Wednesday, January 22, 2014

ಮುಖವಾಡದ ಲೋಕ

ಕನ್ನಡಿ ಹಿಂದೊಂದು 
ಲೋಕವಿದೆ,
ಮುಖವಾಡದ
ಹ್ಯಾಲೋವೀನ್ ಹಬ್ಬವಿದೆ.

ಕಂಡದೆಲ್ಲವೂ ಭ್ರಮೆಯೇ.
ಹೊರಗೊಂದು ಒಳಗೊಂದು.
ಬೀಭತ್ಸ ದಿನಗಳಲೊಂದು 
ತೋರಿಕೆಯ ಒಯ್ಯಾರ. 

ಗಂಟಲು ಒಣಗುವಷ್ಟು ಚೀರಿದರೂ,
ಆಂತರ್ಯದಲೆಲ್ಲೊ
ನೀರವದ ಹುಡುಕಾಟ! 
ಮುಕ್ತನಾಗುವ ಹಂಬಲ!

ಕಾಲಕ್ಕೆ ತಕ್ಕಂತೆ 
ಸಿಕ್ಕ ವೇಷ ಧರಿಸುವ
ರೂಪಧಾರಿಗಳು!
ಥೇಟ್ ಶೋರೂಂ ನ 
ಬೊಂಬೆಗಳಂತೆ! 

ಟಿಶ್ಯೂ ಪೇಪರ್ ಅಂತೆ 
ಬೆಸೆದುಕೊಂಡ ಸಂಬಂಧಗಳ
ಹರಾಜು ಹಾಕುವ 
ಸಿದ್ಧ ಮಾರುಕಟ್ಟೆ!
ಹಳಸಿದ ಭಾವನೆಗಳ 
ಉಣ್ಣ ಬಡಿಸೊ
ಭಟ್ಟರ ಪಾಕಶಾಲೆ. 

ಕನ್ನಡಿ ಹಿಂದೆ ಹೀಗೊಂದು 
ಲೋಕವಿದೆ 
ಮುಖವಾಡದ 
ಹ್ಯಾಲೋವೀನ್ ಹಬ್ಬವಿದೆ.

-ವಿದ್ಯಾ ರಮೇಶ್

4 comments:

  1. ಚೆನಾಗಿದೆ ವಿದ್ಯಾ ಅವರೆ...ಇಷ್ಟವಾಯಿತು.
    "ಮುಖವಾಡದ
    ಹ್ಯಾಲೋವೀನ್ ಹಬ್ಬವಿದೆ."
    ಎಂಬಲ್ಲಿಯೇ ಕವನ ಸೆಳೆದುಕೊಳ್ಳುತ್ತದೆ...
    ಬಳಸಿರುವ ಪ್ರತಿಮೆಗಳಲ್ಲೂ ಹೊಸತನದ ಕಂಪಿದೆ :)....ಖುಷಿ ಆಯ್ತು ಓದಿ..ಇನ್ನಷ್ಟು ಕವನಗಳು ಬರಲಿ :) :).ಧನ್ಯವಾದಗಳು ಸುಂದರ ಕವನಕ್ಕಾಗಿ..

    ನಮಸ್ತೆ :)

    ReplyDelete
    Replies
    1. ಧನ್ಯವಾದಗಳು ಚಿನ್ಮಯ ಭಟ್... :)

      Delete
  2. ಕನಸುಗಳನ್ನು ವಾಸ್ತವಕ್ಕೆ ಬೆಸೆಯುವ ಪ್ರಯತ್ನ, ಪದ್ಯದ ಫಾರ್ಮ್ಯಾಟ್ ಗೆ ಹೊಂದಬಹುದೇ ಎನ್ನುವ ಅನುಮಾನವಿತ್ತು. ಓದಿ ಮುಗಿಸಿದ ನಂತರ ಕೇಂದ್ರ ಚದುರಿದ ಅನುಭವ! ಮತ್ತೊಂದು ಎಡಿಟಿಂಗ್ ನಂತರ ಇನ್ನೂ ಪಕ್ಕಾಗಬಹುದು.. ಪ್ರಯತ್ನಿಸು. ಹೊಸತನದ ಪ್ರಯತ್ನಕ್ಕೊಂದು ಭೇಷ್!

    - ಪ್ರಸಾದ್.ಡಿ.ವಿ.

    ReplyDelete
    Replies
    1. ಥ್ಯಾಂಕ್ ಯು ಪ್ರಸಾದ್.. ಹಮ್ ಎಡಿಟ್ ಮಾಡಲು ಟ್ರೈ ಮಾಡ್ತೇನಿ..

      Delete