ಗುಂಪು ಗದ್ದಲದಲ್ಲೂ ಒಂಟಿ ಅನಿಸುವಂತೆ ಮಾಡುವ,ನಗುವಾಗ ಒಮ್ಮೆಲೆ ಕಣ್ಣಂಚ ತೇವಕೊಳಿಸುವ, ಅಳುವಾಗ ನಗು ಮೂಡಿಸುವ, ಮಾತಿನಲಿ ಮೌನತಾಳುವಂತೆ; ಮೌನದಲಿ ಮಾತಾಡುವಂತೆ ಮಾಡುವ ನೆನಪುಗಳೆಂಬ ಅಲೆಗಳಲಿ ಬದುಕಿನ ನೌಕೆ ಚಿರವಾಗಿ ಸಾಗಲಿ.
Wednesday, January 26, 2011
Sunday, January 16, 2011
ಹೇಳಬೇಕೆ ನಮ್ಮ ಸ್ನೇಹ ಬಳಗದ ಬಗ್ಗೆ?
ನಮಗಿಲ್ಲ ಯಾರ ಮೇಲಿಯು ಹಗೆ.
ಇರುವೆವು ಸಂತಸದಿ ಎಂದೂ ಒಗ್ಗಟಿನಲಿ,
ಹಗೇವು ದೂರ ಎಂದೂ ನೋವಿನಲಿ.
ಒಬ್ಬೊಬ್ಬರದು ಒಂದೊಂದು ವರ್ತಿಸುವ ರೀತಿ,
ಆದರೂ ಯಾವ ಕೊರತೆಯೂ ಇಲ್ಲ ನಮ್ಮ ಪ್ರೀತಿಯಲಿ.
ಇರುವಳು ಒಬ್ಬಳು ಸಂಚಿತ ಎಂದೂ,
ಅವಳನು ಕರೆಯುವೆವು ಪ್ರೀತಿಯಲಿ ಸಂಚಿ ಎಂದು.
ಅವಳು ಒಂದು ಚಿಕ್ಕ ಮೂರ್ತಿ,
ಆದರೆ ಉಂಟು ದೊಡ್ಡದು ಅವಳ ಕೀರ್ತಿ.
ಬರ್ಯುವಳು ಮುತ್ತು ಪೋಣಿಸಿದಂತೆ,
ಓದುವಳು ತೊರೆದು ಎಲ್ಲ ಚಿಂತೆ.
ಸಿಂಧು ಎಂದು ಇರುವಳು ಇಂದು,
ಅವಳ ಮನವು ಸಾಗರವೆಂದು.
ಅವಳು ಆದಳು ನಮಗೆ ಒಳ್ಳೆಯ ಬಂಧು,
ಕೇಳುವಳು ಪ್ರಶ್ನೆಯ ಎಂದೆಂದೂ,
ಆಗುವರು ಶಿಕ್ಷಕರು ಧಂಗು,
ಇರಲಿ ಹೀಗೆ ಅವಳ-ನಮ್ಮ ಬಂಧ ಎಂದೆಂದೂ.
ಸಪ್ನ-ಸ್ವಪ್ನದಲ್ಲಿಯೂ ಅಂದುಕೊಂಡಿರಲಿಲ್ಲ ನಮಗೆ
ದೊರೆಯುವಳು ಇಂತಹ ಗೆಳತಿ ಎಂದು.
ಇರುವುದು ಮೃದು ಮನಸ್ಸು ಒಂದು ಮಗುವಂತೆ,
ನೊಂದರೆ ಮರುಗುವಳು ತನಗಾದಂತೆ.
ಬರದಿರಲಿ ಇವಳಿಗೆ ಯಾವ ಚಿಂತೆ.
ತುಂಬಿರಲಿ ಹರುಷ ಸಂತೋಷ ಇವಲ್ಲಿ,
ಬಾರದಿರಲಿ ದುಃಖ ಇವಳ ಬಾಳಲಿ.
ನಮಗಿಲ್ಲ ಯಾರ ಮೇಲಿಯು ಹಗೆ.
