Saturday, April 16, 2011

ಕೇವಲ ಸುಳ್ಳು ಕವಿತೆ!!!!!?


ಮರದ ಮರೆಯಲಿ ಮನಸ್ಸಿದೆ ದಿನವಿಡೀ
ತಿಲಿಯದೆ ಹಾರಿಹೊಯಿತ್ತೆಲ್ಲೋ ಅಲ್ಲೆ ಇದ್ದ ಹಕ್ಕಿ.
ಒಲವಿನ ಅಣತೆ ಹುರಿದು-ಹುರಿದೆ ಸತ್ತು
ಕಪ್ಪು ತಂದಿದೆ ಸುತ್ತಲು
ಮತ್ತೆ ಬರುವುದೋ ಬೆಳಕೆಂಬ ಪ್ರೀತಿ
ಹೋಗಿ ಈ ಕತ್ತಲು.
ಹುರಿಯುವ ಬೆಂಕಿಯೋಳಗೆ ಬಿದ್ದಂತಾಗಿದೆ ಎನ್ನ
ಮನಸ್ಸು ಪ್ರಿತಿಯ ಹುಡುಕಲೋಗಿ.
ಯಾರೂ ಇಲ್ಲದಂತ್ತಾದರು ಸಂತೈಸಲು
ನನ್ನ ಮನವ ತೂಗಿ.
"ಯಾರಿಗೂ ಯಾರು ಇಲ್ಲ ಈ ಜಗದಲಿ"
ಸತ್ಯವೇ ಈ ಮಾತು ಮನವೆ? ಸತ್ಯವೆ?
ಹೌದು ಅದು ಸತ್ಯ ಎನ್ನ ಬಾಳಲಿ
ತಿಳಿದುಕೊಂಡಿರುವೆನು ಹಾಗೆಂದು ನಾನಿಲ್ಲಿ.
ವಿಶಾಲವಾದ ತಿಳಿ ನೀರಿನಂತಿದ್ದ ಮನಸ್ಸಿಗೆ
ಎಸೆದರು ನೋವೆಂಬ ಕಲ್ಲ.
ಸಂತಸದ ಹಸಿರು ನೆಲದಲಿ
ಖುಷಿಯಲ್ಲಿರುವ ಹುಡುಗಿ ನಾನಲ್ಲ.
ತೊರಲಾಗದು ಇನ್ನು ನನ್ನೀ ನಟನೆಯ ನಗು
ಆ ಅರ್ಥವಿಲ್ಲದ ಮಾತುಗಳೂ ಸಾಕು.
ಇಂತ್ತಾದರು ನನಗೆ ಆ ಹುಸಿ ಪ್ರೀತಿ ಬೇಕೆ?
ಸತ್ತೋದರು ಆ ಮುಗುಳುನಗೆ, ನನಗೆ ಈ ಬದುಕೇಕೆ?
ತಿಳಿಯದೆ ನಿಮಗೆ ನಾನೇಕಿರುವೆ ಹೀಗೆ?
ಹುಡುಕಲೋಗದಿರಿ ಇದು ಕೇವಲ ಸುಳ್ಳು ಕವಿತೆ.

7 comments:

  1. ಈ ಸುಳ್ಳು ಕವಿತೆಯಲ್ಲಿ ಬರುವ ಎಲ್ಲ ಸಾಲುಗಳು ನಿನ್ನ ಜಿವನದಲ್ಲಿ ಕೇವಲ ಸುಳ್ಳಾ(ಕಲ್ಪನೆ)ಗಿರಲಿ.... ಕವಿತೆ ನಿಜವಾದರೆ ಜೀವನ ಬಹಳ ಕಷ್ಟವಾಗುತ್ತದೆ... ಅನುಭವಿಸದವರೆ ಬಲ್ಲರು ಅದರ ನೋವು.

    ReplyDelete
  2. "Yaaru illadantaadaru santhaisalu nanna manava thoogi.." touching ma heart...

    ReplyDelete
  3. @prashu,
    hmmm don't worry idu kevala kavite ashte.........:P


    @ashwin,
    :)

    ReplyDelete
  4. Well written Vidya.. Loved below lines very much

    ವಿಶಾಲವಾದ ತಿಳಿ ನೀರಿನಂತಿದ್ದ ಮನಸ್ಸಿಗೆ
    ಎಸೆದರು ನೋವೆಂಬ ಕಲ್ಲ.
    ಸಂತಸದ ಹಸಿರು ನೆಲದಲಿ
    ಖುಷಿಯಲ್ಲಿರುವ ಹುಡುಗಿ ನಾನಲ್ಲ.

    ReplyDelete
  5. ಚೆನ್ನಾಗಿವೆ ಬರೆಯುದು ಮುಂದುವರೆಸಿ

    ReplyDelete
  6. ಚೆನ್ನಾಗಿವೆ ಬರೆಯುದು ಮುಂದುವರೆಸಿ

    ReplyDelete