುವವ,
ಉಸಿರಿಡಿದ; ಒಮ್ಮೆಲೇ ಬಿಟ್ಟೇಬಿಟ್ಟ!
ಮನೆಯೆಂಬುದು ನರಕವಾಗಿ ಹೋಯಿತು
ಆಡುವವರ ಬಾಯಿಗೊಂದು ಸುದ್ಧಿ ಸಿಕ್ಕಿತು
ಮೌನದ ನಿಟ್ಟುಸಿರು ತಿಳಿಯಲಿಲ್ಲ ಯಾರಿಗೂ!

ಸಿಂಗರಿಸಿದರು ವಧುವಂತೆ;
ಮುಡಿಯ ತುಂಬೆಲ್ಲ ಮಲ್ಲೆ, ಕನಕ
ಕೈಯ ತುಂಬೆಲ್ಲ ಹಸಿರು ಕೆಂಪು ಬಳೆ
ಹಣೆಯಲ್ಲಿ ರಾರಜಿಸುವ ಸಿಂಧೂರ
ಕೆನ್ನೆಗೆ ಲಕ್ಶ್ಮೀ ದೇವಿಯ ಅರಿಶಿನ
ಕಿವಿಗೆ ಜುಮಕಿ, ಕಾಲಿಗೆ ಸುತ್ತು ಗೆಜ್ಜೆ!

ಹೊಯ್ದರು ಸ್ಮಶಾನಕ್ಕೆ.
ಕಿತ್ತೆಸೆದರೇಕೆ ಮಲ್ಲಿಗೆ?
ಒಡೆದ ಬಳೆಯ ಸದ್ದಲಿದೆ
ನನ್ನ ಶೋಕ ಗೀತೆ.
ಸಿಂಧೂರವಿಲ್ಲದ ಖಾಲಿ ಹಣೆ
ಸಾರುವುದು ಮುಂದಿನ ಕಥೆ!
ನಾನಿನ್ನು ವಿಧವೆ!

6 comments:

  1. "ವಿಧವೆ, ನೊಂದ ಮನಸಿನ, ಹತ್ಯಾಕಾಂಡ, ನೊಂದ ಹುಡುಗಿ, ಶೃತಿಯ ಮರೆತಿಹ, ನೀ ಹೋದ ಮೇಲೆ, ವಿಧಿಯಾಟ, ಸಾಯುವ ಮನ, ಉಸಿರು ನಿಂತರೆ,
    ಶೋಕ ಪತ್ರ, ಪಾಪಿ, ಬೇಸರವು ತಂದ, ಕಥೆ ಅಲ್ಲ ವ್ಯಥೆ, ಚಿರ ನಿದ್ರೆ ಬಯಸಿದೆ, ನೊಂದ ಮನ, ಅವನೋದಾಗಿನಿಂದ, ಕಾರ್ಮೋಡ ಕವಿದಾಯ್ತು, ಹೂವು ಬಾಡುತಲಿದೆ, ನಕ್ಷತ್ರ ಕಾರ್ಮೋಡದಲಿ ಮರೆಯಾದಂತ, ವಿರಹ ಕವಿತೆ".....

    looks like the pages from the diary of a holocaust survivor, isn't it? well, these are the excerpts from the titles of your own articles, can you believe that!? almost 33% of your articles are on depressing topics. ನಿಜವಾಗ್ಲೂ ನೀವು ಈಪಾಟಿ ನೋವು ಅನುಭವಿಸ್ತಾ ಇದೀರಾ?? ಅಲ್ಲಾರೀ, ಇವೆಲ್ಲ ಈಗ ತಾನೇ ಪಿ.ಯು.ಸಿ. ಮುಗಿಸಿದ ಹುಡುಗಿ ಬರೆದ writings ಅಂದ್ರೆ ಯಾರಾದ್ರೂ ನಂಬ್ತಾರೇನ್ರಿ? ಒಂದೇ delivery ನಲ್ಲಿ ಆರು ಜನ ಹೆಣ್ಣು ಮಕ್ಕಳಾಗಿ, fresh ಆಗಿ ಗಂಡನ್ನ ಕಳ್ಕೊಂಡಿರೋ ಹೆಂಗಸು ಬರೆದಿರೋ articles ಅಂದ್ರೆ ಏನೋ ಸ್ವಲ್ಪ ನಂಬಿಕೆ ಬರಬಹುದು. to be frank, even 'the diary of anne frank' and 'my story' by kamala das were less depressing compared to your write ups. if you've not read them yet, read them. i strongly recommend. if nothing else, they will make you realize that your suffering (if at all there is any) is absolutely nothing compared to others in the wide world out there....