ಇರುವೆವು ಸಂತಸದಿ ಎಂದೂ ಒಗ್ಗಟಿನಲಿ,
ಹಗೇವು ದೂರ ಎಂದೂ ನೋವಿನಲಿ.
ಒಬ್ಬೊಬ್ಬರದು ಒಂದೊಂದು ವರ್ತಿಸುವ ರೀತಿ,
ಆದರೂ ಯಾವ ಕೊರತೆಯೂ ಇಲ್ಲ ನಮ್ಮ ಪ್ರೀತಿಯಲಿ.
ಇರುವಳು ಒಬ್ಬಳು ಸಂಚಿತ ಎಂದೂ,
ಅವಳನು ಕರೆಯುವೆವು ಪ್ರೀತಿಯಲಿ ಸಂಚಿ ಎಂದು.
ಅವಳು ಒಂದು ಚಿಕ್ಕ ಮೂರ್ತಿ,
ಆದರೆ ಉಂಟು ದೊಡ್ಡದು ಅವಳ ಕೀರ್ತಿ.
ಬರ್ಯುವಳು ಮುತ್ತು ಪೋಣಿಸಿದಂತೆ,
ಓದುವಳು ತೊರೆದು ಎಲ್ಲ ಚಿಂತೆ.
ಸಿಂಧು ಎಂದು ಇರುವಳು ಇಂದು,
ಅವಳ ಮನವು ಸಾಗರವೆಂದು.
ಅವಳು ಆದಳು ನಮಗೆ ಒಳ್ಳೆಯ ಬಂಧು,
ಕೇಳುವಳು ಪ್ರಶ್ನೆಯ ಎಂದೆಂದೂ,
ಆಗುವರು ಶಿಕ್ಷಕರು ಧಂಗು,
ಇರಲಿ ಹೀಗೆ ಅವಳ-ನಮ್ಮ ಬಂಧ ಎಂದೆಂದೂ.
ಸಪ್ನ-ಸ್ವಪ್ನದಲ್ಲಿಯೂ ಅಂದುಕೊಂಡಿರಲಿಲ್ಲ ನಮಗೆ
ದೊರೆಯುವಳು ಇಂತಹ ಗೆಳತಿ ಎಂದು.
ಇರುವುದು ಮೃದು ಮನಸ್ಸು ಒಂದು ಮಗುವಂತೆ,
ನೊಂದರೆ ಮರುಗುವಳು ತನಗಾದಂತೆ.
ಬರದಿರಲಿ ಇವಳಿಗೆ ಯಾವ ಚಿಂತೆ.
ತುಂಬಿರಲಿ ಹರುಷ ಸಂತೋಷ ಇವಲ್ಲಿ,
ಬಾರದಿರಲಿ ದುಃಖ ಇವಳ ಬಾಳಲಿ.
ನೆನಪಿನ ಅಲೆಗಳು ತಲುಪಿದೆ
ಎದೆಯ ದಡಕ್ಕೆ.
ಕಾಡುತಿದೆ ನಲುಮೆಯ ನಗೆ
ಮನಸಿಗೆ.
ಅಂತರಂಗದಲ್ಲಿದೆ ಎಲ್ಲಿಲದ
ಒಲವು ನಿನ್ನೆಡೆಗೆ.
ಸೋಲುತಿದೆ ನಿನ್ನ ಅನುರಾಗಕ್ಕೆ
ಮನವು ಮತ್ತೆ ಮತ್ತೆ.
ಎದೆಯ ದಡಕ್ಕೆ.
ಕಾಡುತಿದೆ ನಲುಮೆಯ ನಗೆ
ಮನಸಿಗೆ.
ಅಂತರಂಗದಲ್ಲಿದೆ ಎಲ್ಲಿಲದ
ಒಲವು ನಿನ್ನೆಡೆಗೆ.
ಸೋಲುತಿದೆ ನಿನ್ನ ಅನುರಾಗಕ್ಕೆ
ಮನವು ಮತ್ತೆ ಮತ್ತೆ.
