Sunday, January 16, 2011

ಹೇಳಬೇಕೆ ನಮ್ಮ ಸ್ನೇಹ ಬಳಗದ ಬಗ್ಗೆ?
ನಮಗಿಲ್ಲ ಯಾರ ಮೇಲಿಯು ಹಗೆ.
ಇರುವೆವು ಸಂತಸದಿ ಎಂದೂ ಒಗ್ಗಟಿನಲಿ,
ಹಗೇವು ದೂರ ಎಂದೂ ನೋವಿನಲಿ.
ಒಬ್ಬೊಬ್ಬರದು ಒಂದೊಂದು ವರ್ತಿಸುವ ರೀತಿ,
ಆದರೂ ಯಾವ ಕೊರತೆಯೂ ಇಲ್ಲ ನಮ್ಮ ಪ್ರೀತಿಯಲಿ.

ಇರುವಳು ಒಬ್ಬಳು ಸಂಚಿತ ಎಂದೂ,
ಅವಳನು ಕರೆಯುವೆವು ಪ್ರೀತಿಯಲಿ ಸಂಚಿ ಎಂದು.
ಅವಳು ಒಂದು ಚಿಕ್ಕ ಮೂರ್ತಿ,
ಆದರೆ ಉಂಟು ದೊಡ್ಡದು ಅವಳ ಕೀರ್ತಿ.
ಬರ್ಯುವಳು ಮುತ್ತು ಪೋಣಿಸಿದಂತೆ,
ಓದುವಳು ತೊರೆದು ಎಲ್ಲ ಚಿಂತೆ.

ಸಿಂಧು ಎಂದು ಇರುವಳು ಇಂದು,
ಅವಳ ಮನವು ಸಾಗರವೆಂದು.
ಅವಳು ಆದಳು ನಮಗೆ ಒಳ್ಳೆಯ ಬಂಧು,
ಕೇಳುವಳು ಪ್ರಶ್ನೆಯ ಎಂದೆಂದೂ,
ಆಗುವರು ಶಿಕ್ಷಕರು ಧಂಗು,
ಇರಲಿ ಹೀಗೆ ಅವಳ-ನಮ್ಮ ಬಂಧ ಎಂದೆಂದೂ.

ಸಪ್ನ-ಸ್ವಪ್ನದಲ್ಲಿಯೂ ಅಂದುಕೊಂಡಿರಲಿಲ್ಲ ನಮಗೆ
ದೊರೆಯುವಳು ಇಂತಹ ಗೆಳತಿ ಎಂದು.
ಇರುವುದು ಮೃದು ಮನಸ್ಸು ಒಂದು ಮಗುವಂತೆ,
ನೊಂದರೆ ಮರುಗುವಳು ತನಗಾದಂತೆ.
ಬರದಿರಲಿ ಇವಳಿಗೆ ಯಾವ ಚಿಂತೆ.
ತುಂಬಿರಲಿ ಹರುಷ ಸಂತೋಷ ಇವಲ್ಲಿ,
ಬಾರದಿರಲಿ ದುಃಖ ಇವಳ ಬಾಳಲಿ.

2 comments:

  1. super friendship kanri nimdu........
    nice kavithe nice feeling with nice pic....

    ReplyDelete