ಕನ್ನಡಿ ಹಿಂದೊಂದು
ಲೋಕವಿದೆ,
ಮುಖವಾಡದ
ಹ್ಯಾಲೋವೀನ್ ಹಬ್ಬವಿದೆ.
ಕಂಡದೆಲ್ಲವೂ ಭ್ರಮೆಯೇ.
ಹೊರಗೊಂದು ಒಳಗೊಂದು.
ಬೀಭತ್ಸ ದಿನಗಳಲೊಂದು
ತೋರಿಕೆಯ ಒಯ್ಯಾರ.
ಗಂಟಲು ಒಣಗುವಷ್ಟು ಚೀರಿದರೂ,
ಆಂತರ್ಯದಲೆಲ್ಲೊ
ನೀರವದ ಹುಡುಕಾಟ!
ಮುಕ್ತನಾಗುವ ಹಂಬಲ!
ಕಾಲಕ್ಕೆ ತಕ್ಕಂತೆ
ಸಿಕ್ಕ ವೇಷ ಧರಿಸುವ
ರೂಪಧಾರಿಗಳು!
ಥೇಟ್ ಶೋರೂಂ ನ
ಬೊಂಬೆಗಳಂತೆ!
ಟಿಶ್ಯೂ ಪೇಪರ್ ಅಂತೆ
ಬೆಸೆದುಕೊಂಡ ಸಂಬಂಧಗಳ
ಹರಾಜು ಹಾಕುವ
ಸಿದ್ಧ ಮಾರುಕಟ್ಟೆ!
ಹಳಸಿದ ಭಾವನೆಗಳ
ಉಣ್ಣ ಬಡಿಸೊ
ಭಟ್ಟರ ಪಾಕಶಾಲೆ.
ಕನ್ನಡಿ ಹಿಂದೆ ಹೀಗೊಂದು
ಲೋಕವಿದೆ
ಮುಖವಾಡದ
ಹ್ಯಾಲೋವೀನ್ ಹಬ್ಬವಿದೆ.
-ವಿದ್ಯಾ ರಮೇಶ್
ಲೋಕವಿದೆ,
ಮುಖವಾಡದ
ಹ್ಯಾಲೋವೀನ್ ಹಬ್ಬವಿದೆ.
ಕಂಡದೆಲ್ಲವೂ ಭ್ರಮೆಯೇ.
ಹೊರಗೊಂದು ಒಳಗೊಂದು.
ಬೀಭತ್ಸ ದಿನಗಳಲೊಂದು
ತೋರಿಕೆಯ ಒಯ್ಯಾರ.
ಗಂಟಲು ಒಣಗುವಷ್ಟು ಚೀರಿದರೂ,
ಆಂತರ್ಯದಲೆಲ್ಲೊ
ನೀರವದ ಹುಡುಕಾಟ!
ಮುಕ್ತನಾಗುವ ಹಂಬಲ!
ಕಾಲಕ್ಕೆ ತಕ್ಕಂತೆ
ಸಿಕ್ಕ ವೇಷ ಧರಿಸುವ
ರೂಪಧಾರಿಗಳು!
ಥೇಟ್ ಶೋರೂಂ ನ
ಬೊಂಬೆಗಳಂತೆ!
ಟಿಶ್ಯೂ ಪೇಪರ್ ಅಂತೆ
ಬೆಸೆದುಕೊಂಡ ಸಂಬಂಧಗಳ
ಹರಾಜು ಹಾಕುವ
ಸಿದ್ಧ ಮಾರುಕಟ್ಟೆ!
ಹಳಸಿದ ಭಾವನೆಗಳ
ಉಣ್ಣ ಬಡಿಸೊ
ಭಟ್ಟರ ಪಾಕಶಾಲೆ.
ಕನ್ನಡಿ ಹಿಂದೆ ಹೀಗೊಂದು
ಲೋಕವಿದೆ
ಮುಖವಾಡದ
ಹ್ಯಾಲೋವೀನ್ ಹಬ್ಬವಿದೆ.
-ವಿದ್ಯಾ ರಮೇಶ್
ಚೆನಾಗಿದೆ ವಿದ್ಯಾ ಅವರೆ...ಇಷ್ಟವಾಯಿತು.
ReplyDelete"ಮುಖವಾಡದ
ಹ್ಯಾಲೋವೀನ್ ಹಬ್ಬವಿದೆ."
ಎಂಬಲ್ಲಿಯೇ ಕವನ ಸೆಳೆದುಕೊಳ್ಳುತ್ತದೆ...
ಬಳಸಿರುವ ಪ್ರತಿಮೆಗಳಲ್ಲೂ ಹೊಸತನದ ಕಂಪಿದೆ :)....ಖುಷಿ ಆಯ್ತು ಓದಿ..ಇನ್ನಷ್ಟು ಕವನಗಳು ಬರಲಿ :) :).ಧನ್ಯವಾದಗಳು ಸುಂದರ ಕವನಕ್ಕಾಗಿ..
ನಮಸ್ತೆ :)
ಧನ್ಯವಾದಗಳು ಚಿನ್ಮಯ ಭಟ್... :)
Deleteಕನಸುಗಳನ್ನು ವಾಸ್ತವಕ್ಕೆ ಬೆಸೆಯುವ ಪ್ರಯತ್ನ, ಪದ್ಯದ ಫಾರ್ಮ್ಯಾಟ್ ಗೆ ಹೊಂದಬಹುದೇ ಎನ್ನುವ ಅನುಮಾನವಿತ್ತು. ಓದಿ ಮುಗಿಸಿದ ನಂತರ ಕೇಂದ್ರ ಚದುರಿದ ಅನುಭವ! ಮತ್ತೊಂದು ಎಡಿಟಿಂಗ್ ನಂತರ ಇನ್ನೂ ಪಕ್ಕಾಗಬಹುದು.. ಪ್ರಯತ್ನಿಸು. ಹೊಸತನದ ಪ್ರಯತ್ನಕ್ಕೊಂದು ಭೇಷ್!
ReplyDelete- ಪ್ರಸಾದ್.ಡಿ.ವಿ.
ಥ್ಯಾಂಕ್ ಯು ಪ್ರಸಾದ್.. ಹಮ್ ಎಡಿಟ್ ಮಾಡಲು ಟ್ರೈ ಮಾಡ್ತೇನಿ..
Delete