Friday, January 14, 2011
ಮುಸ್ಸಂಜೆಯ ಈ ಮಬ್ಬಿನಲಿ,
ತೇಲುತಿದೆ ಮನವು ಖುಷಿಯಲ್ಲಿ.
ತಾರೆಯನು ಭುವಿಗೆ ತರುವಾಸೆಯಲಿ,
ಜಿಗಿಯುತಿದೆ ನೋಡು ಮನವಿಲ್ಲಿ.
ಎಲ್ಲಿಂದ ಬಂತೋ ಈ ತಂಗಾಳಿ,
ಹರುಷವ ತುಂಬುತಿದೆ ನನ್ನ ಮನಸ್ಸಲ್ಲಿ.
ಹೊಸ-ಸವಿ ಗೀತೆಯನು ಗುನುಗುತಿದೆ ಮನವು,
ಮರೆತು ಎಲ್ಲ ಕಷ್ಟದ ನೋವು.
ಇರಲು ಬಯಸುವೆನು ಹೀಗೆ ಎಂದೂ,
ಮುದುಡದೆ ಈ ಕಿರುನಗೆ ಮುಂದೆಂದು.
ತೇಲುತಿದೆ ಮನವು ಖುಷಿಯಲ್ಲಿ.
ತಾರೆಯನು ಭುವಿಗೆ ತರುವಾಸೆಯಲಿ,
ಜಿಗಿಯುತಿದೆ ನೋಡು ಮನವಿಲ್ಲಿ.
ಎಲ್ಲಿಂದ ಬಂತೋ ಈ ತಂಗಾಳಿ,
ಹರುಷವ ತುಂಬುತಿದೆ ನನ್ನ ಮನಸ್ಸಲ್ಲಿ.
ಹೊಸ-ಸವಿ ಗೀತೆಯನು ಗುನುಗುತಿದೆ ಮನವು,
ಮರೆತು ಎಲ್ಲ ಕಷ್ಟದ ನೋವು.
ಇರಲು ಬಯಸುವೆನು ಹೀಗೆ ಎಂದೂ,
ಮುದುಡದೆ ಈ ಕಿರುನಗೆ ಮುಂದೆಂದು.
Wednesday, January 5, 2011
ವಿರಹ ಕವಿತೆ
ಅವನೊಂದಿಗೆ ಮುಗಿಯಿತು ಇನ್ನ ಆ ನಲುವಿನ ನಗು,
ಇನ್ನಿರುವುದೆಲ್ಲ ಬರಿ ಮನದಲ್ಲಿರುವ ನೋವಿನ ಕವನಗಳು.
ಹೊಡೆದು ಸಾವಿರ ಹೋಳಾಯ್ತು ಎನ್ನ ಅನುರಾಗದ ಕನ್ನಡಿಯು,
ನೋವಿನ ಅಲೆಗಳಲಿ ಸಿಲುಕಾಯ್ತು ನನ್ನ ಮನದ ನೌಕೆಯು.
ಸಂತಸ ತುಂಬಿತ್ತು ನನ್ನ ಜೀವನದಲ್ಲಿ ಅವನ ಬರುವಿಕೆಯ ಮುನ್ನ,
ಬಂದೋದ ಮೇಲೆ ಕಾಡುತಿದೆ ಅವನ ಕಹಿ ನೆನಪುಗಳು ಇನ್ನ.
ಮಡಿಯಬೇಕೆಂದು ಅನಿಸುವುದು ಕೆಲವೊಮ್ಮೆ,
ಆದರೆ ತಡೆಯುವುದು ನನ್ನಮ್ಮನ ಒಲವು ಮತ್ತೊಮ್ಮೆ.
ತಾಳಲಾರೆ ಈ ನರಕ ಯಾತನೆಯ ನಾ ಇನ್ನು,
ಬೇಡ ಎಂದರು ಕೇಳಿರಲಿಲ್ಲ ಮನವು,
ಪ್ರೀತಿಯಲ್ಲಿ ಬಿದ್ದು ನೊಂದು ಬೇಯುತಿದೆ ಮನವಿಂದು.