    high-school, pu, are such amazing transition phases in a person's life! people will be so full of energy and enthusiasm during that time. its really a treat for the eyes just to watch them! they will be so bubbly! i think that's why Swami Vivekananda said "Give me 100 energetic young men and I shall transform India." in such a case, why disturb oneself more by pondering over the complexities of life, misery, struggle, insecurity, frustration, failure, lovelornness etc etc, isn't it? t-shirt, jeans ಹಾಕ್ಕೊಂಡು ಮನೆ ಹೊರಗೆ ಕಾಲಿಟ್ರೆ ಮಧ್ಹ್ಯಾನದ ಒಳಗೆ ಹತ್ತು ಜನ ಹುಡುಗ್ರು propose ಮಾಡಿರ್ತಾರೆ, ಅಂಥಾದ್ರಲ್ಲಿ ಇದ್ಯಾವ ಸೀಮೆ ವಿರಹವ್ಯಥೇನ್ರೀ ನಿಮ್ದು?? ನಾನು ಹೇಳ್ತಾ ಇರೋದು ಸರಿ ತಾನೆ?

    think and decide yourself. after all, you're matured enough to think on your own....

    regs,
    -ರಂಕುಸ

    ಅಂದಹಾಗೆ ಮರ್ತಿದ್ದೆ-- ಸ್ವಲ್ಪೇ ಸ್ವಲ್ಪ grammar ಕಡೆನೂ ಗಮನ ಕೊಡಿ. for e.g. "ಹುರಿ ಬಿಸಿಲೆ ಬೆಳದಿಂಗಲಾಯಿತು..." should be "ಉರಿಬಿಸಿಲೆ ಬೆಳದಿಂಗಳಾಯಿತು.." ಮೊದಲೇ ಚೆನ್ನಾಗಿ ಬರೀತೀರ, ಅದರಲ್ಲೂ error-free ಇದ್ದರೆ, ಬಂಗಾರಕ್ಕೆ ಕುಂದಣವಿಟ್ಟಂತೆ ಓದೋಕೆ ಚೆನ್ನಾಗಿರುತ್ತೆ. oh that reminds me some of my fav lines! "ಉರಿಬಿಸಿಲು ಹುಣ್ಣಿಮೆಯಂತೆ ಹೆಣ್ಣೇ ನೀ ನಗುವಾಗ...", "ಬೆಳದಿಂಗಳಾಯಿತು ಬಿಸಿಲು...", "ಉರಿವಾ ಬಿಸಿಲಾ ಸುರಿವಾ ರವಿಯೇ ತಂಪಾದ ಚಂದ್ರನಂತೆ..."!! how beautiful!! these are the lines from 3 movie songs. guess if you can, and enjoy if you ever get hold of them! good luck and keep up the good work! :-)

    ReplyDelete
  2. ತುಂಬ ಚೆನ್ನಾಗಿದೆ..ಭಾವ ಪೂರ್ಣವಾಗಿದೆ...

    ReplyDelete
  3. ನಮಸ್ಕಾರ ಹಾಗೂ ನನ್ನ ಬ್ಲಾಗಿಗೆ ಸ್ವಾಗತ ರಂಕುಸರವರೆ...:)
    Oh my god…!!! This is what I kinda shouted seeing your comment... this is the first time I have ever got a lenthy comment.! Thanks a lot for the time..!
    Holocaust surviour…? Hehehe(i couldnt stop myself laughing for this)….well, not at all. I’m not that kinda girl whom you have picturised..:)
    I’m just like any other girl of my age. being happy for no reason is what i actually do..i actually dont have time for sadistic thinking :D