ಓ ದೇವನೇ ಬೇಡುವೆನು ನಿನಗೆ ನಿಸ್ವಾರ್ಥದಿ, ಯಾವ
ಹೃದಯಕ್ಕೂ ಬರದಿರಲಿ ಈ ನೊಂದ ವಿರಹ ಕವಿತೆಯು.
ಇನ್ನಿರುವುದೆಲ್ಲ ಬರಿ ಮನದಲ್ಲಿರುವ ನೋವಿನ ಕವನಗಳು.
ಹೊಡೆದು ಸಾವಿರ ಹೋಳಾಯ್ತು ಎನ್ನ ಅನುರಾಗದ ಕನ್ನಡಿಯು,
ನೋವಿನ ಅಲೆಗಳಲಿ ಸಿಲುಕಾಯ್ತು ನನ್ನ ಮನದ ನೌಕೆಯು.
ಸಂತಸ ತುಂಬಿತ್ತು ನನ್ನ ಜೀವನದಲ್ಲಿ ಅವನ ಬರುವಿಕೆಯ ಮುನ್ನ,
ಬಂದೋದ ಮೇಲೆ ಕಾಡುತಿದೆ ಅವನ ಕಹಿ ನೆನಪುಗಳು ಇನ್ನ.
ಮಡಿಯಬೇಕೆಂದು ಅನಿಸುವುದು ಕೆಲವೊಮ್ಮೆ,
ಆದರೆ ತಡೆಯುವುದು ನನ್ನಮ್ಮನ ಒಲವು ಮತ್ತೊಮ್ಮೆ.
ತಾಳಲಾರೆ ಈ ನರಕ ಯಾತನೆಯ ನಾ ಇನ್ನು,
ಬೇಡ ಎಂದರು ಕೇಳಿರಲಿಲ್ಲ ಮನವು,
ಪ್ರೀತಿಯಲ್ಲಿ ಬಿದ್ದು ನೊಂದು ಬೇಯುತಿದೆ ಮನವಿಂದು.
ಓ ದೇವನೇ ಬೇಡುವೆನು ನಿನಗೆ ನಿಸ್ವಾರ್ಥದಿ, ಯಾವ
ಹೃದಯಕ್ಕೂ ಬರದಿರಲಿ ಈ ನೊಂದ ವಿರಹ ಕವಿತೆಯು.
ಅಮ್ಮ
ಮರೆಯಲಾಗದ ಮಮತೆಯ ತೋರಿಹಳು,
ಕರುಣೆಯ ಸಾಗರವ ಅರೆಸಿಹಳು,
ಮಡಿಲಲ್ಲಿ ಮಲಗಿಸಿಕೊಂಡು ಸವಿ ಲ್ಲಿ ಹಾಡಿಹಳು,
ಬೆಳದಿಂಗಳ ಚಾಂದ್ರಮಾನ ಜೊತೆ ಆಟವಾಡಿಸಿಹಳು,
ಎನ್ನ ನಲ್ಮೆಯ ನಗುವಿನ್ನಲಿ ತನ್ನ ದುಃಖವ ಮರೆತಿಹಳು.
ನ ದುಃಖಿಸಿದರೆ ಸಹಿಸದೆ ಮರಗುವಳು ಮನಸಲ್ಲೇ.
ಕಾದು ಕುರುವಳು ಎನ್ನ ಬರುವಿಕೆಗೆ,
ಆಡುವಳು ಜೊತೆಗೆ, ಎನ್ನ ಸಂತೋಷಕ್ಕೆ.
ತಿಳಿ ಹಾಲಂತಹ ಪ್ರೀತಿ ಇವಳದು,
ಕೋಟಿ ಪದ ಕೊಟ್ಟರು ಬಣ್ಣಿಸಲಾಗದು.
ಏನೇ ಆದರೂ ಬದಲಾಗದು ಇವಳ ಪ್ರೀತಿ ಸುಧೆಯು,
ಇವಳೇ ಆ ನನ್ನ ದೈವ ಸ್ವರೂಪಿಯಾದ ತಾಯಿಯು.
Sunday, January 2, 2011
song with lyric change
Tune-ಶಿವ ಅಂತ ಹೋಗುತಿದ್ದೆ ಹಾಡು
ಹ್ಯಾಪಿ ಲೈಫು ಇತ್ತು ಬಿಳೋಕ್ ಮುನ್ನ ಪ್ರೀತಿಯಲಿ,
ಬಿದ್ದ ಮೇಲೆ ಗೊತ್ತಾಯ್ತು ಇದು ಜಸ್ಟ್ ಸಿಲ್ಲಿ ಸಿಲ್ಲಿ,
ನಡೀತಿದೆ ಈಗ ನನ್ನ ಲೈಫು ಸಾರ್ರೋಸ್ನಲ್ಲಿ,
ಏನ್ ಮಾಡ್ಲಿ ಬದುಕಿನಲಿ?
ಮೆಸ್ಸೇಜುಗಳಿಗೆ ಇಲ್ದಂಗಾಯ್ತು ಸ್ಪೇಸು ಇನ್ಬಾಕ್ಸ್ನಲ್ಲಿ ,
ಎಂಟಿ ಆಯಿತು ನನ್ನ ಜೇಬು ಅವಳ ಮಿಸ್ಸ್ಕಾಲ್ಲ್ಸ್ನಲ್ಲಿ ,
ಇತ್ತು ಎಲ್ಲಾ ಓಳು-ಗೋಳು ಅವಳ ಮಾತಿನಲಿ,
ಫೂಲ್ ಆದೆ ಲಯ್ಫಿನಲಿ....
ಹ್ಯಾಪಿ ಲೈಫು ಇತ್ತು ಬಿಳೋಕ್ ಮುನ್ನ ಪ್ರೀತಿಯಲಿ,
ಬಿದ್ದ ಮೇಲೆ ಗೊತ್ತಾಯ್ತು ಇದು ಜಸ್ಟ್ ಸಿಲ್ಲಿ ಸಿಲ್ಲಿ,
ನಡೀತಿದೆ ಈಗ ನನ್ನ ಲೈಫು ಸಾರ್ರೋಸ್ನಲ್ಲಿ,
ಏನ್ ಮಾಡ್ಲಿ ಬದುಕಿನಲಿ?
ಮೆಸ್ಸೇಜುಗಳಿಗೆ ಇಲ್ದಂಗಾಯ್ತು ಸ್ಪೇಸು ಇನ್ಬಾಕ್ಸ್ನಲ್ಲಿ ,
ಎಂಟಿ ಆಯಿತು ನನ್ನ ಜೇಬು ಅವಳ ಮಿಸ್ಸ್ಕಾಲ್ಲ್ಸ್ನಲ್ಲಿ ,
ಇತ್ತು ಎಲ್ಲಾ ಓಳು-ಗೋಳು ಅವಳ ಮಾತಿನಲಿ,
ಫೂಲ್ ಆದೆ ಲಯ್ಫಿನಲಿ....
Saturday, January 1, 2011
ಹೊಸ ಕನಸು
ಹೊಸ ವರುಷದ ಹೊಸ್ತಿಲಲಿ,
ಹೊಸ ಯೋಜನೆ ತುಂಬಿಕೊಂಡಿರಲಿ,
ನಗುವಿರಲಿ ಮೊಗದಲಿ, ನಲಿವಿರಲಿ ಮನಸಿನಲಿ.
ಇರಲಿ ಅಭಿವೃದ್ಧಿ ಎಂಬ ಕಾರ್ಯ ದಿನವಿಡೀ.
ಸೋಲದಿರಿ ಎಲ್ಲಿಯೂ, ಮುನ್ನುಗ್ಗುತಿರಿ ಎಂದಿಯೂ.
ನೆನಪಿರಲಿ ಇರಬೇಕು ಒಂದು ಗುರಿ,
ಅದ ತಲುಪಲು ಎಂದೂ ಮುನ್ನಡೆಯುತಿರಿ.