    ನಿಮಗೆ ಬರೀ ದುಃಖದ ಕವಿತೆಗಳು ಮಾತ್ರ ಕಾಣ್ಸಿದೆ ಅನಿಸುತ್ತೆ....ಬೇರೆದು ಕೂಡ ಇದೆ ಓದಿ ನೋಡಿಪ..:)
    ಅಯ್ಯೋ ಮೊದಲ್ನೆ ಹೆರಿಗೆಯಲ್ಲೆ ಆರು ಹೆಣ್ಣು ಮಕ್ಕಳು!!, ಅಲ್ದೆ ಗಂಡ ಇಲ್ಲದೆ ಇರೊ ಹೆಂಗಸು ಬರೆದ ಹಾಗೆ ಇದೆಯ...?
    I shall take it as a compliment…:)

    about anne frank and kamala das.., i havent read both's. Will definetly do read once. But, as you have thought, I am not suffering from any of those feelings. If at all I had also, I wouldn’t be thinking that no one will ever suffer like me and no one will ever come through the bad things which i have crossed...no..!absolutely no! I wouldn’t say that! Thank god I don’t have any of those things which make me say so.
    And abt jeans and t-shirts,
    ಬರಿ ಹೊರ ಉಡುಪು ನೋಡಿ ಲವ್ ಯು ಅಂದ್ಕೊಂಡು ಬರೊ ಹುಡುಗರಿಗೆ ಬಿದ್ದು, ನೊಂದು ಹೋಗಿರೊ ಹುಡುಗೀರು ತುಂಬಾ ಇದಾರೆ...ನಾನು ಬರ್ದಿರೊ ಕವಿತೆಗಳಿಗೆಲ್ಲ ಅವರೇ ಸ್ಪೂರ್ತಿ. ನನ್ನ ಗೆಳತಿಯರಲ್ಲೆ ಮೋಸ ಹೋದವರು ತುಂಬಾ ಇದಾರೆ. ಅವರ ಮಾತುಗಳನ್ನ ಕೇಳಿ, ಅದೇ ರೀತಿ ನನಗೇ ಆದರೆ ಯಾವ ಭಾವನೆ ನನಗೆ ಇರುತ್ತೆ ಅಂತ ಈ ಬರವಣಿಗೆ ಮೂಲಕ ತೋರ್ಸಿರೊದು...
    Love is not just a thing which gets attracted to outer visibility but the inner hidden feeling..! isnt it?

    ಇನ್ನು ವ್ಯಾಕರಣ ಕುರಿತಾಗಿ, ನಿಜ ಹೇಳ್ಬೆಕು ಅಂದ್ರೆ, ನಾನು ಅ, ಹ, ಆ, ಈ ಅಕ್ಷರದ ಉಚ್ಚಾರಣೆಯನ್ನ ಈಗ ಎರಡು ವರುಷದ ಹಿಂದೆಯಷ್ಟೇ ಸರಿಯಾಗಿ ಕಲಿತದ್ದು.. ಮೊದಲು ಅ ಬದಲು ಹ, ಹ ಬದಲು ಅ...:P:)
    ಕಂಡಿತವಾಗಿಯು, ಮುಂದಿನ ಕವಿತೆಗಳಲ್ಲಿ ಈ ರೀತಿ ಹೆಚ್ಚು ತಪ್ಪಾಗದಂತೆ ನೋಡಿಕೊಳ್ಳುತ್ತೇನೆ... :)

    ReplyDelete
  4. @ಗಿರೀಶ್. ಎಸ್,
    ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು..:)

    ReplyDelete
  5. ಪಿಯುಸಿಗೇ ಯಾಕಮ್ಮ ಇಂತ ಕವಿತೆ ?
    ಬದುಕಿನ ನೈಜತೆ ಕೆಲವೊಂದು ಬಾರಿ ವಯಸ್ಸಾದ ಮೇಲೆ ನೋಡಿದರೇನೇ ಒಳ್ಳೇದು.
    ಬರೆಯುತ್ತಿರಿ.
    ಸ್ವರ್ಣಾ

    ReplyDelete