ಜೀವನದ ಈ ಏಳು-ಬೀಳು
ಅದುವೇ ಬದುಕಿನ ಅಭಿವೃದ್ಧಿಯ ಪಾಲು.
ಇಡೀ ವರುಷದ ಈ ಶುಭಾಶಯ,
ನನ್ನ ಕವನದ ಆಶಯ.
ಹೊಸ ಯೋಜನೆ ತುಂಬಿಕೊಂಡಿರಲಿ,
ನಗುವಿರಲಿ ಮೊಗದಲಿ, ನಲಿವಿರಲಿ ಮನಸಿನಲಿ.
ಇರಲಿ ಅಭಿವೃದ್ಧಿ ಎಂಬ ಕಾರ್ಯ ದಿನವಿಡೀ.
ಸೋಲದಿರಿ ಎಲ್ಲಿಯೂ, ಮುನ್ನುಗ್ಗುತಿರಿ ಎಂದಿಯೂ.
ನೆನಪಿರಲಿ ಇರಬೇಕು ಒಂದು ಗುರಿ,
ಅದ ತಲುಪಲು ಎಂದೂ ಮುನ್ನಡೆಯುತಿರಿ.
ಜೀವನದ ಈ ಏಳು-ಬೀಳು
ಅದುವೇ ಬದುಕಿನ ಅಭಿವೃದ್ಧಿಯ ಪಾಲು.
ಇಡೀ ವರುಷದ ಈ ಶುಭಾಶಯ,
ನನ್ನ ಕವನದ ಆಶಯ.
ದೇವನಿಗೊಂದು ಧನ್ಯವಾದ
ಈ ವರುಷದ ಕೊನೆಯಂದು,
ಅರ್ಪಿಸುವೆನು ಧನ್ಯವಾದ ದೇವರೇ ನಿನಗೊಂದು.
ನೀಡಿದ್ದೆ ನೋವ ಘಳಿಗೆ,
ಜೊತೆಗೆ ಕೊಟ್ಟಿದ್ದೆ ಸಂತೋಷದ ಗುಳಿಗೆ.
ಕಳೆದು ಕೊಂಡೆನು ಕೆಲವೊಂದು ಸಂಬಂಧ,
ಆದರೂ ನೀಡಿದೆ ಎಲ್ಲೋ ಆನಂದ.
ನಾ ಮಾಡಿದೆ ತಪ್ಪು ಕೆಲವೊಮ್ಮೆ,
ಆದರೂ ಕ್ಷಮಿಸಿದೆ ನೀ ಮತ್ತೊಮ್ಮೆ.
ನೀಡಿದೆ ದುಃಖದ ಸಮಯದಿ ಸಹನೆ,
ಹೀಗೆ ಎಂದಿಗೂ ಅರ್ಪಿಸುವೆನು ನಾ ಪ್ರಾರ್ಥನೆ.
ಅರ್ಪಿಸುವೆನು ಧನ್ಯವಾದ ದೇವರೇ ನಿನಗೊಂದು.
ನೀಡಿದ್ದೆ ನೋವ ಘಳಿಗೆ,
ಜೊತೆಗೆ ಕೊಟ್ಟಿದ್ದೆ ಸಂತೋಷದ ಗುಳಿಗೆ.
ಕಳೆದು ಕೊಂಡೆನು ಕೆಲವೊಂದು ಸಂಬಂಧ,
ಆದರೂ ನೀಡಿದೆ ಎಲ್ಲೋ ಆನಂದ.
ನಾ ಮಾಡಿದೆ ತಪ್ಪು ಕೆಲವೊಮ್ಮೆ,
ಆದರೂ ಕ್ಷಮಿಸಿದೆ ನೀ ಮತ್ತೊಮ್ಮೆ.
ನೀಡಿದೆ ದುಃಖದ ಸಮಯದಿ ಸಹನೆ,
ಹೀಗೆ ಎಂದಿಗೂ ಅರ್ಪಿಸುವೆನು ನಾ ಪ್ರಾರ್ಥನೆ.
Subscribe to:
Posts (Atom)